ನಮ್ಮ ರಾಷ್ಟ್ರೀಯ ಪಂಚಾಂಗವು ಶಕರ ಕಾಲವನ್ನು ಅವಲಂಬಿಸಿದೆ . ಚೈತ್ರಮಾಸವು ವರ್ಷದ ಮೊದಲ ತಿಂಗಳಾಗಿದೆ. ಸಾಮಾನ್ಯ ವರ್ಷದಲ್ಲಿ 365 ದಿನಗಳಿವೆ. ಇದನ್ನು 22 ಮಾರ್ಚ 1957 ರಿಂದ
ಗ್ರೆಗೊರಿಯನ್ ಕ್ಯಾಲೆಂಡರ್ ಜೊತೆಯಲ್ಲಿಯೇ ಸರ್ಕಾರ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಕೆಳಕಂಡಂತೆ ಬಳಸಲಾಗುತ್ತಿದೆ.
ಭಾರತದ ರಾಜ್ಯ ಪತ್ರ,
ಆಕಾಶವಾಣಿಯ ಸುದ್ಧಿಪ್ರಚಾರ.
ಭಾರತ ಸರ್ಕಾರವು ಬಿಡುಗಡೆಮಾಡುವ ಪಂಚಾಂಗಗಳು (ಕ್ಯಾಲೆಂಡರ್ ಗಳು) ಮತ್ತು
ಸಾರ್ವಜನಿಕರಿಗೆ ಸಂಬಂಧಿಸಿದ ಎಲ್ಲ ಸರ್ಕಾರಿ ಪ್ರಕಟನೆಗಳು
ರಾಷ್ಟ್ರೀಯ ಕ್ಯಾಲೆಂಡರಿನ ದಿನಾಂಕಗಳು ಗ್ರಗೊರಿಯನ್ ಕ್ಯಾಲೆಂಡರಿನ ದಿನಾಂಕಗಳ ಜೊತೆ ಶಾಶ್ವತವಾದ ಸಂಬಂಧ ಹೊಂದಿವೆ. ಚೈತ್ರವು ಸಾಧಾರಣವಾಗಿ 22 ನೆ ಮಾರ್ಚ ಮತ್ತು ಅಧಿಕ ವರ್ಷದಲ್ಲಿ 21 ನೇ ಮಾರ್ಚ್ ನಂದು ಬರುವುದು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020