ಬ್ಯಾಂಕ್ ನೊಂದಿಗೆ ನಿಮ್ಮ ದೂರನ್ನು ನೋಂದಾಯಿಸಿ
ಬ್ಯಾಂಕಿಗ್ ಒಂಬಡ್ಸ್ಮಅನ್ (ಸಾರ್ವಜನಿಕ ತನಿಖಾಧಿಕಾರಿ) ಯೋಜನೆ-2006 ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ, ಸಂಬಂಧ ಪಟ್ಟ ವಾಣಿಜ್ಯ ಬ್ಯಾಂಕ್ (ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಮತ್ತು ಶೆಡ್ಯೂಲ್ಡ್ ಪ್ರಾಥಮಿಕ ಸಹಾಯಕ ಬ್ಯಾಂಕ್ ಗಳಿಗೆ ಅವರ ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸಲ್ಲಿಸುವ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ನಿಗದಿ ಪಡಿಸಿದ ಸಮಯದೊಳಗೆ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸುವುದು ಎಲ್ಲಾ ಬ್ಯಾಂಕುಗಳಿಗೆ ಕಡ್ಡಾಯವಾಗಿದೆ. ಬ್ಯಾಂಕ್, ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಅಸಮರ್ಥವಾದರೆ ಅಥವಾ ಗ್ರಾಹಕರು ಬ್ಯಾಂಕ್ ನ ಪ್ರತಿಕ್ರಿಯೆಯಿಂದ ಅಸಂತೃಪ್ತರಾದರೆ, ಇಂತಹ ಸಂದರ್ಭಗಳಲ್ಲಿ, ಬ್ಯಾಂಕಿಂಗ್ ಒಂಬಡ್ಸ್ಮನನ್ ಸಮ್ಮುಖದಲ್ಲಿ ಮೇಲ್ಮನವಿಯ ಅರ್ಜಿಯನ್ನು ಸಲ್ಲಿಸುವ ಹಕ್ಕನ್ನು ಅವರುಗಳು ಹೊಂದಿದ್ದಾರೆ.
ಬ್ಯಾಂಕ್ ಗ್ರಾಹಕರು ಈ ಕೆಳಗಿನ ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ದೂರನ್ನು ಸಲ್ಲಿಸಲು ಸಾಧ್ಯ
- ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣದ ವರ್ಗಾವಣೆ
- ಚೆಕ್ ಪಾವತಿ
- ಎಟಿಎಂ ಜೊತೆಗೆ ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ಅಂತರ್ಜಾಲ ಬ್ಯಾಂಕಿಂಗ್
- ಬ್ಯಾಂಕ್ ಸಾಲ
- ಮೊಬೈಲ್ ಬ್ಯಾಂಕಿಂಗ್
ದೂರಿನ ಆಧಾರಗಳು
ಯಾವುದೇ ವ್ಯಕ್ತಿ ಕೆಳಗಿನ ಬ್ಯಾಂಕ್ ಸೇವೆಗಳಲ್ಲಿ ಕೊರತೆಯನ್ನು ಆಪಾದಿಸುವ ಕಾರಣದ ಮೇಲೆ ಬ್ಯಾಂಕ್ ಅಥವಾ ಬ್ಯಾಂಕಿಂಗ್ ಲೋಕಾಯುಕ್ತ (ಸಾರ್ವಜನಿಕ ತನಿಖಾಧಿಕಾರಿ) ಜೊತೆ ದೂರನ್ನು ದಾಖಲಿಸ ಬಹುದು, ಅಂತರ್ಜಾಲ ಬ್ಯಾಂಕಿಗ್ ಅಥವಾ ಇತರೆ ಸೇವೆಗಳು ಸೇರಿವೆ:
- ಚೆಕ್ಗಳು, ಡ್ರಾಪ್ಟ್ ಗಳು, ಬಿಲ್ಲುಗಳು ಇತ್ಯಾದಿಗಳ ಅನಂಗೀಕಾರ/ಅಸಮ್ಮತಿ ಅಥವಾ ಪಾವತಿ ಅಥವಾ ಸಂಗ್ರಹದಲ್ಲಿ ಅತಿಯಾದ ವಿಳಂಬ.
