ಕಾರ್ಲ್ , ಪೀಟರ್ ಹೆನ್ರಿಕ್ ಡ್ಯಾಂ –(1895--) ೧೯೪೩
ಡೆನ್ಮಾರ್ಕ್-ಜೀವರಸಾಯನಶಾಸ್ತ್ರ-ವಿಟಮಿನ್-ಕೆ ಅನಾವರಣಗೊಳಿಸಿದಾತ.
ಡ್ಯಾಂ ,21 ಫೆಬ್ರವರಿ 1895ರಂದು ಕೊಪೆನ್‍ಹೆಗ್‍ನಲ್ಲಿ ಜನಿಸಿದನು. 1920ರಲ್ಲಿ ಕೊಪೆನ್‍ಹೇಗ್ ಪಾಲಿಟೆಕ್ನಿಕ್ ಸಂಸ್ಥೆಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದನು. ಕೊಪೆನ್‍ಹೇಗ್ ಕೃಷಿ ಹಾಗೂ ಪ್ರಾಣಿ ಚಿಕಿತ್ಸಾ ಶಾಲೆಯಲ್ಲಿ ಸಹಾಯಕನಾಗಿ ಸೇರಿದನು. ನಂತರ 1923ರಲ್ಲಿ ಕೊಪೆನ್‍ಹೇಗ್ ವಿಶ್ವವಿದ್ಯಾಲಯದ ಅಂಗಕ್ರಿಯಾಶಾಸ್ತ್ರದ ಪ್ರಯೋಗಾಲಯದಲ್ಲಿ ಜೀವ ರಸಾಯನಶಾಸ್ತ್ರದ ಸಹಾಯಕನಾಗಿ ನೇಮಕಗೊಂಡನು. 1925ರಲ್ಲಿ ಆಸ್ಟ್ರಿಯಾದ ಗ್ರಾಝ್‍ನಲ್ಲಿ ಎಫ್. ಪ್ರೆಗ್ಲ್ ಜೊತೆಗೆ ಸೂಕ್ಷ್ಮ ರಸಾಯನಶಾಸ್ತ್ರದ ಅಧ್ಯಯನ ನಡೆಸಿದನು. 1934ರಲ್ಲಿ ಸ್ಟೆರಿನ್‍ಗಳ ಮೇಲೆ ಸಂಪ್ರಂಬಂಧ ಬರೆದು ಡಾಕ್ಟರೇಟ್ ಗಳಿಸಿದನು. ರಾಕ್ಫೆಲರ್ ¥sóÉಲೋಷಿ¥sóï ಗಳಿಸಿದ ಡ್ಯಾಮ್ 1932-33ರಲ್ಲಿ ಜರ್ಮನಿಯ ಪ್ರೀಬರ್ಗ್‍ನ ರುಡಾಲ್ಫ್ ಷೋಹೆನ್‍ಹೀಮರ್ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಿದನು. ಕೋಳಿ ಮರಿಗಳಲ್ಲಿ ಚಯಾಪಚಯ (Metabolism) ಕ್ರಿಂಯೆಅಭ್ಯಸಿಸುವಾಗ ವಿಟಮಿನ್-ಕೆಯನ್ನು ಡ್ಯಾಂ ಅನಾವರಣಗೊಳಿಸಿದನು. ಈ ವಿಟಮಿನ್ ಸಸ್ಯ ಹಾಗೂ ಪ್ರಾಣಿಗಳಲ್ಲಿ ಉತ್ಪನ್ನವಾಗುವ ಮೂಲ , ಅದು ವಹಿಸುವ ಪಾತ್ರ, ಅದರ ರಾಸಾಯನಿಕ ಗುಣ ಸ್ವಭಾವಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಪೌಲ್ ಕರೀರ್‍ನೊಂದಿಗೆ ಈ ದಿಶೆಯಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಂಡನು. ಇದಕ್ಕಾಗಿ 1943ರಲ್ಲಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದನು. 17 ಏಪ್ರಿಲ್ 1976 ರಂದು ಡ್ಯಾಂ ನಿಧನ ಹೊಂದಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/18/2020