ಉಳಿತಾಯ ಖಾತೆಯನ್ನು ಯಾರು ತೆರೆಯಬಲ್ಲರು
- ಉಳಿತಾಯ ಖಾತೆಯನ್ನು ಕೆಳಕಂಡ ವ್ಯಕ್ತಿಗಳು ತೆರೆಯಬಲ್ಲರು
- ಒಬ್ಬ ವ್ಯಕ್ತಿಯು ತನ್ನದೇ ಹೆಸರಿನಲ್ಲಿ ಖಾತೆಯನ್ನು ತೆರೆಯಬಲ್ಲ
- ಹಲವರು ಒಂದು ಗುಂಪನ್ನ ಮಾಡಿ ತಮ್ಮ ಜಂಟಿ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.
- ಅಪ್ರಾಪ್ತ ವಯಸ್ಸಿನ ಮಕ್ಕಳ ಖಾತೆಯನ್ನು ಆ ಮಕ್ಕಳ ಜನ್ಮ ದಿನಾಂಕವನ್ನು ದಾಖಲಿಸುವ ಪೋಷಕರು, ಮಕ್ಕಳ ಹೆಸರಿನಲ್ಲಿ ಮಕ್ಕಳ ಪರವಾಗಿ ಖಾತೆಗಳನ್ನು ತೆರೆಯಬಹುದು.
- 12 ವರ್ಷಗಳ ಅಪ್ರಾಪ್ತ ವಯಸ್ಸಿನವನು ತನ್ನ ಜನ್ಮದಿನಾಂಕದ ದಾಖಲೆಯನ್ನು ನಿಗಮ / ಆಸ್ಪತ್ರೆ ಹೊರಡಿಸಿದ ಪ್ರಮಾಣಪತ್ರ ಅಥವಾ ಶಾಲೆಯಿಂದ ನೀಡಲ್ಪಡುವ ದಾಖಲೆಯಿಂದ, ಮುಂತಾದವುಗಳ ದಾಖಲೆಗಳಿಂದ ಸಾಬೀತುಗೊಳಿಸಿದ ಪಕ್ಷದಲ್ಲಿ ಆತನೂ ಒಂದು ಉಳಿತಾಯ ಖಾತೆಯನ್ನು ತೆರೆಯಬಹುದು.(ಹೇಗಿದ್ದರೂ ಇಂತಹ ಖಾತೆಗಳಿಗೆ ಗಿರಷ್ಠವೆಂದರೆ 10000ರೂಪಾಯಿಗಳನ್ನು ಮಾತ್ರ ಆಯವ್ಯಯದಲ್ಲಿ ಇರಿಸಿಕೊಳ್ಳಲು ಸಾಧ್ಯ).
- ಕಾರ್ಯದರ್ಶಿಗಳು/ ಖಂಜಾಂಚಿಗಳು/ ನಿರ್ವಾಹಕರು/ಕ್ಲಬ್ ಅಧಿಕೃತ ಅಧಿಕಾರಿಗಳು, ಅಸೋಸಿಯೇಷನ್ ಗಳು (ನೋಂದಾಯಿತ ಅಥವಾ ನೋಂದಾಯಿಸದ), ಶಾಲೆಗಳು, ಧಾರ್ಮಿಕ ಅಥವಾ ದತ್ತಿ ಸಂಸ್ಥೆಗಳೆಲ್ಲವೂ ಕೆಲವು ನಿಯಮಗಳನ್ನು ಅನುಸರಿಸಿ, ತಮ್ಮ ಕಾರ್ಯಾಚರಣೆಯ ಮಾಹಿತಿಯನ್ನು ಒದಗಿಸಿ, ಅಗತ್ಯವಿರುವ ಇತರೆ ಮಾಹಿತಿಯನ್ನು ಕೊಟ್ಟು, ಖಾತೆಯನ್ನು ತೆರೆಯಬಹುದು.
ಕೆವೈಸಿ ಅನುವರ್ತನೆ
- ನಿರೀಕ್ಷಿತ ಖಾತೆದಾರ ತನ್ನ ಗ್ರಾಹಕ ಅನುವರ್ತನೆಯ ರೂಢಿಗಳನ್ನು ತಿಳಿದುಕೊಳ್ಳಬೇಕು, ನಂತರ ಕೆಳಕಂಡ ದಾಖಲೆಗಳನ್ನು ತನ್ನ ಗುರುತಿನ ಮತ್ತು ವಿಳಾಸದ ಪುರಾವೆಗಳನ್ನು ಒದಗಿಸಿ ಅನುವರ್ತನೆಯ ರೂಢಿಗಳನ್ನು ಅನುಸರಿಸಬೇಕು
ಗುರುತಿನ ಪುರಾವೆ
|
ವಿಳಾಸದ ಪುರಾವೆ
|
ಪಾಸ್ಪೋರ್ಟ್
|
ದೂರವಾಣಿಯ ಬಿಲ್ಲು
|
ಪ್ಯಾನ್ ಕಾರ್ಡ್
|
ಬ್ಯಾಂಕಿನ ಖಾತೆಯ ಹೇಳಿಕೆ
|
ಮತದಾರರ ಗುರುತಿನ ಚೀಟಿ
|
ಯಾವುದಾದರೂ ಗುರುತಿಸಲ್ಪಟ್ಟ ಅಧಿಕಾರಿಯಿಂದ ಒಂದು ಪತ್ರ
|
ವಾಹನ ಚಾಲಕರ ಲೈಸೆನ್ಸ್
|
ವಿದ್ಯುತ್ ಬಳಕೆಯ ಬಿಲ್ಲು
|
ಬ್ಯಾಂಕಿಗೆ ಪೂರಕವಾಗುವಂತಹ ಗುರುತಿನ ಚೀಟಿ
|
ಪಡಿತರ ಚೀಟಿ
|
ಯಾವುದಾದರೂ ಗುರುತಿಸಲ್ಪಟ್ಟ ಅಧಿಕಾರಿಯಿಂದ ಒಂದು ಪತ್ರ
|
ಬ್ಯಾಂಕಿಗೆ ಪೂರಕವಾಗುವಂತಹ ಉದ್ಯೋಗದ ಮಾಲಿಕನಿಂದ ಒಂದು ಪತ್ರ
|
ಕನಿಷ್ಠ ಆಯವ್ಯಯ
ಉಳಿತಾಯ ಖಾತೆ ತೆರೆಯಲು ಮತ್ತು ನಿರ್ವಹಿಸಲು ಇರಬೇಕಾದ ಕನಿಷ್ಠ ಆಯವ್ಯಯ
ಉಳಿತಾಯ ಖಾತೆಗಳು
ನಿರ್ವಹಿಸಬೇಕಾದ ಕನಿಷ್ಠ ಆಯವ್ಯಯ
(iv) ಉಳಿತಾಯ ಬ್ಯಾಂಕು ಖಾತೆದಾರರಿಗೆ ವಿಶೇಷ ವರ್ಗದಲ್ಲಿ (ಪಿಂಚೂಣಿದಾರರು /ವಿದ್ಯಾರ್ಥಿಗಳು)
*ಚೆಕ್ಕು ಪುಸ್ತಕವಿರುವ ಉಳಿತಾಯ ಖಾತೆದಾರರು ತಮ್ಮ ಆಯವ್ಯಯಗಳನ್ನು ೨೫೦/-ರೂ ಗಳ ವರೆಗೂ ಇಳಿಸಬಹುದು ಆದರೇ ಕನಿಷ್ಠ ಆಯವ್ಯಯವಿಲ್ಲದ ಕಾರಣವಾಗಿ ಇದಕ್ಕೆ ತಕ್ಕ ಜುಲ್ಮಾನೆ ಕಟ್ಟಬೇಕಾಗುತ್ತದೆ.
ನಿರ್ವಹಿಸಬೇಕಾದ ಕನಿಷ್ಠ ಆಯವ್ಯಯ
|
ಉಳಿತಾಯ ಖಾತೆಗಳು |
ನಗರದ/ಮೆಟ್ರೋ
|
ಗ್ರಾಮೀಣ/ಮತ್ತು ನಿರ್ವಹಿಸಲು
|
(i) ಉಳಿತಾಯ ಖಾತೆಯನ್ನು ಚೆಕ್ಕುಬುಕ್ಕು ಸೌಲಭ್ಯ ರಹಿತ ತೆರಯಲು
|
Rs.250/-
|
Rs.100/-
|
(ii) ಉಳಿತಾಯ ಖಾತೆಯನ್ನು ಚೆಕ್ಕುಬುಕ್ಕು ಸೌಲಭ್ಯ ಸಹಿತ ತೆರಯಲು
|
Rs.500/-*
|
Rs.250/-
|
(iii) ಏಟಿಎಮ್/ಡೆಬಿಟ್ ಕಾರ್ಡ್ ಗಳನ್ನು ಇಟ್ಟುಕೊಂಡಿರುವವರು
|
Rs.250/-
|
Rs.250/-
|
a) ಚೆಕ್ಕು ಪುಸ್ತಕದ ಸೌಲಭ್ಯವಿಲ್ಲದೆ
|
Rs. 50/-
|
Rs. 50/-
|
b) ಚೆಕ್ಕು ಪುಸ್ತಕದ ಸೌಲಭ್ಯದ ಸಹಿತ
|
Rs.500/-*
|
Rs.250/-
|
c) ಏಟಿಎಮ್/ಡೆಬಿಟ್ ಕಾರ್ಡ್ ಗಳನ್ನು ಇಟ್ಟುಕೊಂಡಿರುವವರು
|
Rs.250/-
|
Rs.250/-
|
- ಪೆನಾಲ್ಟಿ/ ಸೇವೆಯ ಶುಲ್ಕಗಳನ್ನು ನಿಗದಿತ ದರದ ಮೇರೆಗೆ ಕನಿಷ್ಠ ಆಯವ್ಯಯಕ್ಕಿಂತ ಕಡಿಮೆಯಾದ ಪಕ್ಷದಲ್ಲಿ ಹೇರುತ್ತಾರೆ
- ಪಾಸುಬುಕ್ಕುಗಳು/ ಶೀಟುಗಳು
- ಗ್ರಾಹಕರ ಕೋರಿಕೆ ಮೇರೆಗೆ ಗಣಕೀಕೃತ ಹೇಳಿಕೆಗಳನ್ನು ಪಾಸ್ ಬುಕ್ಕುಗಳ ಬದಲಿಗೆ ನೀಡಲಾಗುತ್ತದೆ. ಇಂತಹ ಗಣಕೀಕೃತ ಹೇಳಿಕೆಗಳನ್ನು ಗ್ರಾಹಕರ ಲಭ್ಯವಿರುವ ಇ ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
- ಯವುದಾದರೂ ಕಾರಣದಿಂದಾಗಿ ಪಾಸ್ ಬುಕ್ಕುನ್ನು ಮರಳಿ ಪಡಯುವದು ವಿಳಂಬವಾದ ಪಕ್ಷದಲ್ಲಿ ಗ್ರಾಹಕರು ಶಾಖೆಯ ಮುಖ್ಯಸ್ಥರಿಗೆ ತಿಳಿಸಬೇಕು.
- ಖಾತೆದಾರರು ಪಾಸ್ ಬುಕ್ಕುಗಳ ಮೇಲೆಯಾಗಲೀ ಅಥವಾ ಗಣಕೀಕೃತ ಹೇಳಿಕೆಗಳ ಮೇಲೆಯಾಗಲೀ ಬರಿಯಬಾರದು/ಗೀಚಬಾರದು.
- ಪಾಸ್ ಬುಕ್ಕುಗಳ/ ಗಣಕೀಕೃತ ಹೇಳಿಕೆಗಳ ಮೇಲೆ ಏನಾದರು ಬರಿಯಬೇಕಾದ ಸಂದರ್ಭದಲ್ಲಿ ಶಾಖೆಯ ನಿರ್ವಾಹಕರ ದೃಢೀಕರಣ ಅತ್ಯಗತ್ಯ.
- ಠೇವಣಿ/ ಸಂದಾಯ ಮಾಡುವ ಸಂದರ್ಭದಲ್ಲಿ ಅಥವಾ ಹಣವನ್ನು ಹಿಂತೆಗೆಯುವ ಸಂದರ್ಭದಲ್ಲಿ ಪಾಸ್ ಬುಕ್ಕುನ್ನು ತೋರಿಸಬೇಕು ಅಥವಾ ಪಾಕ್ಷಿಕವಾಗಿ ಪಾಸ್ ಬುಕ್ಕು ನಲ್ಲಿ ಖಾತೆಯ ಆಯವ್ಯಯಗಳನ್ನು ನಮೂದು ಮಾಡಿಸಬೇಕು.
- ಖಾತೆದಾರ ಪಾಸ್ ಬುಕ್ಕು ನಲ್ಲಿ ಮಾಡಿರುವ ನಮೂದುಗಳನ್ನು ಪರೀಕ್ಷಿಸಬೇಕು.ಪಾಸ್ ಬುಕ್ಕು ನಲ್ಲಿ ಯಾವುದಾದರೂ ತಪ್ಪುಗಳು ಕಂಡುಬಂದಲ್ಲಿ ಒಡನೆ ಶಾಖೆಯ ನಿರ್ವಾಹಕರಿಗೆ ವರದಿಸಬೇಕು.
- ಪಾಸ್ ಬುಕ್ಕು ನ ಎನ್ಟ್ರಿಯ ನಂತರದ 3 ದಿನಗಳ ವರೆಗೂ ಯಾವುದೆ ರೀತಿಯ ಬದಲಾವಣೆಯ ಕೋರಿಕೆ ಅಥವಾ ದೂರು ಶಾಖೆಗೆ ತಲುಪದಿದ್ದರೆ, ಬ್ಯಾಂಕ್ ಅದನ್ನು ಸರಿಯಾದ ನಮೂದು ಎಂದು ಸ್ವೀಕರಿಸುತ್ತದೆ ಹಾಗು ಗ್ರಾಹಕರ ನಿಲುವಿನೊಂದಿಗೆ ನಿಲ್ಲುತ್ತದೆ.
- ಪಾಸ್ ಬುಕ್ಕು ಕಳೆದುಹೋದ ಪಕ್ಷದಲ್ಲಿ, ಗ್ರಾಹಕರ ಲಿಖಿಕ ಕೋರಿಕೆಗೆ ಅನುಗುಣವಾಗಿ ನಕಲೀ ಪಾಸ್ ಬುಕ್ಕುನ್ನು ವಿತರಿಸಲಾಗುತ್ತದೆ.
ವಿಹಿವಾಟುಗಳು
- ಖಾತೆಗೆ ಹಣವನ್ನು ಸಂದಯ ಮಾಡುವ ಸಂದರ್ಭದಲ್ಲಿ ಬ್ಯಾಂಕಿನಿಂದ ನೀಡಲ್ಪಟ್ಟ ಪೇ ಇನ್ ಚೀಟಿಯ ಮೂಲಕವೇ ಸಂದಾಯ ಮಾಡಬೇಕು, ಇತರೆ ಅನ್ಯ ರೀತಿಗಳಲ್ಲಿ ಸಂದಾಯಿಸುವುದಾದರೆ ಶಾಖೆಯ ಅಧಿಕಾರಿಯರ ಅನುಮತಿ ಮತ್ತು ದೃಢೀಕರಣವಿರಬೇಕು.
- ಠೇವಣಿದಾರನು ಖಾತೆಗೆ ವಿವಿಧ ಸಂದಾಯ ಚಾನೆಲ್(ವಹಿನಿ)ಗಳಾದ ಎನ್ ಇ ಎಫ಼್ ಟಿ / ಆರ್ ಟಿ ಜಿ ಎಸ್/ ಇ ಸಿ ಎಸ್/ ನೆಟ್ ಬ್ಯಾಂಕಿಂಗ್/ ಮೊಬೈಲ್ ಬ್ಯಾಂಕಿಂಗ್ ಗಳ ಮೂಲಕವೂ ಅನ್ವಯವಾಗುವ ನಿಯಮಗಳನ್ನು ಅನುಸರಿಸುತ್ತ ಠೇವಣಿ ಮಾಡಬಹುದು.
- ಸಂದಾಯ ಮಾಡುವ ಮೊತ್ತ ಹಣವು ರೂಪಾಯಿ 1 ರ ಗುಣಕಗಳಾಗಿರಬೇಕು, ಎಂದರೇ ಕನಿಷ್ಠವಾಗಿ ಒಂದು ಬಾರಿಯ ಸಂದಾಯದಲ್ಲಿ ರೂಪಾಯಿ1 ನ್ನಾದರೂ ಸಂದಾಯ ಮಾಡಬೇಕು.
- ಸಾಮಾನ್ಯವಾಗಿ ಬ್ಯಾಂಕಿನಿಂದ ನೀಡಲಾದ ಚೆಕ್ಕುಗಳ ಮೂಲಕ ಹಣವನ್ನು ಹಿಂತೆಗೆಯಲು ಸಾಧ್ಯ. ಹೇಗಿದ್ದರೂ, ವಿತ್ ಡ್ರಾಯಲ್ ಚೀಟಿಗಳು, ಇಸಿಎಸ್, ವಿದ್ಯುತ್ಯಾಂತ್ರಿಕ ಮಾದ್ಯಮಗಳ, ಕಡ್ಡಾಯಗಳು, ಚೆಕ್ಕು ಗಳ ಸಾಹಯದಿಂದಾಗಿ ಬ್ಯಾಂಕಿನಂದ ಹಣ ಹಿಂತೆಗೆಯಲು ಸಾಧ್ಯ
- ವಿತ್ ಡ್ರಾಯಲ್ ಚೀಟಿಯಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ, ಕೌಂಟರ್ ಬಳಿ ಖಾತೆದಾರ ತನ್ನ ಪಾಸ್ ಬುಕ್ಕು ನೊಂದಿಗೆ ಉಪಸ್ಥಿತನಿರಬೇಕು. ವಿತ್ ಡ್ರಾಯಲ್ ಚೀಟಿಯನ್ನು ಮೂರನೇಯ ವ್ಯಕ್ತಿಗಳಿಗೆ ನೀಡುವಂತಿಲ್ಲ, ಮತ್ತು ಈ ಚೀಟಿಗಳನ್ನು ವಿತರಿಸಿದ ದಿನದಂದೇ ಉಪಯೋಗಿಸಬೇಕು.
- ಚೆಕ್ಕು ಬುಕ್ಕು ಗಳ ಉಪಯೋಗಯಿಲ್ಲದೇ ಮಾಡುವ ನಗದುಗಳನ್ನುಳ್ಳ/ನಗದುಗಳನ್ನುಳ್ಳದ ವ್ಯವಹಾರಗಳನ್ನು/ ವಹಿವಾಟುಗಳನ್ನು ಬ್ಯಾಂಕನ್ನು ಕೋರಿ ಬ್ಯಾಂಕಿನ ಮುಖ್ಯ ಕಛೇರಿಯಿಂದಲೇ ಮಾಡಬೇಕು.
