ಆಲ್ಬರ್ಟ್, ಝೆಂಟ್ ಗಯೋರ್ಗಿ –(1893--) ೧೯೩೭
ಹಂಗರಿ-ವೈದ್ಯಕೀಯ-ಜೈವಿಕ ಸಾಮಗ್ರಿಗಳನ್ನು ಸಂರಕ್ಷಿಸುವ ತಂತ್ರ ಪರಿಚಯಿಸಿದಾತ.
ಗಯೋರ್ಗಿ ತಂದೆ ಭೂಮಾಲೀಕನಾಗಿದ್ದರೆ, ತಾಯಿಯ ತಂದೆ ಹಾಗೂ ಅಣ್ಣಂದಿರು ಹೆಸರುವಾಸಿ ವೈದ್ಯರಾಗಿದ್ದರು. 16 ಸೆಪ್ಟೆಂಬರ್ 1893ರಲ್ಲಿ ಗಯೋರ್ಗಿ ಬುಡಾಪೆಸ್ಟ್‍ನಲ್ಲಿ ಜನಿಸಿದನು. 1911ರಲ್ಲಿ ಪ್ರೌಢಶಿಕ್ಷಣ ಮುಗಿಸಿ, ಚಿಕ್ಕಪ್ಪನೊಂದಿಗೆ ಕೆಲಸ ಮಾಡಿದನು. ಮೊದಲನೆ ಜಾಗತಿಕ ಯುದ್ದ ಪ್ರಾರಂಭವಾದಾಗ ಇಟೆಲಿ ಹಾಗೂ ರಷ್ಯಾ ಮುಂಚೂಣಿಯಲ್ಲಿ ಕಾದಿ, ಶೌರ್ಯಕ್ಕಾಗಿ ರಜತ ಪದಕ ಗಳಿಸಿದನು. 1917ರ ಕದನದಲ್ಲಿ ಗಾಯಗೊಂಡ ನಂತರ ಸೇನೆಯಿಂದ ಬಿಡುಗಡೆಗೊಂಡನು. ಬುಡಾಪೆಸ್ಟ್‍ಗೆ ಹಿಂದಿರುಗಿ ಶಿಕ್ಷಣ ಮುಗಿಸಿ ವೈದ್ಯುತ್ ಅಂಗಕ್ರಿಯಾಶಾಸ್ತ್ರದಲ್ಲಿ ಆಸಕ್ತಿ ಹೊಂದಿದನು. 1920ರಲ್ಲಿ ಲೀಡೆನ್ ವಿಶ್ವವಿದ್ಯಾಲಯದ ಔಷಧಿ ವಿಭಾಗದಲ್ಲಿ ಸಹಾಯಕನಾಗಿ ಸೇರಿದನು. 1927ರಲ್ಲಿ ರಾಕ್ಫೆಲರ್ ಫೆಲೋಷಿಪ್ ಗಳಿಸಿ ಕೇಂಬ್ರಿಜ್‍ಗೆ ಹೋಗಿ, ಮಿನ್ನೆಸೊಟಾದಲ್ಲಿರುವ ಮೇಯೋ ಫೌಂಡೇಷನ್'ನಲ್ಲಿ ಕೆಲಸ ಮಾಡಿದನು. ಎರಡನೇ ಜಾಗತಿಕ ಯುದ್ದದ ಅಂತ್ಯದ ವೇಳೆಗೆ ಬುಡಾಪೆಸ್ಟ್‍ನಲ್ಲಿ ವೈದ್ಯಕೀಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷನಾದನು. 1947ರಲ್ಲಿ ಅಸಂಸಂದ ಮೆಸಾಚುಸೆಟ್ಸ್ ಪ್ರಾಂತದ ಸಂಶೋಧನಾ ಸಂಸ್ಥೆಯ ನಿರ್ದೇಶಕನಾದನು. ಗಯೋರ್ಗಿ ಕೋಶಗಳ ಉಸಿರಾಟದ ರಾಸಾಯನಿಕ ಕ್ರಿಯಾಶೀಲತೆಯ ಅಧ್ಯಯನ ನಡೆಸಿದನು. ಪ್ರಾಣಿ ಹಾಗೂ ಸಸ್ಯದ ಅಂಗಾಂಶಗಳಲ್ಲಿ (Tissue) ಅಪಕರ್ಷಕ (Reducers) ವಸ್ತುಗಳಿವೆಯೆಂದು ತೋರಿಸಿದನು. ಅಡ್ರೆನಲ್‍ಗಳಿಂದ ಈ ವಸ್ತುವನ್ನು ಬೇರ್ಪಡಿಸಿದನು. ಈಗ ಇವು ಅಸ್ಕೋರ್ಬಿಕ್ ಆಮ್ಲಗಳೆಂದು ಹೆಸರಾಗಿವೆ 1938ರಲ್ಲಿ ಸ್ನಾಯುಗಳನ್ನು ಕುರಿತಾಗಿ ನದೆಸಿದ ಸಂಶೋಧನೆಗಳಿಂದ ಆ್ಯಕ್ವಿನ್, ಮಯೋಸಿನ್ ಹಾಗೂ ಅವುಗಳ ಸಂಯುಕ್ತಗಳು ಬೆಳಕಿಗೆ ಬಂದವು. ಸ್ನಾಯು ಸಂಕೋಚವನ್ನು ಇವುಗಳ ಹಿನ್ನೆಲೆಯಲ್ಲಿ ಅರಿಯುವುದು ಸಾಧ್ಯವಾಯಿತು. ಜೈವಿಕ ವಸ್ತುಗಳನ್ನು ಗ್ಲಿಸೆರಿನ್‍ನಲ್ಲಿ ಸಂರಕ್ಷಿಸಲ್ಪಡಬಹುದೆಂದು, ಈ ಮೂಲಕ ವೀರ್ಯಾಣು ಸಂಗ್ರಹಣೆ ಮಾಡಬಹುದೆಂದು ಗಯೋರ್ಗಿ ತೋರಿಸಿದನು. ಇದಕ್ಕಾಗಿ 1937ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/23/2019