ಬಿಂದುಗಳನ್ನು ನಕ್ಷಾಹಾಳೆಯ ಮೇಲೆ ಗುರುತಿಸುವುದನ್ನು ನಾವು ಈಗಾಗಲೇ ಕಲಿತಿದ್ದೇವೆ. ಆಗಾಗ ಎರಡು ಬಿಂದುಗಳ ನಡುವಿನ ದೂರವನ್ನು( ಬಿಂದುಗಳನ್ನು ನೇರವಾಗಿ ಸೇರಿಸುವ ರೇಖಾಕಂಡದ ಉದ್ದ) ಕಂಡುಹಿಡಿಯಬೇಕಾಗುತ್ತದೆ.
ಯಾವುದೇ ಬಿಂದುವನ್ನು x ಮತ್ತು y ನಿರ್ದೇಶಾಂಕಗಳ ಮೂಲಕ ಗುರುತಿಸಬಹುದು ಎಂದು ಕಲಿತಿದ್ದೇವೆ P (x1,y1) ಮತ್ತು Q (x2,y2) be the ಎರಡು ಬಿಂದುಗಳಾಗಿರಲಿ. ನಾವು PQ ರೇಖಾಖಂಡದ ಉದ್ದವನ್ನು ಕಂಡುಹಿಡಿಯಬೇಕಾಗಿದೆ. P ಮತ್ತು Q ಗಳಿಂದ X ಅಕ್ಷಕ್ಕೆ PA ಮತ್ತು QB ಎನ್ನುವ ಲಂಬಗಳನ್ನು ಕ್ರಮವಾಗಿ ಎಳೆಯಿರಿ. OA = x1 ಮತ್ತು OB = x2 ಎನ್ನುವುದನ್ನು ಗಮನಿಸಿ P ಮತ್ತು Q ಗಳಿಂದ Y ಅಕ್ಷಕ್ಕೆ PC ಮತ್ತು QD ಎನ್ನುವ ಲಂಬಗಳನ್ನು ಕ್ರಮವಾಗಿ ಎಳೆಯಿರಿ. OC = y1 ಮತ್ತು OD = y2 ಎನ್ನುವುದನ್ನು ಗಮನಿಸಿ. CP ಯನ್ನು ವಿಸ್ತರಿಸಿದಾಗ ಅದು BQ ಯನ್ನು R ನಲ್ಲಿ ಸಂಧಿಸಲಿ. PR = OB-OA = x2-x1 QR = OD-OC = y2-y1 PRQ ಎನ್ನುವುದು ಲಂಬಕೋನತ್ರಿಕೋನವಾಗಿರುವುದರಿಂದ ಪೈಥಾಗೊರಸ್ ಪ್ರಮೇಯದಂತೆ PQ2 = PR2+RQ2= (x2-x1)2+ (y2-y1)2 PQ = {(x2-x1)2+ (y2-y1)2} ಇದನ್ನೇ ದೂರದ ಸೂತ್ರ('Distance formula') ಎಂದು ಕರೆಯುತ್ತೇವೆ. |
|
ಉಪಪ್ರಮೇಯ : ಒಂದು ಬಿಂದು ಮೂಲಬಿಂದು(0,0) ಆದರೆ ಸೂತ್ರ ಏನಾಗುತ್ತದೆ?
ಆಗ ಮೂಲಬಿಂದುವಿನಿಂದ O(0,0) P (x,y) ಗೆ ಇರುವ ದೂರ OP = (x2+ y2)
ಸಮಸ್ಯೆ 1: P(0,2) ಬಿಂದುವು Q(3,k) ಮತ್ತು R(k,5) ಬಿಂದುಗಳಿಂದ ಸಮಾನದೂರದಲ್ಲಿದ್ದರೆ k ಯ ಬೆಲೆ ಕಂಡುಹಿಡಿ.
ಪರಿಹಾರ:
PQ = {(3-0)2+ (k-2)2} = (9 +k2-4k+4) PR = {(k-0)2+ (5-2)2} = ( k2+9) PQ=PR ಆಗಿರುವುದರಿಂದ 9 +k2-4k+4 = k2+9 ಇದನ್ನು ಸುಲಭೀಕರಿಸಿದಾಗ k = 1
P(0,2) ಬಿಂದುವು Q(3,1) ಮತ್ತು R(1,5) ಬಿಂದುಗಳಿಂದ ಸಮಾನದೂರದಲ್ಲಿದೆ. |
ಸಮಸ್ಯೆ 2: A(10,-18), B(3,6) ಮತ್ತು C(-5,2) ಮೂರು ಬಿಂದುಗಳಿಂದ ಉಂಟಾಗಿರುವ ತ್ರಿಕೋನದ ವಿಶೇಷತೆ ಏನು?
