ಚಾರ್ಲ್ಸ್, ರಾಬರ್ಟ್ ರಿಕೆಟ್ (1850-1935) ೧೯೧೩
ಫ್ರಾನ್ಸ್ -ವೈದ್ಯಕೀಯ- ಅನಾಫೈಲಾಕ್ಸಿಸ್ ವಿದ್ಯಾಮಾನ ಅನಾವರಣಗೊಳಿಸಿದಾತ.
ಪ್ಯಾರಿಸ್‍ನಲ್ಲಿದ್ದ ವೈದ್ಯನ ಮಗನಾಗಿ 25 ಆಗಸ್ಟ್ 1850ರಂದು ಚಾರ್ಲ್ಸ್ ಜನನವಾಯಿತು. 1869ರಲ್ಲಿ ವೈದ್ಯಕೀಯ ಪದವಿ ಗಳಿಸಿ, 1878ರಲ್ಲಿ ವಿಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದನು. 1887ರಲ್ಲಿ ಪ್ಯಾರಿಸ್‍ನ ವೈದ್ಯಕೀಯ ನಿಕಾಯದಲ್ಲಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾದನು. ಚಾರ್ಲ್ಸ್ ರೋಗ ಹಾಗೂ ರೋಗಕಾರಣಗಳನ್ನು ಜೊತೆಯಾಗಿ ಅರಿಯಲು ಯತ್ನಿಸಿದನು. 1885ರಿಂದ 1895ರ ದಶಕದ ಅವಧಿಯಲ್ಲಿ ಚಾರ್ಲ್ಸ್ ಪ್ರಾಣಿಗಳು ತಮ್ಮ ದೇಹದ ತಾಪಮಾನವನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತವೆಯೆಂದು ಕುರಿತಾಗಿ ಅಧ್ಯಯನ ನಡೆಸಿದನು. ರೋಗ ವಿರುದ್ಧ ಲಸಿಕೆ ಪಡೆದ ಪ್ರಾಣಿಯಲ್ಲಿನ ರಕ್ತ ಸೋಂಕಿಗೆ ವಿರುದ್ಧವಾಗಿ ಹೇಗೆ ಸಂರಕ್ಷಿಸುತ್ತದೆಯೆಂದು ತಿಳಿಸಿದನು. ಇದೇ ತತ್ತ್ವಕ್ಕನುಗುಣವಾಗಿ 6 ಡಿಸೆಂಬರ್ 1890ರಂದು ಕ್ಷಯ ರೋಗನಿವಾರಣೆಗೆ ರಸಿಕಾ ಚೈಕಿತ್ಸಕ (Serotherapentic)ಚುಚ್ಚು ಮದ್ದನ್ನು ಮೊಟ್ಟ ಮೊದಲ ಬಾರಿಗೆ ಮನುಷ್ಯರ ಮೇಲೆ ಬಳಸಿದನು. 1906ರಲ್ಲಿ ಕ್ಷಯ ಪೀಡಿತ ನಾಯಿಗಳಿಗೆ ಹಾಲು ಹಾಗೂ ಹಸಿಮಾಂಸ ನೀಡಿ ರೋಗವನ್ನು ನಿಯಂತ್ರಿಸಬಹುದೆಂದು ತೋರಿಸಿದನು. 1901ರಲ್ಲಿ ಚಾರ್ಲ್ಸ್, ಆಹಾರದಲ್ಲಿನ ಸೋಡಿಯಂ ಕ್ಲೋರೈಡ್ ಪ್ರಮಾಣ ಕಡಿಮೆ ಮಾಡಿದಾಗ ಪೆÇಟ್ಯಾಷಿಯಂ ಬ್ರೋಮೈಡ್ ಅಪಸ್ಮಾರದ ವಿರುದ್ದ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದು ತೋರಿಸಿದನು. ಜೀವಿಯೊಂದಕ್ಕೆ ಪ್ರೋಟೀನ್, ವಿಷ ಅಥವಾ ಕಲಿಲ (Colloidal) ರೂಪದ ಚುಚ್ಚು ಮದ್ದು ನೀಡಿದಾಗ ಅದು ವಿಶೇಷ ಸಂವೇದನೆಯನ್ನು ಬೆಳೆಸಿಕೊಳ್ಳುತ್ತದೆ. ಇದಕ್ಕೆ ಅನಾಫೆಲಿಕ್ಸಿಸ್ ಎನ್ನುತ್ತಾರೆ. ಈ ವಿದ್ಯಾಮಾನ ಗುರುತಿಸಿದ್ದುದ್ದಕ್ಕಾಗಿ ಚಾಲ್ರ್ಸ್‍ಗೆ 1913ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಮುಂದೆ ಚಿಟಿಚಿಠಿhಥಿಟಚಿxis ತತ್ತ್ವವನ್ನು ವೈದ್ಯಕೀಯದಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಯಿತು.4 ಡಿಸೆಂಬರ್ 1985 ರಂದು ಪ್ಯಾರಿಸ್‍ನಲ್ಲಿ ಚಾರ್ಲ್ಸ್ ಮೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/29/2020