ಭಾರತದ ಆಲದ ಮರವು (ಫಿಕಸ್ ಬೆಂಗಾಲನೆಸಿಸ್) ರಾಷ್ಟ್ರ ವೃಕ್ಷವಾಗಿದೆ. ಅದರ ಕೊಂಬೆಗಳು ಹರಡಿಕೊಂಡು ತಾವೆ ಹೊಸ ಬೇರುಗಳನ್ನು ಬಿಟ್ಟು ಹೊಸ ಮರಗಳಾಗುತ್ತವೆ. ಇದರಿಂದ ಇದು ಅಪಾರವಾದ ವ್ಯಾಪ್ತಿ ಪಡೆದು ನಾಶವಾಗದ ವೃಕ್ಷ ವೆನಿಸಿಕೊಂಡಿದೆ. ಹೊಸ ಬೇರು ಕೊಂಬೆಗಳಿಂದ ಬೆಳೆಯುತ್ತಾ ಹೋಗುವುದು. ಇದು ಭಾರತೀಯ ಪುರಾಣ, ಇತಿಹಾಸಗಳ ಅವಿಭಾಜ್ಯ ಅಂಗವಾಗಿದೆ. ಈಗಲೂ ಆಲದ ಮರವು ಗ್ರಾಮ ಜೀವನದ ಕೇಂದ್ರ ಪ್ರದೇಶವಾಗಿದೆ. ಹಳ್ಳಿಯ ಪಂಚಾಯತಿಯು ಆಲದ ಮರದ ಕೆಳಗಿನ ಕಟ್ಟೆಯ ಮೇಲೆ ನಡೆಯುವುದು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/26/2020