ಪರಿಹಾರ:
AB = {(3-10)2+ (6-(-18))2} = (49+ 576) = (625) =25 AC = {(-5-10)2+ (2-(-18))2} = (225+ 400) = (625) =25 BC = {(-5-3)2+ (2-6)2} = (64+ 16) = (80)
AB=AC ಆಗಿರುವುದರಿಂದ ದತ್ತ ಮೂರು ಬಿಂದುಗಳಿಂದ ಉಂಟಾಗಿರುವ ತ್ರಿಕೋನವು ಸಮದ್ವಿಬಾಹು ತ್ರಿಕೋನ |
ಸಮಸ್ಯೆ 3: ದೂರದ ಸೂತ್ರವನ್ನು ಉಪಯೋಗಿಸಿ A(2,5), B(-1,2) ಮತ್ತು C(4,7) ಬಿಂದುಗಳು ಏಕ ರೇಖಾಗತ ಎಂದು ತೋರಿಸಿ.
ಸೂಚನೆ: BA+AC = BC ಎಂದು ತೋರಿಸಿ (ಆನಂತರ ಬಿಂದುಗಳನ್ನು ಸೇರಿಸಿ ಅವು ಏಕ ರೇಖಾಗತ ಎಂದು ತೋರಿಸಿ) |
|
ಸಮಸ್ಯೆ 4: ಒಂದು ತ್ರಿಕೋನ ABC ಯ ಮೂರು ಶೃಂಗಬಿಂದುಗಳು A(4,6),B(0,4) ಮತ್ತು C(6,2) ಆಗಿದ್ದರೆ ಅದರ ಪರಿಕೇಂದ್ರದ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
ಸೂಚನೆ: Let O(x,y) ಪರಿಕೇಂದ್ರವಾಗಿರಲಿ. ಆಗ OA=OB=OC ಮತ್ತು ಆದುದರಿಂದ OA2 = OB2 =OC2 ಪರಿಹಾರ: OA2 = (x-4)2+(y-6)2=x2-8x+16+y2-12y+36 OB2 = (x-0)2+(y-4)2=x2+y2-8y+16 OC2 = (x-6)2+(y-2)2=x2-12x+36+y2-4y+4 OA2 = OB2 ಆಗಿರುವುದರಿಂದ 2x+y =9 OA2 = OC2 ಆಗಿರುವುದರಿಂದ x-2y = -3 ಮೇಲಿನ ಎರಡು ಸಮೀಕರಣಗಳನ್ನು ಬಿಡಿಸಿದಾಗ x=3 ಮತ್ತು y=3 ಆಗಿರುತ್ತದೆ. ಆದುದರಿಂದ O(3,3) ಯು ABC ಯ ಪರಿಕೇಂದ್ರ. |
|
ಭಾಗ ಪ್ರಮಾಣ ಸೂತ್ರ:
ಒಂದು ಸರಳರೇಖೆಯನ್ನು ನೀಡಿದ ಅನುಪಾತದಂತೆ ವಿಭಜಿಸುವ ಬಿಂದುವನ್ನು ಕಂಡುಹಿಡಿಯುವ ಸೂತ್ರದ ಕುರಿತು ಇಲ್ಲಿ ಕಲಿಯಲಿದ್ದೇವೆ.
AB ಯು A (x1, y1) ಮತ್ತು B(x2, y2) ಬಿಂದುಗಳನ್ನು ಸೇರಿಸುವ ಸರಳರೇಖೆಯಾಗಿರಲಿ. AB ಯನ್ನು ನೀಡಿದ m1:m2 ಅನುಪಾತದಲ್ಲಿ ವಿಭಜಿಸುವ P(x, y) ಬಿಂದುವನ್ನು ಕಂಡುಹಿಡಿಯಬೇಕಾಗಿದೆ A, P ಮತ್ತು B ಗಳಿಂದ x-ಅಕ್ಷಕ್ಕೆ ಎಳೆದ ಲಂಬಗಳು x- ಅಕ್ಷವನ್ನು C,Q ಮತ್ತು D ಗಳಲ್ಲಿ ಕ್ರಮವಾಗಿ ಸಂಧಿಸಲಿ. A ಮತ್ತು P ಗಳಿಂದ x-ಅಕ್ಷಕ್ಕೆ ಎಳೆದ ಸಮಾನಾಂತರ ರೇಖೆಗಳು PQ ಯನ್ನು E ಯಲ್ಲಿ ಮತ್ತು BD ಯನ್ನು R ನಲ್ಲಿ ಸಂಧಿಸಲಿ. If P ಬಿಂದುವು AB ಯನ್ನು m1:m2 ಅನುಪಾತದಲ್ಲಿ ವಿಭಜಿಸಿದರೆ ಆಗ AP/PB = m1/m2 ಪಕ್ಕದ ಚಿತ್ರದಲ್ಲಿ ತೋರಿಸಿದಂತೆ AEP ಮತ್ತು PRB ಸಮರೂಪಿ ತ್ರಿಕೋನಗಳು (ಕೋ.ಕೋ.ಕೋ ಸ್ವಯಂಸಿದ್ಧ). AE/PR = PE/BR=AP/PB = m1/m2 --------à(1) AE = OQ-OC = x-x1 : PR = OD-OQ = x2-x PE = QP-QE(=CA) = y-y1 BR = DB-DR = y2-y ಈ ಬೆಲೆಗಳನ್ನು (1) ರಲ್ಲಿ ಆದೇಶಿಸಿದಾಗ AE/PR = (x-x1)/(x2-x) = PE/PR = (y-y1)/ (y2-y) = m1/m2 --------à(2) (x-x1)/(x2-x) = m1/m2 m2(x-x1) = m1(x2-x) (ಅಡ್ಡ ಗುಣಾಕಾರ) m2x - m2x1 = m1x2- m1x (ಬಿಡಿಸಿದಾಗ) x(m2+m1) = m1x2+ m2x1(ಪಕ್ಷಾಂತರದಿಂದ) x = (m1x2+ m2x1)/(m2+m1)(ಭಾಗಿಸಿದಾಗ) ಅದೇ ರೀತಿ (2) ರಿಂದ y = (m1y2+ m2y1)/(m2+m1) A(x1, y1) ಮತ್ತು B(x2, y2) ಬಿಂದುಗಳನ್ನು ಸೇರಿಸುವ ರೇಖೆಯನ್ನು P ಯು m1:m2 ಅನುಪಾತದಲ್ಲಿ ಕಡಿಯುವುದಾದರೆ ಅದರ ನಿರ್ದೇಶಾಂಕಗಳು : {(m1x2+ m2x1)/(m1+m2), (m1y2+ m2y1)/(m1+m2) } ಇದೇ ಭಾಗ ಪ್ರಮಾಣ ಸೂತ್ರ ‘section formula’. |
|
1. AB ರೇಖೆಯ ಮಧ್ಯಬಿಂದುವಿನ(m1:m2 = 1:1) ನಿರ್ದೇಶಾಂಕಗಳು ಯಾವುವು?
ಅದು {(x2+x1)/2), (y2+ y1)/2}: (ಮಧ್ಯ ಬಿಂದು ಸೂತ್ರ)
ಗಮನಿಸಿ: ಮೇಲಿನ ಸೂತ್ರವನ್ನು ಉಪಯೋಗಿಸಿ ಯಾವುದೇ ಚತುರ್ಭುಜದ ಮಧ್ಯಬಿಂದುಗಳನ್ನು ಸೇರಿಸಿದಾಗ ದೊರಕುವ ಚತುರ್ಭುಜವು ಸಮಾನಾಂತರ ಚತುರ್ಭುಜ ಎಂದು ಸಾಧಿಸಬಹುದು
2. ಒಂದು ರೇಖೆಯನ್ನು k:1 ಅನುಪಾತದಲ್ಲಿ ವಿಭಜಿಸುವ ಬಿಂದುವಿನ ನಿರ್ದೇಶಾಂಕಗಳು ಯಾವುವು?
ಅವು : {(kx2+x1)/(k+1), (ky2+ y1)/(k+1)}
ಸಮಸ್ಯೆ 5: A(15,5) ಮತ್ತು B(9,20) ಗಳನ್ನು ಸೇರಿಸುವ ರೇಖೆಯ ಮೇಲಿನ P(11,15) ಬಿಂದುವು ಆ ರೇಖೆಯನ್ನು ಯಾವ ಅನುಪಾತದಲ್ಲಿ ವಿಭಜಿಸಿದೆ?