- ಚೆಕ್ಕುಗಳು ಬಿಲ್ಲುಗಳು, ಪೇ ಆರ್ಡರ್ ಗಳು, ಡಿಮಾಂಡ್ ಡ್ರಾಫ್ಟ್‌ಗಳು, ನಿವೃತ ವೇತನಾ ಬಿಲ್ಲುಗಳು,ಲಾಭಾಂಶ ವಾರಂಟ್ ಗಳು, ಮರುಪಾವತಿಯ ಆದೇಶಗಳು, ಮುಂತಾದವುಗಳನ್ನು ಬ್ಯಾಂಕಿನಿಂದ ಬರ್ತಿ ಪಡಿಸಬಹುದು, ಈ ಸೇವೆಗಳಗೆ ಅವುಗಳದ್ದೇಯಾದ ಶುಲ್ಕಗಳಿರುತ್ತವೆ. ಖಾತೆಯಲ್ಲಿ ಹಣ ಸಂದಾಯವಾದ ನಂತರವೇ ಕಂತುಗಳನ್ನು ಬ್ಯಾಂಕಿನ ಖಾತೆಯಿಂದ ಕಡಿದುಕೊಳ್ಳಲು ಸಾಧ್ಯ,
- ಅಲ್ಲಿಯವರೆಗೂ ಸಾಲದ ಕಂತುಗಳಿಗೆ ಖಾತೆಯಿಂದ ಹಣ ಸಂದಾಯವಾಗುವುದಿಲ್ಲ ಮತ್ತು ಹಣವನ್ನು ಹಿಂತೆಗೆಯಲು ಸಾಧ್ಯವಿಲ್ಲ
- ಅಂಚೆಯ ಮೂಲಕ ಗ್ರಾಹಕರು ತಮ್ಮ ಚೆಕ್ಕುಗಳನ್ನು ಅಥವಾ ಡ್ರಾಫ಼್ಟುಗಳನ್ನು ಕಳುಹಿಸುವುದಾದರೆ, ರೆಜಿಸ್ಟರ್ಡ್ ಪೋಸ್ಟ್ ಮೂಲಕವೇ ಕಳುಹಿಸಬೇಕು, ಇಲ್ಲವಾದಲ್ಲಿ ಅಂತಹ ಚೆಕ್ಕುಗಳನ್ನು ಅಥವಾ ಡ್ತಾಫ್ಟುಗಳನ್ನು ಗ್ರಾಹಕರು ಕಳೆದುಕೊಂಡಿರುವುದಾಗಿ ಬ್ಯಾಂಕ್ ಅವುಗಳನ್ನು ಪರಿಗಣಿಸುತ್ತದೆ, ಮತ್ತು ಅಂತಹ ಚೆಕ್ಕುಗಳ ಮತ್ತು ಡ್ರಾಫ್ಟುಗಳ ಮೇಲಿರುವ ತನ್ನ ಹೊಣೆಗಾರಿಕೆಯನ್ನು ಬ್ಯಾಂಕ್ ಮುಕ್ತಗೊಳಿಸಿಬಿಡುತ್ತದೆ.
- ಕಳವು ಆಗಿರುವ ಚೆಕ್ಕಿನ ಬಗ್ಗೆ ಅಥವಾ ಯಾವುದಾದರು ಚೆಕ್ಕಿಗೆ ವಿರುದ್ಧವಾಗಿ ಹಣಕೊಡುವುದನ್ನು ಗ್ರಾಹಕರು ಸ್ಥಗಿತಗೊಳಿಸಬೇಕಾದಾಗ ಅದರ ಬಗ್ಗೆಸುದ್ಧಿ ಬ್ಯಾಂಕಿಗೆ ತಿಳಿಸಿದರೆ, ಅಂತಹ ಮಾಹಿತಿಗಳನ್ನು ರೆಜಿಸ್ಟರ್ ಮಾಡಿಕೊಳ್ಳಲಾಗುತ್ತದೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸುದ್ಧಿ ತಿಳಿಯುವುದಕ್ಕೆ ಮುನ್ನವೇನಾದರೂ ಬ್ಯಾಂಕಿನಿಂದ ಹಣದ ಸಂದಾಯವಾಗಿಹೋಗಿದ್ದರೆ ಅಥವಾ ದೂರನ್ನು ರೆಜಿಸ್ಟರ್ ಮಾಡದೇಹೋದ ಪಕ್ಷದಲ್ಲಿ ಅಂತಹ ಚೆಕ್ಕುಗಳ ಮೇಲಾಗಲೀ,ಹಣದ ಮೇಲಾಗಲೀ ಬ್ಯಾಂಕಿನ ಹೊಣೆಯಾಗಿರುವುದಿಲ್ಲ.ದೂರನ್ನು ತಂತಿ ಅಂಚೆಯ ಮೂಲಕ ಕಳುಹಿಸಿದ ಪಕ್ಷದಲ್ಲಿ ತಂತಿ ಅಂಚೆಯ ಮೂಲಕ ಕಳುಹಿಸಿರುವುದಾಗಿ ಗ್ರಾಹಕರು ಬ್ಯಾಂಕಿಗೆ ಒಂದು ಪತ್ರದಲ್ಲಿ ದೃಢಿಕರಿಸಬೇಕು. ಚೆಕ್ಕುಗಳ ಪಾವತಿಗಳನ್ನು ನಿಲ್ಲಿಸುವುದಕ್ಕೆ ಕಾಲ ಕಾಲಕ್ಕೆ ಅನುಗುಣವಾಗುವ ಶುಲ್ಕಗಳನ್ನು ಬ್ಯಾಂಕ್ ಗ್ರಾಹಕರ ಮೇಲೆ ಹೇರುತ್ತದೆ.
- ರದ್ದುಗೊಳಿಸದ ಅಥವಾ ಅವಮಾನಿಸಲಾದ ಚೆಕ್ಕುಗಳನ್ನು ಬ್ಯಾಂಕ್ ಸ್ವೀಕರಿಸದೇ, ಅಂತಹ ಚೆಕ್ಕುಗಳನ್ನು ರದ್ದುಗೊಳಿಸಲು ಅಥವಾ ಅಪಮಾನಗೊಳಿಸಲು ಬ್ಯಾಂಕ್ ಯಾವುದೇ ರೀತಿಯ ಸೂಚನೆಯನ್ನು ಕೊಡಲು ಬದ್ಧವಲ್ಲ.
- ಒಂದು ಚಕ್ಕನ್ನು ಹಿಂದಿರುದಿಸುವಾಗ ಬ್ಯಾಂಕ್, ಗ್ರಾಹಕನ ಹೆಸರು ಮತ್ತು ವಿಳಾಸವನ್ನು ಗ್ರಾಹಕನ ಕೋರಿಕೆಯ ಮೇರೆಗೂ ಸೂಚಿಸಲೇಬೇಕು ಎಂದು ಯಾವ ನಿಬಂಧನೆಯು ಬ್ಯಾಂಕಿಗೆ ಇರುವುದಿಲ್ಲ. ಹೆಸರು ಮತ್ತು ವಿಳಾಸಗಳನ್ನು ಸೂಚಿಸುವ ಸಂದರ್ಭಗಳು ಕೆಳಕಂಡ ವಿಷಯಗಳಲ್ಲಿವೆ .
- ನ್ಯಾಯಾಲಯದ ಆದೇಶವಿದ್ದಾಗ ಸೂಚಿಸಬಹುದು
- ರಾಜ್ಯದಿಂದ ನೇರವಾಗಿ ಕಾರ್ಯಾಚರಣೆಯಲ್ಲಿರುವ ಸಂಸ್ಥೆಗಳಿಗೆ ಹೆಸರು ಮತ್ತು ವಿಳಾಸವನ್ನು ಸೂಚಿಸಬಹುದು
- ಚೆಕ್ಕಿನ ಸೆಳಗನು ಆಥವಾ ಚೆಕ್ಕಿನಿಂದ ಹಣವನ್ನು ತೆಗೆದುಕೊಳ್ಳುವವನು ಸೂಚಿಸಲು ನಿವೇದನೆ ಮಾಡಿದ ಪಕ್ಷದಲ್ಲಿ ಹೆಸರು ಮತ್ತು ವಿಳಾಸವನ್ನು ಸೂಚಿಸಬಹುದು.
- ಬ್ಯಾಂಕಿನೊಂದಿಗೆ ವಿಶೇಷವಾದ ವ್ಯವಸ್ಥೆಯನ್ನು ಮಾಡಿಕೊಂಡಿರದ ಪಕ್ಷದಲ್ಲಿ ಖಾತೆಯಿಂದ ನಿಗದಿತ ಹಣಕ್ಕಿಂತ ಹೆಚ್ಚು ಹಣವನ್ನು ಹಿಂತೆಗೆಯುವಂತಿಲ್ಲ. ನಿಗದಿತ ಹಣಕ್ಕಿಂತ ಹೆಚ್ಚಿನ ಹಣವನ್ನೇನಾದರು ಹಿಂತೆಗೆದರೆ, ಬ್ಯಾಂಕು ಅದರ ಮೇಲೆ ಕಾಲಕಾಲಕ್ಕೆ ತಕ್ಕ, ದೈನಿಕ ಆಯವ್ಯಯದ ಮೇಲೆ ದರವನ್ನು ಹೇರಿಸಿ, ಶುಲ್ಕವನ್ನು ವಿಧಿಸುತ್ತದೆ.
- ಬ್ಯಾಂಕಿನ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಠೇವಣಿದಾರನು ವರ್ಗಾಯಿಸಲು ಬರವಣಿಗೆಯ ಮುಖಾಂತರ ವಿನಂತಿಸಿದರೆ, ಮತ್ತು ತನ್ನ ಚೆಕ್ಕುಗಳನೆಲ್ಲವನ್ನು ತನ್ನ ಸ್ವಾಧೀನದಿಂದ ಬ್ಯಾಂಕಿನ ಸ್ವಾಧೀನಕ್ಕೆ ಒಪ್ಪಿಸಿಬಿಟ್ಟರೆ, ವರ್ಗಾವಣೆಯನ್ನು ಶುಲ್ಕವಿಲ್ಲದೇಯೇ ಮಾಡಲಾಗುತ್ತದೆ. ಆದರೇ ಠೇವಣಿದಾರನು ತನ್ನ ಹೊಸ ಪಾಸ್ ಬುಕ್ಕುಗೆ ಕಾಲಕಾಲವಾಗಿ ಬದಲಾಗಿರುವ ಪ್ರಸ್ತುತ ಶುಲ್ಕವನ್ನು
ಬರ್ತಿ ಮಾಡಬೇಕು ನಂತರವೇ ಪಾಸ್ ಬುಕ್ಕುನ್ನು ಕೊಳ್ಳಬೇಕಾಗುತ್ತದೆ.
- ಉಪಯೋಗಿಸದ ಚೆಕ್ಕುಗಳನ್ನು ಮತ್ತು ಪಾಸ್ ಬುಕ್ಕುನ್ನು ಬ್ಯಾಂಕಿಗೆ ಹಿಂದಿರುಗಿಸಿದ ಪಕ್ಷದಲ್ಲಿ ಠೇವಣಿದಾರನಿಗೆ ತನ್ನ ಖಾತೆಯಲ್ಲಿರುವ ಆಯವ್ಯಯದ ಮೊತ್ತ ಹಣವನ್ನು ಬ್ಯಾಂಕ್ ಹಿಂದಿರುಗಿಸುತ್ತದೆ ಮತ್ತು ಒಂದು ಲಿಖಿತ ಮನವಿಯ ಮುಖಾಂತರ ಖಾತೆಯನ್ನು ಮುಚ್ಚಬಹುದು.
ಚೆಕ್ ಬುಕ್ಕಿನ ಸೌಲಭ್ಯ
- ಖಾತೆದಾರನು ತನ್ನ ಖಾತೆ
">ಯಲ್ಲಿ ನಿಗದಿತ ಆಯವ್ಯಯವನ್ನು ನಿರ್ವಹಿಸಿಕೊಂಡು ಚೆಕ್ ಬುಕ್ಕನ್ನು ಆಯ್ಕೆಮಾಡಿ ತೆಗೆದುಕೊಳ್ಳಬಹುದು. ಇಂತಹ ಎಲ್ಲಾ ಖಾತೆದಾರರಿಗೆ ವರ್ಷಕ್ಕೆ ಎರಡು ಚೆಕ್ ಪುಸ್ತಕಗಳನ್ನು ಬ್ಯಾಂಕ್ ಉಚಿತವಾಗಿ ಕೊಡುತ್ತದೆ.
- ಚೆಕ್ ಪುಸ್ತಕವಿಲ್ಲದ ಇತರೆ ಖಾತೆದಾರರು ವಿತ್ ಡ್ರಾ ಚೀಟಿಗಳನ್ನು ಉಪಯೋಗಿಸ ಹಣವನ್ನು ಹಿಂತೆಗೆಯಬಹುದು.
ಹಣವನ್ನು ಹಿಂತೆಗೆಯುವಾಗ ಇರುವ ನಿರ್ಬಂಧಗಳು
ಏಟಿಎಮ್ಅನ್ನು ಹೊರೆತುಪಡಿಸಿ, ಗರಿಷ್ಠವಾಗಿ ಹಣವನ್ನು ಹಿಂತೆಗೆಯಲು ನಿರ್ಬಂಧಿಸಲಾಗಿದೆ. ಹಿಂತೆಗೆಯುವ ಮಿತಿಯನ್ನು ಮೀರಿದ ಪಕ್ಷದಲ್ಲಿ ಸೇವೆಗಳ ಶುಲ್ಕವನ್ನು ಹೇರಿಸಲಾಗುತ್ತದೆ.
ವಿವರಗಳು
|
ನಾನ್ ಇನ್ಡಿವಿಜುವಲ್ಸ್ಗಳಿಗೆ
|
ಇನ್ಡಿವಿಜುವಲ್ಸ್ಗಳಿಗೆ
|
ನಗರದವರಿಗೆ
|
ಗ್ರಾಮೀಣದವರಿಗೆ
|
ಚೆಕ್ಕಿನಿಂದ ಹಿಂತೆಗೆಯುವುದು 25 ಬಾರಿಗಳಿಗಿಂತ
|
ಪ್ರತಿ ಚೆಕ್ಕಿಗೆ ರೂ 5
|
ಪ್ರತಿ ಚೆಕ್ಕಿಗೆ ರೂ 5
|
ಪ್ರತಿ ಚೆಕ್ಕಿಗೆ ರೂ 3
|
ಕಿರಿಯರಿಗೆ ಖಾತೆಗಳು
- ಅಪ್ರಾಪ್ತ ವಯಸ್ಸಿನವರ ಹೆಸರಿನಲ್ಲಿ ಪೋಷಕರು ಖಾತೆಯನ್ನು ತೆರೆದರೆ ಆ ವ್ಯಕ್ತಿಗೆ ೧೮ ವರ್ಷಗಳು ತಂಬುತ್ತಿದ್ದಂತೆಯೇ ಖಾತೆಯ ಕಾರ್ಯಾಚರಣೆಯು ಸ್ಥಗಿತಗೊಳ್ಳುತ್ತದೆ. ಕೆವೈಸಿ ನಿಯಮಗಳ ಅನುಸಾರವಾಗಿ, ಪೋಷಕರು ಖಾತೆದಾರನ ಹಸ್ತಾಕ್ಷರವನ್ನು ದೃಢೀಕರಿಸಿ ನಂತರ ಖಾತೆಯನ್ನು ಪುನಃ ಕಾರ್ಯಾಚರೆಣೆಗೆ ತರಬಹುದು.
ಕಾರ್ಯಾಚರಣೆಗಳಿಲ್ಲದ ಖಾತೆಗಳು
ಒಬ್ಬ ಖಾತೆದಾರನು ತನ್ನ ಖಾತೆಯನ್ನು ಕಾರ್ಯಾಚರಣೆಯಲ್ಲಿಟ್ಟುಕೊಳ್ಳದಿದ್ದರೆ ಅಂತಹ ಖಾತೆಯನ್ನು ೨೪ ಮಾಸಗಳಾದ ನಂತರ ಕಾರ್ಯಾಚರಣೆಗಳಿಲ್ಲದೆ ಖಾತೆಯೆಂದು ಪರಿಗಣಿಸಿ ವರ್ಗಾಯಿಸಲಾಗುತ್ತದೆ.
ಬ್ಯಾಂಕಿನ ನಿಗದಿತ ನಿರ್ವಾಹಕ ಶುಲ್ಕಗಳನ್ನು ಅದರ ಮೇಲೆ ಹಾಕಲಾಗುತ್ತದೆ. ನಿರ್ವಾಹಕ ಶುಲ್ಕಗಳು ಕೆಳಕಂಡಂತೆ ಇರುತ್ತವೆ:
ವಿವರಗಳು
|
ಜಂಟಿಯ ಮಾದರಿಯ ಖಾತೆಗಳು
|
ಒಬ್ಬನ ಖಾತೆ
|
ಗ್ರಾಮೀಣವಲ್ಲದ
|
ಗ್ರಾಮೀಣ ಭಾಗಗಳ
|
i) ಕನಿಷ್ಠ ಆಯವ್ಯಯಕ್ಕಿಂತ ಕಡಿಮೆ ಇದ್ದರೆ
|
ರೂ. 147.00 ಅರ್ಧ ವಾರ್ಷಿಕ
|
ರೂ. 49.00 ಅರ್ಧ ವಾರ್ಷಿಕ
|
ರೂ. 39.00 ಅರ್ಧ ವಾರ್ಷಿಕ
|
ii) ಕನಿಷ್ಠ ಆಯವ್ಯಯಕ್ಕಿಂತ ಹೆಚ್ಚಿದ್ದರೆ
|
ಶುಲ್ಕವಿಲ್ಲ
|
ಶುಲ್ಕವಿಲ್ಲ
|
ಶುಲ್ಕವಿಲ್ಲ
|
- ಸೇವಾ ಶುಲ್ಕಗಳನ್ನು ಹೇರುವುದಲ್ಲದೆ ಕಾರ್ಯಾಚರಣೆಯಿಲ್ಲದ ಖಾತೆಗಳಲ್ಲಿನ ಆಯವ್ಯಯವು ಶೂನ್ಯವಾಗಿಬಿಡುತ್ತದೆ. ಕಾರ್ಯಾಚರಣೆಗಳಿಲ್ಲದ ಖಾತೆಗಳು ಸ್ವಯಂಚಾಲಿತವಾಗಿ ಶೂನ್ಯವಾಗುತ್ತದೆ, ನಂತರ ಸ್ವಯಂಚಾಲಿತವಾಗಿ ಬಂದ್ ಆಗುತ್ತದೆ, ನಂತರ ಯಾವುದೇ ಕಾರಣದಿಂದಾಗಿ ಇಂತಹ ಖಾತೆಗಳು ಕಾರ್ಯಾಚರಣೆಯ ಸ್ಥಿತಿಗೆ ತರಲು ಸಾಧ್ಯವಾಗುವುದಿಲ್ಲ. ಹೊಸ ಖಾತೆಯನ್ನು ಕೆವೈಸಿ ನಿಯಮಾನುಸಾರವಾಗಿ ತೆರೆಯಬೇಕಗುತ್ತದೆ
- ಎಲ್ಲಾ ಕಾರ್ಯಾಚರಣೆಗಳಿಲ್ಲದ ಖಾತೆಗಳನ್ನು “ಎಲ್ಲಡೆ ಬ್ಯಾಂಕಿಂಗ್ ಸೌಲಭ್ಯದಿಂದ”ರದ್ಧುಗೊಳಿಸಲಾಗುತ್ತದೆ. ಇದಲ್ಲದೇ ಎಲ್ಲ ವಿಧಗಳ ಸೇವೆಗಳಾದ ಎಟಿಎಮ್, ಎನ್ ಇ ಎಫ಼್ ಟಿ ಮುಂತಾದವುಗಳೆಲ್ಲವೂ ರದ್ಧುಗೊಳ್ಳುತ್ತವೇ. ಇಂತಹ ಖಾತೆಗಳ ಕಾರ್ಯಾಚರಣೆಗಳೆಲ್ಲವನ್ನು ಮುಖ್ಯ ಕಛೇರಿಯಿಂದಲೇ ಮಾಡಬೇಕಾಗುತ್ತದೆ.
