|
ಗಂಗಾ ಅಥವ ಗ್ಯಾಂಜೆಸ್ ಭಾರತದಲ್ಲಿನ ಅತ್ಯಂತ ಉದ್ದವಾದ ನದಿ. ಅದು ಪರ್ವತ , ಕಣಿವೆ ಮತ್ತು ಮೈದಾನಗಳಲ್ಲಿ ಸುಮಾರು 2,510 ಕಿ. ಮೀ ದೂರ ಹರಿಯುವುದು. ಇದರ ಉಗಮ ಸ್ಥಾನ ಹಿಮಾವೃತ ಗಂಗೋತ್ರಿ. ಇದು ಗಂಗಾ ಮೂಲದಲ್ಲಿ ಭಾಗೀರಥಿ ವೆನಿಸಿಕೊಂಡಿದೆ. ತರುವಾಯ ಅಲಕನಂದಾ, ಯಮುನ, ಸೋನ, ಗೋಮತಿ, ಕೋಸಿ , ಗಾಘ್ರ ನದಿಗಳು ಅದನ್ನು ಬಂದು ಸೇರುವವು. |
ಗಂಗಾನದಿ ಬಯಲು ಜಗತ್ತಿನಲ್ಲೆ ಅತ್ಯಂತ ಫಲವತ್ತಾದ, ಜನಸಾಂದ್ರಿತ ಪ್ರದೇಶವಾಗಿದೆ. ಅದು ಸರಿ ಸುಮಾರು 1,000,000 ಚದರ ಕಿ.ಮೀಟರ್ . ವ್ಯಾಪ್ತಿ ಹೊಂದಿದೆ . ಗಂಗಾ ನದಿಯಲ್ಲಿನ ಡಾಲ್ಫಿನ್ ಗಳು ಅಪಾಯದ ಅಂಚಿನಲ್ಲಿರುವ ನದಿಯಲ್ಲಿ ಜೀವಿಸುವ ಪ್ರಾಣಿಗಳಾಗಿವೆ.ಗಂಗಾನದಿಯು ಹಿಂದುಗಳಿಗೆ ಜಗತ್ತಿನಲ್ಲಿಯೇ ಪರಮ ಪವಿತ್ರವಾದ ನದಿಯಾಗಿದೆ.ಅತಿ ಮಹತ್ವದ ಧಾರ್ಮಿಕ ಆಚರಣೆಗಳು ಗಂಗಾ ನದಿ ತಟದಲ್ಲಿರುವ , ಬನಾರಸ್, ಹರಿದ್ವಾರ ಮತ್ತು ಅಲಹಾಬಾದನಲ್ಲಿ ಜರಗುತ್ತವೆ. ಗಂಗಾನದಿಯು ಬಿಹಾರಿನ ಸುಂದರಬನಗಳ ಮೂಲಕ ಹಾದು ಹೋಗುವಾಗ ಅತ್ಯಂತ ಅಗಲವಾದ ನದಿಮುಖಜ ಭೂಮಿಯನ್ನು ಉಂಟುಮಾಡಿ ಅಂತಿಮವಾಗಿ ಬಂಗಾಳ ಕೊಲ್ಲಿಯಲ್ಲಿ ಸಾಗರವನ್ನು ಸೇರುತ್ತದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/26/2020