ಹಸಿರು ಕ್ರಾಂತಿಯ ನಂತರ ಕೃಷಿಯಲ್ಲಿ ಅಗಾಧ ಬದಲಾವಣೆ ಆಗಿದೆ. ಹೊಸ ತಾಂತ್ರಿಕತೆಗಳ ಅಳವಡಿಕೆಯಿಂದ ಕೃಷಿ ಉತ್ಪಾದನೆಯು ಹೆಚ್ಚಾಗಿದೆ. ಆದರೆ ಬದಲಾವಣೆ ಕಂಡ ಕೃಷಿ ಈಗ ಹಲವಾರು ಸಮಸ್ಯೆಗಳಿಂದ ಕೂಡಿದ್ದು ಇವುಗಳ ನಿರ್ವಹಣೆಗೆ ಸಮಗ್ರ ಕಾಯಕಲ್ಪ ಅನಿವಾರ್ಯವೆನಿಸಿದೆ. ಈ ನಿಟ್ಟಿನಲ್ಲಿ ಹಲವು ಚಿಂತನೆಗಳೊಂದಿಗೆ ಪರಿಹಾರವನ್ನು ಗುರುತಿಸುವಲ್ಲಿ ಈ ಲೇಖನ ಗಮನ ಸೆಳೆಯುವುದು.
ಪ್ರಕೃತಿ ಸಂಪನ್ಮೂಲಗಳಾದ ಕೃಷಿ ಭೂಮಿ, ನೀರು ಹಾಗೂ ಸಸ್ಯ ಮತ್ತು ಜೀವ ಸಂಪತ್ತುಗಳು ಕಡಿಮೆಯಾಗುತ್ತಿರುವ ಹಾಗೂ ನಶಿಸುತ್ತಿರುವ ಸಂದರ್ಭದಲ್ಲಿ, ಕೃಷಿಯಲ್ಲಿ ಗುರುತರ ಬದಲಾವಣೆಗಳನ್ನು ತರದೇ ಇದ್ದರೆ, ಆಹಾರ ಭದ್ರತೆಯನ್ನು ಉತ್ಪಾದನೆಯನ್ನು ಸಾಧಿಸುವುದು ಕಷ್ಟ ಸಾಧ್ಯ. ದೇಶವು ಶೇ. ೧೦ ರಷ್ಟು ಒಟ್ಟು ದೇಸೀಯ ಉತ್ಪನ್ನ ಹೊಂದ ಬೇಕಾದಲ್ಲಿ ಶೇ. ೪ ರಷ್ಟು ಕೃಷಿ ಕ್ಷೇತ್ರದ ಬೆಳವಣಿಗೆ ಅತೀ ಅವಶ್ಯ ಎಂಬುದನ್ನು ಎಲ್ಲರೂ ತಿಳಿದಿರಬೇಕಾದ ಮಹತ್ತರ ಅಂಶ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಕೃಷಿಗೆ ಕಾಯಕಲ್ಪ -ಒಂದು ಚಿಂತನೆ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 12/31/2019