ಆಲ್‍ಬ್ರೆಕ್ಟ್ ,ಕೊಸೆಲ್ –(1853--) ೧೯೧೦
ಪ್ರಷ್ಯಾ-ವೈದ್ಯಕೀಯ-ಹಿಸ್ಟಿಡೈನ್‍ಮತ್ತು ಅರ್ಜಿನೇಸ್ ಅನಾವರಣಗೊಳಿಸಿದಾತ. ಮೂಲ: ವಿಜ್ಞಾನಿಗಳು
6 ಸೆಪ್ಟೆಂಬರ್ 1853ರಲ್ಲಿ ಕೊಸೆಲ್ ರೊಸ್ಟೋಕ್ ಪಟ್ಟಣದಲ್ಲಿ ಜನಿಸಿದನು. 1872ರಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಸೇರಿದನು. ಇಲ್ಲಿ ಹಲವಾರು ಜನ ಪ್ರಾಧ್ಯಾಪಕರಿಂದ ಪ್ರಭಾವಿತನಾದನು. 1878ರಲ್ಲಿ ವೈದ್ಯಕೀಯ ಪದವಿ ಗಳಿಸಿ ಸ್ಟ್ರಾಸ್‍ಬರ್ಗ್‍ನ ಹೊಪ್ ಸೆಮ್ಮರ್ ಭೌತ ರಸಾಯನಶಾಸ್ತ್ರ ಸಂಸ್ಥೆಯಲ್ಲಿ ಸಹಾಯಕನಾಗಿ ಸೇರಿದನು. 1881ರಲ್ಲಿ ಉಪನ್ಯಾಸಕನಾದನು. 1887ರಲ್ಲಿ ಇ.ಡುಬಾಯಿಸ್ ರೇಮಂಡ್‍ನ ಆಹ್ವಾನದ ಮೇರೆಗೆ ಬರ್ಲಿನ್‍ನ ಅಂಗಕ್ರಿಯಾ ವಿಭಾಗದ ರಾಸಾಯನಿಕಶಾಸ್ತ್ರ ನಿಕಾಯಕ್ಕೆ ಸೇರಿದನು. 1967ರಲ್ಲಿ ಹೈಡೆಲ್‍ಬರ್ಗ್‍ಗೆ ಹೋದನು. ಕೊಸೆಲ್ ಅಂಗಾಂಶ ಹಾಗೂ ಕೋಶಗಳ ರಸಾಯನಶಾಸ್ತ್ರದಲ್ಲಿ ಗಮನಾರ್ಹ ಸಂಶೋಧನೆ ಮಾಡಿದನು. ಕೋಶದ ಬೀಜದ ಸಂರಚನೆ, ಪ್ರೋಟೀನ್‍ಗಳ ಅಧ್ಯಯನ,ಕೋಶಗಳ ಪ್ರೊಟೀನಿಕ್ ಘಟಕಗಳು ಕೊಸೆಲ್‍ನಿಂದ ಪರಿಶೀಲನೆಗೊಳಗಾದವು. 1896ರಲ್ಲಿ ಹಿಸ್ಟಿಡೈನ್ ಅನಾವರಣಗೊಳಿಸಿದನು. ಅರ್ಜಿನೈನ್‍ನ್ನು ಯುರಿಯಾ ಹಾಗೂ ಬರ್ನಿಥೈನ್‍ಗಳಾಗಿ ಜಲ ಸಂಶ್ಲೇಷಣೆಗೊಳಿಸುವ (HYDROLYSIS) ಅರ್ಜಿನೇಸ್‍ನ್ನು ತನ್ನ ಶಿಷ್ಯನಾದ ಎಚ್ ಡಿ. ಡಾಕಿನ್‍ನೊಂದಿಗೆ ಅನಾವರಣಗೊಳಿಸಿದನು. ಕೊಸೆಲ್‍ನ ಪರಿಶ್ರಮದಿಂದಾಗಿ ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ಅಂಗಕ್ರಿಯಾಶಾಸ್ತ್ರ, ವೈದ್ಯಕೀಯ ರಸಾಯನಶಾಸ್ತ್ರಗಳು ವಿಭಿನ್ನ ಶಾಖೆಗಳಾದವು. ಅಂಗಕ್ರಿಯೆ ಹಾಗೂ ರಾಸಾಯನಿಕ ಸಂಬಂಧ ಸಂಶೋಧನೆಗಳಿಗೆ ಕೊಸೆಲ್ 1910ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಕೊನೆಯ ಮಾರ್ಪಾಟು : 8/27/2019