ಪರಿಹಾರ:
P ಯು AB ಯನ್ನು k:1 ಅನುಪಾತದಲ್ಲಿ ವಿಭಜಿಸಲಿ. x1=15, y1=5, x2=9, y2=20,x=11, y=15 ಮೇಲೆ ತಿಳಿಸಿದಂತೆ, ಒಂದು ರೇಖೆಯನ್ನು k:1 ಅನುಪಾತದಲ್ಲಿ ವಿಭಜಿಸುವ ಬಿಂದುವಿನ ನಿರ್ದೇಶಾಂಕಗಳು {(kx2+x1)/(k+1), (ky2+ y1)/(k+1)} x = (kx2+x1)/(k+1), y = (ky2+ y1)/(k+1) x = 9k+15/(k+1) 11 = 9k+15/(k+1)( x=11 ದತ್ತ) 11k+11 = 9k+15 2k=4 or k=2 ಆದುದರಿಂದ P ಯು ರೇಖೆಯನ್ನು 2:1 ಅನುಪಾತದಲ್ಲಿ ವಿಭಜಿಸಿದೆ. |
|
ಸಮಸ್ಯೆ 6: A(6,-2) ಮತ್ತು B(-8,10) ಗಳನ್ನು ಸೇರಿಸುವ ರೇಖೆಯನ್ನು ಸರಿಯಾಗಿ ಮೂರು ಭಾಗ ಮಾಡುವ ಮಧ್ಯದಲ್ಲಿನ ಬಿಂದುಗಳ ನಿರ್ದೇಶಾಂಕಗಳನ್ನು ಕಂಡುಹಿಡಿ.
ಸೂಚನೆ:
AP=PQ=QB (1:1:1) ಎಂದಿರುವಂತೆ P ಮತ್ತು Q ಗಳ ನಿರ್ದೇಶಾಂಕಗಳನ್ನು ಕಂಡುಹಿಡಿಯಬೇಕಾಗಿದೆ. ಈ ಸಮಸ್ಯೆಯನ್ನು ಎರಡು ಹಂತದಲ್ಲಿ ಬಿಡಿಸಬೇಕು: 1. AP:PB = 1:2 ಎಂದಿರುವಂತೆ P(x1,y1) ಕಂಡುಹಿಡಿ. 2. AQ:QB = 2:1 ಎಂದಿರುವಂತೆ Q(x2,y2) ಕಂಡುಹಿಡಿ. ಅವು P (4/3,2) ಮತ್ತು Q (-10/3,6). |
|
7.2 ಸಮಸ್ಯೆ 7: ತ್ರಿಕೋನ ABC ಯಲ್ಲಿ D(-2,5) ಯು AB ಯ ಮಧ್ಯ ಬಿಂದು. E(2,4) ಯು BC ಯ ಮಧ್ಯ ಬಿಂದು ಮತ್ತು F(-1,2) ಯು AC ಯ ಮಧ್ಯ ಬಿಂದು. A, B ಮತ್ತು C ಬಿಂದುಗಳ ನಿರ್ದೇಶಾಂಕಗಳನ್ನು ಕಂಡುಹಿಡಿ.
ಸೂಚನೆ: A =(x1,y1), B=(x2,y2) ಮತ್ತು C=(x3,y3) ಆಗಿರಲಿ. D(-2,5) ಯು AB ಯ ಮಧ್ಯ ಬಿಂದು ಆಗಿರುವುದರಿಂದ (x1+x2)/2 = -2 ಮತ್ತು (y1+y2)/2 = 5 E(2,4) ಯು BC ಯ ಮಧ್ಯ ಬಿಂದು ಆಗಿರುವುದರಿಂದ (x2+x3)/2 = 2 ಮತ್ತು (y2+y3)/2 = 4 F(-1,2) ಯು AC ಯ ಮಧ್ಯ ಬಿಂದು ಆಗಿರುವುದರಿಂದ (x1+x3)/2 = -1 ಮತ್ತು (y1+y3)/2 = 2 ಈ ಮೂರೂ ಸಮೀಕರಣಗಳನ್ನು ಬಿಡಿಸಿದಾಗ x1= -5, x2=1, x3= 3 y1= 3, y2=7, y3= 1 ಮೂರು ಶೃಂಗಬಿಂದುಗಳು: A(-5,3), B(1,7) ಮತ್ತು C(3,1). |
|
ಕ್ರ.ಸಂ. |
ಕಲಿತ ಮುಖ್ಯಾಂಶಗಳು |
1 |
P (x1,y1) ಮತ್ತು Q (x2,y2) ಬಿಂದುಗಳ ನಡುವಿನ ದೂರ = {(x2-x1)2+ (y2-y1)2} |
2 |
A(x1,y1) ಮತ್ತು B (x2,y2) ಗಳನ್ನು ಸೇರಿಸುವ ರೇಖೆಯನ್ನು m1:m2 ಅನುಪಾತದಲ್ಲಿ ಕಡಿಯುವ ಬಿಂದುವಿನ ನಿರ್ದೇಶಾಂಕಗಳು:
|
ಮೂಲ : ಫ್ರೀ ಗಣಿತ
ಕೊನೆಯ ಮಾರ್ಪಾಟು : 1/28/2020