- ಇಂತಹ ಖಾತೆಗಳ ಸಂಬಂಧದಲ್ಲಿ ನೀಡಲಾಗುವ ಚೆಕ್ಕುಗಳನ್ನು ಕಾರ್ಯಾಚರಣೆಯಿಲ್ಲದ ಖಾತೆಯ ಚೆಕ್ಕು ಎಂದು ಶಾಖೆಗೆ ಹಿಂದಿರುಗಿಸಲಾಗುತ್ತದೆ. ಹಣವನ್ನು ಸಂದಾಯ ಮಡುವಾಗಲೂ ಇಂತಹ ಖಾತೆಗಳಿಗೆ ಹಣ ಸಂದಾಯವಾಗುವುದಿಲ್ಲವೆಂದು ಖಾತೆಯಿರುವ ಶಾಖೆಗೆ ಹಣವನ್ನು ಕಳುಹಿಸಲಾಗುತ್ತದೆ
ಕಾರ್ಯಾಚರಣೆಯಿಲ್ಲದ ಖಾತೆಗಳ ಪುನರವಲೋಕನ
- ಕೆವೈಸಿ ನಿಯಮಗಳ ಅನುಸಾರವಾಗಿ ಗ್ರಾಹಕನು ತನ್ನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಮತ್ತು ಸೂಕ್ತ ವಿಳಾಸವನ್ನು ನೀಡಿ, ಲಿಖಿತವಾಗಿ ಪುರಾವೆಯಲ್ಲಿ ತನ್ನ ಖಾತೆಯನ್ನು ಪನಃ ತೆರೆಯಲು ಅಥವಾ ಪುನಃ ಕಾರ್ಯಾಕಾರಿಯನ್ನಾಗಿಸಲು ಮನವಿಯನ್ನು ಮಂಡಿಸಿದರೆ, ಆ ಖಾತೆಯನ್ನು ಕಾರ್ಯಾರೂಪಕ್ಕೆ ತರುವುದೋ ಬಿಡುವುದೋ ಎಂಬ ನಿರ್ಧಾರವನ್ನು ಬ್ಯಾಂಕ್ ತನ್ನ ವಿಮರ್ಶೆಗಳ ನಂತರ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುತ್ತದೆ.
ಸುಪ್ತ ಖಾತೆಗಳು
- ಖಾತೆಯನ್ನು ತೆರೆದ ಶಾಖೆಯಲ್ಲಿಯೂ ಕಾರ್ಯಚರಣೆಯಿಲ್ಲದೆಯೇ ೩೬ ತಿಂಗಳ ಅವಧಿಯವರೆಗೂ ಒಂದು ಖಾತೆಯನ್ನು ಬಿಟ್ಟರೇ ಆ ಖಾತೆಯನ್ನು ಸುಪ್ತ ಖಾತೆಯೆಂದು ಪರಿಗಣಿಸಲಾಗುತ್ತದೆ. ಇಂತಹ ಖಾತೆಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಕಾರ್ಯಾಚರಣೆಯ ಬಗ್ಗೆ ವಿಮರ್ಶೆ ಮಾಡುವುದಕ್ಕೂ ಆಗುವುದಿಲ್ಲ. ಹೇಗಿದ್ದರೂ ಖಾತೆದಾರನು ಲಿಖಿತ ಮನವಿಯೊಂದನ್ನು ಶಾಖೆಗೆ ಖುದ್ಧಾಗಿ ಹೋಗಿ ಕೊಟ್ಟು, ಮನವಿ ಮಾಡಿ, ಉಪಯೋಗಿಸದ ಚೆಕ್ಕುಗಳನ್ನು ಹಿಂದಿರುಗಿಸಿದರೆ, ಖಾತೆಯಲ್ಲಿನ ಹಣವನ್ನು ಹಿಂತೆಗೆದುಕೊಳ್ಳಬಹುದು
- ಎಲ್ಲಾ ಸುಪ್ತ ಖಾತೆಗಳಿಗೂ ಕಾರ್ಯಾಚರಣೆಯಿಲ್ಲದ ಖಾತೆಗಳಿಗೆ ಅನ್ವಯವಾಗುವ ಸೇವೆಯ ಶುಲ್ಕಗಳು ಅನ್ವಯವಾಗುತದೆ.
- ಎಲ್ಲಾ ಸುಪ್ತ ಖಾತೆಗಳ ಸೇವಾ ಶುಲ್ಕಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಆಯವ್ಯಯಗಳು ಶೂನ್ಯವಾದರೆ ಖಾತೆಯನ್ನು ಸ್ವಯಂಚಾಲಿತವಾಗಿ ಮುಚ್ಚಲಾಗುತ್ತದೆ.
ಬಡ್ಡಿಯ ಪಾವತಿ/ಶುಲ್ಕಗಳ ಹೇರುವಿಕೆ
- ದೈನಿಕ ಉತ್ಪನ್ನಗಳ ಮೇಲೆ ಆಧಾರವಾದ ದರಗಳನ್ನು ಉಳಿತಾಯ ಖಾತೆಗಳ ಹಣಕ್ಕೆ ಬಡ್ಡಿಯ ದರವನ್ನಾಗಿ ಪಾವತಿಸಲಾಗುತ್ತದೆ. ಇಂತಹ ಬಡ್ಡಿಯ ದರವನ್ನು ಫೆಬ್ರವರಿಯಿಂದ ಜುಲೈ ಮತ್ತು ಆಗಸ್ಟ್ನಿಂದ ಜನವರಿಯ ವರೆಗಿನ ಅವಧಿಗೆ ಗಣಿಸಲಾಗುತ್ತದೆ ಮತ್ತು ಬರುವ ಪೂರ್ವ ಮಾಸದ ಮೊದಲನೆಯ ದಿನದಂದು ಖಾತೆಗೆ ಬಡ್ಡಿಯಿಂದ ಬಂದ ಹಣವನ್ನು ಪಾವತಿಸಲಾಗುತದೆ. ಬಡ್ಡಿ ದರದಿಂದ ಬಡ್ಡಿಯ ಹಡವು ೧ ರೂಪಯಿಗಿಂತ ಕಡಿಮೆಯಾದಲ್ಲಿ ಆ ಅರ್ಧ ವರ್ಷಕ್ಕೆ ಆ ಖಾತೆಯಲ್ಲಿ ಹಣವನ್ನು ಸಂದಾಯಿಸುವುದಿಲ್ಲ.
- ಖಾತೆಯಲ್ಲಿ ಸಂದಾಯಿಸಿದೆ ಹಣವು ನಿಗದಿತ ಮಿತಿಯನ್ನು ಮೀರಿದರೆ, ಬ್ಯಾಂಕಿನ ಅಂದಿನ ಸೇವಾ ಶುಲ್ಕಗಳನ್ನು ಅದಕ್ಕೆ ಹೇರಲಾಗುತ್ತದೆ.
- ಖಾತೆಯನ್ನು ಮುಚ್ಚಿದರೆ ಪ್ರಾಸಂಗಿಕ ಶುಲ್ಕಗಳನ್ನು ಹಿಂದಕ್ಕೆ ಪಡೆಯಬಹುದು(ಖಾತೆದಾರ ಮರಣದಿಂದಾಗಿ ಅಕಾಲಿಕವಾಗಿ ಖಾತೆಯನ್ನು ಮುಚ್ಚಬೇಕಾಗಿ ಬರುವ ಸಂದರ್ಭವನ್ನು ಹೊರತುಪಡಿಸಿ, ಖಾತೆಯನ್ನು ಬೇರೆಯ ಶಾಖೆಗೆ ವರ್ಗಾಯಿಸಿದಾಗ, ಟರ್ಮ್ ನಿಕ್ಷೇಪಗಳನ್ನು ಅಥವಾ ಇನ್ನೊಂದು ಜಂಟಿ ಖಾತೆಯನ್ನು ತೆರೆಯಲು ವರ್ಗಾಯಿಸದ ಸಂದರ್ಭದಲ್ಲಿ ಸಹ ಪ್ರಾಸಂಗಿಕ ಶುಲ್ಕಗಳನ್ನು ಹಿಂತೆಗೆದುಕೊಳ್ಳಲಾಗುವುದಿಲ್ಲ.).
ನಾಮನಿರ್ಧೇಶನ ಸೌಲಭ್ಯ
- ನಾಮನಿರ್ಧೇಶನ ಸೌಲಭ್ಯವು ಲಭ್ಯವಿದೆ.
ಪರ್ಯಾಯ ಸಂದಾಯ ವಾಹಿನಿಗಳು
- ನಿಯಮಗಳ ಅನುಸಾರವಾಗಿ ಖಾತೆದಾರನು “ಎನಿ ಟೈಮ್/ಎನಿ ಬ್ರಾಂಚ್/ ಎನಿ ಬ್ಯಾಂಕ್” ಎಂಬ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯವು ಪ್ರಸ್ತುತವಾಗಿ ಶಾಖೆ ಠೇವಣಿ ಸೌಲಭ್ಯ,ಆರ್ಟಿಜಿಎಸ್/ಇಸಿಎಸ್/ಎನ್ಇಎಫ್ಟಿ/ಎಸ್ಎಮ್ಎಸ್/ಇ ಮೇಲ್ ಗಳ ಸೌಲಭ್ಯಗಳು, ವಿ ನೆಟ್ ಬ್ಯಾಂಕಿಂಗ್/ ಮೊಬೈಲ್ ಬ್ಯಾಂಕಿಂಗ್/ಟೆಲಿ ಬ್ಯಾಂಕಿಂಗ್ ಸೌಲಭ್ಯ, ಎರವಲಿನ ಕಾರ್ಡ್/ ಡೆಬಿಟ್ ಕಾರ್ಡ್ ಎಟಿಎಮ್ ಸೌಲಭ್ಯಗಳನ್ನು ಒಳಗೊಂಡಿರುತ್ತದೆ
- ಖಾತೆಯುಳ್ಳ ಶಾಖೆಯಲ್ಲಿ ಸ್ಥಾಯಿ ಸೂಚನೆಗಳ ಅನುಸಾರ ಸೇವೆಯ ಉಪಯೋಗದ ಅನುಗುಣವಾಗಿ ಶುಲ್ಕಗಳನ್ನು ಸ್ವೀಕರಿಸಲಾಗುತ್ತದೆ. ಖಾತೆದಾರರಿಗೆ ತಮ್ಮ ಸಂದಾಯಗಳ/ ಪಾವತಿಗಳಂತಹ ವಿಮೆಗಳು, ಕಂತುಗಳು, ಸಂದಾಯಗಳು, ಸಾಲಗಳು, ಹಣದ ವರ್ಗಾವಣೆಗಳು, ಮುಂತಾದವುಗಳನ್ನು ಸಮಯೋಚಿತವಾಗಿ ನಿರ್ವಹಿಸಲು, ಖಾತೆಯಿರುವ ಬ್ಯಾಂಕಿಗೆಯೊಂದು ಸ್ಥಾಯಿ ಸೂಚನೆಯನ್ನು ಕೊಟ್ಟರೆ, ಆಯಾ ದಿನಾಂಕದಂದು ಕಾಲ-ಕಾಲಕ್ಕೆ ಬ್ಯಾಂಕಿನ ತಮ್ಮ ಖಾತೆಯಿಂದ ಹಣ ಪಾವತಿಸಲಾಗುತ್ತದೆ. ಬ್ಯಾಂಕಿನ ಸ್ಥತಿಗತಿಗಳಿಂದಾಗಿ ಬ್ಯಾಂಕಿನಿಂದ ಕಟ್ಟಲಾಗದ ಸಂದರ್ಭಗಳಲ್ಲಿ(ಎಂದರೆ ಖಾತೆಯಲ್ಲಿ ಹಣದ ಮೊತ್ತ ಕಡಿಮೆ ಇದ್ದಂತಹ ಸಂದರ್ಭಗಳಲ್ಲಿ, ಮುಷ್ಕರಗಳ ಸನ್ನಿವೇಶಗಳಲ್ಲಿ, ಗಲಬೆಗಳಲ್ಲಿ,ಗಲಾಟೆ ಗದ್ದಲಗಳಲ್ಲಿ,ದೇವರ ಪೂಜೆಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ) ಈ ಸೌಕರ್ಯವು ಕಾರ್ಯಕಾರಿಯಾಗಿಲ್ಲದಿದ್ದರೆ ಅದಕ್ಕೆ ಬ್ಯಾಂಕು ಹೊಣೆಯಾಗುವುದಿಲ್ಲ.ಮೇಲ್ಕಂಡ ಎಲ್ಲಾ ಸೇವೆಗಳಿಗೆ ಆಯಾ ಸೇವೆಯ ಶುಲ್ಕಗಳಿರುತ್ತವೆ.
- ಚೆಕ್ ಬುಕ್ ಗಳಿಗಾಗಿ ಮನವಿ, ಇಸಿಎಸ್ ಸೌಲಭ್ಯಗಳನ್ನು ಹೊಂದುವ ಬಗೆ, ಪಾವತಿಯನ್ನು ನಿಲ್ಲಿಸುವ ಸೂಚನೆಗಳು/ ಕಾಣೆಯಾಗಿರುವ
ಚೆಕ್ಕು ಗಳು, ಇವೆಲ್ಲವನ್ನು ಖಾತೆಯಿರುವ ಬ್ಯಾಂಕಿನಲ್ಲಿ ಮಾತ್ರ ಇದರ ಬಗೆ ಚರ್ಚೆ ಮಾಡಬೇಕು/ದೂರುಸಲ್ಲಿಸಬೇಕು ನಂತರ ಸೇವೆಗೆ ಸೂಕ್ತ ಶುಲ್ಕಗಳನ್ನು ಅಲ್ಲಿಯೇ ಕಟ್ಟಬೇಕು.
- ಹಣವನ್ನು ಖಾತೆಯಿಲ್ಲದ ಬೇರೆ ಶಾಖೆಯಿಂದ ಹಿಂತೆಗೆದುಕೊಳ್ಳುವುದು: ಮುಂಚಿತವಾಗಿ ಸೌಲಭ್ಯಗಳ ಮಾಹಿತಿ, ನಿಯಮಗಳನ್ನು ಮತ್ತು ಷರತ್ತುಗಳನ್ನು ಅನುಸರಿಸಿ, ಇತರೆ ಶಾಖೆಗಳಲ್ಲಿ ಚೆಕ್ಕನ್ನು ಕೊಟ್ಟು ತಮ್ಮ ಖಾತೆಯಿಂದ ಹಣವನ್ನು ಪಡೆಯಬಹುದು.
- ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಿ, ಖಾತೆದಾರನು ತಮ್ಮ ಖಾತೆಗೆ ಬ್ಯಾಂಕಿನ ಯಾವುದಾದರೂ ಶಾಖೆಯಲ್ಲಿ ಹಣವನ್ನು ಸಂದಾಯ ಮಾಡಬಹುದು.
ಗ್ರಾಹಕರ ಜವಾಬ್ದಾರಿಗಳು
- ನೀತಿನಿಷ್ಠೆಗಳಿಲ್ಲದ ಜನರಿಂದ ತಪ್ಪು ಬಳಿಕೆಯನ್ನು ತಪ್ಪಿಸಲು, ಖಾತೆದಾರರು ತಮ್ಮ ಚೆಕ್ ಬುಕ್ ಗಳನ್ನು, ಪಾಸ್ ಬುಕ್ಕು ಗಳನ್ನು, ಭದ್ರವಾಗಿ ಇಟ್ಟುಕೊಳ್ಳಬೇಕು.
- ಬ್ಯಾಂಕಿನಿಂದ ಖಾತೆದಾರನನ್ನು, ಆತ ಕೊಟ್ಟಿರುವ ವಿಳಾಸದ/ ದೂರವಾಣಿ ಸಂಖ್ಯೆಯಿಂದಲೂ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಅದಕ್ಕೆ ತಕ್ಕ ದಂಡ ವಿಧಿಸಲಾಗಬಹುದು, ಆದ್ದರಿಂದ ಯಾವಾಗಲಾದರು ವಿಳಾಸ ಅಥವಾ ದೂರವಾಣಿ ಸಂಖ್ಯೆ ಬದಲಾದ ಸಂದರ್ಭದಲ್ಲಿ ಬ್ಯಾಂಕಿಗೆ ಒಂದು ಸೂಚನೆ ಕೊಡುವುದು ಸೂಕ್ತ.
- ಗ್ರಾಹಕರ ಹಸ್ತಾಕ್ಷರದ/ಭಾವಚಿತ್ರದ ಬದಲಾವಣೆ ಆಗಿದ್ದ ಪಕ್ಷದಲ್ಲಿ ಬ್ಯಾಂಕಿಗೆ ಬಂದು ಹಸ್ತಾಕ್ಷರದ ಹೊಸದಾದ ಶೈಲಿಯನ್ನು ಮತ್ತು ಹೊಸದಾಗಿ ತೆಗೆಸಿರುವ ಭಾವಚಿತ್ರವನ್ನು ಬ್ಯಾಂಕಿನಲ್ಲಿ ಕೊಟ್ಟು ಋಜುವಾತು ಮಾಡಿಸಬೇಕು. ಇದನ್ನು ಮಾಡಿಸದಿದ್ದ ಪಕ್ಷದಲ್ಲಿ ಮುಂಬರುವ ಚೆಕ್ಕುಗಳನ್ನು ಅಥವಾ ಡ್ರಾಫ್ಟುಗಳನ್ನು ಅಧಿಕೃತವಲ್ಲ ಎಂದು ಬ್ಯಾಂಕ್ ಪರಿಗಣಿಸುತ್ತದೆ ಹಾಗು “ರೆಫರ್ ಟು ಡ್ರಾಯರ್”ಎಂಬ ಕಾರಣದಿಂದಾಗಿ ಖಾತೆಯನ್ನು ಮುಚ್ಕಲೂಬಹುದು ಖಾತೆಯಲ್ಲಿನ ಹಣವನ್ನೆಲ್ಲ ಹಿಂದಿರುಗಿಸಬಹುದು.