- ATM ಜೊತೆಗಿನ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡಿಗೆ ಸಂಬಂಧಿಸಿದ ಯಾವುದೇ ವಿಷಯ
- ಸೂಕ್ತ ಕಾರಣಗಳಿಲ್ಲದೆ ಯಾವುದೇ ಉದ್ದೇಶದಿಂದ ಕಟ್ಟಲಾದ ಸಣ್ಣ ಮೊತ್ತದ ನೋಟುಗಳನ್ನು ತಿರಸ್ಕರಿಸುವುದು ಮತ್ತು ಅದಕ್ಕಾಗಿ ಶುಲ್ಕವನ್ನು ವಿಧಿಸುವುದು
- ಸೂಕ್ತ ಕಾರಣಗಳಿಲ್ಲದೆ ಯಾವುದೇ ಉದ್ದೇಶದಿಂದ ಕಟ್ಟಲಾದ ನಾಣ್ಯಗಳಾನ್ನು ತಿರಸ್ಕರಿಸುವುದು ಮತ್ತು ಅದಕ್ಕಾಗಿ ಶುಲ್ಕವನ್ನು ವಿಧಿಸುವುದು
- ಇರಿಸಲಾಗಿರುವ ಹಣವನ್ನು ಪಾವತಿ ಮಾಡದೆ ಇರುವುದು ಅಥವಾ ಪಾವತಿಗೆ ವಿಳಂಬ ಮಾಡುವುದು
- ಬ್ಯಾಂಕ್ನ ಡ್ರಾಫ್ಟ್, ಪಾವತಿ ಆರ್ಡರ್ ಅಥವಾ ಚೆಕ್ ಅನ್ನು ನೀಡಲು ವಿಫಲ ಅಥವಾ ವಿಳಂಬ,
- ನಿಗದಿತ ಕೆಲಸದ ಅವಧಿಯಲ್ಲಿ ಹಾಜರಿಲ್ಲದೆ ಇರುವುದು
- ಒಂದು ಬ್ಯಾಂಕ್ ಅಥವಾ ಅದರ ನೇರ ಮಾರಾಟದ ಪ್ರತಿನಿಧಿ ಮೂಲಕ ಬರವಣಿಗೆಯಲ್ಲಿ ಅಶ್ವಾಸನೆ ನೀಡಿದ ಬ್ಯಾಂಕಿಂಗ್ ಸೌಲಭ್ಯಗಳನ್ನು (ಸಾಲ ಮತ್ತು ಮುಂಗಡಗಳನ್ನು ಹೊರತು ಪಡಿಸಿ) ಒದಗಿಸಲು ವಿಫಲ ಅಥವಾ ನೀಡುವಲ್ಲಿ ವಿಳಂಬ,
- ವಿಳಂಬ ನೀತಿ, ಗ್ರಾಹಕರ ಖಾತೆಗಳಿಗೆ ಮುಂದಿನ ಕ್ರಮಗಳ ಜಮಾ ಮಾಡದೆ ಇರುವುದು, ಠೇವಣಿಯ ಪಾವತಿ ಮಾಡದೆ ಇರುವುದು ಅಥವಾ ರಿಸರ್ವ್ ಬ್ಯಾಂಕ್ನೀ ಸೂಚನೆಗಳನ್ನು ಅನುಸರಿದೆ ಇರುವುದು, ಒಂದು ಬ್ಯಾಂಕ್ನೊಂದಿಗೆ ಕರೆಂಟ್ ಅಥವಾ ಇತರೆ ಖಾತೆಗಳನ್ನು ನಿರ್ವಹಿಸುತ್ತಿದರೆ ಯಾವುದೇ ಉಳಿತಾಯಗಳಲ್ಲಿ ಠೇವಣಿ ಮೇಲಿನ ಬಡ್ಡಿಯ ದರ,
