|
ರಾಷ್ಟ್ರಧ್ವಜವು ಮೂರುಬಣ್ಣಗಳಿಂದ ಕೂಡಿದ್ದು ಅಡ್ಡಡ್ಡಲಾಗಿರುವದು. ಮೇಲೆ ಗಾಢ ಕೇಸರಿ, ಮಧ್ಯ ಬಿಳಿ ಮತ್ತು ಕೆಳಗೆ ಕಡು ಹಸಿರು ಬಣ್ಣಗಳನ್ನು ಸಮ ಪ್ರಮಾಣದಲ್ಲಿ ಹೊಂದಿರುವುದು.ಅದರ ಅಗಲ ಮತ್ತು ಎತ್ತರದ ಪ್ರಮಾಣವು ಮೂರು ಮತ್ತು ಎರಡು ಇರುವುದು. ಬಿಳಿ ಪಟ್ಟಿಯ ನಡುವೆ ಕಡು ನೀಲಿಬಣ್ಣದ ಚಕ್ರವಿರುವುದು. ಇದರ ವಿನ್ಯಾಸವು ಸಾರನಾಥದ ಅಶೋಕ ಸ್ಥಂಭದ ಮೇಲಿರುವಂತೆ ಇರುವುದು.ಇದರ ವ್ಯಾಸವು ಬಿಳಿ ಪಟ್ಟಿಯ ಅಗಲಕ್ಕೆ ಸರಿಸಮನಾಗಿರುವುದು. ಈ ಚಕ್ರದಲ್ಲಿ 24 ಅರೆಗಳು ಇರುವವು. ಭಾರತ ಸಂವಿಧಾನ ಸಮಿತಿಯು ಈ ಧ್ವಜವನ್ನು 22 ಜೂಲೈ 1947 ರಲ್ಲಿ ಅಳವಡಿಸಿಕೊಂಡಿತು. |
ಶಾಸನ ಬದ್ಧ ಸೂಚನೆಗಳಲ್ಲದೆ ಸರ್ಕಾರವು ಅಗಿಂದಾಗ ರಾಷ್ಟ್ರಧ್ವಜ ಪ್ರದರ್ಶನ ರಾಷ್ಟ್ರೀಯ ಲಾಂಛನಗಳ ಮತ್ತು ಹೆಸರುಗಳ(ಅಕ್ರಮ ಬಳಕೆಯ ತಡೆ) ಕಾಯಿದೆ, 1950 ( 1950 ರಸಂ.. 12 ) ಮತ್ತು ರಾಷ್ಟ್ರೀಯ ಗೌರವಕ್ಕೆ ಹಾನಿ ತಡೆ ಕಾಯಿದೆ, 1971 ( 1971 ರ No. 69). ಭಾರತ ಧ್ವಜ ನೀತಿ ಸಂಹಿತೆ,, 2002 . ಇವೆಲ್ಲವನ್ನು ಮತ್ತು ಸಂಬಂಧಿಸಿದ ಎಲ್ಲ ಕಾಯಿದೆಗಳನ್ನು ,ಸಂಪ್ರದಾಯಗಳನ್ನು, ಪದ್ಧತಿಯನ್ನು ಮತ್ತು ಸೂಚನೆಗಳನ್ನು ಸಂಬಂಧಿಸಿದ ಎಲ್ಲರ ಮಾಹಿತಿಗಾಗಿ ಮತ್ತು ಮಾರ್ಗದರ್ಶನಕ್ಕಾಗಿ ಸಮಗ್ರವಾಗಿ ಕೊಡಲಾಗಿದೆ.
ಭಾರತದ ಧ್ಜಜ, 2002, ಕಾಯಿದೆಯು 26 ನೆ ಜನವರಿ 2002 ರಿಂದ ಆವರೆಗೆ ಇದ್ದ “ ಭಾರತದ ಧ್ವಜ ಸಂಹಿತೆ” ಯ ಬದಲಾಗಿ ಜಾರಿಗೆ ಬಂದಿದೆ. ಈಗ ಸಾರ್ವಜನಿಕರು, ಖಾಸಗಿ ಸಂಸ್ಥೆಗಳು , ಶಿಕ್ಷಣ ಸಂಸ್ಥೆಗಳು ಇತ್ಯಾದಿ ಅನೇಕರು ರಾಷ್ಟ್ರೀಯ ಲಾಂಛನಗಳ ಮತ್ತು ಹೆಸರುಗಳ(ಅಕ್ರಮ ಬಳಕೆಯ ತಡೆ) ಕಾಯಿದೆ, 1950 ( 1950 ರಸಂ. 12 ) ಮತ್ತು ರಾಷ್ಟ್ರೀಯ ಗೌರವಕ್ಕೆ ಹಾನಿ ತಡೆ ಕಾಯಿದೆ, 1971 ( 1971 ರ ಸಂಖ್ಯೆ . 69).ಭಾರತ ಧ್ವಜ ನೀತಿ ಸಂಹಿತೆ,, 2002 ಮತ್ತು ಈ ವಿಷಯದ ಮೇಲೆ ಆಗಿಂದಾಗ ಜಾರಿಗೆ ಬರಬಹುದಾದ ಸೂಚನೆಗಳ ಪ್ರಕಾರ ಧ್ವಜ ಹಾರಿಸಲು ನಿಷೇಧವಿಲ್ಲ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/27/2020