- ಖಾತೆದಾರನು ಯಾವುದಾದರು ಚೆಕ್ಕುನ್ನು ಸಂದಾಯ ಮಾಡಿದರೆ, ಹಣ ತನ್ನ ಖಾತೆಯಲ್ಲಿ ನಿಗದಿತ ವೇಳೆಯಲ್ಲಿ ಬಂದಿದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬೇಕು,ಬರದಿದ್ದ ಪಕ್ಷದಲ್ಲಿ ಆತನು ಬ್ಯಾಂಕನ್ನು ಸಂಪರ್ಕಿಸಬೇಕು ಅಥವಾ ಠೇವಣಿಮಾಡಿರುವ ಶಾಖೆಯನ್ನು ಸಂಪರ್ಕಿಸಬೇಕು.
- ಗ್ರಾಹಕರು ತಮ್ಮ ಖಾತೆ ವ್ಯವಹಾರ ವಹಿವಾಟುಗಳಲ್ಲೇನಾದರೂ ಬದಲಾವಣೆಗಳನ್ನು ಮಾಡುವುದಕ್ಕೆ ಬಯಸಿದ್ದಲ್ಲಿ ಬ್ಯಾಂಕಿಗೆ ಈ ವಿಷಯವನ್ನು ತಿಳಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಬೇಕು.
ಬ್ಯಾಂಕಿನ ಹಕ್ಕುಗಳು
- ಖಾತೆದಾರನ ಖಾತೆಯಲ್ಲಿನ ಹಣಕಾಸಿನ ಮೇಲೆ ಬ್ಯಾಂಕಿಗೆ ಪ್ಯಾರಾಮೌನ್ಟ್ ಭೋಗ್ಯವಿದ್ದು,ನಿಕ್ಷೇಪದ ಮೊತ್ತವನ್ನು ಸಮರ್ಪಕವಾದ ರೀತಿಯಲ್ಲಿಡಲು ಹಾಗೂ ಖಾತೆದಾರನ ಬ್ಯಾಂಕಿನ ಕಡೆಗಿನ ಹಣಕಾಸಿನ ಜವಾಬ್ದಾರಿಗಳಿಗೆ ಬ್ಯಾಂಕ್ ಬದ್ಧವಾಗಿರುತ್ತದೆ.
- ಚೆಕ್ಕುಗಳ ಪೆನ್ಸಿಲ್ನಿಂದ ತಿದ್ದುಪಡಿ/ಅಧಿಕೃತವಲ್ಲದ ಯಾವುದೇ ಗುರುತು,ಚಿಹ್ನೆಗಳನ್ನು ಕಂಡಲ್ಲಿ ಅಂತಹ ಚೆಕ್ಕುಗಳನ್ನು ನಿರಾಕರಿಸಲು ಬ್ಯಾಂಕ್ ಹಕ್ಕು ಬದ್ಧವಾಗಿರುತ್ತದೆ.
- ಬ್ಯಾಂಕ್ ತನ್ನ ತಪ್ಪುಗಳನ್ನು ಯಾವುದೇ ಕಾಲದಲ್ಲಾದರೂ ಸರಿಪಡಿಸಿಕೊಳ್ಳಲು/ಬದಲಾಯಿಸಿಕೊಳ್ಳಲು ಹಕ್ಕು ಬದ್ಧವಾಗಿರುತ್ತದೆ.
- ಬ್ಯಾಂಕ್ ತನ್ನ ಹಕ್ಕುಗಳ ಮುಖಾಂತರ ಒಬ್ಬ ಖಾತೆದಾರನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದ ಪಕ್ಷದಲ್ಲಿ, ಚೆಕ್ಕನ್ನು ಹಿಂದಿರುಗಿಸಲು, ಖಾತೆದಾರನಿಗೆ ಎಚ್ಚರಿಕೆ ನೀಡಲು ಹಾಗು ಚೆಕ್ಕುಬುಕ್ಗಳನ್ನು ವಿತರಣೆಯನ್ನು ಸ್ಥಗಿತಗೊಳಿಸಲು ಮತ್ತು ಖಾತೆಯನ್ನು ಮುಚ್ಚುವ ಶಕ್ತಿಯನ್ನು ಹೊಂದಿರುತ್ತದೆ.
ಬ್ಯಾಂಕಿನ ಈ ನಿಯಮಗಳನ್ನು ಬ್ಯಾಂಕ್ ಯಾವ ಕಾಲದಲ್ಲಾದರೂ ಖಾತೆದಾರನಿಗೆ ಸೂಚಿಸದೇಯೇ ತಿದ್ದುಪಡಿ ಮಾಡಬಹುದು, ಸೇರುಪಡಿಸಬಹುದು, ಅಳಸಿಯೂ ಹಾಕಬಹುದು, ಆದರೆ ಬದಲಾವಣೆಗಳೆಲ್ಲವೂ ಖಾತೆದಾರನಿಗೆ ಅನ್ವಯವಾಗುವುದು.
ಖಾತೆಯನ್ನು ಯಾರು ತೆರೆಯಬಹುದು
- ವ್ಯಕ್ತಿಗಳು/ಹೆಚ್ ಯು ಎಫ಼್, ಖಾಸಗಿ ಸಂಸ್ಥೆಗಳು, ಪಾಲುದಾರಿಕೆ ವಹಿವಾಟು ಸಂಸ್ಥೆಗಳು, ಕಂಪನಿಗಳು, ಟ್ರಸ್ಟ್, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಕಛೇರಿಗಳು ಅರ್ಜಿನಮೂನೆಯನ್ನು ಭರ್ತಿಮಾಡಿ, ಸೂಕ್ತ ವ್ಯಕ್ತಿಗಳಿಂದ ಸಹಿ ಮಾಡಿಸಿ, ಜೊತೆಗೆ ಸೂಕ್ತ ವ್ಯಕ್ತಿಯಿಂದ ಪರಿಚಯ, ಗುರುತು, ವಿಳಾಸಗಳ ದಾಖಲೆಗಳು ಮತ್ತಿತರೇ ಅನ್ವಯವಾಗುವಂತಹ ದಾಖಲೆಗಳನ್ನು ಸಲ್ಲಿಸಿ ಚಾಲ್ತಿಖಾತೆಯನ್ನು ತೆರೆಯಬಹುದಾಗಿದೆ.
ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆ.ವೈ.ಸಿ) ನಿಯಮಾವಳಿಗಳು
- ಭವಿಷ್ಯದ ಖಾತಾದಾರನು ‘ನಿಮ್ಮ ಗ್ರಾಹಕರನ್ನು ಅರಿಯಿರಿ’ ನಿಯಮಾವಳಿಗಳ ಅನ್ವಯ ತಮ್ಮ ಗುರುತು ಮತ್ತು ವಿಳಾಸದ ಖಾತರಿಗಾಗಿ ಕೆಳಗೆ ಕಾಣಿಸಲಾದ ಒಂದು ಅಥವಾ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕು:
ಕಂಪನಿಗಳ ಲೆಕ್ಕಪತ್ರಗಳು
|
- ಕಂಪನಿಯ ಹೆಸರು
- ವಹಿವಾಟಿನ ಸ್ಥಳ
- ಕಂಪನಿಯ ಅಂಚೆ ವಿಳಾಸ
- ದೂರವಾಣಿ/ಫ್ಯಾಕ್ಸ್ ಸಂಖ್ಯೆ
- ಸ್ವಾಧೀನ/ಏಕೀಕರಣದ ಪ್ರಮಾಣ ಪತ್ರ ಮತ್ತು ಜ್ಞಾಪನಾ ಪತ್ರ ಹಾಗೂ ಸಂಘದ ದಾಖಲೆ ಪತ್ರಗಳು
- ಖಾತೆಯನ್ನು ತೆರೆಯಲು ನಿರ್ದೇಶಕರ ಮಂಡಳಿಯು ತೆಗೆದುಕೊಂಡ ನಿರ್ಣಯದ ದಾಖಲೆ, ಮತ್ತು ಖಾತೆಯನ್ನು ಅಧಿಕೃತವಾಗಿ ನಿರ್ವಹಿಸುವವರ ಗುರುತಿನ ಮಾಹಿತಿ ಪತ್ರ.
- ಈ ಕಂಪನಿಯ ಪರವಾಗಿ ಖಾತೆಯ ಮೂಲಕ ವಹಿವಾಟನ್ನು ನಡೆಸಲು ಕಂಪನಿಯ ವ್ಯವಸ್ಥಾಪಕರು, ಅಧಿಕಾರಿಗಳು ಅಥವಾ ಉದ್ಯೋಗಿಗಳಿಗೆ ನೀಡಲಾದ ವಕಾಲತ್ತುನಾಮೆ ಅಧಿಕಾರ
- ಪಾನ್ ವಿತರಣೆಯ ಪತ್ರದ ಪ್ರತಿ
- ದೂರವಾಣಿ ಬಿಲ್ಲಿನ ಪ್ರತಿ
|
|
ಪಾಲುದಾರಿಕೆ ಸಂಸ್ಥೆಗಳ ಖಾತೆಗಳು
|
- ವಿದ್ಯುಕ್ತ ಹೆಸರು
- ವಿಳಾಸ
- ಪಾಲುದಾರರ ಹೆಸರುಗಳು ಮತ್ತವರ ವಿಳಾಸಗಳು
- ವಹಿವಾಟು ಸಂಸ್ಥೆಯ ಪಾಲುದಾರರ ದೂರವಾಣಿ ಸಂಖ್ಯೆಗಳು
- ನೋಂದಣಿಯಾಗಿದ್ದರೆ ನೋಂದಣಿ ಪ್ರಮಾಣಪತ್ರ
- ಪಾಲುದಾರಿಕೆ ಕರಾರು ಪತ್ರ
- ಪಾಲುದಾರ ಅಥವಾ ಸಂಸ್ಥೆಯ ಉದ್ಯೋಗಿಗೆ ಖಾತೆಯಲ್ಲಿ ಸಂಸ್ಥೆಯ ಪರವಾಗಿ ವಹಿವಾಟು ನಡೆಸಲು ನೀಡಲಾದ ವಕಾಲತ್ತುನಾಮೆ ಅಧಿಕಾರ
- ವಕಾಲತ್ತುನಾಮೆ ಅಧಿಕಾರ ಪಡೆದ ಪಾಲುದಾರರು ಮತ್ತು ವ್ಯಕ್ತಿಗಳ ಗುರುತಿಗೆ ಮತ್ತು ವಿಳಾಸದ ಖಾತರಿಗೆ ಯಾವುದಾದರೂ ಅಧಿಕೃತ ದಾಖಲೆ
- ಕಂಪನಿಯ/ಪಾಲುದಾರರ ಹೆಸರಿನಲ್ಲಿರುವ ದೂರವಾಣಿ ಬಿಲ್ಲು
|
|
ಟ್ರಸ್ಟ್ ಮತ್ತು ಪ್ರತಿಷ್ಠಾನಗಳ ಖಾತೆಗಳು
|
- ಟ್ರಸ್ಟಿಗಳ, ವಸತಿಗಾರರ, ಫಲಾನುಭವಿಗಳು ಮತ್ತು ಸಹಿದಾರರ ಹೆಸರಗಳು.
- ಸಂಸ್ಥಾಪಕರು, ವ್ಯವಸ್ಥಾಪಕರು/ ನಿರ್ದೇಶಕರು ಮತ್ತು ಫಲಾನುಭವಿಗಳ ಹೆಸರು ಮತ್ತು ವಿಳಾಸ
- ದೂರವಾಣಿ/ಫ್ಯಾಕ್ಸ್ ಸಂಖ್ಯೆಗಳು
- ನೋಂದಾಯಿತವಾಗಿದ್ದರೆ, ನೋಂದಣಿ ಪ್ರಮಾಣಪತ್ರ
- ಟ್ರಸ್ಟ್ ಮತ್ತು ಪ್ರತಿಷ್ಠನದ ಪರವಾಗಿ ವಹಿವಾಟು ನಡೆಸಲು ನೀಡಲಾದ ವಕಾಲತ್ತುನಾಮೆ ಅಧಿಕಾರ
- ಟ್ರಸ್ಟಿಗಳು, ವಸತಿಗಾರರು, ಫಲಾನುಭವಿಗಳನ್ನು ಗುರುತಿಸಲು ಅಧಿಕೃತ ದಾಖಲೆಗಳು. ಸಂಸ್ಥಾಪಕರು/ ವ್ಯವಸ್ಥಾಪಕರು/ ನಿರ್ದೇಶಕರುಗಳ ವಿಳಾಸವನ್ನು ಸಮರ್ಥಿಸುವ ದಾಖಲೆಗಳು
- ಪ್ರತಿಷ್ಠಾನ/ ಮಂಡಳಿಯು ವ್ಯವಸ್ಥಾಪನಾ ಪ್ರಾಧಿಕಾರ ನಿರ್ಣಯದ ಪತ್ರದ ಪ್ರತಿ
- ದೂರವಾಣಿ ಬಿಲ್ಲು
|
|
ಪೀಠಿಕೆ
- ಬ್ಯಾಂಕಿನಿಂದ ಸ್ವೀಕೃತವಾಗುವಂತಹ ಮೂರನೇ ವ್ಯಕ್ತಿಯಿಂದ ಭವಿಷ್ಯದ ಖಾತಾದಾರನು ಪರಿಚಯಿಸಲ್ಪಡಬೇಕು.
ಕನಿಷ್ಠ ಉಳಿಕೆ
ಚಾಲ್ತಿಖಾತೆಯನ್ನು ತೆರೆಯಲು ಮತ್ತು ನಿರ್ವಹಿಸಲು ಅವಶ್ಯಕವಾದ ಕನಿಷ್ಠ ಉಳಿಕೆ
ವಿವರಗಳು
|
ಕನಿಷ್ಠ ಉಳಿಕೆ (ರೂ)
|
ನಗರ/ಮಹಾನಗರಗಳ ಶಾಖೆಗಳು
|
1000
|
ಇತರೆ ಕೇಂದ್ರಗಳು
|
500
|
ಎಟಿಎಂ ಕಾರ್ಡ್ ಹೊಂದಿರುವರು,(ಎಲ್ಲಾ ಶಾಖೆಗಳಲ್ಲಿ)
|
1000
|
ಪಾಸ್‌ಬುಕ್‌ಗಳು / ಖಾತೆಯ ಹೇಳಿಕೆಗಳು
- ಪಾಸ್‌ಬುಕ್‌ಗಳ ಸ್ಥಾನದಲ್ಲಿ ಗಣಕೀಕೃತ ಖಾತೆಯ ಹೇಳಿಕೆಗಳನ್ನು ನೀಡಲಾಗುವುದು. ಅಂತಹ ಹೇಳಿಕೆಗಳನ್ನು ಗ್ರಾಹಕರು ಇಚ್ಛಿಸಿದರೆ ಅವರ ಇ-ಮೇಲ್ ವಿಳಾಸಕ್ಕೂ ಕಳುಹಿಸಲಾಗುವುದು.
- ಖಾತೆಯ ಹೇಳಿಕೆಗಳನ್ನು ನಿಯಮಿತವಾಗಿ ಪಡೆಯುವಲ್ಲಿನ ವಿಳಂಬಗಳನ್ನು ಶಾಖೆಯ ವ್ಯವಸ್ಥಾಪಕರ ಗಮನಕ್ಕೆ ತರತಕ್ಕದ್ದು.
- ಖಾತೆಯ ಹೇಳಿಕೆಗಳಲ್ಲಿ ಠೇವಣಿ/ಖಾತಾದಾರನು ಯಾವುದೇ ನಮೂದುಗಳನ್ನು ಮಾಡಕೂಡದು.
- ಬ್ಯಾಂಕಿನ ಖಾತೆಯ ಹೇಳಿಕೆಗಳಲ್ಲಿ ಬ್ಯಾಂಕಿನ ಸಿಬ್ಬಂದಿಯ ಯಾವುದಾದರೂ ಹಸ್ತಲಿಖಿತ ನಮೂದುಗಳನ್ನು ಮಾಡಿದರೆ ಖಾತಾದಾರನು ಅಂತಹ ನಮೂದುಗಳ ಕುರಿತಂತೆ ಶಾಖೆಯ ವ್ಯವಸ್ಥಾಪಕ/ಅಧಿಕಾರಿಯಿಂದ ಅದರ ಅಧಿಕೃತತೆಗೆ ಒತ್ತಾಯಿಸತಕ್ಕದ್ದು.
- ಠೇವಣಿದಾರನು ಖಾತೆಯ ಹೇಳಿಕೆಗಳನ್ನು ಸಮಗ್ರವಾಗಿ ಅವಲೋಕಿಸತಕ್ಕದ್ದು. ಯಾವುದಾದರ ನ್ಯೂನತೆಗಳು ಕಂಡುಬಂದರೆ ಕೂಡಲೇ ಅದನ್ನು ಶಾಖೆಯ ವ್ಯವಸ್ಥಾಪಕರ ಗಮನಕ್ಕೆ ತರುವುದು.
- ಒಂದು ವೇಳೆ ಪಾಸ್‌ಬುಕ್‌ನ್ನು ಅದ್ಯತನಗೊಳಿಸಲಾದ 3 ದಿನಗಳೊಳಗೆ ಯಾವುದೇ ಆಕ್ಷೇಪಣೆಗಳು ಬರದಿದ್ದರೆ ಬ್ಯಾಂಕು ನಮೂದುಗಳನ್ನು ಸರಿಯೆಂದು ಪರಿಗಣಿಸುತ್ತದೆ. ಮತ್ತು ಗ್ರಾಹಕನನ್ನು ಆ ನಿರ್ಣಯಕ್ಕೆ ನಿರ್ಬಂಧಗೊಳಿಸುತ್ತದೆ.
- ಒಂದು ವೇಳೆ ಠೇವಣಿದಾರನು ಹೆಚ್ಚುವರಿ ಖಾತೆಯ ಹೇಳಿಕಯನ್ನು ಬಯಸಿದರೆ ಬ್ಯಾಂಕು ಆತನಿಂದ ಈ ಕುರಿತು ಒಂದು ಲಿಖಿತ ಮನವಿಯನ್ನು ಪಡೆದು ನೀಡುತ್ತದೆ. ಅದಕ್ಕೆ ಠೇವಣಿದಾರನು ನಿರ್ಧಿಷ್ಟ ಸೇವಾಶುಲ್ಕವನ್ನು ನೀಡಬೇಕಾಗುತ್ತದೆ.
ವಹಿವಾಟುಗಳು
- ಮುಂಗಟ್ಟಿನಲ್ಲಿ ಖಾತೆಗೆ ಹಣಪಾವತಿಯನ್ನು ಸಾಮಾನ್ಯವಾಗಿ ಬ್ಯಾಂಕಿನಿಂದ ನೀಡಲ್ಪಡುವಂತಹ ಅಧಿಕೃತ ಪಾವತಿ ಚೀಟಿ (ಪೆ ಇನ್ ಸ್ಲಿಪ್) ಮೂಲಕ ಮಾಡಲಾಗುವುದು ಮತ್ತು ಅದನ್ನು ಅಧಿಕ್ರತ ಅಧಿಕಾರಿಯು ಗುರುತಿಸಿ ರಶೀತಿಯನ್ನು ನೀಡುತ್ತಾರೆ.
- ಠೇವಣೀದಾರನು ಇತರೆ ಶಾಖೆಗಳಿಂದ "ಪರ್ಯಾಯ ನೀಡಿಕೆಯ ವಾಹಿನಿ" ಗಳಾದಂತಹ ಎನ್‌ಇಎಫ್‌ಟಿ/ಆರ್‌ಟಿಜಿಎಸ್/ಇಸಿಎಸ್/ನೆಟ್‌ಬ್ಯಾಂಕಿಂಗ್/ಮೋಬೈಲ್‌ಬ್ಯಾಂಕಿಂಗ್ ಮುಂತಾದ ಕ್ರಮಗಳಿಂದ ಅಲ್ಲಿನ ಪರಿಸ್ಥಿತಿಗಳಿಗನುಗುಣವಾಗಿ ಹಣಪಾವತಿ ಮಾಡಬಹುದು.
- ಖಾತೆಗೆ ಹಣಪಾವತಿಯ ರೂ.1/-ರ ಗುಣಕಗಳಂತೆ, ಪ್ರತಿ ಸಂದರ್ಭದಲ್ಲಿ ಕನಿಷ್ಠ ರೂ.1/-ರಂತೆ ಮಾಡಬಹುದು.
- ಹಣ ಹಿಂಪಡೆಯುವಿಕೆಯನ್ನು ಸಾಮಾನ್ಯವಾಗಿ ಬ್ಯಾಂಕು ನೀಡಿರುವಂತಹ ಚೆಕ್‌ಗಳ ಮುಖಾಂತರ ಮಾಡಬಹುದು. ಆದಾಗ್ಯೂ, ಬ್ಯಾಂಕು ತನ್ನ ಇಚ್ಛಾನುಸಾರ ಹಣ ಹಿಂಪಡೆಯುವಿಕೆಯನ್ನು ಹಿಂಪಡೆಯುವಿಕೆಯ ಚೀಟಿ, ಇಸಿಎಸ್, ವಿದ್ಯುನ್ಮಾನ ಮಾಧ್ಯಮ, ಅಧಿಕೃತ ಆದೇಶ ಮುಖಾಂತರವೂ ಒಪ್ಪಬಹುದು.
- ಒಂದು ವೇಳೆ ಗ್ರಾಹಕನು ನಗದು/ನಗದುರಹಿತ ವಹಿವಾಟುಗಳನ್ನು ಚೆಕ್‌ಬುಕ್ ಉಪಯೋಗಿಸದೇ ನಡೆಸಬೇಕೆಂದಾಗ ಬ್ಯಾಂಕು ಅಂತಹ ಮನವಿಗಳನ್ನು ಅರ್ಹತೆಯಾನುಸಾರ ಮೂಲ ಶಾಖೆಯಲ್ಲಿ ನೀಡಲು ಅನುಮತಿ ನೀಡಬಹುದು.
- ಚೆಕ್‌ಗಳು/ಬಿಲ್‌ಗಳು, ನಗದು ಆದೇಶ, ಡಿಮಾಂಡ್ ಡ್ರಾಫ್ಟ್‌ಗಳು, ನಿವೃತ್ತಿವೇತನದ ಬಿಲ್ಲುಗಳು, ಲಾಭಾಂಶದ ಸೂಚನೆಗಳು, ಮರುಪಾವತಿ ಆದೇಶಗಳು ಮುಂತಾದವನ್ನು ಖಾತೆದಾರನ ಪರವಾಗಿ, ಬ್ಯಾಂಕು ಕಾಲಾನುಕಾಲಕ್ಕೆ ನಿಗಧಿಪಡಿಸುವ ಶುಲ್ಕಗಳ ಪಾವತಿಯ ಮೇರೆಗೆ ಸಂಗ್ರಹಣೆ ಮಾಡಬಹುದು. ಹೀಗೆ ಸಂಗ್ರಹಿಸಲಾದ ನಗದು ಸಾಮಗ್ರಿಗಳ ಹಣವನ್ನು ಖಾತೆದಾರನ ಖಾತೆಗೆ ಸಾಮಗ್ರಿಯು ಹಣದ ರೂಪ ಪಡೆದಾಗ (Realisation) ಪಾವತಿ ಮಾಡಬಹುದು. ಒಂದು ವೇಳೆ ರಿಯಲೇಸೇಷನ್‌ಗೆ ಮೊದಲೇ ಪಾವತಿಯಾದರೆ ಹಣ ಹಿಂಪಡೆಯುವಿಕೆಗೆ ಆ ನಗದು ಸಾಮಗ್ರಿಯು ನಗದು ರೂಪ ಪಡೆದ ಮೇಲಷ್ಟೇ ಅನುಮತಿ ನೀಡಲಾಗುವುದು. ನಗದು ಸಾಮಗ್ರಿಗಳ ವರ್ಗಾವಣೆ ಅಥವಾ ಸಂಗ್ರಹಣೆ ಅಥವಾ ವಿಳಂಬ, ಹಾನಿಗಳಿಗೆ ಬ್ಯಾಂಕು ಜವಾಬ್ದಾರವಾಗಿರುವುದಿಲ್ಲ.
- ಗ್ರಾಹಕರು ಚೆಕ್‌ಗಳು, ಡ್ರಾಫ್ಟ್‌ಗಳು ಮತ್ತಿತರ ಬಹುಮೌಲ್ಯದ ಸಾಮಗ್ರಿಗಳನ್ನು ಅಂಚೆಯ ಮುಖಾಂತರ ಕಳುಹಿಸಬೇಕಾದ ಸಂದರ್ಭದಲ್ಲಿ ಅವರು ರಿಜಿಸ್ಟರ‍್ಡ್ ಪೋಸ್ಟ್ ಮುಖಾಂತರವಷ್ಟೇ ಕಳುಹಿಸತಕ್ಕದ್ದು. ಇಲ್ಲದಿದ್ದರೆ ಈ ನಗದು ಸಾಮಗ್ರಿಗಳು ರವಾನಿಸುವಾಗ ಕಳೆದುಹೋದರೆ /ಕಳುವಾಗಿ ದುರ್ಬಳಕೆಯಾದರೆ ಬ್ಯಾಂಕು ಅದಕ್ಕೆ ಜವಬ್ದಾರನಾಗುವುದಿಲ್ಲ.
- ಒಂದು ವೇಳೆ ಚೆಕ್ ಕಳೆದುಹೋದರೆ ಚೆಕ್‌ನಿಂದ ಹಣ ಪಡೆಯಲಿಚ್ಚಿಸಿದ್ದ ವ್ಯಕ್ತಿಯು ಈ ವಿಷಯವನ್ನು ಕೂಡಲೇ ಬ್ಯಾಂಕಿನ ಗಮನಕ್ಕೆ ತರತಕ್ಕದ್ದು. ಮತ್ತು ಹಾಗೆ ಮಾಡುವುದರಿಂದ ಆ ಚೆಕ್‌ನಿಂದ ಹಣ ಪಾವತಿಯನ್ನು ತಡೆಯಬಹುದು. ಅಂತಹ ಸೂಚನೆಗಳನ್ನು ಬ್ಯಾಂಕು ನೋಂದಾಯಿಸಿಕೊಳ್ಳುತ್ತದೆ. ಆದರೆ ಅಂತಹ ಚೆಕ್‌ನ್ನು ಯಾರಾದರೂ ತಂದು ಬ್ಯಾಂಕಿಗೆ ನೀಡಲಾಗಿ ಬ್ಯಾಂಕು ಕಣ್ತಪ್ಪಿನಿಂದ ಆ ಚೆಕ್ಕಿಗೆ ಹಣ ಪಾವತಿಮಾಡಿದರೆ ಬ್ಯಾಂಕು ಅದಕ್ಕೆ ಜವಾಬ್ದಾರವಾಗುವುದಿಲ್ಲ. ಗ್ರಾಹಕರು ಅಂತಹ ಸೂಚನೆಗಳನ್ನು ಟೆಲಿಗ್ರಾಂ ಮುಖಾಂತರ ಕಳುಹಿಸಿದರೂ ಪತ್ರಮುಖೇನ ಖಾತರಿಪಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಚೆಕ್ ನಿಲುಗಡೆ ಮಾಡಿ ಪಾವತಿಯನ್ನು ತಡೆಯಲು ಬ್ಯಾಂಕು ಕಾಲಾನುಕಾಲಕ್ಕೆ ಅನ್ವಯವಾಗುವಂತಹ ಸೇವಾಶುಲ್ಕಗಳನ್ನು ವಸೂಲು ಮಾಡುತ್ತದೆ.
- ಚೆಕ್‌ಗಳು ಅಮಾನ್ಯವಾದರೆ ಅಂತಹ ಅಮಾನ್ಯವಾದ ಸಾಮಗ್ರಿಯನ್ನು ಬ್ಯಾಂಕು ಸ್ವೀಕರಿಸುವವರೆಗೂ ಬ್ಯಾಂಕು ಅದರ ಕುರಿತಂತೆ ಸೂಚನೆಯನ್ನು ನೀಡಬೇಕೆಂಬ ನಿರ್ಬಂಧವಿರುವುದಿಲ್ಲ.
- ಚೆಕ್‌ನ್ನು ಹಿಂದಿರುಗಿಸುವ ಸಂದರ್ಭದಲ್ಲಿ ಮನವಿ ಸಲ್ಲಿಸಿದರೂ (ಬ್ಯಾಂಕು ಹಣ ಪಡೆಯುವವರ ಹೆಸರು ಮತ್ತು ವಿಳಾಸವನ್ನು /ಹಣ ಸಂದಾಯ ಪಡೆಯುವವರು ಸೂಚಿಸುವ) ಯಾವುದೇ ನಿರ್ಬಂಧವಿರುವುದಿಲ್ಲ. ಈ ಸಂಗತಿಯನ್ನು ಕೆಳಕಂಡ ಸಂದರ್ಭಗಳಲ್ಲಿ ಹೊರಹಾಕಲಾಗುವುದು :
- ಎ) ಕೋರ್ಟಿನ ಆದೇಶದಂತೆ ಹೊರಗೆಡವುದು ಅವಶ್ಯವಾದರೆ
- ಬಿ) ರಾಜ್ಯ/ದೇಶದ ಶಾಸನಬದ್ಧ ಅಧಿಕಾರವನ್ನು ಪಡೆದಂತಹ ಪ್ರಾಧಿಕಾರದ ಎದಿರು ಹೊರಗೆಡವಬೇಕಾದ ಸಂದರ್ಭ ಎದುರಾದಾಗ
- ಸಿ) ಹಣ ಪಡೆಯುವವರು ಅಂತಹ ಹೊರಗೆಡವಿಕೆಗಳಿಗೆ ಒಪ್ಪಿಗೆ ನೀಡಿದ್ದಾಗ.
- ಬ್ಯಾಂಕಿನ ವಿಶೇಷ ಏರ್ಪಾಟುಯಿಲ್ಲದ ಬ್ಯಾಂಕಿನ ಖಾತೆಯಿಂದ ಮಿತಿಮೀರಿ ಹಣ ಪಡೆಯುವಂತಿಲ್ಲ. ಅಂತಹ ಮಿತಿಮೀರಿ ಹಣ ಪಡೆಯಲಾದ ಖಾತೆಗೆ ಹಣದ ಮೊತ್ತದ ಆಧಾರದ ಮೇಲೆ ಬ್ಯಾಂಕು ಕಾಲಾನುಕಾಲಕ್ಕೆ ನಿಗಧಿಪಡಿಸುವಂತಹ ಬಡ್ಡಿಯನ್ನು ವಿಧಿಸಲಾಗುವುದು. ಆ ಬಡ್ಡಿಯ ಹಣವನ್ನು ದೈನಂದಿನ ಉಳಿಕೆಗಳಲ್ಲಿ ಸೇರಿಸಿ ತ್ರೈಮಾಸಿಕದ ಕೊನೆಯ ದಿನದಂದು ಆ ಖಾತೆಗೆ ವಿಧಿಸಲಾಗುವುದು. ಅಥವಾ ಬ್ಯಾಂಕು ಇಚ್ಛಿಸಿದರೆ 3 ತಿಂಗಳಿಗೆ ಮೊದಲೇ ವಿಧಿಸಬಹುದು. ಹೆಚ್ಚಾಗಿ ಪಡೆದ ದಿನದಿಂದ ಒಂದು ವಾರದೊಳಗೆ ಬ್ಯಾಂಕು ಹಾಗೆ ತಿಳಿಸದಿದ್ದರೂ ಪಾವತಿಸತಕ್ಕದ್ದು.
- ಒಂದು ವೇಳೆ ಅಂತಹ ಖಾತಾದಾರನು ಬ್ಯಾಂಕಿನ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾವನೆ ಮಾಡಲು ಚೆಕ್ ಪುಸ್ತಕವನ್ನು ಹಿಂದಿರುಗಿಸಿ ಮನವಿ ಸಲ್ಲಿಸಿದರೆ, ಅಂತಹ ವರ್ಗಾವಣೆಯನ್ನು ಶುಲ್ಕ ಸ್ವೀಕರಿಸದೇ ಮಾಡಲಾಗುವುದು. ಆದರೆ ಖಾತಾದಾರನು ಪಾಸ್‌ಬುಕ್‌ನ್ನು ಹೊಂದಬಯಸಿದರೆ ಕಾಲಾನುಕಾಲಕ್ಕೆ ಬ್ಯಾಂಕು ವಿಧಿಸುವಂತಹ ಸೇವಾಶುಲ್ಕವನ್ನು ಭರಿಸಬೇಕಾಗುತ್ತದೆ.
- ಖಾತಾದಾರನು ಖಾತೆಯನ್ನು ಮುಕ್ತಾಯಗೊಳಿಸಲು ಇಚ್ಛಿಸಿದರೆ ಬಳಸದೇ ಇರುವ ಚೆಕ್‌ಹಾಳೆಗಳನ್ನು ವಾಪಸ್ ಪಡೆದುಕೊಂಡು (ನೀಡಲಾಗಿದ್ದರೆ) ಉಳಿಕೆಯಿರುವಂತಹ ಹಣವನ್ನು ಆತನಿಗೆ ನೀಡಿ ಮುಕ್ತಾಯಗೊಳಿಸಲಾಗುವುದು. ಮತ್ತು ಆತನ ಪಾಸ್‌ಬುಕ್‌ನ್ನು ಖಾತೆಯನ್ನು ಮುಕ್ತಾಗೊಳಿಸಿದ ನಂತರ ವಾಪಸ್ ನೀಡಲಾಗುವುದು.
ಚೆಕ್‌ಬುಕ್ ಸೌಲಭ್ಯ
- ಎಲ್ಲಾ ಚಾಲ್ತಿಖಾತಾದಾರರಿಗೆ ನಿಗಧಿತವಾದ ಶುಲ್ಕವನ್ನು ಪಡೆದ ನಂತರ ಚೆಕ್‌ಪುಸ್ತಕವನ್ನು ನೀಡಲಾಗುವುದು.
ಕಾರ್ಯಾಚರಣೆಯಲ್ಲಿಲ್ಲದ ಖಾತೆಗಳು
- ಒಂದು ವೇಳೆ ಖಾತಾದಾರನಿಂದ ಖಾತೆಯು ಕೊನೆಯ ನಿರ್ವಹಣೆಯ ನಂತರ 24 ತಿಂಗಳುಗಳವರೆಗೆ ಯಾವುದೇ ರಿತಿಯಲ್ಲೂ ನಿರ್ವಹಿಸಲ್ಪಡದಿದ್ದರೆ ಅಂತಹ ಖಾತೆಗಳನ್ನು "ಕಾರ್ಯಾಚರಣೆಯಲ್ಲಿಲ್ಲದ ಖಾತೆ" ಎಂದು ಪರಿಗಣಿಸಿ ಆ ವರ್ಗಕ್ಕೆ ವರ್ಗಾಯಿಸಲಾಗುವುದು.
ಎಲ್ಲಾ ರೀತಿಯ ಕಾರ್ಯಾಚರಣೆಯಲ್ಲಿಲ್ಲದ ಖಾತೆಗಳಿಗೆ ಅವುಗಳ ನಿರ್ವಹಣಾ ಶುಲ್ಕವನ್ನು ಬ್ಯಾಂಕು ಕಾಲಾನುಕಾಲಕ್ಕೆ ನಿಗಧಿಪಡಿಸುವಂತಹ ದರದಲ್ಲಿ ವಸೂಲು ಮಾಡಲಾಗುವುದು. ಈ ಕೆಳಕೆ ಕೋಷ್ಟಕದಲ್ಲಿ ಇತ್ತೀಚಿನ ಸೇವಾ ಶುಲ್ಕಗಳ ಪಟ್ಟಿಯನ್ನು ನೀಡಲಾಗಿದೆ
ವಿವರಗಳು
|
ವ್ಯಕ್ತಿಯೇತರ
|
ವ್ಯಕ್ತಿಗಳು
|
ಗ್ರಾಮೀಣೇತರ ವ್ಯಕ್ತಿಗಳು
|
ಗ್ರಾಮೀಣ ವ್ಯಕ್ತಿಗಳು
|
i) ಖಾತೆಯಲ್ಲಿನ ಉಳಿಕೆಯು ಅಗತ್ಯವಾದ ಕನಿಷ್ಠ ಉಳಿಕೆಗಿಂತಲೂ ಕಡಿಮೆಯಿದ್ದರೆ
|
ರೂ.147/- ಅರ್ಧವರ್ಷಕ್ಕೆ
|
ರೂ. 74/- ಅರ್ಧವಷಕ್ಕೆ
|
ರೂ. 39/-ಅರ್ಧವಷಕ್ಕೆ
|
ii) ಖಾತೆಯಲ್ಲಿನ ಉಳಿಕೆ ಅಗತ್ಯವಾದ ಕನಿಷ್ಠ ಉಳಿಕೆಗಿಂತಲೂ ಹೆಚ್ಚಿದ್ದರೆ
|
ರೂ. 98.00
|
ಇಲ್ಲ
|
ಇಲ್ಲ
|
- ಕೆಲವೊಮ್ಮೆ ಸೇವಾಶುಲ್ಕವನ್ನು ಕಾರ್ಯಾಚರಣೆಯಲ್ಲಿಲ್ಲದ ಖಾತೆಗಳಿಗೆ ವಿಧಿಸುವುದರಿಂದ ಖಾತೆಯಲ್ಲಿನ ಉಳಿಕೆಯು ಶೂನ್ಯವಾಗಬಹುದು. ಅಂತಹ ಶೂನ್ಯ ಉಳಿಕೆಯ ಖಾತೆಗಳು ತನ್ನಿಂದ ತಾವೇ ಕೊನೆಗಾಣುತ್ತವೆ, ಮತ್ತು ಅವುಗಳ ಪುನಃ ಕಾರ್ಯಶೀಲ ದರ್ಜೆಗೆ ಪುನರಾವಲೋಕಿಸಲಾಗುವುದಿಲ್ಲ. ಅಂದರೆ ಹೊಸದಾದ ಖಾತೆಯನ್ನು ಕೆವೈಸಿ/ಎಎಮ್‌ಎಲ್ ಮಾರ್ಗದರ್ಶೀ ಸೂತ್ರಗಳ ಅನ್ವಯ ವಿದ್ಯುಕ್ತವಾಗಿ ತೆರೆಯಬೇಕಾಗುವುದು.
- ಎಲ್ಲಾ "ಕಾರ್ಯಾಚರಣೆಯಲ್ಲಿಲ್ಲದ ಖಾತೆಗಳು" ಎಲ್ಲಿಯಾದರೂ ಬ್ಯಾಂಕಿಂಗ್ ನಡೆಸುವ ಸೌಲಭ್ಯದಿಂದ ಹೊರತಾಗಿರುತ್ತವೆ. ಹಾಗಾಗಿ ಅವುಗಳನ್ನು ಬ್ಯಾಂಕಿನ ಮೂಲಶಾಖೆಯಲ್ಲಿ ಮಾತ್ರ ನಿರ್ವಹಿಸಬಹುದಾಗಿದೆ. ಈ ರೀತಿಯ ಖಾತೆಗಳನ್ನು ನಿರ್ವಹಿಸಲು ಅಂತರ್ಜಾಲ/ಮೋಬೈಲ್/ಟೆಲಿಬ್ಯಾಂಕಿಂಗ್, ಎಟಿಎಂ/ಡೆಬಿಟ್‌ಕಾರ್ಡ್‌ಗಳು, ಕ್ರೆಡಿಟ್‌ಕಾರ್ಡ್‌ಗಳು, ಆರ್‌ಟಿಜಿಎಸ್/ಎನ್‌ಇಎಫ್‌ಟಿ ಸೌಲಭ್ಯಗಳು ಲಭ್ಯವಿರುವುದಿಲ್ಲ.
- ಕಾರ್ಯಾಚರಣೆಯಲ್ಲಿಲ್ಲದ ಖಾತೆಗಳ ಆಧಾರದಲ್ಲಿ ಮೂಲಶಾಖೆಯಲ್ಲದೆ ಬೇರೆಡೆ ನೀಡಲಾದ ಚೆಕ್‌ಗಳನ್ನು "ಕಾರ್ಯಾಚರಣೆಯಲ್ಲಿಲ್ಲದ ಖಾತೆ-ಮೂಲ ಶಾಖೆಗೆ ನೀಡಿರಿ" ಎಂಬ ಕಾರಣ ನೀಡಿ ಹಿಂದಿರುಗಿಸಲಾಗುವುದು. ಅಂತೆಯೇ, ಮೂಲ ಶಾಖೆಯಲ್ಲದೆ ಬೇರೆ ಶಾಖೆಯಲ್ಲಿನ ಪಾವತಿ ಮನವಿಗಳನ್ನೂ "ಕಾರ್ಯಾಚರಣೆಯಲ್ಲಿಲ್ಲದ ಖಾತೆ ಮೂಲಶಾಖೆಯಲ್ಲಿ ಪಾವತಿಸಿರಿ" ಎಂಬ ಕಾರಣ ನೀಡಿ ಹಿಂದಿರುಗಿಸಲಾಗುವುದು
ಕಾರ್ಯಾಚರಣೆಯಲ್ಲಿಲ್ಲದ ಖಾತೆಗಳ ಪುನರಾವಲೋಕನ
- ಖಾತಾದಾರನು ಕೆವೈಸಿ ನಿಯಮಾವಳಿಗಳ ಅನುಗುಣವಾಗಿ ಇತ್ತೀಚಿನ 2 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರಗಳು, ನೀಡಲಾಗಿರುವ ವಿಳಾಸದ ಪುರಾವೆ, ಮಾದರಿ ಸಹಿ ಮತ್ತು ನಿರ್ವಹಣಾ ಸೂಚನೆಗಳೊಂದಿಗೆ ಮನವಿಯನ್ನು ಸಲ್ಲಿಸಿದರೆ ಕಾರ್ಯಾಚರಣೆಯಲ್ಲಿಲ್ಲದ ಖಾತೆಯನ್ನು "ಕಾರ್ಯಶೀಲ ಖಾತೆಯ ದರ್ಜೆ" ಗೆ ತರಲು ಬ್ಯಾಂಕು ತನ್ನ ವಿವೇಚನೆಯನ್ನು ಉಪಯೋಗಿಸಬಹುದು
ಸುಪ್ತ/ನಿಷ್ಕ್ರಿಯ ಖಾತೆಗಳು
- ಒಂದು ವೇಳೆ ಮೂಲಶಾಖೆಯಲ್ಲಿರುವ ’ಕಾರ್ಯಾಚರಣೆಯಲ್ಲಿಲ್ಲದ’ ದರ್ಜೆ ಯಲ್ಲಿರುವ ಖಾತೆಯನ್ನು ಖಾತಾದಾರನು ಅದರ ’ಕಾರ್ಯಾಚರಣೆಯಲ್ಲಿಲ್ಲದ ದರ್ಜೆ’ ಅಥವಾ ಖಾತೆ ’ಕಾರ್ಯಾಚಾರಣೆ ರಹಿತ’ ವಾಗುವ ದಿನಾಂಕದಿಂದ ಯಾವುದು ನಂತರವೋ ಅದು ಅನ್ವಯಿಸುವಂತೆ, ಹಿಂದಿನ ನಿರ್ವಹಣಾ ದಿನಾಂಕದಿಂದ 36 ತಿಂಗಳುಗಳು ತುಂಬುವವರೆಗೆ ನಿರ್ವಹಿಸಲ್ಪಡದಿದ್ದರೆ, ಅಂತಹ ಖಾತೆಯನ್ನು "ಸುಪ್ತಖಾತೆ" ಎಂದು ಪರಿಗಣಿಸಲಾಗುವುದು. ಅಂತಹ ಸುಪ್ತಖಾತೆಗಳ ಖಾತೆದಾರನು ಮತ್ತೆ ಪುನರಾವಲೋಕ ಮಾಡಿಸಿ ಪುನಃ "ಕಾರ್ಯಶೀಲ" ದರ್ಜೆಗೆ ತರಲು ಅರ್ಹವಾಗಿರುವುದಿಲ್ಲ. ಆದಾಗ್ಯೂ, ಲಿಖಿತ ಮನವಿ, ಗುರುತಿನ ಪುರಾವೆ ಮತ್ತು ಉಪಯೋಗಿಸದೇ ಇರುವ ಚೆಕ್ ಹಾಳೆಗಳನ್ನು, ಶಾಖೆಗೆ ಸಲ್ಲಿಸುವುದರ ಮೂಲಕ ಖಾತಾದಾರನು ಸುಪ್ತಖಾತೆಯಲ್ಲಿರುವ ಸಮಗ್ರ ಉಳಿಕೆಯನ್ನು ವಾಪಸ್ಸು ಪಡೆಯಬಹುದಾಗಿದೆ
- "ಸುಪ್ತಖಾತೆ" ಗಳಿಗೆ ’ಕಾರ್ಯಾಚರನೆಯಲ್ಲಿಲ್ಲದ ಖಾತೆ’ಗಳಿಗೆ ಅನ್ವಯಿಸುವಂತಹ ಸೇವಾಶುಲ್ಕವನ್ನೇ ವಿಧಿಸಲಾಗುವುದು.
- ಸೇವಾಶುಲ್ಕವನ್ನು ವಿಧಿಸಿರ ನಂತರ ಸುಪ್ತಖಾತೆ ಎನಾದರೂ ಶೂನ್ಯ ಉಳಿಕೆಯನ್ನು ತೋರಿದರೆ ಅಂತಹ ಖಾತೆ ತನ್ನಿಂದ ತಾನೇ ಕೊನೆಗಾಣುತ್ತದೆ.
ಬಡ್ಡಿ ಮತ್ತು ಶುಲ್ಕಗಳು
- ಚಾಲ್ತಿಖಾತೆಯಲ್ಲಿನ ಉಳಿಕೆಗಳಿಗೆ ಬಡ್ಡಿಯನ್ನು ನೀಡಲಾಗುವುದಿಲ್ಲ.
- ಬ್ಯಾಂಕು ಕಾಲಾನುಕಾಲಕ್ಕೆ ಚಾಲ್ತಿಖಾತೆಯ ಮೇಲೆ ವಿವಿಧ ಕಾರಣಗಳಿಗಾಗಿ ಸೇವಾಶುಲ್ಕವನ್ನು ವಿಧಿಸುವ ಹಕ್ಕನ್ನು ಕಾದಿರಿಸುಕೊಂಡಿದೆ:
ವಿವರಗಳು
|
ವ್ಯಕ್ತಿಯೇತರ
|
ವ್ಯಕ್ತಿಗಳು
|
ಗ್ರಾಮೀಣೇತರ ವ್ಯಕ್ತಿಗಳು
|
ಗ್ರಾಮೀಣ ವ್ಯಕ್ತಿಗಳು
|
2
|
3
|
4
|
5
|
ಗಣಕೀಕೃತ (40 ನಮೂದುಗಳು ಅಥವಾ ಅಲ್ಲಿಂದ 1 ಲೆಡ್ಜರ್ ಪೇಜ್/ ಫೋಲಿಯೋ ಎಂದು ಪರಿಗಣಿಸಲಾಗುವುದು) - ಪ್ರತಿ ಫೋಲಿಯೋಗೆ ಅರ್ಧವಾರ್ಷಿಕ
|
ರೂ. 98.00
|
ರೂ. 98.00
|
ರೂ. 98.00
|
ಸ್ವರ್ಣ ಜಯಂತಿ ಗ್ರಾಮ್ ಸ್ವರೋಜ್ಗಾಮರ್ ಯೋಜನೆ (ಎಸ್.ಜಿ.ಎಸ್.ವೈ.)
ಎಸ್.ಜಿ.ಎಸ್.ವೈ.ನ ನಿಯಮಾವಳಿಗಳ ಸಾರಾಂಶವನ್ನು ಈ ಕೆಳಗೆ ನೀಡಲಾಗಿದೆ
ಆರಂಭ
ಸ್ವರ್ಣ ಜಯಂತಿ ಗ್ರಾಮ್ ಸ್ವರೋಜಗಾರ್ ಯೋಜನೆ ಎಂಬ ಹೊಸ ಕಾರ್ಯಕ್ರಮವನ್ನು 01.04.1999 ರಿಂದ ಆರಂಭಿಸಲಾಗಿದೆ. ಇದೊಂದು ಸಮಗ್ರತಾ ದೃಷ್ಟಿಯ ಕಾರ್ಯಕ್ರಮವಾಗಿದ್ದು ಸ್ವಯಂ ಉದ್ಯೋಗದ ಎಲ್ಲ ಅಂಶಗಳನ್ನು ಒಳಗೊಂಡಿರುವಂಥದ್ದಾಗಿದೆ. ಉದಾಹರಣೆಗೆ ಬಡವರಿಗೆ ಸ್ವ-ಸಹಾಯ ಸಂಘಗಳನ್ನು ಮಾಡಿಕೊಳ್ಳಲು, ತರಬೇತಿ, ಸಾಲ, ತಂತ್ರಜ್ಞಾನ, ಅಡಿರಚನೆ ಮತ್ತು ವ್ಯಾಪಾರಗಾರಿಕೆ. ಈ ಯೋಜನೆಯನ್ನು ಪರಿಚಯಿಸುವುದರ ಮೂಲಕ ಮುಂಚಿನ ಕಾರ್ಯಕ್ರಮಗಳು ಅಂದರೆ., ಐ.ಆರ್.ಡಿ.ಪಿ, ಟಿ.ಆರ್.ವೈ, ಎಸ್.ಇ.ಎಮ್, ಡಿ.ಡಬ್ಲ್ಯು.ಸಿ.ಆರ್.ಎ, ಎಸ್.ಐ.ಟಿ.ಆರ್.ಎ, ಜಿ.ಕೆ.ವೈ ಮತ್ತು ಎಮ್.ಡಬ್ಲ್ಯು.ಎಸ್. ಗಳನ್ನು ನಿಲ್ಲಿಸಲಾಗಿದೆ.
ಅರ್ಹತೆ
ಬಿ.ಪಿ.ಎಲ್. ಜನಗಣತಿಯಿಂದ ಗುರುತಿಸಲ್ಪಟ್ಟು ಗ್ರಾಮಸಭಾದಿಂದ ಕಡ್ಡಾಯವಾಗಿ ಅಂಗೀಕೃತವಾಗಿ, ಬಡತನ ರೇಖೆಯ ಕೆಳಗಿನ (ಬಿ.ಪಿ.ಎಲ್.) ಕುಟುಂಬಗಳ ಪಟ್ಟಿಯಲ್ಲಿ ಗುರುತಿಸಲಾಗಿರುವ ಕುಟುಂಬಗಳು ಈ ಯೋಜನೆಯಡಿಯಲ್ಲಿ ಸಹಾಯ ಪಡೆಯಲು ಅರ್ಹವಾಗಿರುತ್ತವೆ. ಫಲಾನುಭವಿಗಳನ್ನು ’ಸ್ವರೋಜ್ಗಾಿರಿಗಳು’ ಎಂದು ಕರೆಯಲಾಗುತ್ತದೆ. ಸ್ವರೋಜ್ಗಾರರಿಗಳು ವ್ಯಕ್ತಿಗಳಾಗಿರಬಹುದು ಅಥವ ಗುಂಪುಗಳಾಗಿರಬಹುದು. ಎಸ್.ಜಿ.ಎಸ್.ವೈ. ಗ್ರಾಮೀಣ ಬಡಜನರು ಎಸ್.ಜಿ.ಎಸ್.ವೈ. ಗುಂಪುಗಳಾಗಿರುವಂಥ, ಸಮೂಹ ದೃಷ್ಟಿಕೋನಕ್ಕೆ ಹೆಚ್ಚು ಒತ್ತು ನೀಡುತ್ತದೆ.
ಆಯ್ಕೆ
ಬಿ.ಡಿ.ಒ., ಬ್ಯಾಂಕಿನವರು ಮತ್ತು ಪಂಚಾಯತಿಯವರು ಕೂಡಿದ ಮೂರು ಸದಸ್ಯರ ಗುಂಪು ಸ್ವರೋಜ್ಗ್ರಿಗಳನ್ನು ಬಿ.ಪಿ.ಎಲ್. ಕುಟುಂಬಗಳಿಂದ ಆಯ್ಕೆ ಮಾಡಲಾಗುತ್ತದೆ.
ಅರ್ಹ ಚಟುವಟಿಕೆಗಳು
ಚಟುವಟಿಕೆಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕೆಂದರೆ, ಸ್ವರೋಜ್ಗಾಯರರು ತಮ್ಮ ಆಸ್ತಿ, ಕೌಶಲ್ಯ ಶಕ್ತಿಗಳನ್ನು ಮೂರು ವರ್ಷಗಳಲ್ಲಿ ವಿಸ್ತರಿಸಿಕೊಂಡು, ಮೂರನೇ ವರ್ಷದಲ್ಲಿ ಅವರ ನಿವ್ವಳ ಆದಾಯ ತಿಂಗಳಿಗೆ ರೂ. 2,000 ಗಿಂತ ಹೆಚ್ಚು ಇರಬೇಕು. ಯೋಜನೆಯು ಸಮುಚ್ಚಯ ದೃಷ್ಟಿಕೋನಕ್ಕೆ ಅಂದರೆ ಒಂದು ವಿಭಾಗದಲ್ಲಿ ಕೆಲವೇ ಆಯ್ದ ಚಟುವಟಿಕೆಗಳು (ಪ್ರಮುಖ ಚಟುವಟಿಕೆಗಳೆನ್ನುತ್ತಾರೆ) ಒಂದೆಡೆ ಕೇಂದ್ರೀಕೃತವಾಗಿ ಈ ಚಟುವಟಿಕೆಗಳ ಎಲ್ಲ ಅಂಶಗಳನ್ನೂ ವಿಚಾರಿಸಿಕೊಳ್ಳುವಂತಿರುವುದಕ್ಕೆ ಒತ್ತು ನೀಡುತ್ತದೆ. ಇದರಿಂದಾಗಿ ಸ್ವರೋಜ್ಗಾಲರಿಗಳು ತಮ್ಮ ಬಂಡವಾಳದಿಂದ ಸುಸ್ಥಿರ ಲಾಭ ಪಡೆಯುವಂತಿರಬೇಕು.
ಸಾಲದ ಪರಿಮಾಣ
ಸಾಲದ ಪರಿಮಾಣವು ಯೋಜನೆಯ ವಿಧ ಮತ್ತು ಕ್ಷೇತ್ರದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಸಂಯುಕ್ತ ಸಾಲವನ್ನು, ಅಂದರೆ, ಸ್ಥಿರ ಮತ್ತು ಕಾರ್ಯನಿರತ ಬಂಡವಾಳಗಳೆರಡನ್ನೂ ಸೇರಿಸಿದ ಸಾಲವನ್ನು ಈ ಯೋಜನೆಯಡಿಯಲ್ಲಿ ಖಾತರಿ ಮಾಡಲಾಗುತ್ತದೆ. ಯೋಜನೆಗೆಂದು ಲೆಕ್ಕಾಚಾರ ಮಾಡಲಾದ ಘಟಕ ವೆಚ್ಚದ ಹೊರತಾಗಿ ಬಂಡವಾಳ ಹೂಡಿಕೆಗೆ ಬೇರಾವುದೇ ಗರಿಷ್ಠ ಮಿತಿಯು ಎಸ್.ಜಿ.ಎಸ್.ವೈ.ಗೆ ಇರುವುದಿಲ್ಲ.
