ಬಾರ್ಡೆಟ್ ಜೂಲ್ಸ್ (ಜೀನ್ ಬ್ಯಾಪ್ಟಿಸ್ಟ್ ವಿನ್ಸೆಂಟ್) (1870-1961) ೧೯೧೯
ಬೆಲ್ಜಿಯಂ - ಪ್ರತಿರೋಧಶಾಸ್ತ್ರ (Immunology)
1892ರಲ್ಲಿ ಬಾರ್ಡೆಟ್ ಬ್ರಸೆಲ್ಸೆನಲ್ಲಿ ವೈದ್ಯಕೀಯ ಪದವಿಗಳಿಸಿ, 1901ರಲ್ಲಿ ಅದೇ ವಿದ್ಯಾ¯ಯದಲ್ಲಿ ಬೋಧಕನಾದನು. 1898ರಲ್ಲಿ ಬಾರ್ಡೆನ್ ಪ್ಯಾರಿಸ್‍ನ ಪಾಸ್ತರ್ ಸಂಸ್ಥೆಯಲ್ಲಿ ಕ್ರಿಯಾಶೀಲನಾಗಿದ್ದಾಗ ರಕ್ತದ ರಸಿಕೆಯನ್ನು (Serum) 55 ಸೆಂಟಿಗ್ರೇಡ್‍ಗಿಂತಲೂ ಹೆಚ್ಚಿಗೆ ಕಾಯಿಸಿದಾಗ , ಅದರಲ್ಲಿರುವ ಪ್ರತಿಕಾಯಗಳು (Antibodies) ನಾಶವಾಗುವುದಿಲ್ಲವಾದರೂ, ಅವುಗಳಿಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇಲ್ಲದಂತಾಗುವುದೆಂದು ಕಂಡುಕೊಂಡನು. ಇದರ ವಿಸ್ತೃತ ಪರಿಶೀಲನೆಯಿಂದ ಬಾರ್ಡೆಟ್, ರಕ್ತದ ರಸಿಕೆಯಲ್ಲಿ ಶಾಖ ಸಂವೇದನೆಯುಳ್ಳ ಘಟಕವೊಂದು ಇರಬೇಕೆಂದು ತರ್ಕಿಸಿದನು. ಈ ಘಟಕವನ್ನು ಎಹ್ರ್‍ಲಿಖ್ ಪರಿಪೂರಕಗಳೆಂದು ಕರೆದಿದ್ದನು. ಬಾರ್ಡೆಟ್ ಈ ಘಟಕದ ಬಗೆಗೆ ಇನ್ನು ಹೆಚ್ಚಿನ ಸಂಶೋಧನೆ ಮುಂದುವರೆಸಿ, 1901ರಲ್ಲಿ, ಈ ಘಟಕ ಪ್ರತಿಕಾಯ ಮತ್ತು ಪ್ರತಿಜನಕದ (Antibody & Antigen)ಜೊತೆ ಪ್ರತಿಕ್ರಿಯೆಗೊಂಡು ಬಳಕೆಯಾಗುವುದನ್ನು ಸ್ಪಷ್ಟಗೊಳಿಸಿದನು. ಈ ಕ್ರಿಯೆಯ ಪರಿಪೂರಕ ಸ್ಥಿರೀಕರಣ ಎಂದು ಈಗ ಗುರುತಿಸಲಾಗಿದೆಯಲ್ಲದೆ ಇದು ಪ್ರತಿರೋಧಶಾಸ್ತ್ರದಲ್ಲಿ ಬಹು ಪ್ರಾಮುಖ್ಯತೆ ವಹಿಸಿದೆ. ಎಹ್ರ್‍ಲಿಖ್ ಪ್ರತಿಯೊಂದೂ ಪ್ರತಿಜನಕಕ್ಕೂ ಅದರದೇ ಆದ ಪರಿಪೂರಕ ಇದೆಯೆಂದು ಭಾವಿಸಿದ್ದನು. ಆದರೆ ಇದಕ್ಕೆ ತದ್ವಿರುದ್ದವಾಗಿ ಬಾರ್ಡೆಟ್ ಕೇವಲ ಒಂದೇ ಪರಿಪೂರಕ ಇರುವುದೆಂದು ನಂಬಿದ್ದನು.ಆದರೆ ನಮಗೀಗ ತಿಳಿದಿರುವಂತೆ ನಮ್ಮ ಪ್ರತಿರೋಧ ವ್ಯವಸ್ಥೆ ಒಟ್ಟು ಒಂಬತ್ತು ಬಗೆಯ ಪರಿಪೂರಕಗಳನ್ನು ಹೊಂದಿದೆಯಲ್ಲದೆ ಈ ಪ್ರತಿಯೊಂದು ಕಿಣ್ವ ವ್ಯವಸ್ಥೆಯಲ್ಲಿ ಹಲವಾರು ಬಗೆಯ ರೋಗಕಾರಣಗಳನ್ನು (Pathogen) ನಾಶಗೊಳಿಸುವ ಸಾಮರ್ಥ್ಯ ಹೊಂದಿವೆ. ಬಾರ್ಡೆಟ್ ದೇಹದ ಈ ಪ್ರತಿರೋಧ ವ್ಯವಸ್ಥೆಗಳ ಬಗ್ಗೆ ನಡೆಸಿದ ಸಂಶೋಧನೆಗಳಿಗಾಗಿ 1919ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/29/2019