|
ಭವ್ಯವಾದ ಹುಲಿ ಭಾರತದ ರಾಷ್ಟ್ರ ಪ್ರಾಣಿ, ಪ್ಯಾಂಥೆರ ಟೈಗ್ರಿಸ್ ಅದರ ವಯಜ್ಞಾನಿಕ ಹೆಸರಾಗಿದ್ದು, ಅದು ಒಂದು ಪಟ್ಟೆ ಇರುವ ಪ್ರಾಣಿ. ಇದಕ್ಕೆ ಗಾಢ ಹಳದಿಯ ರೋಮಪೂರಿತ ಚರ್ಮವಿದೆ . ಅದರ ಮೇಲೆ ಪಟ್ಟೆಗಳಿವೆ. ಅದು ಶಕ್ತಿ, ಸೊಬಗು, ಚುರುಕುತನ ಮತ್ತು ಅಪಾರ ಸಾಮರ್ಥ್ಯ ಸಮ್ಮಿಳಿತವಾದ ಪ್ರಾಣಿ. ಅದಕ್ಕೆ ಭಾರತದಲ್ಲಿ ರಾಷ್ಟ್ರ ಪ್ರಾಣಿ ಎಂಬ ಗೌರವಾನ್ವಿತ ಸ್ಥಾನ ದೊರಕಿದೆ. ಎಂಟು ಪ್ರಬೇಧವಿರುವ ಹುಲಿಗಳಲ್ಲಿ, ಭಾರತದ ತಳಿಯಾದ ರಾಯಲ್ ಬೆಂಗಾಲ್ ಟೈಗರ್ ಈಶಾನ್ಯ ಭಾರತ ಹೊರತುಪಡಿಸಿ ದೇಶದ ಎಲ್ಲ ಕಡೆ ಇದೆ . ಅಲ್ಲದೆ ಅಕ್ಕ ಪಕ್ಕದ ದೇಶಗಳಾದ ನೇಪಾಳ, ಭೂಟಾನ, ಮತ್ತು ಬಂಗ್ಲಾ ದೇಶದಲ್ಲೂ ಇವೆ. |
ಭಾರತದಲ್ಲಿ ಕಡಿಮೆಯಾಗುತ್ತಿರುವ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು, ‘ಪ್ರಾಜೆಕ್ಟ ಟೈಗರ್ ' ವೆಂಬ ಯೋಜನೆಯನ್ನು ಏಪ್ರಿಲ್ 1973 ರಲ್ಲಿ ಪ್ರಾರಂಭಮಾಡಲಾಗಿದೆ. ಈ ವರೆಗೆ, 27 ಹುಲಿ ಸಂರಕ್ಷಣಾ ಕಾಯ್ದಿರಿಸಿದ ಅರಣ್ಯಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ of 37,761 ಚದರ ಕಿಲೋಮೀಟರ್ ಪ್ರದೇಶವು ದೇಶದಲ್ಲಿ ಹುಲಿಗಳಿಗಾಗಿ ಮೀಸಲಿರಿಸಲಾಗಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/29/2020