ಅಡ್ರಿಯಾನ್ ಎಡ್ಗರ್ ಡೌಗ್ಲಾಸ್, (ಬ್ಯಾರನ್ ಅಡ್ರಿಯಾನ್) (1889-1977) - ೧೯೩೨
ಬ್ರಿಟನ್-ನರಶಾಸ್ತ್ರಜ್ಞ -ನರ ಸಂವೇದನೆ ಆವರ್ತನ ರೂಪದಲ್ಲಿ ಸಾಗಿಸಲ್ಪಡುವುದೆಂದು ತೋರಿಸಿದಾತ
ಮೊದಲ ಜಾಗತಿಕ ಯುದ್ದಕ್ಕೆ ಮೊದಲು, ಕೇಂಬ್ರಿಜ್‍ನಲ್ಲಿ ಎಡ್ಗರ್ ಸಂಶೋಧನೆ ಪ್ರಾರಂಭಿಸಿದನಾದರೂ, 1914ರಲ್ಲಿ ಪದವಿಗಳಿಸಿ ಫ್ರಾನ್ಸ್‍ಗೆ ಹೋಗಲು ಯತ್ನಿಸಿ ವಿಫಲನಾದನು. ಇದಾದ ನಂತರ ಅವನನ್ನು ಯುದ್ಧ ಗಾಯಾಳುಗಳ ಚಿಕಿತ್ಸೆಗೆ ನೇಮಿಸಲಾಯಿತು. 1920ರಲ್ಲಿ ಅವನ ಮಹತ್ಸಾಧನೆಯಾದ ನರದ ಸಂವೇದನಾ ಪ್ರಸರಣವನ್ನು (Neural Transmission) ಕುರಿತು ಚಿಂತನೆ ಹಾಗೂ ಪರಿಶೀಲನೆ ಪ್ರಾರಂಭಿಸಿದನು. 1920ಕ್ಕೆ ಮುಂಚೆ , ನರಗಳ ವಿದ್ಯುತ್ ಚಟುವಟಿಕೆಗಳನ್ನು ಅರಿಯಲು ಬಹು ರೂಕ್ಷವಾದ ಉಪಕರಣಗಳು ಲಭ್ಯವಿದ್ದವು. ಎಡ್ಗರ್ ಔಷ್ಣೀಯ ಡಯೋಡ್ ವರ್ಧಕಗಳನ್ನು (Thermoionid Diode Amplifier) ಬಳಸಿ, ಒಂದೇ ಒಂದು ನರದ ವಿದ್ಯುತ್ ಚಟುವಟಿಕೆ ಅಳೆಯುವ ವಿಧಾನವನ್ನು ಸಾಧಿಸಿದನು. ಇದಎಂದ ಅವನು ನರ ಪ್ರಚೋದನೆಯ ತೀವ್ರತೆ ಹಾಗೂ ಸ್ವಭಾವಗಳ ಮೇಲೆ ನರದ ವಿದ್ಯುತ್ ಪರಿಣಾಮ ಬದಲಾಗುವುದಿಲ್ಲವೆಂದು ತೋರಿಸಿದನು. ಇದನ್ನೇ ಎಡ್ಗರ್ ನ ಸ್ನೇಹಿತನಾದ ಕೆ. ಲೆವಿಸ್ 1905ರಲ್ಲಿ ಸಂಶಯಾತೀತವಾಗಿ ಸಾಧಿಸಿದನು. ಪ್ರಚೋದನೆಯ (Stimulai) ತೀವ್ರತೆಗೆ ಅನುಗುಣವಾಗಿ ನರಗಳು ಪ್ರಸರಣದ ಆವರ್ತನೆಯನ್ನು (Frequency)ಏರಿಳಿಸಿ, ಮಿದುಳಿಗೆ ಸಂವೇದನೆಯನ್ನು ವರ್ಗಾಂತರಿಸುತ್ತವೆ ಎನ್ನುವ ನರಗಳ ಮೂಲಭೂತ ನಡವಳಿಕೆಯನ್ನು ತಿಳಿಯಲಾಯಿತು. ಈ ಸಂಶೋಧನೆಯ ಅಧಾರದ ಮೇಲೆ ಬರ್ಜರ್ ಜೊತೆಗೂಡಿ’ಮಿದುಳಿನ ಅಲೆ’ಗಳನ್ನು ಗುರುತಿಸಿದನು. ಲಕ್ಷಾಂತರ ನರಗಳ ವೈದ್ಯುತ್ ಚಟುವಟಿಕೆಗಳಿಂದ ಪ್ರೇರಿತವಾಗುವ ಮಿದುಳಿನ ಅಲೆಯನ್ನು ಅಳೆಯುವ ವಿದ್ಯುತ್ ಮಸ್ಕಿಷ್ಕಾಲೇಖ (Electro Encephalo Grapher- EEG) ನಿರ್ಮಾಣಗೊಳಿಸುವಲ್ಲಿ ಎಡ್ಗರ್ ಕಾರಣನಾದನು. ಕೆಲ ವರ್ಷಗಳ ನಂತರ ಇದು ಮಿದುಳಿನ ಚಟುವಟಿಕೆ ಅರಿಯುವ , ಅಪಸ್ಮಾರವನ್ನು ವಿಶ್ಲೇಷಿಸುವ ಶಿಷ್ಟ ಮಾರ್ಗವಾಗಿ ಇದು ರೂಪುಗೊಂಡಿತು. ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜ್‍ನೊಂದಿಗೆ ಸುಮಾರು 70 ವರ್ಷಗಳ ಕಾಲ ಅವಿನಾವ ಸಂಬಂಧ ಹೊಂದಿದ್ದ ಎಡ್ಗರ್ ನರ ವಿಜ್ಞಾನದಲ್ಲಿ ಅಪೂರ್ವ ಕಾಣಿಕೆ ಸಲ್ಲಿಸಿದ್ದಾನೆ. ಎಡ್ಗರ್ ವೈದ್ಯಕೀಯ ಹೊರತಾಗಿ ಶಿಖರ ಏರುವ, ಚಾರಣ ಮಾಡುವ , ವೇಗವಾಗಿ ಬೈಕ್ ಓಡಿಸುವ ವ್ಯಕ್ತಿಯೆಂದು ಹೆಸರು ವಾಸಿಯಾಗಿದ್ದನು. 1932ರಲ್ಲಿ ಚಾಲ್ರ್ಸ್ ಸ್ಕಾಟ್ ಷೆರಿಂಗಟನ್‍ನೊಂದಿಗೆ ಹಂಚಿಕೊಂಡಂತೆ ನೊಬೆಲ್ ಪ್ರಶಸ್ತಿ ಸ್ವೀಕರಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019