ಎಸ್.ಜಿ.ಎಸ್.ವೈ. ಗುಂಪುಗಳು 6 ತಿಂಗಳ ಅವಧಿಯಲ್ಲಿ ಎಸ್.ಜಿ.ಎಸ್.ವೈ ಸಮೂಹಗಳು ರೂಪುಗೊಳ್ಳುವುದು ನಡೆಯುತ್ತದೆ. ಈ ಹಂತವು ಮುಗಿದಾಗ, ಆ ಗುಂಪು ಒಂದು ಪರೀಕ್ಷೆಗೆ ಒಳಪಟ್ಟು ತಾವು ಒಂದು ಒಳ್ಳೆಯ ಗುಂಪಾಗಿ ತಯಾರಾಗಿದ್ದಾರೆಯೇ ಹಾಗೂ ಮುಂದಿನ ಹಂತಕ್ಕೆ ಅಂದರೆ ವಿಕಾಸದ ಹಂತಕ್ಕೆ ಹೋಗಲು ಸಿದ್ಧವಾಗಿದೆಯೇ ಎಂದು ಸಾಧಿಸಿ ತೋರಿಸಬೇಕಾಗುತ್ತದೆ. ಈ ಹಂತದಲ್ಲಿ ಗುಂಪಿಗೆ ಒಂದು ಶ್ರೇಣಿಯನ್ನು ನೀಡಲಾಗುತ್ತದೆ. ಒಳ್ಳೆಯ ಶ್ರೇಣಿಯನ್ನು ಪಡೆದ ಗುಂಪಿಗೆ ಡಿ.ಆರ್.ಡಿ.ಎ. ವತಿಯಿಂದ ಗುಂಪಿನ ನಿಧಿಯನ್ನು ಹೆಚ್ಚಿಸಿಕೊಳ್ಳಲು “ಆವರ್ತನೀಯ ನಿಧಿ” (ರಿವಾಲ್ವಿಂಗ್ ಫ಼ಂಡ್) ದೊರೆಯುತ್ತದೆ. ಇದರಿಂದ ಹೆಚ್ಚು ಸದಸ್ಯರಿಗೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಸದಸ್ಯರುಗಳಿಗೆ ತಲಾ ಸಾಲದ ಲಭ್ಯತೆಯು ಹೆಚ್ಚಾಗುತ್ತದೆ. ಆವರ್ತನೀಯ ನಿಧಿಯನ್ನು ಪಡೆದ ದಿನದಿಂದ ಆರು ತಿಂಗಳ ಕೊನೆಯಲ್ಲಿ, ಇನ್ನೊಂದು ಶ್ರೇಯಾಂಕ ಪರೀಕ್ಷೆಗೆ ಒಳಗಾಗಿ, ಆ ಗುಂಪು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಮತ್ತು ಉನ್ನತ ಮಟ್ಟಗಳ ಬಂಡವಾಳ ಮೂಲಕ ಆರ್ಥಿಕ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲು ಸಮರ್ಥವಾಗಿದೆಯೇ ಎಂದು ಮೌಲ್ಯ ಮಾಪನ ಮಾಡಲಾಗುತ್ತದೆ. ಒಂದು ಬಾರಿ ಗುಂಪು ಎರಡನೇ ಹಂತವನ್ನೂ ಯಶಸ್ವಿಯಾಗಿ ದಾಟಿದೆ ಎಂದು ಸಾಬೀತುಮಾಡಿದ ಮೇಲೆ, ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಅನುದಾನದ ರೂಪದಲ್ಲಿ ಸಹಾಯ ಪಡೆಯಲು ಅರ್ಹವಾಗುತ್ತದೆ. ಸಹಾಯವನ್ನು ಎರಡು ರೀತಿ ನೀಡಲಾಗುತ್ತದೆ. ಅವುಗಳೆಂದರೆ :
- ಒಂದು ಎಸ್.ಜಿ.ಎಸ್.ವೈ. ಗುಂಪಿನಲ್ಲಿ ಭವಿಷ್ಯದ ಸ್ವರೋಜ್‍ಗಾರಿಗಳು ಸಮರ್ಥರಾಗಿದ್ದು, ಪ್ರಮುಖ ಚಟುವಟಿಕೆಗಳ ಅಡಿಯಲ್ಲಿ ಆದಾಯ ಗಳಿಕೆಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಬಯಸುವುದಾದರೆ ವ್ಯಕ್ತಿಗಳಿಗೆ ಸಾಲದ ಜೊತೆ ಅನುದಾನವನ್ನು ನೀಡಲಾಗುವುದು.
- ಒಂದು ಗುಂಪಿನಲ್ಲಿನ ಎಲ್ಲ ಸದಸ್ಯರೂ ಒಂದು ಸಮೂಹ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲು ಬಯಸುವುದಾದರೆ ಸಾಲದ ಜೊತೆ ಅನುದಾನವನ್ನು ನೀಡಲಾಗುವುದು.
ಅನುದಾನ
ಎಸ್.ಜಿ.ಎಸ್.ವೈ.ನ ಅಡಿಯಲ್ಲಿ ಏಕರೂಪವಾಗಿ ಯೋಜನಾ ವೆಚ್ಚದ 30% ನ್ನು, ಗರಿಷ್ಠ ರೂ.7,500 ವರೆಗೆ ಅನುದಾನವಾಗಿ ನೀಡಲಾಗುತ್ತದೆ. ಆದರೂ ಪ.ಜಾತಿ/ಪ.ವರ್ಗಗಳ, ಅನುದಾನವು ಯೋಜನಾ ವೆಚ್ಚದ 50% ಆಗಿರುತ್ತದೆ ಹಾಗೂ ಗರಿಷ್ಠ ಮಿತಿಯು ಪ್ರತಿ ಸಾಲಗಾರರಿಗೂ ರೂ. 10,000 ಆಗಿರುತ್ತದೆ. ಎಸ್.ಜಿ.ಎಸ್.ವೈ. ಗುಂಪುಗಳಿಗೆ ಅನುದಾನವು ಯೋಜನಾ ವೆಚ್ಚದ 50% ಆಗಿರುತ್ತದೆ, ಅದರ ಗರಿಷ್ಠ ಮಿತಿಯು ರೂ.1.25 ಲಕ್ಷ ಆಗಿರುತ್ತದೆ. ಎಸ್.ಜಿ.ಎಸ್.ವೈ.ನ ಅಡಿಯಲ್ಲಿ ನೀರಾವರಿ ಯೋಜನೆಗಳ ಅನುದಾನಕ್ಕೆ ಯಾವುದೇ ಹಣಕಾಸಿನ ಮಿತಿಯಿರುವುದಿಲ್ಲ. ಅನುದಾನವು ಧನ ಸಹಾಯದ ಕೊನೆಯ ಭಾಗವಾಗಿರುತ್ತದೆ.
ಉಪ ಗುರಿಗಳು-ಷರತ್ತು
ಎಸ್.ಜಿ.ಎಸ್.ವೈ. ಗ್ರಾಮೀಣ ಬಡವರಲ್ಲಿ ದುರ್ಬಲ ಗುಂಪುಗಳ ಮೇಲೆ ಗಮನ ಹರಿಸುತ್ತದೆ. ಅದಕ್ಕೆ ಅನುಗುಣವಾಗಿ ಕಡ್ಡಾಯವಾಗಿ 50% ಪ.ಜಾತಿ/ಪ.ವರ್ಗಗಳಿಗೆ; 40% ಮಹಿಳೆಯರಿಗೆ; ಮತ್ತು 3% ಅಂಗವಿಕಲರಿಗೆ ತಲುಪಬೇಕು.
ಆಧಾರ ಮತ್ತು ಠೇವಣಿ ಹಣ
ಚರಾಸ್ತಿಗಳನ್ನು ಸೃಷ್ಟಿಸಿದ್ದಲ್ಲಿ
ಸಾಲದ ಮೊತ್ತ
|
ಆಧಾರ ಕ್ರಮಗಳು
|
ಠೇವಣಿಗೆ ಕ್ರಮಗಳು
|
1. ವ್ಯಕ್ತಿಗಳಿಗೆ – ರೂ.50,000/-ವರೆಗೆ
|
ಬ್ಯಾಂಕಿನ ಸಾಲದಿಂದ ಸೃಷ್ಠಿಯಾದ ಆಸ್ತಿಯ ಅಡಮಾನ
|
ಠೇವಣಿ ಇರುವುದಿಲ್ಲ(ಅನುದಾನವನ್ನೇ ಠೇವಣಿ ಹಣ ಎಂದು ಪರಿಗಣಿಸಬೇಕು)
|
2. ಗುಂಪುಗಳಿಗೆ – ರೂ. 5.00 ಲಕ್ಷಗಳವರೆಗೆ
|
|
1. ವ್ಯಕ್ತಿಗಳಿಗೆ- ರೂ.50,000/-ಕ್ಕಿಂತ ಹೆಚ್ಚಿದ್ದರೆ
2. ಗುಂಪುಗಳಿಗೆ – ರೂ. 5.00 ಲಕ್ಷಕ್ಕಿಂತ ಹೆಚ್ಚಿದ್ದರೆ
|
ಬ್ಯಾಂಕಿನ ಸಾಲದಿಂದ ಸೃಷ್ಟಿಯಾದ ಆಸ್ತಿಯ ಅಡಮಾನ ಮತ್ತು ಭೂಮಿಯ ಅಡಮಾನ *
|
15-25% ಠೇವಣಿ ಹಣ (ಠೇವಣಿ ಹಣವು ಅರ್ಹ ಅನುದಾನವನ್ನೂ ಒಳಗೊಂಡಿರುತ್ತದೆ)
|
ಚರಾಸ್ತಿಗಳನ್ನು ಸೃಷ್ಟಿಸಿಲ್ಲದಿದ್ದರೆ
ಸಾಲದ ಮೊತ್ತ
|
ಆಧಾರ ಕ್ರಮಗಳು
|
ಠೇವಣಿ ಕ್ರಮಗಳು
|
1. ವ್ಯಕ್ತಿಗಳಿಗೆ – ರೂ.50,000/-ವರೆಗೆ
|
ಭೂಮಿಯ ಅಡಮಾನ*
|
ಠೇವಣಿ ಇರುವುದಿಲ್ಲ(ಅನುದಾನವನ್ನೇ ಠೇವಣಿ ಹಣ ಎಂದು ಪರಿಗಣಿಸಬೇಕು)
|
2. ಗುಂಪುಗಳಿಗೆ – ರೂ. 5.00 ಲಕ್ಷಗಳವರೆಗೆ
|
|
1.ವ್ಯಕ್ತಿಗಳಿಗೆ- ರೂ.50,000/-ಕ್ಕಿಂತ ಹೆಚ್ಚಿದ್ದರೆ
|
ಭೂಮಿಯ ಅಡಮಾನ*
|
15-25% ಠೇವಣಿ ಹಣ (ಠೇವಣಿ ಹಣವು ಅರ್ಹ ಅನುದಾನವನ್ನೂ ಒಳಗೊಂಡಿರುತ್ತದೆ)
|
2.ಗುಂಪುಗಳಿಗೆ – ರೂ. ೫.೦೦ ಲಕ್ಷಕ್ಕಿಂತ ಹೆಚ್ಚಿದ್ದರೆ
|
|
ಭೂಮಿಯ ಅಡಮಾನವು ಸಾಧ್ಯವಿಲ್ಲದಿದ್ದಲ್ಲಿ, ಸೂಕ್ತ ಒತ್ತೆ ಆಧಾರವನ್ನು, ಸೂಕ್ತ ವಿಮಾತ್ಯಾಗ ಮೌಲ್ಯವಿರುವ ವಿಮೆ ಪಾಲಿಸಿಗಳ ರೂಪದಲ್ಲಿ, ಮಾರಬಹುದಾದ ಆಧಾರ/ಇತರ ಆಸ್ತಿಪತ್ರಗಳು ಇತ್ಯಾದಿಗಳನ್ನು ಸಾಲದ ಹಣಕ್ಕೆ ಸರಿದೂಗುವಂತೆ ಪಡೆದುಕೊಳ್ಳಬೇಕು
ಬಡ್ಡಿದರ
ಬಡ್ಡಿದರಗಳು ಯಾವುದೇ ಚಟುವಟಿಕೆಯಾಗಲಿ ಮತ್ತು ವ್ಯಕ್ತಿಯಾಗಲಿ ಅಥವ ಗುಂಪಾಗಲಿ ಕೆಳ ಕಂಡಂತೆ ಅನ್ವಯವಾಗುತ್ತವೆ: [15.02.2008 ರಿಂದ ಜಾರಿಯಲ್ಲಿರುತ್ತವೆ]
ಮಿತಿ
|
ಬಡ್ಡಿದರ
|
ರೂ.50,000/-ವರೆಗೆ
|
8.75 % (ಸ್ಥಿರ)
|
ರೂ.50,000/-ಕ್ಕಿಂತ ಹೆಚ್ಚಿದ್ದರೆ
|
9.00% (ಸ್ಥಿರ)
|
ಜಾಡಮಾಲಿಗಳ ಬಿಡುಗಡೆ ಮತ್ತು ಮರು ವಸತಿಗಾಗಿ ಯೋಜನೆ (ಎಸ್.ಎಲ್.ಆರ್.ಎಸ್)
ಎಸ್.ಎಲ್.ಆರ್.ಎಸ್ ಉದ್ಘಾಟನೆ
ಜಾಡಮಾಲಿಗಳ ಬಿಡುಗಡೆ ಮತ್ತು ಮರು ವಸತಿಗಾಗಿ ಯೋಜನೆಯನ್ನು ಭಾರತ ಸರ್ಕಾರವು 22.03.1992 ರಂದು ಆರಂಭಿಸಿತು.
ಉದ್ದೇಶ
ಈ ಯೋಜನೆಯ ಉದ್ದೇಶ ಜಾಡಮಾಲಿಗಳನ್ನು ಮತ್ತು ಅವರ ಅವಲಂಬಿತರನ್ನು ಅವರ ವಂಶಪಾರಂಪರ್ಯವಾಗಿ ಬಂದಿರುವ ಕನಿಷ್ಠದ ಉದ್ಯೋಗದಿಂದ ಮುಕ್ತಗೊಳಿಸುವುದು.
ಕಾರ್ಯಗತಗೊಳಿಸುವಿಕೆ
ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಗಳು, ರಾಜ್ಯಮಟ್ಟದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ರಮುಖ ಪಾತ್ರಧಾರಿಗಳಾಗಿರುತ್ತಾರೆ.ಜಿಲ್ಲಾ ಮಟ್ಟದಲ್ಲಿ, ಜಿಲ್ಲಾಧಿಕಾರಿಗಳು/ ಜಿಲ್ಲಾ ಮ್ಯಾಜಿಸ್ಟ್ರೇ,ಟ್/ ಜಿಲ್ಲೆಯ ಉಪ ಆಯುಕ್ತರು ಇವರಿಗೆ ಯೋಜನೆಯನ್ನು ಒಟ್ಟಾರೆಯಾಗಿ ಕಾರ್ಯರೂಪಕ್ಕೆ ತರುವ ಜವಾಬ್ದಾರಿಯಿರುತ್ತದೆ.
ಅರ್ಹತೆ
ನಗರಗಳು, ಅರೆನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಹಾಗು ಯಾವುದೇ ಪಟ್ಟಣದಲ್ಲಿ ಅಥವ ಸೇನಾ ವಾಸ್ತವ್ಯದ ಜಾಗಗಳೂ ಸೇರಿದಂತೆ, ಸಾರ್ವಜನಿಕ ವಲಯಗಳ ಆಡಳಿತದಲ್ಲಿ ಬರುವ ಯಾವುದೇ ಕಾಲೋನಿಗಳಲ್ಲಿ ವಾಸವಾಗಿರುವ ಜಾಡಮಾಲಿಗಳು.
ಚಟುವಟಿಕೆಗಳು
ವಿವಿಧ ಉದ್ಯಮಗಳಲ್ಲಿ ಜಾಡಮಾಲಿಗಳ ಮರುವಸತಿ / ವ್ಯವಸಾಯ ಮತ್ತು ಅದರ ಸಂಬಂಧಿತ ವಲಯಗಳಲ್ಲಿ, ಸಣ್ಣ ಕೈಗಾರಿಕಾ ವಲಯ ಅಥವ ಸೇವಾ ವಲಯಗಳಲ್ಲಿ ಜಾಡಮಾಲಿಗಳಿಗೆ ಅನುದಾನ, ಠೇವಣಿ ಹಣದ ಸಾಲ ಮತ್ತು ಬ್ಯಾಂಕ್ ಸಾಲವನ್ನು ಒದಗಿಸುವುದು .
ತರಬೇತಿ
ಜಾಡಮಾಲಿಗಳಿಗೆ ಭಾರತ ಸರ್ಕಾರ/ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳಿಂದ ಸ್ಥಾಪನೆಯಾಗಿರುವ ತರಬೇತಿ ಕೇಂದ್ರಗಳ ವತಿಯಿಂದ ತರಬೇತಿ ನೀಡಲಾಗುತ್ತದೆ. ತರಬೇತಿಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸುತ್ತದೆ. ತರಬೇತಿಯ ಗುರಿಯು ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯಗಳನ್ನು ಹುಟ್ಟುಹಾಕುವ / ಅಭಿವೃದ್ಧಿಪಡಿಸುವುದಾಗಿರುತ್ತದೆ. ಈ ತರಬೇತಿಯು ಆ 15-50 ವರ್ಷ ವಯೋಮಾನದಲ್ಲಿರುವ ಜಾಡಮಾಲಿಗಳು ಮತ್ತು ಅವರ ಅವಲಂಬಿತರಿಗೆ ಮಾತ್ರ ಸೀಮಿತವಾಗಿರುತ್ತದೆ.
ಯೋಜನೆಗೆ ಬಂಡವಾಳ ಒದಗಿಸುವುದು
ಪ್ರತಿ ಫಲಾನುಭವಿಗೆ ಗರಿಷ್ಠ ಯೋಜನಾ ವೆಚ್ಚ ರೂ. 50,000 ಆಗಿರುತ್ತದೆ.
ಠೇವಣಿ ಹಣ
ಪ.ಜಾತಿ/ ಪ.ವರ್ಗದ ಫಲಾನುಭವಿಗಳಿಗೆ ರಾಜ್ಯ ಪರಿಶಿಷ್ಟ ಜಾತಿ ಅಭಿವೃದ್ಧಿ ಸಂಸ್ಥೆಯಿಂದ ಯೋಜನೆಯ ವೆಚ್ಚದ 15% ಮೇಲೆ 4% ಬಡ್ಡಿ ದರ. ನುದಾನ
ಪ್ರತಿ ಸಾಲಗಾರರಿಗೆ ಅನುದಾನವು ಯೋಜನಾವೆಚ್ಚದ 50% ದರದಲ್ಲಿ ಗರಿಷ್ಠ ರೂ.10,000 ವರೆಗೆ ಲಭ್ಯವಿದೆ.
ಬ್ಯಾಂಕ್ ಸಾಲ
ಯೋಜನಾ ವೆಚ್ಚ – (ಅನುದಾನ + ಠೇವಣಿ ಹಣ ಅನ್ವಯವಾಗುವಲ್ಲಿ).
ಬಡ್ಡಿ ದರ
ಈ ಯೋಜನೆಯ ಅಡಿಯಲ್ಲಿ ರೂ. 6,500/- ರ ವರೆಗಿನ ಎಲ್ಲಾ ಸಾಲಗಳು, ಫಲಾನುಭವಿಯ ಆದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಡಿ.ಆರ್.ಐ ಯೋಜನೆಯ ಅಡಿಯಲ್ಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ರಿಯಾಯಿತಿ ಬಡ್ಡಿ ದರವಾದ 4% ಅನ್ನು ನೀಡಲಾಗುತ್ತದೆ. ರೂ.6500 ಕ್ಕಿಂತ ಹೆಚ್ಚಿನ ಮೊತ್ತದ ಸಾಲಗಳಿಗೆ ಬಡ್ಡಿದರಗಳು, ಬ್ಯಾಂಕಿನ/ಭಾರತೇಯ ರಿಸರ್ವ್ ಬ್ಯಾಂಕ್ ದ ಕಾಲ ಕಾಲದ ನಿರ್ದೇಶನಗಳನ್ನು ಆಧರಿಸಿರುತ್ತವೆ.
