অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾವಯವ ಕೃಷಿಯಲ್ಲಿ ಜಯರಾಮಯ್ಯ

ಸಾವಯವ ಕೃಷಿಯಲ್ಲಿ ಜಯರಾಮಯ್ಯ

ರಘುಪತಿ ಡಿ, ಕುದೂರು ದೇವರು ಸಶಕ್ತ ಕೈಕಾಲುಗಳನ್ನು ಕೊಟ್ಟಿದ್ದರೂ ಸೋಮಾರಿಗಳಾಗಿ, ಕೃಷಿಯೆಂದರೆ ಮೂಗು ಮುರಿದು ನಗರದ ಕಡೆ ಮುಖ ಮಾಡುವವರ ಮಧ್ಯೆ ಜಯರಾಮಯ್ಯ ವಿಭಿನ್ನವಾಗಿ ಎದ್ದು ಕಾಣಿಸುತ್ತಾರೆ.

ಅವರನ್ನು ಕೆಲವರು ಱವಿಕಲಚೇತನ' ಎಂದು ಗುರುತಿಸಿದರೂ ಅಮೂಲ್ಯ ಱಕೃಷಿ ಚೇತನ'ನಾಗಿ ಬೆಳೆದು ನಿಂತಿದ್ದಾರೆ. ಆಧುನಿಕತೆ ಮನೋಭಾವದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ನಿಜ ಅರ್ಥದಲ್ಲಿ ಮಣ್ಣಿನ ಮಗನಾಗಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಬಳಿಯ ಬೆಟ್ಟಹಳ್ಳಿಯಲ್ಲಿ ಈ ಕೃಷಿಕ ಸೃಷ್ಟಿಸಿರುವ ಕೃಷಿ ಲೋಕ, ತಮ್ಮ ಬೇಸಾಯದ ಕ್ರಮದಲ್ಲಿ ಅಳವಡಿಸಿಕೊಂಡಿರುವ ವಿಶಿಷ್ಟ ಸುಧಾರಣೆಗಳು ಎಲ್ಲರನ್ನೂ ಆಕರ್ಷಿಸುತ್ತದೆ. ತುಂಬು ಅವಿಭಕ್ತ ಕುಟುಂಬದ ಜಯರಾಮಯ್ಯ, ಅಂಗವೈಕಲ್ಯ ಮೆಟ್ಟಿ ನಿಂತು ಬೇಸಾಯದಲ್ಲಿ ಬದುಕು ಕಟ್ಟಿಕೊಂಡಿರುವ ಶ್ರಮಜೀವಿ.

ಒಂದೊಮ್ಮೆ ಸಾಂಪ್ರದಾಯಿಕ ಬೇಸಾಯ ಬಿಟ್ಟು ಆಧುನಿಕ ಕೃಷಿ ಅನುಸರಿಸಿ ನಷ್ಟ ಅನುಭವಿಸುತ್ತೀಯ ಎಂದು ಎಚ್ಚರಿಸಿದ ಗ್ರಾಮದ ಎಷ್ಟೋ ಸಾಂಪ್ರದಾಯಿಕ ರೈತರು, ಬೆಟ್ಟಹಳ್ಳಿ ಹಾಗೂ ಸುತ್ತಲಿನ ಕೃಷಿಕರು ಇಂದು ತಮ್ಮ ಭೂಮಿಯಲ್ಲಿ ಆಧುನಿಕತೆಯನ್ನು ಆಳವಡಿಸಿಕೊಳ್ಳುವ ಮುನ್ನ ಜಯರಾಯ್ಯ ಅವರನ್ನು ಭೇಟಿಯಾಗಿ ಮಾಹಿತಿ, ಸಲಹೆ ಪಡೆದು ಮುಂದುವರಿಯುತ್ತಾರೆ!

ಅಡ್ಡಿಯಾಗದ ವೈಕಲ್ಯ:

ದೈಹಿಕವಾಗಿ ಕೃಷಿಕ ಜಯರಾಮಯ್ಯ ಅವರು ಒಂದಿಷ್ಟು ನ್ಯೂನತೆ ಹೊಂದಿದ್ದರೂ ಅದನ್ನೇ ಸವಾಲಾಗಿ ಸ್ವೀಕರಿಸಿ ಎಲ್ಲ ಕೃಷಿ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಭಾಗವಹಿಸುತ್ತಾರೆ. ಬೆಳಗ್ಗೆ ನಾಲ್ಕಕ್ಕೆ ಶುರುವಾಗುವ ಇವರ ಕೃಷಿ ಕಾಯಕ ಮುಗಿಯುವುದು ಸಂಜೆ ಏಳು ಗಂಟೆಯಾದ ಮೇಲೆಯೇ.

ಟ್ರಾಕ್ಟರ್ ಚಾಲನೆ, ಗುದ್ದಲಿ ಕೆಲಸ, ಔಷದ ಸಿಂಪಡಣೆ ಮುಂತಾದ ಬೇಸಾಯಕ್ಕೆ ಸಂಬಂದಿಸಿದ ಎಲ್ಲ ಕೆಲಸಗಳನ್ನು ತಾವೇ ನಿರ್ವಹಿಸುವ ಇವರಿಗೆ, ಕಷ್ಟಕರ ಕಾರ್ಯಗಳಿಗೆ ಮಾತ್ರ ಸಹೋದರ ಗೋವಿಂದರಾಜು ನೆರವು ನೀಡುತ್ತಾರೆ. ದೈಹಿಕ ವಿಕಲತೆಯನ್ನು ದೂರುತ್ತ ಕೂರುವ ಬದಲಿಗೆ ಪರಿಶ್ರಮ ಬೇಡುವ ಕೃಷಿ ಕಾಯಕದಲ್ಲಿ ಬದುಕು ಕಟ್ಟಿಕೊಂಡಿರುವುದು ನಿಜಕ್ಕೂ ದೊಡ್ಡ ಸಾಧನೆ.

