ಬೆರಿಂಗ್ ಎಮಿಲ್ ವಾನ್ (1854-1917) ೧೯೦೧ ಜರ್ಮನಿ-ಸೂಕ್ಷ್ಮಜೀವಿ ಶಾಸ್ತ್ರ- ಧನುರ್ವಾಯು ವಿಷರೋಧಕದ ಸಹಅನಾವರಣಕಾರ
ಬೆರಿಗ್ ಬರ್ಲಿನ್‍ನಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಗಳಿಸಿ ಆರ್ಮಿ ಮೆಡಿಕಲ್ ಕಾರ್ಪ್ಸ್ ಸೇರಿದನು. 1889ರಲ್ಲಿ ಕೋಖ್‍ನ ಸಹಾಯಕನಾದನು. 1895ಎಂದ ಮಾರ್ಬರ್ಗ್‍ನಲ್ಲಿ ನಿರ್ಮಲೀಕರಣ ಪ್ರಾಧ್ಯಾಪಕನಾಗಿದ್ದನು. ಧನುರ್ವಾಯುವಿಗೆ ಕಾರಣವಾದ ಬ್ಯಾಕ್ಟೀರಿಯಾ, ರಾಸಾಯನಿಕ ವಿಷವನ್ನು ಉತ್ಪನ್ನ ಮಾಡುವುದೆಂದೂ ಈ ವಿಷವೇ ರೋಗದ ಬಹುತೇಕ ಲಕ್ಷಣಗಳಿಗೆ ಕಾರಣವೆಂದು, ಹಾಗೂ ವಿಷರೋಧಕವನ್ನು ಕೃಷಿಗೊಳಿಸಿ ಪಡೆಯ¨ಹುದೆಂದು ಸಾಬೀತುಗೊಂಡಿದ್ದಿತು. 1890ರಲ್ಲಿ ಬೆರಿಂಗ್ ಕಿಟಾಸಾಟೋ ಜೊತೆ ಸೇರಿ, ಧನುರ್ವಾಯು ಪ್ರೇರಿತ ಪ್ರಾಣಿಯ ರಕ್ತದ ರಸಿಕೆಯನ್ನು (SERUM) ಆರೋಗ್ಯವಂತ ಪ್ರಾಣಿಗೆ ನೀಡಿದರೆ, ಅದಕ್ಕೆ ಧನುರ್ವಾಯುವಿನ ವಿರುದ್ದ ತಾತ್ಕಾಲಿಕ ಪ್ರತಿರೋಧ ಇರುವುದೆಂದೂ, ಹಾಗೂ ಜೊತೆಗೆ ಪ್ರತಿರೋಧಕವೂ ಇರುವುದೆಂದೂ ತೋರಿಸಿದರು. ಈ ಬಗೆಯಲ್ಲಿ ಧನುರ್ವಾಯುವಿಗೆ ಪ್ರತಿರೋಧವನ್ನು ಪ್ರೇರೇಪಿಸಬಹುದೆಂದು ತೋರಿಸಿದರು. ಮಕ್ಕಳಿಗೆ ತಾಗುವ ಭಾರಿ ಮಾರಕ ರೋಗವಿದು. ರೋಗಪೀಡಿತ ಕುದುರೆಯ ರಕ್ತದ ರಸಿಕೆಯಿಂದ ಇದಕ್ಕೆ ವಿಷರೋಧಕ ತಯಾರಿಸುವ ವಿಧಾನವನ್ನು ಬೆರಿಂಗ್ ಮತ್ತು ಎಹ್ರ್‍ಲಿಖ್ ರೂಪಿಸಿ ಲಸಿಕೆ ತಯಾರಿಸಿದರು. 1901ರಲ್ಲಿ ಬೆರಿಂಗ್ ವೈದ್ಯಕೀಯದಲ್ಲಿನ ಮೊಟ್ಟಮೊದಲ ನೊಬೆಲ್ ಪ್ರಶಸ್ತಿ ಪಡೆದನು. 1913ರಲ್ಲಿ ಕೇವಲ ವಿಷರೋಧಕಕ್ಕಿಂತಲೂ ವಿಷ-ವಿಷರೋಧಕಗಳ ಮಿಶ್ರಣ ರೋಗಕ್ಕೆ ಹೆಚ್ಚಿನ ದೀರ್ಘಕಾಲೀನ ಪ್ರತಿರೋಧ ತರುವುದೆಂದು ಬೆರಿಂಗ್ ತೋರಿಸಿದನು. 1923ರಲ್ಲಿ ಜಿ ರ್ಯಾಮೊನ್ ವಿಷವನ್ನು ಫಾರ್ಮಾಲಿನ್ ಜೊತೆಗೆ ಉಪಚರಿಸಿ ವಿಷಕ (TOXOID) ಪರಿಚಯಿಸುವವರೆಗೆ, ಬೆರಿಂಗ್ ವಿಧಾನ ಬಳಕೆಯಲ್ಲಿದ್ದಿತು. ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಹೊಂದಿದ್ದ ಬೆರಿಂಗ್ ಏಕಾಂಗಿ ಸಂಶೋಧಕ . ಈತನ ಜೀವನದ ಬಹುತೇಕ ಶಕ್ತಿ ವ್ಯಾಜ್ಯಗಳಲ್ಲಿ ಹಾಗೂ ಕ್ಷಯರೋಗಕ್ಕೆ ಲಸಿಕೆ ಕಂಡು ಹಿಡಿಯುವ ವ್ಯರ್ಥ ಪ್ರಯತ್ನದಲ್ಲಿ ನಷ್ಟವಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/22/2020