ಮಕ್ಕಳ ತೋಟವು ಗ್ರಾಮದ ರೂಪು ಬದಲಿಸಿತು
ಪಶ್ಚಿಮ ಮಿಡ್ನಾಪುರ ಬಲಿಯಘಟ್ಟಿ ಒಂದು ಬುಡಕಟ್ಟು ಜನರ ಗ್ರಾಮ ಅವರು ಕಡಿಮೆ ಆದಾಯದ ಗುಂಪಿಗೆ ಸೇರಿದವರು ಮೂಲ ಭೂತ ಸೌಕರ್ಯಗಳಾಧ ಆರೋಗ್ಯ ಮತ್ತು ಪೋಷಕಾಂಶಗಳ ಸೌಲಭ್ಯದಿಂದ ವಂಚಿತರಾದವರು. ಎನ್ ಪಿ ಎಂ ಎಸ್, ಒಂದು ಸ್ಥಳಿಯ ಸಂಘನೆ. ಅದು 2006, ರಿಂದಲೇ ಇಲ್ಲಿನ ಪರಿಸ್ಥೀತಿ ಬದಲಾಯಿಸಲು ಹೋರಾಟ ನೆಡೆಸಿದೆ.,ಡಿ ಆರ್ ಸಿ ಎಸ್ ಸಿ ಯು , ಎನ್ ಪಿ ಎಂ ಎಸ್ ಜತೆಗೂಡಿ ಪರಿಸರ ಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ತಿಳಿವು ಮತ್ತು ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿವೆ.
ಬಲಿಯಘಟ್ಟಿ ಪ್ರದೇಶದಲ್ಲಿ , ನರೆ ಮತ್ತು ಬರ, ಎರಡು ನಿಸರ್ಗದ ವಿನಾಶ ಕಾರಿ ಘಟನೆಗಳು ಪದೇ ಪದೇ ಬರುತ್ತವೆ. ಇಲ್ಲಿನ ಬಡಜನರು ಅವನ್ನು ಜೀವನದ ಅವಿಭಾಜ್ಯ ಅಂಗ ಎಂದು ಭಾವಿಸಿ ಅದರೊಂದಿಗೆ ಜೀವಿಸದೆ ಬೇರೆ ಹಾದಿಯೇಇಲ್ಲ. ಅವರ ಆಹಾರದಲ್ಲಿ ತರಕಾರಿ ಇರುವುದೆ ಇಲ್ಲ. ಜೂನ್ 2008 ರಲ್ಲಿ 200 ಪೊಟ್ಟಣ ತರಕಾರಿ ಬೀಜಗಳನ್ನು 30 ಮಕ್ಕಳಿಗೆ ಹಂಚಲಾಯಿತು.ಅವರಲ್ಲಿ 18 ಜನರು ತಮ್ಮ ಮನೆಯಂಗಳದಲ್ಲಿ ತರಕಾರಿ ತೋಟ ಬೆಳೆದರು. .
