ಆರ್ಚಿಬಾಲ್ಡ್ ,ವಿವಿಯನ್ ಹಿಲ್ –(1866-1977) ೧೯೨೨
ಬ್ರಿಟನ್-ವೈದ್ಯಕೀಯ-ನರ ಸಂಕೇತಗಳನ್ನು ರವಾನಿಸುವಾಗ, ಶಾಖ ಉತ್ಪನ್ನವಾಗುವುದೆಂದು ಅನಾವರಣಗೊಳಿಸಿದಾತ.
ಆರ್ಚಿಬಾಲ್ಡ್ ,26 ಆಗಸ್ಟ್ 1886ರಂದು ಬ್ರಿಸ್ಟಲ್‍ನಲ್ಲಿ ಜನಿಸಿದನು. ವಿದ್ಯಾರ್ಥಿವೇತನ ಗಳಿಸಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿಗೆ ಗಣಿತದ ವ್ಯಾಸಂಗಕ್ಕೆ ಸೇರಿದನು. 1967ರಲ್ಲಿ ಮೂರನೇ ರಾಂಗ್ಲರ್ ಪದವಿ ಗಳಿಸಿದನು. ಪದವಿ ಮುಗಿದ ನಂತರ, ಅಂಗಕ್ರಿಯಾಶಾಸ್ತ್ರಜ್ಞನಾಗಿದ್ದ ವಾಲ್ಟರ್ ಮೋರ್ಲೆ ಫ್ಲೆಟ್ಶರ್ ಒತ್ತಾಯಕ್ಕೆ ಮಣಿದು ವೈದ್ಯಕೀಯ ಶಿಕ್ಷಣಕ್ಕೆ ಸೇರಿದನು. ಜೆ.ಎನ್.ಲ್ಯಾಂಗ್ಲೆ ಸ್ನಾಯುಗಳು ಸಂಕುಚನ ಬಗೆಗೆ ಅಧ್ಯಯನ ನಡೆಸಲು ಆರ್ಚಿಬಾಲ್ಡ್‍ನನ್ನು ಪ್ರೇರೇಪಿಸಿದನು. ಮುಂದೆ ಫ್ಲೆಟ್ಷ್ನರ್ ಹಾಗೂ ಹಾಫ್ಕಿನ್ಸ್ ಸ್ನಾಯುಗಳ ಸಂಕುಚನ ಕ್ರಿಯೆಯಲ್ಲಿ ಲ್ಯಾಕ್ಟಿಕ್ ಆಮ್ಲಗಳ ಪಾತ್ರವನ್ನು ವಿಶದೀಕರಿಸಿದರು. ಸ್ವೀಡನ್‍ನ ವೈದ್ಯನಾಗಿದ್ದ ಬ್ಲಿಕ್ಸ್ ಸ್ನಾಯುಗಳ ಅಧ್ಯಯನಕ್ಕೆ ಸಾಧನವೊಂದನ್ನು ನಿರ್ಮಿಸಿದ್ದನು. ಆರ್ಚಿಬಾಲ್ಡ್ ಇದನ್ನು ಬಳಸಿ ಹೆಚ್ಚಿನ ಅಧ್ಯಯನಗಳನ್ನು ಕೈಗೊಂಡನು. ಇದರಿಂದ ಸ್ನಾಯುಗಳ ತಂತುಗಳ ಉದ್ದ ಮತ್ತು ಅವುಗಳಲ್ಲಿನ ಶಾಖೋತ್ಪಾದನೆಯ ಮಧ್ಯದ ಸಂಬಂಧ ಸ್ಪಷ್ಟಗೊಂಡಿತು. ಮುಂದೆ ಸ್ಟಾರ್ಲಿಂಗ್ ಇದನ್ನು ಹೃದಯದ ಬಡಿತದ ಯಾಂತ್ರಿಕ ವಿವರಣೆಗೆ ಬಳಸಿಕೊಂಡನು 1910ರಲ್ಲಿ ಟ್ರಿನಿಟಿ ಕಾಲೇಜಿನಿಂದ ಸಂಶೋಧಕ ವೇತನ ಪಡೆದು. ಮುಂದೆ ಒಂದು ವರ್ಷ ಜರ್ಮನಿಯಲ್ಲಿ ಬುರ್ಕರ್ ಕೆಳಗೆ ದೇಹದ ಅತ್ಯಲ್ಪ ಶಾಖಗಳ ಬಗೆಗೂ, ಪಾಸ್ತರ್‍ನಿಂದ ಗ್ಯಾಲ್ವನೋಮೀಟರ್ ಬಳಕೆಯನ್ನು ಕಲಿತನು. ಮೊದಲ ಜಾಗತಿಕ ಯುದ್ದ ಪ್ರಾರಂಭವಾದಾಗ ಕೇಂಬ್ರಿಜ್‍ನಲ್ಲಿ ಇತರ ವೈದ್ಯರೊಂದಿಗೆ ಹಿಮೋಗ್ಲೋಬಿನ್ ನರ ಸಂವೇದನೆ ಪ್ರಾಣಿಗಳ ದೇಹೋಷ್ಣ ಸಮಸ್ಯೆಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಯುದ್ದ ಕಾಲದಲ್ಲಿ ಶಸ್ತ್ರ ಸಂಶೋಧನಾ ವಿಭಾಗದಲ್ಲಿ ಮುಖ್ಯಸ್ಥನಾಗಿದ್ದನು. 1919ರಲ್ಲಿ ಸ್ನೇಹಿತನೂ ಉತ್ತಮ ಇಂಜಿನಿಯರನೂ ಆಗಿದ್ದ ಡಬ್ಲ್ಯೂ, ಹ್ಯಾರ್ ಟ್ರೀಯ ನೆರವಿನೊಂದಿಗೆ ಆಲ್ಪೋಷ್ಣ ಸಂಶೋಧನೆ ನಡೆಸಿದನು. 1920ರಲ್ಲಿ ಮ್ಯಂಚೆಸ್ಟರ್ ವಿಶ್ವವಿದ್ಯಾಲಯದ ಅಂಗಕ್ರಿಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕನಾದನು. ಇಲ್ಲಿ ವ್ಯಾಯಾಮ ನಿರತನಾದ ವ್ಯಕ್ತಿಯ ಸ್ನಾಯುಗಳ ಕ್ರಿಯಾಶೀಲತೆಯನ್ನು ಅಭ್ಯಸಿಸಿದನು. ಸ್ನಾಯುಗಳ ಕಾರ್ಯ ನಿರ್ವಹಣೆ ಹಾಗೂ ಉತ್ಪನ್ನವಾಗುವ ಶಾಖ, ನರ ಸಂವೇದನೆಗಳಲ್ಲಿ ರವಾನೆಯ ಯಾಂತ್ರಿಕತೆ ಆರ್ಚಿಬಾಲ್ಡ್‍ನ ನೆಚ್ಚಿನ ವಿಷಯಗಳಾಗಿದ್ದವು. ಸೆಕೆಂಡಿನ ಸಾವಿರದೊಂದು ಭಾಗದಲ್ಲಿ ಬದಲಾಗುವ 0.003 ಸೆಲ್ಷಿಯಸ್‍ಗಿಂತಲೂ ಅಲ್ಪ ಪ್ರಮಾಣದ ಶಾಖದ ವ್ಯತ್ಯಾಸಗಳನ್ನು ಅಳೆಯಲು ಆರ್ಚಿಬಾಲ್ಡ್ ಹಲವಾರು ಸಾಧನಗಳನ್ನು ನಿರ್ಮಿಸಿದನು. ನರ ಸಂಕೇತಗಳನ್ನು ರವಾನಿಸುವಾಗ, ಶಾಖ ಉತ್ಪನ್ನವಾಗುವುದೆಂದು ಅನಾವರಣಗೊಳಿಸಿದನು. ಇದು ಜೀವ ಭೌತಶಾಸ್ತ್ರದತ್ತ ಇತರರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತಲ್ಲದೆ 1922ರಲ್ಲಿ ಆರ್ಚಿಬಾಲ್ಡ್‍ಗೆ ನೊಬೆಲ್ ಪ್ರಶಸ್ತಿಯನ್ನು ತಂದಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/23/2019