ಭದ್ರತೆ
ಬ್ಯಾಂಕಿನ ಸಾಲದಿಂದ ಸೃಷ್ಠಿಯಾದ ಆಸ್ತಿಗಳ ಅಡಮಾನ. ರಾಜ್ಯ ಪರಿಶಿಷ್ಟ ಜಾತಿ ಅಭಿವೃದ್ಧಿ ಸಂಸ್ಥೆಗಳು ತಮ್ಮ ಠೇವಣಿ ಹಣದ ಸಾಲದ ಸಹಾಯಕ್ಕೆ ಸಮನಾಗುವಂತೆ ಎರಡನೇ ಪ್ರಭಾರ/ಸಮರೂಪದ ಪ್ರಭಾರಗಳನ್ನು ಹೊಂದಲು ಅವಕಾಶ ನೀಡಬಹುದು.
ಮರುಪಾವತಿ
ಸೃಷ್ಟಿಸಿದ ಸ್ವತ್ತುಗಳ ಅವಧಿಯನ್ನು ಮತ್ತು ಫಲಾನುಭವಿಯ ಮರುಪಾವತಿ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು, ಸಾಲದ ಮರುಪಾವತಿಯು 3-7 ವರ್ಷಗಳ
ಒಳಗಾಗಿ ಆಗಬೇಕು( ರಿಯಾಯಿತಿ ಅವಧಿಯೂ ಸೇರಿ) . ಆರು ತಿಂಗಳ ಸೂಕ್ತ ರಿಯಾಯಿತಿ ಅವಧಿಯನ್ನು ಪ್ರತಿ ಚಟುವಟಿಕೆಗೆ ನೀಡಬಹುದು.ಮಹಿಳೆಯರಿಗೆ ವಿಶಿಷ್ಟ ಯೋಜನೆಗಳು ಕೃಷಿಗೆ ಹೊರತಾದ ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಸಹಾಯ ಗ್ರಾಮಾಂತರ ಮಹಿಳೆಯರಿಗೆ ಅವರ ಆರ್ಥಿಕ ಸ್ಥಿತಿಯ ಅಭಿವೃದ್ಧಿಗಾಗಿ ಪ್ರಮುಖವಾಗಿ ಕೃಷಿಯೇತರ ಚಟುವಟಿಕೆಗಳ ವಿಭಾಗದಲ್ಲಿ ಸಹಕಾರ ನೀಡುವ ಯೋಜನೆಯನ್ನು ಸಮುದಾಯ/ಗುಂಪುಗಳಿಗಾಗಿ ಯೋಜಿಸಲಾಗಿದೆ. ಈ ಯೋಜನೆಯು ಎರಡು ಭಾಗವನ್ನು ಹೊಂದಿದೆ
- ಸಾಲದ ಭಾಗ
- ಪ್ರಚಾರಣಾ ಭಾಗ
ಭಾಗ (1)ರ ಅಡಿಯಲ್ಲಿ ಮೂರು ವರ್ಷಗಳಲ್ಲಿ ಹೊಂದಿರುವ ಟ್ರಾಕ್ ರೆಕಾರ್ಡ್ ಸಾಬೀತು ಮಾಡಿಕೊಂಡ ಯಾವುದಾದರೂ ಸ್ವಯಂ ಸೇವಾ ಸಂಸ್ಥೆ, ಮಹಿಳಾ ಗುಂಪುಗಳ ಸಹಾಯದಲ್ಲಿ, ರಾಜ್ಯ/ಕೇಂದ್ರ ಸರ್ಕಾರಗಳು ಸ್ಥಾಪಿಸಿದ ಮಹಿಳಾ ಅಭಿವೃದ್ಧಿ ನಿಗಮಗಳಲ್ಲಿ, ಕೆ.ವಿ.ಐ.ಸಿ / ಕೆ.ವಿ.ಐ.ಬಿ ಗಳು ಅಥವಾ ಕೆ.ವಿ.ಐ.ಸಿ / ಕೆ.ವಿ.ಐ.ಬಿ ಪಟ್ಟು ಅಡಿಯಲ್ಲಿ ಇರುವ ಯಾವುದೇ ಸಂಸ್ಥೆಯಲ್ಲಿ, ರಾಜ್ಯ/ಕೇಂದ್ರ ಸರ್ಕಾರಗಳು ಸ್ಥಾಪಿಸಿದ ಯಾವುದೇ ಇತರ ನೋಂದಾಯಿತ ಸಂಸ್ಥೆ ,ಸಹಕಾರ ಮತ್ತು ನಿಗಮಗಳಲ್ಲಿ ಸೇವೆ ಸಲ್ಲಿಸಿದರೆ ಗ್ರಾಮೀಣ ಮಹಿಳಾ ತಂಡಗಳಿಗಾಗಿ ಕೃಷಿ ಅಲ್ಲದ ಕ್ಷೇತ್ರದ ಯಾವುದೇ ಉತ್ಪಾದಕ ಚಟುವಟಿಕೆ ಕೈಕೊಳ್ಳುವುದುಗಾಗಿ ಯೋಜನೆಗಳನ್ನು ತಯಾರಿಸಬಹುದು. ಮಹಿಳೆಯರಿಗೆ ತಮ್ಮ ಘಟಕಗಳನ್ನು ಸ್ಥಾಪಿಸುವಲ್ಲಿ ಸಂಸ್ಥೆದವರು ಅವರಿಗೆ ಸಹಾಯ ಮಾಡುವ ಯೋಜನೆ ಪ್ರಕಟಿಸಿ ಮತ್ತು/ಅಥವಾ ತರಬೇತಿಯು ಸೇರಿದಂತೆ ಇತರ ಹಿಂದುಳಿದ/ಮುಂದೆ ಸಂಪರ್ಕಗಳನ್ನು ಒದಗಿಸಿ ಮತ್ತು ವ್ಯಕ್ತಿಯ/ಸಮೂಹದ ಉದ್ಯಮಗಳ ಸ್ಥಿತಿ ಸುಧಾರಣೆ ಅವಶ್ಯಕ ಎಂದು ಪರಿಗಣಿಸಬೇಕು.
ವ್ಯಕ್ತಿಗಳಿಗೆ ಯೋಜನೆಯಡಿಯಲ್ಲಿ ಸಾಲ ನೆರವು ಪ್ರತಿ ಸಾಲ ಪಡೆಯುವವರಿಗೆ ಸಾಮಾನ್ಯವಾಗಿ Rs.50,000/- ಅಥವಾ 20 ಗ್ರಾಮೀಣ ಮಹಿಳೆಯರು ಒಳಗೊಂಡ ಒಂದು ಗುಂಪು ಚಟುವಟಿಕೆಗಾಗಿ Rs.10 ಲಕ್ಷ ಗಿಂತ ಮೀರಬಾರದು. ಆದರೆ ನಿಜವಾದ ಸಾಲ ಪ್ರಮಾಣ ಅಗತ್ಯದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಪ್ರಾಯೋಜಕತ್ವ ನಿಯೋಗವು ಅದನ್ನು ನಿರ್ಧರಿಸಬೇಕಾಗುತ್ತದೆ ಅಥವಾ ಗುಣಗಳ ಆಧಾರದ ಮೇಲೆ ಸಾಲಗಾರರು/ಹಣಕಾಸಿನ ಬ್ಯಾಂಕ್ ಜೊತೆಗಿನ ಸಮಾಲೋಚನೆಯ ಮೂಲಕ ಚಟುವಟಿಕೆ/ಘಟಕದ ಸ್ವರೂಪ ಗಮನದಲ್ಲಿರಿಸಿಕೊಂಡು ಸ್ಥಾಪಿಸಲಾಗುತ್ತದೆ.
ಅರ್ಹವಾದ ಕಾರ್ಯಕ್ರಮಗಳು
ಎಲ್ಲ ತರಹದ ಉತ್ಪಾದನೆ, ಸೇವೆಗಳು, ಸಂಸ್ಕರಣೆ ಚಟುವಟಿಕೆಗಳು - ಆದರೆ ಸಮಾಜ ಬಾಹಿರ ಚಟುವಟಿಕೆಗಳಾದ ಮಾದಕ ವಸ್ತುಗಳ ತಯಾರಿ ಮಾಡುವ ಬಟ್ಟಿಖಾನೆಗಳಿಗೆ ಅವಕಾಶವಿಲ್ಲ. ಹೀಗಿದ್ದಾಗ್ಯೂ ಸಣ್ಣ ಮತ್ತು ಸ್ವತಂತ್ರವಾದ (ವಿಕೇಂದ್ರೀಕೃತ) ಉಪಘಟಕ ಮತ್ತು ಮಾತೃ ಘಟಕದ, 15 ಲಕ್ಷ ರೂಪಾಯಿಗಳಿಗೆ ಮೀರದ ಯೋಜನೆಗಳನ್ನು, ಅಧಿಕ ಉದ್ಯೋಗಾವಕಾಶ ಉತ್ಪತ್ತಿಯ ಉದ್ದೇಶದಿಂದ, ಆದ್ಯತೆ ನೀಡುತ್ತದೆ.
ಆಧಾರ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಯ ಅನ್ವಯ, ಪ್ರತಿ ವ್ಯಕ್ತಿಗೆ 25,000/- ರೂ.ಗಳವರೆಗಿನ ಸಾಲಕ್ಕೆ ಯಾವುದೇ ಮಾರ್ಜಿಕನ್ ಹಣ ಅಥವಾ ಕೊಲ್ಯಾಟರಲ್ ಸೆಕ್ಯುರಿಟಿ / ಮೂರನೇ ವ್ಯಕ್ತಿಯ ಗ್ಯಾರಂಟಿಯನ್ನು ಹಣ ಕೊಡುವ ಬ್ಯಾಂಕ್‌ಗಳು ಖಡ್ಡಾಯ ಮಾಡುವುದಿಲ್ಲ. ಆದರೆ ಈ ಸಾಲದಿಂದ ಮಾಡಿಕೊಂಡಿರುವ ಆಸ್ತಿಯ ಅಡವಿಡುವಿಕೆ ಮಾತ್ರ ಅವಶ್ಯಕ.
ಬಡ್ಡಿಯ ದರ
ಫಲಾನುಭವಿಗೆ ವಿಧಿಸುವ ಬಡ್ಡಿಯ ದರ / ಬ್ಯಾಂಕ್‌ಗಳಿಗೆ ವಿಶೇಷವಾಗಿ ರಿಸರ್ವ್‌ಬ್ಯಾಂಕ್ ಆಫ್ ಇಂಡಿಯಾ / ನಬಾರ್ಡ್‌ಗಳು ಆಗಾಗ ವಿಧಿಸುವ ನಿಯಮಗಳಂತೆ.
ಮರುಪಾವತಿ ಕಾಲಾವಧಿ
ಯೋಜನೆಯ ಹಣದ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ, ಸಾಲದ ಮರುಪಾವತಿಯ ಅವಧಿಯು 6 ರಿಂದ 12 ತಿಂಗಳ ಋಣ ಸ್ತಂಭನವನ್ನು ಸೇರಿಸಿಕೊಂಡು 3 ರಿಂದ 10 ವರ್ಷಗಳು.
ವಿಶೇಷ ಷರತ್ತುಗಳು
ಯೋಜನೆಯ ಸಾಧಾರಣ ನಿಯಮದಂತೆ (ಹೆಚ್.ಒ.ಸಿ.ಎಲ್ 40/೯೪.ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೃಷಿಯೇತರ ಪದಾರ್ಥಗಳ ವ್ಯಾಪಾರಕ್ಕೆ ಸಹಾಯ ಈ ಯೋಜನೆಯು ನೊಂದಣಿಯಾದ ಸ್ವಯಂಸೇವಾ ಏಜೆನ್ಸಿಗಳಿಗೆ (VA), ಸರ್ಕಾರಿ ಸಮಯಕ್ಕೆ ಸೇರದ ಸಂಸ್ಥೆಗಳಿಗೆ (NGOs) ಮತ್ತು ಇತರೆ ಗ್ರಾಮೀಣ ಮಹಿಳಾ ಉದ್ಯೋಗಿಗಳಿಂದ ತಯಾರಾದ ವಸ್ತುಗಳ ಮಾರಾಟದ ಪ್ರೊತ್ಸಾಹದಲ್ಲಿ ನಿರತವಾದ ಸಂಸ್ಥೆಗಳಿಗೆ ಸಾಲ ಸಹಾಯ ಮಾಡುವ ಕಲ್ಪನೆಯನ್ನು ಅನುಮೋದಿಸುತ್ತದೆ.
ಈ ಮೇಲ್ಕಂಡ ಯೋಜನೆಯ ಮುಖ್ಯಾಂಶಗಳು ಕೆಳಕಂಡಂತೆ :
- ಅರ್ಹತೆ ಸ್ವಯಂಸೇವಾ ಏಜೆನ್ಸಿಗಳಿಗೆ / ಸರ್ಕಾರಿ ಸಮಯಕ್ಕೆ ಸೇರದ ಸಂಸ್ಥೆಗಳಿಗೆ ಮತ್ತು ಇತರೆ ಪ್ರೋತ್ಸಾಹ ಕಾರ್ಯ ನಿರತ ಸಂಸ್ಥೆಗಳು ಸಹಕಾರ ಸಂಸ್ಥೆಗಳು, ಮಾರಾಟ ಸಂಸ್ಥೆಗಳ ಒಕ್ಕೂಟಗಳು ಈ ರೀತಿಯ ಗ್ರಾಮೀಣ ಮಹಿಳೆಯರ ತಯಾರಿಕಾ ಉತ್ಪನ್ನಗಳ ಮಾರಾಟದಲ್ಲಿ ಉದ್ಯುಕ್ತರಾಗಿರುವವು ಈ ಯೋಜನೆಯಡಿಯಲ್ಲಿ ಅರ್ಹತೆ ಪಡೆಯುತ್ತವೆ.
- ಅರ್ಹತಾ ಚಟುವಟಿಕೆಗಳು o ಮಾರುಕಟ್ಟೆಯ ಶಕ್ತ ತಂಡಗಳೊಡನೆ ಚೌಕಾಶಿ ಮಾಡಲು ಗ್ರಾಮೀಣ ಮಹಿಳೆಯರ ಶಕ್ತಿಯನ್ನು ಅಭಿವೃದ್ಧಿಪಡಿಸುವುದು. o ಹಿಂದಣ ಮತ್ತು ಮುಂದಣ ಕೊಂಡಿಗಳನ್ನು ಬೆಂಬಲಿಸುವುದು. o ಏಕೀಕೃತ ವ್ಯಾಪಾರ ಸೇವೆಗಳು - ಪರಿಶೀಲನೆ, ಕೊಳ್ಳುವುದು, ಮಾರಾಟ, ಜಾಹಿರಾತು, ಉತ್ಪಾದನೆ ಹಾಗೂ ಮಾರಾಟ, ಷೆಡ್ಡುಗಳ ನಿರ್ಮಾಣ, ಮಳಿಗೆಗಳು, ಗಲ್ಲಾಗಳು, ರ್ಯಾ ಕುಗಳು ಮುಂತಾದುವು, ನಮೂನೆ ಸಹಕಾರ, ಪ್ಯಾಕ್ ಮಾಡುವುದು, ಉತ್ಪನ್ನಕ್ಕೆ ನಾಮಕರಣ / ಹೆಸರು ಚೀಟಿ ಹಚ್ಚುವುದು, ತೂಕ ಮಾಡುವುದು ಮತ್ತು ಅಳತೆ ಮಾಡುವುದು, ಪರೀಕ್ಷಣೆ ಮತ್ತು ಇತರ ಪರಿಕರಗಳು ಮುಂತಾದುವು ಸೇರುತ್ತವೆ.
ಎಲ್ಲರಿಗೂ ಅನ್ವಯವಾಗುವಂತಹ ದಾಸ್ತಾನು ಸೌಲಭ್ಯ, ಶೈತ್ಯಾಗಾರಗಳು, ಉತ್ಪನ್ನಕ್ಕೆ ನಾಮಕರಣ, ಪ್ಯಾಕಿಂಗ್ ಮುಂತಾದ ಏಕ ರೀತಿಯ ವ್ಯಾಪಾರ ಚಟುವಟಿಕೆ ಆಧಾರ ಮತ್ತು ಮಾರ್ಜಿವನ್ ಬ್ಯಾಂಕಿನ ಶಿಸ್ತಿಗನುಸಾರ ಆಗಿಂದಾಗ ನಿಗಧಿತವಾದಂತೆ. ನಬಾರ್ಡ್ ಮರು ಧನ ಸಹಾಯ ನಬಾರ್ಡ್ ಬ್ಯಾಂಕ್ ಸಾಲದ 100% ನ್ನೂ ಮರುಪಾವತಿ ಮಾಡುತ್ತದೆ ಮತ್ತು ಈ ಮರು ಪಾವತಿಯು 10 ಲಕ್ಷಕ್ಕೆ ಮಾತ್ರ ಗರಿಷ್ಠ ಮಿತಿಯಾಗಿರುತ್ತದೆ. ಅನುದಾನ ಮೊತ್ತ / ಸಹಾಯ ಉತ್ತೇಜನಾ ಅನುದಾನವಾಗಿ ನೀಡುವು ಸಹಾಯದ ಮೊತ್ತ ಸಾಧಾರಣವಾಗಿ 5000/- ರೂ ಗಳಿಗೆ ಒಂದು ಮಹಿಳಾ ಉದ್ದಿಮೆದಾರಳಿಗೆ, ಸಂಬಂಧಪಟ್ಟ ಏಜೆನ್ಸಿಯಿಂದ, ಅಥವಾ ಕನಿಷ್ಠ ಮಾರಾಟದ ಒಟ್ಟುವಹಿವಾಟಾಗಿ ನಿಗದಿಸಲ್ಪಟ್ಟ 10 ಲಕ್ಷವನ್ನು 3 ವರ್ಷಗಳಲ್ಲಿ ಮುಟ್ಟುವ ಗುರಿ ಹೊಂದಿರುವುದರಲ್ಲಿ 25%, ಯಾವುದು ಕಡಿಮೆಯೋ ಅದು. ಬೇರೆ ರೀತಿಯಲ್ಲಿ ಹೇಳಬೇಕಾದರೆ ಇದರ ಅರ್ಥ ಉತ್ತೇಜನಾ ಅನುದಾನ ಸಹಾಯವು ಸಾಧಾರಣವಾಗಿ ಒಂದು ಏಜೆನ್ಸಿಗೆ 2.50 ಲಕ್ಷ ರೂಪಾಯಿಗಳಿಗೆ ಸೀಮಿತವಾಗಿರುತ್ತದೆ, ಅದೂ ಏಜೆನ್ಸಿಯು ಕನಿಷ್ಠ 50 ಮಹಿಳೆಯರನ್ನು ವ್ಯಕ್ತಿಶಃವಾಗಲಿ ಅಥವಾ ಗುಂಪುಗಳಲ್ಲಾಗಲಿ ಜೊತೆಗೂಡಿಸಲು ಸಮರ್ಥವಾದರೆ, ಮತ್ತು 10 ಲಕ್ಷ ರೂ.ಗಳ ವಹಿವಾಟು ಮಾಡಿ ಅದು ಮೂರು ವರ್ಷಗಳಲ್ಲಿ ತನ್ನ ಯಶಸ್ಸಿನ ಸಾಧ್ಯತೆಯನ್ನು ತೋರಿಸುವಂತಿದ್ದರೆ.
ಮೂಲ : ವಿಜಯ ಬ್ಯಾಂಕ್