ಸರಕಾರ ಎಷ್ಟೆಲ್ಲ ಸೌಲಭ್ಯ, ಸಬ್ಸಿಡಿ ನೀಡಿದರೂ ಕೃಷಿಯಿಂದ ವಿಮುಖರಾಗುವ ದೈಹಿಕ ನ್ಯೂನತೆ ರಹಿತರ ನಡುವೆ ಬೇಸಾಯದಲ್ಲೇ ಸ್ವಾವಲಂಬಿ ಜೀವನದ ಸವಿ ಅನುಭವಿಸುತ್ತಿದ್ದಾರೆ ಜಯರಾಮಯ್ಯ. ಸಾಲ ಬಾಧೆ ಸೇರಿದಂತೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕೃಷಿಕರಿಗೆ ಇವರು ಸೂರ್ತಿಯ ಸೆಲೆಯಾದರೆ ಅಚ್ಚರಿಯಿಲ್ಲ.

ಹೈನುಗಾರಿಕೆಯಲ್ಲೂ ಕಮಾಲ್:

ಕೃಷಿಯಲ್ಲಿ ಮಾತ್ರವಲ್ಲ ಹೈನುಗಾರಿಕೆಯಲ್ಲೂ ರೈತ ಜಯರಾಮಯ್ಯ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಅಳಿದು ಹೋಗುತ್ತಿರುವ ನಾಟಿ, ಸೀಮೆ ಹಸುಗಳು ಹಾಗೂ ಎಮ್ಮೆಗಳನ್ನು ಇವರು ಸಾಕಿದ್ದು, ಇವರ ಹೈನುಗಾರಿಕೆಯ ಉಪ ಕಸುಬು ಬಹು ಉಪಕಾರಿಯಾಗಿದೆ. ಹಾಲಿನ ಮಾರಾಟದಿಂದ ಬರುವ ಆದಾಯ ಮನೆಯ ಖರ್ಚಿಗೆ ಉಪಯೋಗವಾದರೆ, ರಾಸುಗಳು ಕೊಡುವ ಸಾವಯವ ಗೊಬ್ಬರ ಬೆಳೆಗಳಿಗೆ ಬಳಕೆಯಾಗುತ್ತದೆ. ಹಟ್ಟಿ ಗೊಬ್ಬರ ಅಕ ಇಳುವರಿಯ ಜತೆಗೆ ಮಣ್ಣಿನ ಫಲವತ್ತತೆಯನ್ನೂ ವೃದ್ಧಿಸುತ್ತದೆ. ಇದೆಲ್ಲದರ ಜತೆಗೆ ಇವರು ನಾಟಿಕೋಳಿಗಳನ್ನೂ ಸಾಕುತ್ತಿರು ರೈತ ಜಯರಾಮಯ್ಯ ಅವರ ದೂ.ಸಂ.9740294449.

ಬಂಗಾರದ ಮನುಷ್ಯ:

ಬೆಟ್ಟಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಬಹುತೇಕ ಕೃಷಿಕರಲ್ಲಿ ಜಯರಾಮಯ್ಯ ಬಗ್ಗೆ ಗೌರವ ಭಾವನೆಯಿದೆ. ಇದಕ್ಕೆ ಕಾರಣ, ಇವರ ಸರಳತೆ ಮತ್ತು ಸನ್ನಡತೆ. ಜಯರಾಮಯ್ಯ ಯಾವುದಾದರೂ ಬೆಳೆ ಬೆಳೆದಿದ್ದಾರೆಂದರೆ ಸುತ್ತಲಿನ ರೈತರು ಅಲ್ಲಿಗೆ ಬಂದು, ಆ ಬೆಳೆಯನ್ನು ನೋಡಿ ಅವಲೋಕಿಸಿ ತಾವೂ ಆ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸರ್ವೇಸಾಮಾನ್ಯ. ಇವರ ಜೀವನವನ್ನು ಅವಲೋಕಿಸಿದರೆ ಱಬಂಗಾರದ ಮನುಷ್ಯ' ಸಿನಿಮಾ ನೆನಪಾಗದಿರದು. ಆಧುನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗುತ್ತ ಇವರು ಯಶಸ್ಸಿನ ದಾರಿ ಹಿಡಿದಿರುವುದು ಕುತೂಹಲಕಾರಿ.

ಕೆಲಸ ಮಾಡುವ ಮನಸ್ಸು ಹಾಗೂ ಸಾಸುವ ಛಲವಿದ್ದರೆ ಮಾನವನ ಸಾಧನೆಗೆ ಏನೂ ಅಡ್ಡಿಯಾಗದು. ನನಗೆ ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ಒಲವು ಜಾಸ್ತಿ. ನನ್ನ ಆಸೆಗೆ ನನ್ನ ಮಡದಿ ಲಕ್ಷ್ಮೀ ಹಾಗೂ ತಮ್ಮ ಗೋವಿಂದರಾಜು ಮತ್ತು ಕುಟುಂಬದ ಸದಸ್ಯರು ಸದಾ ಸಹಕಾರ ನೀಡುತ್ತ ಬಂದಿದ್ದಾರೆ. ನಾನು ಏನೇ ಸಾಸಿದ್ದರೂ ಇದರಲ್ಲಿ ನನ್ನ ಕುಟುಂಬದವರ ಸಹಕಾರದ ಪಾಲೇ ಹೆಚ್ಚು.

 

ಮೂಲ: ಜಯರಾಮಯ್ಯ, ಪ್ರಗತಿಪರ ಕಷಿಕ, ಬೆಟ್ಟಹಳ್ಳಿ

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate