ಚಾರ್ಲ್ಸ್, ಲೂಯಿ ಆಲ್ಫೋನ್ಸ್ ಲೆವೆರಾನ್ –(1845-) ೧೯೦೭
ಫ್ರಾನ್ಸ್-ವೈದ್ಯಕೀಯ
18 ಜೂನ್ 1845 ರಂದು ಚಾರ್ಲ್ಸ್ ಪ್ಯಾರಿಸ್‍ನಲ್ಲಿ ಜನಿಸಿದನು. ಈತನ ತಂದೆ ಹಾಗೂ ತಾತ ವೈದ್ಯರಾಗಿದ್ದರು. ಚಾರ್ಲ್ಸ್ ಪ್ಯಾರಿಸ್‍ನ ಕಾಲೇಜ್ ಸೇಂಟ್ ಬೌವ್ ಹಾಗೂ ಲೈಸಿ ಲೆ ಗ್ರ್ಯಾಂಡ್‍ಗಳಲ್ಲಿ ಶಿಕ್ಷಣ ಮುಗಿಸಿ, 1863ರಲ್ಲಿ ಸ್ಟ್ರಾಸ್‍ಬೋರ್ಗ್‍ನ ಸಾರ್ವಜನಿಕ ಆರೋಗ್ಯ ಇಲಾಖೆ ಸೇರಿದನು. 1866ರಲ್ಲಿ ಸ್ಟ್ರಾಸ್‍ಬರ್ಗ್ ಸಾರ್ವಜನಿಕ ಆಸ್ಪತ್ರೆಯ ವೈದ್ಯನಾಗಿ ನೇಮಕಗೊಂಡನು. 1870ರಲ್ಲಿ ಪ್ರಾರಂಭವಾದ ಫ್ರಾಂಕೋ ಜರ್ಮನ್ ಯುದ್ದದಲ್ಲಿ ಭಾಗಿಯಾದನು. 1874ರಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಎದುರಿಸಿ ಮಿಲಿಟರಿಯ ರೋಗ ಹಾಗೂ ಸಾಂಕ್ರಾಮಿಕ ಪೀಡೆಗಳ ವಿಭಾಗದ ಕಾರ್ಯದರ್ಶಿಯಾಗಿ ಎಕೊಲೆ ವಲ್ ಡೆ ಗ್ರೇಸ್ ಸೇರಿದನು. ಈ ಸ್ಥಾನವನ್ನು ಹಿಂದೆ ಈತನ ತಂದೆ ನಿರ್ವಹಿಸಿದ್ದನು. 1878ರಲ್ಲಿ ಆಲ್ಜೀರಿಯಾಕ್ಕೆ ಕಾರ್ಯ ನಿಮಿತ್ತ ನಿಯೋಜಿತನಾದ ಚಾರ್ಲ್ಸ್ 1883ರವರೆಗೆ ಇಲ್ಲಿಯೇ ಇದ್ದನು. ಈ ಕಾಲದಲ್ಲೇ ಮಲೇರಿಯಾದ ಪರೋಪಜೀವಿಗಳ ಅಧ್ಯಯನ ನಡೆಸಿದನು. ಆಲ್ಜೀರಿಯಾದ ಮಲೇರಿಯಾ ರೋಗಿಗಳ ರಕ್ತದಲ್ಲಿರುವ ಪರೋಪಜೀವಿಗಳನ್ನು ರೋಮ್‍ನ ಕಂಪಾನದಲ್ಲಿರುವ ಇದೇ ರೋಗ ಪೀಡಿತರ ರಕ್ತದೊಂದಿಗೆ ಹೋಲಿಸಿ ನೋಡಲು ಚಾರ್ಲ್ಸ್ ರೋಮ್‍ಗೆ ತೆರಳಿದನು. ರೋಂನ ಸ್ಟಾನ್ ಸ್ಥಿರಿಟಿಯೋ ಆಸ್ಪತ್ರೆಯಲ್ಲಿ ನಡೆಸಿದ ಸಂಶೋಧನೆಗಳಿಂದ, ಮಲೇರಿಯಾ ರೋಗ ಪೀಡಿತರೆಲ್ಲರಲ್ಲೂ ಒಂದೇ ಬಗೆಯ ಪರೋಪಜೀವಿಗಳಿರುವುದು ಖಚಿತವಾಯಿತು. ಮೊದ ಮೊದಲಿಗೆ ಚಾಲ್ರ್ಸ್‍ನ ಈ ಮಾಹಿತಿಯನ್ನು ವೈದ್ಯರು ಸಂಶಯದ ದೃಷ್ಟಿಯಲ್ಲೇ ನೋಡಿದರು. ಆದರೆ ಮುಂದೆ ಬೇರೆ ವಿಜ್ಞಾನಿಗಳಿಂದ ಇದು ಖಚಿತವಾಯಿತು. ಇದಕ್ಕಾಗಿ 1889ರಲ್ಲಿ ಅಕಾಡೆಮಿ ಆ¥SÓÏ ಸೈನ್ಸ್‍ನಿಂದ ಬ್ರಿಯಾಂಟ್ ಪ್ರಶಸ್ತಿ ಚಾಲ್ರ್ಸ್‍ಗೆ ದಕ್ಕಿತು. 1897ರಿಂದ ಚಾರ್ಲ್ಸ್ ಎಂಡೋಗ್ಲೋಬ್ಯುಲ್ಯಾರ್ ಹೆಮಟಜೊವಾ, ಸ್ಪೊರೋಝೊವಾಗಳನ್ನು ಕುರಿತಾದ ಅಧ್ಯಯನ ಮುಂದುವರೆಸಿದನು. ಟ್ರೈಪನೋಸೋಮ್ ಮತ್ತು ಪ್ರೊಟೋಝೋವಾಗಳಿಂದ ರೋಗಗಳು ಬರುವುದನ್ನು ಅನಾವರಣಗೊಳಿಸಿದ್ದಕ್ಕಾಗಿ 1907ರಲ್ಲಿ ಚಾರ್ಲ್ಸ್ ನೊಬೆಲ್ ಪ್ರಶಸ್ತಿ ಗಳಿಸಿದನು. ಪ್ರಶಸ್ತಿಯ ಅರ್ಧ ಮೊತ್ತವನ್ನು ಹೆಚ್ಚಿನ ಸಂಶೋಧನೆಗಳಿಗಾಗಿ ಪಾಸ್ತರ್ ಸಂಸ್ಥೆಯಲ್ಲಿನ ಉಷ್ಣವಲಯ ರೋಗಗಳ ಔಷಧಿ ಸಂಶೋಧನಾ ಸಂಸ್ಥೆಗೆ ನೀಡಿದನು. ಮಲೇರಿಯಾದ ಪರೋಪಜೀವಿ, ಮಾನವನ ದೇಹದಾಚೆಗೆ ಬೇರೆ ಪ್ರಾಣಿಗಳಲ್ಲಿ ತನ್ನ ಜೀವನ ಚಕ್ರದ ಅಂಗವಾಗಿ ಇರುವುದೆಂದು ಚಾರ್ಲ್ಸ್ ತಿಳಿಸಿದನು. ಇದರ ಹಿನ್ನೆಲೆಯಲ್ಲಿ ಮುಂದೆ ರೊನಾಲ್ಡ್ ರಾಸ್ ಅನಾಫಿÛಲಿಸ್ ಸೊಳ್ಳೆ ಅಂತಹ ಇನ್ನೊಂದು ಜೀವಿಯೆಂದು ತೋರಿಸಿದನು. ಇದರ ನಂತರ ಮಲೇರಿಯಾ ನಿರ್ಮೂಲನೆಗೆ ಖಚಿತ ಮಾರ್ಗಗಳು ಸೃಷ್ಟವಾದವು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/11/2020