- ಬ್ಯಾಂಕ್ನಿಂದ ಅಥವಾ ಅದರ ಅಧೀನ ಸಂಸ್ಥೆಗಳಿಂದ ATM/ ಡೆಬಿಟ್ ಕಾರ್ಡ್ ಕಾರ್ಯಾಚರಣೆ ಅಥವಾ ಕ್ರೆಡಿಟ್ ಕಾರ್ಡ್ ಕಾರ್ಯಾಚರಣೆಗಳ ಮೇಲಿನ ರಿಸರ್ವ್ ಬ್ಯಾಂಕ್ನಳ ಸೂಚನೆಗಳನ್ನು ಅನುಸರಿಸದೆ ಇರುವಿಕೆ,
- ಪಿಂಚಣಿಯನ್ನು ವಿತರಿಸದೆ ಇರುವುದು ಅಥವಾ ವಿತರಣೆಯಲ್ಲಿ ವಿಳಂಬ,
- ಬಾರತೀಯ ರಿಸರ್ವ್ ಬ್ಯಾಂಕ್/ ಭಾರತದ ಸರ್ಕಾರ/ ಯಾವುದೇ ರಾಜ್ಯ ಸರ್ಕಾರಗಳ ಅಗತ್ಯಕ್ಕೆ ತಕ್ಕಂತೆ ತೆರಿಗೆ ಪಾವತಿಯ ಸ್ವೀಕಾರಕ್ಕೆ ಅಸಮ್ಮತಿ ಅಥವಾ ವಿಳಂಬ
- ಸರ್ಕಾರದ ಷೇರುಪತ್ರಗಳನ್ನು ಸ್ವೀಕರಿಸಲು ನಿರಾಕರಣೆ , ಸ್ವೀಕರಣೆಯಲ್ಲಿ ವಿಳಂಬ, ಅಥವಾ ಸೇವೆ ನೀಡಲು ವಿಫಲ ಅಥವಾ ಸೇವೆಯಲ್ಲಿ ವಿಳಂಬ, ತಿರಸ್ಕಾರ,
- ಸರಿಯಾದ ಕಾರಣವಿಲ್ಲದೆ ಅಥವಾ ತಕ್ಕ ನೋಟೀಸು ನೀಡದೆ ಠೇವಣಿ ಖಾತೆಗಳ ಬಲವಂತದ ಮುಚ್ಚುವಿಕೆ,
- ಖಾತೆಗಳನ್ನು ಮುಚ್ಚಲು ನಿರಾಕರಣೆ ಅಥವಾ ವಿಳಂಬ,
- ಬ್ಯಾಂಕಿನಿಂದ ಆಳವಡಿಸಿ ಕೊಂಡ ಕಾನೂನುಬದ್ಧ ಅನುಷ್ಠಾನ ನಿಯಮಾವಳಿಗೆ ಅಬದ್ಧತೆ;
- ಸಾಲದ ಮಂಜೂರಾತಿ, ಬಟವಾಡೆಯಲ್ಲಿ ವಿಳಂಬ, ಅಥವಾ ಸಾಲದ ಅರ್ಜಿಗಳ ವಿಲೇವಾರಿಗೆ ನಿಗದಿ ಪಡಿಸಿದ ವೇಳಾಪಟ್ಟಿಯ ಪಾಲನೆ ಮಾಡದಿರುವುದು,
- ಅರ್ಜಿದಾರನಿಗೆ ಸಮಂಜಸವಾದ ಕಾರಣ ನೀಡದೆ ಸಾಲದ ಅರ್ಜಿಯ ಅಸ್ವೀಕೃತಿ,
- ಸಾಲಗಾರರಿಗೆ ಬ್ಯಾಂಕ್ನಿಂದ ಅಳವಡಿಸಿಕೊಂಡ ನ್ಯಾಯಸಮ್ಮತ ಅನುಷ್ಠಾನಗಳ ನಿಯಮಾವಳಿ ಅಥವಾ ಗ್ರಾಹಕರಿಗೆ ಬ್ಯಾಂಕ್ನ ಬದ್ಧತೆಯ ನಿಯಮಾವಳಿಯ ನಿಬಂಧನೆಗಳಿಗೆ ಅಬದ್ಧತೆ,
- ಬ್ಯಾಂಕ್ ನಿಂದ ಪುನರ್ವಶ ಪ್ರತಿನಿಧಿಗಳ ಒಪ್ಪಂದದ ಮೇಲಿನ ರಿಸರ್ವ್ ಬ್ಯಾಂಕ್ನ ಸೂಚನೆಗಳನ್ನು ಪಾಲಿಸದಿರುವಿಕೆ ಇತ್ಯಾದಿ.
