ಆ್ಯಲ್ವರ್, ಗುಲ್‍ಸ್ಟ್ರ್ಯಾಂಡ್ –(1862--) ೧೯೧೧
ಜರ್ಮನಿ- ವೈದ್ಯಕೀಯ-ಕಣ್ಣಿನ ಸಂಶೊಧನೆಅಯ ಮುಂಚೂಣಿಗ.
ಆ್ಯಲ್ವರ್‍ನ ತಂದೆ ಪಟ್ಟಣ ಪಂಚಾಯಿತಿಯ ವೈದ್ಯಾಧಿಕಾರಿಯಾಗಿದ್ದನು. 5 ಜೂನ್ 1862ರಲ್ಲಿ ಲ್ಯಾಂಡ್ಸ್ ಕ್ವೊನಾ ಪಟ್ಟಣದಲ್ಲಿ ಆಲ್ವರ್ ಜನನವಾಯಿತು. 1880ರಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಉಪ್ಸಾಲ ವಿಶ್ವವಿದ್ಯಾಲಯ ಸೇರಿದನು. 1885ರಲ್ಲಿ ವಿಧ್ಯಾಭ್ಯಾಸ ಮೊಟಕುಗೊಳಿಸಿ ವಿಯೆನ್ನಾಕ್ಕೆ ಹೋದನು. ಮುಂದಿನ ವರ್ಷ ಸ್ಟಾಕ್ ಹೋಂನಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರೆಸಿ, 1888ರಲ್ಲಿ ಪದವಿ ಗಳಿಸಿದನು. 1890ರಲ್ಲಿ ಡಾಕ್ಟರೇಟ್ ಗಳಿಸಿದನು. 1891ರಲ್ಲಿ ನೇತ್ರಶಾಸ್ತ್ರದ ಉಪನ್ಯಾಸಕನಾದನು. 1894ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಮೊದಲ ನೇತ್ರಶಾಸ್ತ್ರ ಪ್ರಾಧ್ಯಾಪಕನಾದನು. ಕಣ್ಣಿನ ಮರ್ಣಪಲ್ಲಟ, ದೋಷಗಳ ಸಿದ್ಧಾಂತವನ್ನು ಅ್ಯಲ್ವರ್ ಸ್ವತಂತ್ರವಾಗಿ, ಭೌತಶಾಸ್ತ್ರದ ಅಧ್ಯಯನದ ಮೂಲಕ ಮಂಡಿಸಿದನು. ಕಣ್ಣಿನ ಕ್ರಿಯಾಶೀಲತೆ, ಅದರ ಸ್ನಾಯುಗಳ ಚಲನೆ ಮತ್ತು ನಿಯಂತ್ರಣ, ಅಕ್ಷಿಪಟಲದ ವಿವರಗಳು ಅ್ಯಲ್ವರ್‍ನಿಂದ ಸಂಶೋಧನೆಗೊಳಗಾದವು. ಕಣ್ಣಿನ ಕ್ರಿಯೆಯನ್ನು ಅರಿಯಲು, ದೋಷಗಳನ್ನು ಅಳೆಯಲು ಅ್ಯಲ್ವರ್ ಹಲವಾರು ಹೊಸ ಬಗೆಯ ಸಾಧನಗಳನ್ನು ತಯಾರಿಸಿದನು. ಕಣ್ಣನ್ನು ಕುರಿತಾದ ಸಂಶೋಧನೆಗಳಿಗಾಗಿ ಆ್ಯಲ್ವರ್ 1911ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 3/4/2020