ಇತರರು ಮಾಡಿದ ಪ್ಯಯತ್ನವು ನೆರೆ ಬಂದು ವ್ಯರ್ಥವಾಯಿತು.. ಆ ಪೊಟ್ಟಣಗಳಲ್ಲಿ ಎಲೆಕೋಸು, ಪಡುವಲ,ಸೋರೆ,ಹೀರೆಕಾಯಿ, ಗೆಣಸು,ಕುಂಬಳ. ಹಾಗಲ ಕಾಯಿ, ಪಾಲಕ್ ಮೊದಲಾದ ಬೀಜಗಳಿದ್ದವು.ಅವು ಬೆಳೆದಾಗ ಅವರು ಅವನ್ನು ತಿನ್ನಲು ಹಿಂಜರಿದರು. ಏಕೆಂದರೆ ಅವರು ಯಾವತ್ತೂ ಅವನ್ನು ನೋಡಿರಲಿಲ್ಲ.ತರುವಾಯ, ತರಕಾರಿಗಳನ್ನು ಬೇಯಿಸಿಅದರಿಂದ ಅಡುಗೆ ಮಾಡಿ ಜನರಿಗೆ ಹಂಚಿ ಅವುಗಳನ್ನು ಜನಪ್ರಿಯಗೊಳಿಸಿತು. ಕಾಂಪೋಸ್ಟು ಮತ್ತು ವರ್ಮಿ ಕಾಂಪೋಸ್ಟು ಮಕ್ಕಳೆ ತಯಾರು ಮಾಡಿ ಅವನ್ನೆ ಭೂಮಿಯನ್ನು ಫಲವತ್ತು ಮಾಡಲು ಉಪಯೋಗಿಸಿದರು. ಸರಾಸರಿ 150ಕೆಜಿ ತರಕಾರಿಯನ್ನ ಪ್ರತಿಯೊಬ್ಬರೂ 3~4 ತಿಂಗಳಲ್ಲಿ ಪಡೆದಿದ್ದರು.ಮಕ್ಕಳು ಈ ಎಲ್ಲ ಚಟುವಟಿಕೆಗಳ ದಾಖಲೆ ಇಟ್ಟಿದ್ದರು ಮಾಡಿದ ಚಟುವಟಿಕೆಗಳು, ಕಂಡುಬಂದ ಬದಲಾವಣೆಗಳು,ನೆಡೆದ ಪ್ರಕ್ರಿಯೆಗಳು , ಕೀಟಗಳ ದಾಳಿ ಮತ್ತು ಅವುಗಳ ಲಕ್ಷಣ , ಸಸ್ಯಗಳ ಜೀವನ ಚಕ್ರ , ಉತ್ಪನ್ನದ ಪ್ರಮಾಣ ಮತ್ತು ಗುಣ ಮಟ್ಟ.ಮೊಳಕೆಯೊಡೆದ ದರ ,ಈ ಎಲ್ಲ ದಾಖಲೆಗಳಿಂದ ಮಕ್ಕಳಿಗೆ ಚಟುವಟಿಕೆಗಳ ಹಿಂದಿನ ವೈಜ್ಞಾನಿಕ ಮಹತ್ವ ಗೊತ್ತಾಯಿತು.
ಪರಿಸರ ಗುಂಪಿನ ಮಕ್ಕಳು ಮತ್ತು ಅವರ ತಾಯಿತಂದೆಯರಲ್ಲದೆ ಗ್ರಾಮದಲ್ಲಿನ ಇತರರಿಗೂ ತರಕಾರಿ ತಿನ್ನುವ ಅವಕಾಶ ಲಭಿಸಿದೆ.ಕಾರಣ ಮಕ್ಕಳು ತಾವು ಬೆಳೆದ ತರಕಾರಿಯನ್ನು ಒಪಯೋಗಿಸಕೊಂಡು ಹೆಚ್ಚಾದುದನ್ನು ತಿಳುವಳಿಕೆ ಅಭಿಯಾನದ ಅಂಗವಾಗಿ ಇತರರಿಗೂ ಹಂಚುವರು. ಇದರಿಂದ ಗ್ರಾಮದ ಜನರು ತಮ್ಮ ಹಿತ್ತಿಲಲ್ಲಿ ತರಕಾರಿ ಬೆಳೆಯುವುದರಿಂದ ಆಗುವ ಅನುಕೂಲಗಳನ್ನು ಕಂಡುಕೊಂಡರು
ಈ ಚಟುವಟಿಕೆಯನ್ನು ಇಂಡಿಯನ್ ಲೈಫ್ ಬೆಂಬಲಿಸಿದೆ.
ಮೂಲ:DRCSC news, Issue No. 3
ಕೊನೆಯ ಮಾರ್ಪಾಟು : 1/28/2020
ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ...
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.