|
ಭಾರತವು ಹಾಕಿಯಲ್ಲಿ ವಿಜಯವೇದಿಕೆಯನ್ನು ಬಹುಬಾರಿ ಅಲಂಕರಿಸಿದೆ. ನಮ್ಮ ದೇಶವು ಎಂಟು ಬಂಗಾರದ ಪದಕಗಳನ್ನು ಪಡೆದು ಒಲಂಪಿಕ್ಸ ದಾಖಲೆ ಸ್ಥಾಪಿಸಿದೆ. ಭಾರತದ ಹಾಕಿ ಅಟಕ್ಕೆ 1928-56, ರ ಅವಧಿಯು ಸುವರ್ಣಯುಗ. ಅದು ಸತತ ಆರು ಸುವರ್ಣ ಪದಕಗಳನ್ನು ಒಲಂಪಿಕ್ ಕ್ರೀಡೆಗಳಲ್ಲಿ ಪಡೆಯಿತು. ತಂಡವು 1975 ವಿಶ್ವ ಕಪ್ ಅನ್ನು ಗೆಲ್ಲುವ ಜೊತೆಗೆ ಇನ್ನೆರಡು ಪ್ರಶಸ್ತಿಗಳನ್ನೂ ಪಡೆಯಿತು (ಬೆಳ್ಳಿ ಮತ್ತು ಕಂಚು). ಭಾರತದ ಹಾಕಿ ಫೆಡರೇಷನ್ 1927 ಅಂತರಾಷ್ಟ್ರೀಯಹಾಕಿ ಫೆಡರೇಷನ್ನ ನ ಮಾನ್ಯತೆ ಪಡೆಯಿತು. |
ಈ ರೀತಿಯಾಗಿ ಭಾರತ ಹಾಕಿ ಫೆಡರೇಷನ್ ನ ಭವ್ಯ ಇತಿಹಾಸವು ಒಲಂಪಿಕ್ಸ ಪ್ರವೇಶದಿಂದ ಬಂಗಾರದ ಬೇಟೆ ಪ್ರಾರಂಭವಾಯಿತು. ಆ ಪ್ರವಾಸವು ಅತ್ಯಂತ ಯಶಸ್ವಿಯಾಯಿತು. ಭಾರತವು
ಅಡಿದ 21 ಪಂದ್ಯಗಳಲ್ಲಿ, 18 ರಲ್ಲಿ ವಿಜಯಿಯಾಯಿತು. ಧ್ಯಾನ ಚಂದ ಎಲ್ಲರ ಕಣ್ಮಣಿಯಾದರು. ಅವರು ತಂಡವು ಹೊಡೆದ 192 ಗೊಲುಗಳಲ್ಲಿ 100 ಗೋಲು ಹೊಡೆದು ದಂತಕತೆಯಾದರು. ಆಟವು ಅಂಸ್ಟರ್ ಡ್ಯಾಂನಲ್ಲಿ 1928 ರಲ್ಲಿ ಶುರುವಾಯಿತು. ನಂತರ ಭಾರತವು ಸತತ ಮೂರು ಒಲಂಪಿಕ್ಸಗಳಲ್ಲಿ ಗೆಲವು ಸಾಧಿಸಿದ ಕೀರ್ತಿಗೆ ಭಾಜನವಾಯಿತು. ಲಾಸ್ ಎಂಜಲಸ್ ನಲ್ಲಿ 1932 ರಲ್ಲಿ ಮತ್ತು ಬರ್ಲಿನ್ ನಲ್ಲಿ 1936 ರಲ್ಲಿ ಜಯಸಾಧಿಸಿತು. ಹಾಕಿಯಲ್ಲಿ ಒಲಂಪಿಕ್ಸ ಹ್ಯಾಟ್ ಟ್ರಿಕ್ ಪಡೆದ ಗೌರವಕ್ಕೆ ಪಾತ್ರವಾಯಿತು.
ಸ್ವಾತಂತ್ರ್ಯಾನಂತರ ಭಾರತದ ಹಾಕಿತಂಡವು ಇನ್ನೊಂದು ಸಾರಿ ಸುವರ್ಣ ಪದಕದ ಹ್ಯಾಟ್ ಟ್ರಿಕ್ ಪಡೆಯಿತು. 1948 ರ ಲಂಡನ್ ಒಲಂಪಿಕ್ಸನಲ್ಲಿ,1952ರ ಹೆಲ್ಸಿಂಕಿ ಕ್ರೀಡೆಗಳಲ್ಲಿ, ನಂತರದ ಮೆಲಬೋರ್ನ ಒಲಂಪಿಕ್ಸನಲ್ಲಿ ಸತತ ಮೂರಯ ಬಾರಿ ಬಂಗಾರದ ಪದಕ ಗೆದ್ದಿತು. ಆ ಸುವರ್ಣ ಸಾಧನೆಯ ಹಾದಿಯಲ್ಲಿ ಭಾರತವು 24 ಒಲಂಪಿಕ್ ಪಂದ್ಯಗಳನ್ನು ಆಡಿತು ಮತ್ತು ಎಲ್ಲ 24 ಪಂದ್ಯಗಳಲ್ಲಿ ಗೆದ್ದಿತು ಮತ್ತು 178 ಗೋಲು ಗಳಿಸಿತು (ಪ್ರತಿ ಪಂದ್ಯದ ಸರಾಸರಿ 7.43 ಗೋಲುಗಳು) ಮತ್ತು ಕೇವಲ 7 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು. ಇನ್ನೆರಡು ಬಂಗಾರದ ಪದಕಗಳು 1964ರ ಟೊಕಿಯೋ ಒಲಂಪಿಕ್ಸನಲ್ಲಿ ಮತ್ತು 1980ರ ಮಾಸ್ಕೊ ಒಲಂಪಿಕ್ಸನಲ್ಲಿ ಭಾರತಕ್ಕೆ ಬಂದವು .
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/22/2020