ನೀವು ಕ್ರೆಡಿಟ್ ಕಾಡು೯ ಉಪಯೋಗಿಸುವ ಮುನ್ನ ಕ್ರೆಡಿಟ್ ಕಾಡ೯ ಅಂದರೆ ಏನು ? ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ನೀವು ಕ್ರೆಡಿಟ್ ಕಾಡ೯ನ್ನು ಹೇಗೆ ಬಳಸುತ್ತೀರಿ ಮತ್ತು ನಿವ೯ಹಣೆ ಮಾಡುತ್ತೀರಿ ಎಂಬುದು ನಿಮ್ಮ ಆಥಿ೯ಕ ಭವಿಷ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.
ಕ್ರೆಡಿಟ್ ಕಾಡ್೯ ಒಂದು ಪ್ಲಾಸ್ಟಿಕ್ ತುಂಡಿಗಿಂತ ಸ್ವಲ್ಪ ದೊಡ್ಡದಾಗಿದೆ. ಇದೊಂದು ಆಥಿ೯ಕ ಸಂಸ್ಥೆಯ ನೀವು ಬಳಸಬಹುದಾದ ಸಾಲದ ರೂಪವಾಗಿದ್ದು, ನಂತರ ನೀವು ಆ ಸಾಲವನ್ನು ಮಾಸಿಕ ಕಂತುಗಳ ಮುಖಾಂತರ ಮರುಪಾವತಿಸಬಹುದಾಗಿದೆ. ನಿಮ್ಮ ಕ್ರೆಡಿಟ್ ಕಾಡ್೯ಗೆ ಒಂದು ಮಿತಿ ಇರುತ್ತದೆ, ನೀವು ನಿಮ್ಮ ಒಟ್ಟು ಬಾಕಿಯನ್ನು ಆ ಮಿತಿಯ ಒಳಗೆ ಇಡಬೇಕಾಗುತ್ತದೆ. ನೀವು ಹಣ ಸಂದಾಯ ಮಾಡಿದಾಗ ನೀವು ಖಚು೯ ಮಾಡಿದ ಮೊತ್ತವನ್ನು, ಮರುಪಾವತಿಯ ಅವಧಿಯ ಒಳಗೆ ಅಥವಾ ನೀವು ಖರೀದಿ ಮಾತ್ರ ಮಾಡಿ ಪೂಣ೯ ಬಾಕಿಯನ್ನು ಪ್ರತಿ ತಿಂಗಳು ಸಂದಾಯ ಮಾಡದಿದ್ದರೆ ಬಡ್ಡಿ ಸಹಿತ ಮರು ಪಾವತಿಸಬೇಕಾಗುತ್ತದೆ.
ನೀವು ಕ್ರೆಡಿಟ್ ಕಾಡ೯ನ್ನು ಜಾಣತನದಿಂದ ಬಳಸಿದಾಗ ನಿಮ್ಮ ಆಥಿ೯ಕ ವಹಿವಾಟುಗಳ ತಿಂಗಳಿಂದ ತಿಂಗಳಿಗೆ ನಿವ೯ಹಣೆ ಮಾಡಲು ಒಂದು ಸರಳ ದಾರಿ ಸಿಕ್ಕಂತಾಗುತ್ತದೆ.
ಈ ಕಾಡು೯ಗಳನ್ನು ಬಟ್ಟೆ ಬರೆ ಊಟ ತಿಂಡಿ, ವಿಮಾನಯಾನದಂತಹ ಯಾವುದಕ್ಕೂ , ಎಲ್ಲಿಯಾದರೂ ಹಣ ಸಂದಾಯ ಮಾಡಲಿಕ್ಕೆ ಬಳಸಬಹುದಾಗಿದೆ. ವೀಸಾ ಮತ್ತು ಮಾಸ್ಟರ ಕಾಡ್೯ ಕ್ರೆಡಿಟ್ ಕಾಡ್೯ಗಳು ಇದಕ್ಕೆ ಉದಾಹರಣೆ. ನೀವು ಖಚು೯ ಮಾಡುವ ಮೊತ್ತದಲ್ಲಿ ಅಥವಾ ಪ್ರತಿ ತಿಂಗಳು ಮಾಡುವ ಮರುಪಾವತಿಯ ಮೇಲೆ ಒಂದು ವಿಧದ ಹೊಂದಾಣಿಕೆ ಬೇಕಾದಾಗ ಸಾಮಾನ್ಯ ಉದ್ದೇಶದ ಕ್ರೆಡಿಟ್ ಕಾಡ್೯ ನಿಮ್ಮ ಬೇಡಿಕೆಗಳನ್ನು ಪೂರೈಸುತ್ತದೆ. ನಿಮ್ಮ ಕ್ರೆಡಿಟ್ ಕಾಡ೯ಗಳ ಖರೀದಿಗಳ ಮೇಲೆ ಹೆಚ್ಚಿನ ಅವಧಿಯ ಕಾಲಮಿತಿ ಯೊಳಗೆ ಮತ್ತುರೆ ನೀವು ನಿಮ್ಮ ಖರೀದಿಗಳ ಹಣ ಸಂದಾಯವನ್ನು ಪೂತಿ೯ಯಾಗಿ ಪ್ರತಿ ತಿಂಗಳೂ ಮಾಡದೇ ಇದ್ದಲ್ಲಿ ಬಾಕೀ ಉಳಿದ ಮೊತ್ತದ ಮೇಲೆ ಬಡ್ಡಿಯನ್ನು ವಿಧಿಸಲಾಗುವುದು.
(ಏಕ ಅಥವಾ ಸೀಮಿತ ಉದ್ದೇಶದ ಕಾಡು೯ಗಳೆಂದು ಕೂಡ ಕರೆಯಲಾಗುತ್ತದೆ.) ಈ ತರದ ಕಾಡು೯ಗಳನ್ನು ನಿಧಿ೯ಷ್ಟ ಮಳಿಗೆ (ಅಂಗಡಿ) ಗಳಲ್ಲಿ ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಬಹುದು. ಡಿಪಾಟ೯ಮೆಂಟ ಮಳಿಗೆ ಕಾಡ೯ಗಳು ಮತ್ತು ಬಟ್ಟೆ ಮಳಿಗೆಯ ಕಾಡು೯ಗಳು ಇದರ ಉದಾಹರಣೆಗಳಾಗಿವೆ. ಇಂತಹ ಕಾಡು೯ಗಳ ಮೇಲಿನ ಬಡ್ಡೀ ದರ ಸಾಧಾರಣವಾಗಿ ತುಂಬ ಹೆಚ್ಚಾಗಿರುತ್ತವೆ. ಅನೇಕ ಅಂಗಡಿಗಳಲ್ಲಿ ಈ ಕಾಡು೯ಗಳನ್ನು ವಿಶೇಷ ಉತ್ತೇಜನಕ್ಕಾಗಿ ಬಳಸುತ್ತವೆ. ( ಉದಾಹರಣೆಗೆ ಮೊದಲ ಖರೀದಿಯ ಮೇಲೆ ೧೫% ವಿನಾಯತಿ) ನೀವು ಒಂದು ಖಾತೆಯನ್ನು ತೆರೆದರೂ ಹೆಚ್ಚಿನ ಬಡ್ಡಿ ದರವಿರುವುದರಿಂದ ದೀಘಾ೯ವಧಿಯಲ್ಲಿ ಅದು ಹೆಚ್ಚುಲಾಭ ದಾಯಕವಾಗಿರುವುದಿಲ್ಲ.
ಈ ಕಾಡು೯ಗಳಿಂದ ನೀವು ಖರೀದಿಸಿದಾಗ ಅಥವಾ ಸೇವೆಯನ್ನು ಪಡೆದಾಗ ಅದರ ಹಣವನ್ನು ಒಂದೇ ಕಂತಿನಲ್ಲಿ ಒಂದು ನಿಧಿ೯ಷ್ಟ ಅವಧಿಯಲ್ಲಿ ಸಂದಾಯಮಡಬೇಕಾಗುತ್ತದೆ. ರೂಢಿಯಂತೆ ನೀವು ಈ ತರಹದ ಕಾಡು೯ಗಳಿಗೆ ಬಡ್ಡಿ ದರ ತೆರಬೇಕಾಗಿಲ್ಲ. ಆದರೆ ನೀವು ಶಿಲ್ಕು ಉಳಿಸಿಕೊಳ್ಳದೆ ಪಾವತಿಯನ್ನು ಪೂತಿ೯ಯಾಗಿ ಪ್ರತಿ ತಿಂಗಳು ಸಂದಾಯ ಮಾಡಬೇಕಾಗುತ್ತದೆ. ಈ ತರಹದ ಕಾಡ್೯ಗಳನ್ನು ಪ್ರವಾಸ ಕಾಡು೯ಗಳು ಮತ್ತು ಮನರಂಜನೆ ಕಾಡು೯ಗಳು ಎಂತಲೂ ಕರೆಯಲಾಗುತ್ತದೆ. ಉದಾಹರಣೆಗೆ ಅಮೇರಿಕನ ಎಕ್ಸಪ್ರೆಸ್ ಮತ್ತು ಡೈನರ್ಸ ಕ್ಲಬ್ ವೆಚ್ಚದ ಕಾಡು೯ಗಳು.
ಕ್ರೆಡಿಟ್ ಕಾಡ್೯ಗಳು ಅನುಕೂಲಕರವಾಗಿದ್ದು, ಅವು ತಿಂಗಳಿಂದ ತಿಂಗಳಿಗೆ ನಿಮ್ಮ ಎಲ್ಲ ಖಚು೯ಗಳ ಮೇಲೆ ನಿಗಾ ಇಡಲು ಸಹಾಯ ಮಾಡುವ ಸರಳ ದಾರಿಯಾಗಿವೆ. ಅದು ಅನುಕೂಲ ಬಳಸಲು ಬಹಳ ಜವಾಬ್ದಾರಿ ಬೇಕಾಗುತ್ತದೆ. ನಿಮ್ಮ ಕಾಡ೯ ನಿವ೯ಹಣೆಯನ್ನು ಸರಿಯಾಗಿ ಮಾಡುವುದರ ಮೂಲಕ ನಿಮಗೆ ಹಣ ಕೊಡುವವರಿಗೆ ನಿಮಗೆ ಸಾಲನ್ನು ನಿವ೯ಹಣೆ ಸರಿಯಾಗಿದೆ ಎಂದು ತೋರಿಸಬಹುದು. ಅದು ಒಂದು ಸಿದ್ಧ ದಾಖಲೆಯಾಗುವುದು. ಅದರಿಂದ ನಿಮಗೆ ಹೆಚ್ಚು ಮೊತ್ತದ ಖರೀದಿಗಳಾದ ಹೊಸಕಾರು, ಮನೆಗಳಿಗೆ ಹಣ ದೊರಕುವ ಸಾಧ್ಯತೆಗಳು ಹೆಚ್ಚಾಗುತ್ತವೆ.ಆಥಿ೯ಕ ಸಂಸ್ಥೆಗಳು ಸದಾ ಕ್ರಿಮಿನಲ್ಗಳಿಂದ ನಿಮ್ಮನ್ನು ರಕ್ಷಿಸಲು ಹೊಸದಾರಿಗಳನ್ನು ಹುಡುಕುತ್ತಿರುತ್ತವೆ. ನಿಮ್ಮ ಕ್ರೆಡಿಟ್ ಕಾಡ್೯ ಕಳೆದಾಗ ಅಥವಾ ಕಳುವಾದಾಗ ಅಥವಾ ನೀವು ಯಾವುದೇ ವಂಚನೆಗೆ ಬಲಿಯಾದಾಗ ಕೂಡಲೇ ನಿಮಗೆ ಕಾಡ೯ನ್ನು ನೀಡಿದ ಆಥಿ೯ಕ ಸಂಸ್ಥೆಗೆ ತಿಳಿಯಪಡಿಸಿರಿ.
ನೀವು ಒಂದು ಖರೀದಿಯನ್ನು ಮಾಡಿದಾಗ ಅಥವಾ ನಗದನ್ನು ಪಡೆದಾಗ ಡೆಬಿಟ್ ಕಾಡ್೯ ಆಗಿದ್ದಲ್ಲಿ ನೇರವಾಗಿ ನಿಮ್ಮ ಚೆಕಿಂಗ್ ಖಾತೆಯಿಂದ ಹಣವನ್ನು ಸೆಳೆಯಲಾಗುತ್ತಲಿದೆ. ಅದೇ ಕ್ರೆಡಿಟ್ ಕಾಡ್೯ ಆದಲ್ಲಿ ನಿಮ್ಮ ಪ್ರತೀ ವಹಿವಾಟನ್ನು ನಿಮ್ಮ ಚಾಜ್೯ ಖಾತೆಯ ಬೆಲೆಪಟ್ಟಿಗೆ ಸೇರಿಸಲಾಗುತ್ತದೆ. ಕ್ರೆಡಿಟ್ ಕಾಡ್೯ನ್ನು ಬಳಸಿದಾಗ ನೀವು ಹಣ ನಿಡಿದವರಿಗೆ ಅದನ್ನು ಮರಳಿ ಸಂದಾಯ ಮಾಡಬೇಕಾಗುತ್ತದೆ.ಕೆಲವು ವೇಳೆ ಏನಾದರೂ ಅನಿರೀಕ್ಷಿತ ಘಟನೆ ನಡೆದಾಗ ನಿಮ್ಮ ಕಾಡು೯ ಕಳೆದಾಗ ಅಥವಾ ಕಳುವಾದಾಗ ನೀವು ನಿಮ್ಮ ಬ್ಯಾಂಕನ್ನು ನೇರವಾಗಿ ಸಂಪಕಿ೯ಸಿದಾಗ ಮುಂಬರುವ ವಂಚನೆಯವೆಚ್ಚಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ.
ಕ್ರೆಡಿಟ್ ಕಾಡ೯ ಹೊಂದಿರುವುದು ನೀವು ಮಾಡಬಹುದಾದಕ್ಕಿಂತ ಹೆಚ್ಚಿಗೆ ಸರಳವಾಗಿ ಖಚು೯ ಮಾಡುವಂತೆ ಮಾಡುತ್ತದೆ. ಅಥವಾ ಪ್ರೇರೇಪಿತ (ದುಬಾರಿ) ಖರೀದಿಗಳನ್ನು ಮಾಡುವಂತೆ ಮಾಡುತ್ತದೆ. ನಿಮ್ಮ ಮಿತಿಯನ್ನು ಅರಿತಿರುವುದು ಮತ್ತು ನೀವು ಎಷ್ಟು ವ್ಯಯ ಮಾಡಲು ಶಕ್ತವಿರುತ್ತೀರಿ ಎಂಬುದನ್ನು ಅಥ೯ ಮಾಡಿಕೊಳ್ಳುವುದು , ಕ್ರೆಡಿಟ್ ಕಾಡ೯ನ್ನು ಜಾಣತನದಿಂದ ಉಪಯೋಗಿಸುವ ಒಂದು ಸಂಕೇತವಾಗಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/21/2020