ದೂರಿನ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು
- ದೂರನ್ನು ಸಂಬಂಧ ಪಟ್ಟ ಬ್ಯಾಂಕ್ ಶಾಖೆಗೆ ಸಲ್ಲಿಸ ಬೇಕು, ಅಂದರೆ ನೀವು ನಿಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆ,
- ದೂರಿನ ಅರ್ಜಿಯನ್ನು ಸಂಬಂಧ ಪಟ್ಟ ಅಧಿಕಾರಿಗೆ ಸಲ್ಲಿಸಿ
- ದೂರಿನ ಅರ್ಜಿಯನ್ನು ಸಾಮಾನ್ಯವಾದ ಹಾಳೆಯಲ್ಲಿ ಅಥವಾ ಬ್ಯಾಂಕ್ ನಿಗದಿ ಪಡಿಸಿದ ಯಾವುದೇ ವಿನ್ಯಾಸದಲ್ಲಿ ಸಲ್ಲಿಸಬೇಕು.
- ದೂರಿನ ಅರ್ಜಿಯನ್ನು ಸ್ವೀಕರಿಸಿದ ನಂತರ, ಸಂಬಂಧ ಪಟ್ಟ ಬ್ಯಾಂಕ್ ಅಧಿಕಾರಿ ಒಂದು ಸ್ವೀಕೃತ ರಸೀದಿಯನ್ನು ಅರ್ಜಿದಾರನಿಗೆ ನೀಡುತ್ತಾರೆ.
ಬ್ಯಾಂಕಿಗೆ ದೂರಿನ ಅರ್ಜಿ ಸಲ್ಲಿಸುವ ಪ್ರಕ್ರಿಯೆ
- ದೂರಿನ ಅರ್ಜಿಯನ್ನು ಬ್ಯಾಂಕಿಗೆ ಮುದ್ರಿತ ಪ್ರತಿ ಅಥವಾ ಆನ್ಲೈ್ನ್ನಂಲ್ಲಿ ಸಲ್ಲಿಸಬಹುದು
- ನೀವು ನಿಮ್ಮ ಅರ್ಜಿಯನ್ನು ಮುದ್ರಿತ ಪ್ರತಿಯಲ್ಲಿ ಕೋಡಲು ಬಯಸುವಿರಾದರೆ, ಅರ್ಜಿಯೊಂದಿಗೆ ಈ ದಾಖಲೆಗಳನ್ನು ಲಗತ್ತಿಸಿ.
- ಗುರುತಿನ ಪುರಾವೆಯಾಗಿ ಬ್ಯಾಂಕಿನ ಪಾಸ್ಬುಕ್ಕಿನ ಜೆರಾಕ್ಸ್ ಪ್ರತಿ.
- ನಿಮ್ಮ ಹಕ್ಕು ಕೋರಿಕೆಗೆ ಬೆಂಬಲವಾಗಿ ಇತರೆ ಯಾವುದೇ ದಾಖಲೆಗಳು/ರಸೀದಿ.
- ಸಂಬಂಧ ಪಟ್ಟ ಬ್ಯಾಂಕ್ ಅಧಿಕಾರಿಯಿಂದ "ಸ್ವೀಕೃತ ರಸೀದಿ"ಯನ್ನು ದಿನಾಂಕದೊಂದಿಗೆ ಪಡೆಯಿರಿ.
ಬ್ಯಾಂಕ್ನಲ್ಲಿ ಜೊತೆ ಆನ್ಲೈರನ್ ದೂರು ನೋಂದಣಿ
- ಹೆಚ್ಚಿನ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಬ್ಯಾಂಕ್ಗಳು ಆನ್ಲೈನ್ ದೂರು ದಾಖಲಿಸುವ ಸೌಲಭ್ಯವನ್ನು ಒದಗಿಸಿರುತ್ತವೆ.
- ಬ್ಯಾಂಕ್ನಲ್ಲಿ tಜೊತೆ ಆನ್ಲೈ್ನ್ ದೂರು ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಕೆಲವು ಬ್ಯಾಂಕ್ಗುಳು ಇನ್ನೂ ಆನ್ಲೈೀನ್ ದೂರು ದಾಖಲಿಸುವ ಸೌಲಭ್ಯವನ್ನು ಆರಂಭಿಸಿಲ್ಲ, ನಿಮ್ಮ ಬ್ಯಾಂಕ್ ಅದರಲ್ಲಿ ಒಂದಾಗಿದ್ದರೆ, ಆಗ ನೀವು ನಿಮ್ಮ ಅರ್ಜಿಯನ್ನು ಮುದ್ರಿತ ಪ್ರತಿಯಲ್ಲಿ ಸಲ್ಲಿಸಬೇಕು.
ದೂರನ್ನು ದಾಖಲೆ/ನೋಂದಣಿಯ ನಂತರ ಏನು ಮಾಡುವುದು
- ಸಾಮಾನ್ಯವಾಗಿ, ಬ್ಯಾಂಕ್ ಕುಂದು ಕೊರತೆಯ ಪರಿಹಾರಕ್ಕೆ 2-3 ವಾರಗಳ ಸಮಯವನ್ನು ತೆಗೆದುಕೊಳ್ಳುತ್ತದೆ, ಆದರೆ ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗುತ್ತದೆ.
- ಬ್ಯಾಂಕ್ ನಿಮ್ಮ ಸಮಸ್ಯೆಯನ್ನು ಒಂದು ತಿಂಗಳ ಒಳಗೆ ಪರಿಹಾರಿಸಲು ಅಸಮರ್ಥವಾದರೆ ಅಥವಾ ನಿಮ್ಮ ದೂರಿಗೆ ಪ್ರತ್ಯುತ್ತರ ನೀಡದಿದ್ದಲ್ಲಿ, ಆಗ ಬ್ಯಾಂಕ್ ಗೆ ನಿಮ್ಮ ದೂರಿನ ಸಂಬಂಧಿ ಒಂದು ಜ್ಞಾಪನಪತ್ರವನ್ನು ಕಳುಹಿಸಿ, ಇನ್ನೂ ಬ್ಯಾಂಕ್ ನಿಮ್ಮ ದೂರಿಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಅಥವಾ ನಿಮ್ಮ ದೂರಿಗೆ ಸಮಂಜಸವಾದ ಉತ್ತರ ನೀಡಲು ಅಸಮರ್ಥವಾದರೆ , ಆಗ ನೀವು ಬ್ಯಾಂಕಿನ ವಿರುದ್ಧ "ಬ್ಯಾಂಕಿಂಗ್ ಒಂಬಡ್ಸ್ಮಗನ್ (ಲೋಕಾಯುಕ್ತ) ಜೊತೆ ದೂರು ನೋಂದಣಿ ಮಾಡಲು ಸಾಧ್ಯ.
- ಹಾಗೆಯೇ, ನೀವು ಬ್ಯಾಂಕಿನ ಪ್ರತಿಕ್ರಿಯೆಯೊಂದಿಗೆ ತೃಪ್ತಿಯಾಗದಿದ್ದಲ್ಲಿ, ಆಗ ನೀವು "ಬ್ಯಾಂಕಿಂಗ್ ಒಂಬಡ್ಸ್ಮಯನ್ ಮುಂದೆ ಮೊಕದ್ದಮೆಯನ್ನು ಹೂಡಲು ಸಾಧ್ಯ.
- "ಬ್ಯಾಂಕಿಂಗ್ ಒಂಬಡ್ಸ್ಮ ನ್ ಅರ್ಜಿದಾರರಿಂದ ದೂರನ್ನು ಸ್ವೀಕರಿಸಲು ದೇಶದಾದ್ಯಂತ 15 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.
ಬ್ಯಾಂಕಿಂಗ್ ಒಂಬಡ್ಸ್ಮಒನ್" ಅರ್ಜಿಯನ್ನು ಹೇಗೆ ಸಲ್ಲಿಸುವುದು
- ಪ್ರತಿ "ಬ್ಯಾಂಕಿಂಗ್ ಒಂಬಡ್ಸ್ಮಯನ್ ಒಂದು ಅಥವಾ ಹೆಚ್ಚು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ.
- ನಿಮ್ಮ ರಾಜ್ಯ ಅಥವಾ ಬ್ಯಾಂಕ್ ಯಾವ ಕಾರ್ಯವ್ಯಾಪ್ತಿಯ ಪ್ರದೇಶದಡಿಯಲ್ಲಿ ಬರುತ್ತದೇಯೋ, ಆ "ಬ್ಯಾಂಕಿಂಗ್ ಒಂಬಡ್ಸ್ಮಿನ್ಗೆ ನೀವು ನಿಮ್ಮ ದೂರು ಸಲ್ಲಿಸ ಬೇಕು.
- ನಿಮ್ಮ ಹಕ್ಕು ಕೋರಿಕೆಯ ಬೆಂಬಲವಾಗಿ ಅರ್ಜಿಯ ಜೊತೆಯಲ್ಲಿ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು
- ಬ್ಯಾಂಕಿಗೆ ಅರ್ಜಿ ಸಲ್ಲಿದ ಪುರಾವೆಯಾಗಿ ಬ್ಯಾಂಕಿನಿಂದ ಪಡೆದ ಸ್ವೀಕೃತಿ ರಸೀದಿ
- ಗುರುತಿನ ಪ್ರಮಾಣವಾಗಿ ಬ್ಯಾಂಕ್ ಪಾಸ್ಬುಕ್ಕಿನ ಜೆರಾಕ್ಸ್ ಪ್ರತಿ
- ಮನವಿಯ ಪುರಾವೆಯ ಜೆರಾಕ್ಸ್ ಪ್ರತಿ (ಕುಂದು ಕೊರೆತೆಯ ಪರಿಹಾರಕ್ಕಾಗಿ ಬ್ಯಾಂಕಿಗೆ ನೀವು ಈಗಾಗಲೇ ಮನವಿ ಮಾಡಿದ್ದಲ್ಲಿ)
- ಜ್ಞಾಪನಪತ್ರದ ಜೆರಾಕ್ಸ್ ಪ್ರತಿ (ನೀವು ಬ್ಯಾಂಕಿಗೆ ಯಾವುದಾದರೂ ಜ್ಞಾಪನಪತ್ರವನ್ನು ಕಳುಹಿಸಿದ್ದರೆ)
- ನಿಮ್ಮ ಹಕ್ಕು ಕೋರಿಕೆಯ ಬೆಂಬಲವಾಗಿ ಸಲ್ಲಿಸಲು ಬಯಸುವ ಇತರೆ ಯಾವುದಾದರೂ ದಾಖಲೆಗಳು. ನಿಮ್ಮ ರಾಜ್ಯ/ಪ್ರದೇಶದ "ಬ್ಯಾಂಕಿಂಗ್ ಒಮ್ಬಡ್ಸ್ಮನ್ " ವಿಳಾಸ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- "ಬ್ಯಾಂಕಿಂಗ್ ಒಂಬಡ್ಸ್ಮಸನ್ ಗೆ ನಿಮ್ಮ ಅರ್ಜಿಯನ್ನು ನೇರವಾಗಿ ಅಥವಾ ಸ್ವೀಕೃತಿ ಕಾರ್ಡ್ ನೊಂದಿಗೆ ಶೀಘ್ರ ಅಂಚೆಯ ಮೂಲಕ ಸಲ್ಲಿಸಿ.
ಬ್ಯಾಂಕಿಂಗ್ ಒಂಬಡ್ಸ್ಮ್ನ್"ಗೆ ಆನ್ಲೈಯನ್ ಅರ್ಜಿ
- ಬ್ಯಾಂಕಿಂಗ್ ಒಂಬಡ್ಸ್ಮಗನ್"ಗೆ ಆನ್ಲೈನನ್ ಅರ್ಜಿಸಲು ಇಲ್ಲಿ ಕ್ಲಿಕ್ ಮಾಡಿ
- ದೂರಿನ ಅರ್ಜಿಯನ್ನು ಭರ್ತಿ ಮಾಡಿದ ನಂತರ ನಿಮ್ಮ ಪುರಾವೆಯನ್ನು ಅಪ್ ಲೋಡ್ ಮಾಡಿ, ಅದು PDF ಅಥವಾ ಪಠ್ಯದ ವಿನ್ಯಾಸದಲ್ಲಿ ಮಾತ್ರ ಇರಬೇಕು.
- ನಿಮ್ಮ ಹಕ್ಕು ಕೋರಿಕೆಯಲ್ಲಿ ಮೇಲೆ ಉಲ್ಲೇಖಿಸಿದ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
- "ಬ್ಯಾಂಕಿಂಗ್ ಒಂಬಡ್ಸ್ಮ್ನ್"ಗೆ ಇ-ಮೇಲ್ ಮೂಲಕ ಸಹ ನಿಮ್ಮ ಅರ್ಜಿಯನ್ನು ಕಳುಹಿಸಲು ಸಾಧ್ಯ
- "ಬ್ಯಾಂಕಿಂಗ್ ಒಂಬಡ್ಸ್ಮ್ನ್ ನ ಇ-ಮೇಲ್ ವಿಳಾಸ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/10/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.