অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮುಖ್ಯ ಉದ್ದೇಶಗಳು

ಮುಖ್ಯ ಉದ್ದೇಶಗಳು

ಸ್ಥಿಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿ ಮಣ್ಣಿನ ಫಲವತ್ತತೆಯನ್ನು ಸ್ಥಿರವಾಗಿ ಕಾಪಾಡುವುದು.

  • ಮಣ್ಣಿನ ಆರೋಗ್ಯ ಮತ್ತು ಉತ್ಪಾದಕತೆಯನ್ನು ಸವಯವ ಮತ್ತು ಜೈವಿಕ ಗೊಬ್ಬರಗಳ ಬಳಕೆಯಿಂದ ಅಭಿವೃದ್ಧಿಪಡಿಸುವುದು.
  • ಕೀಟ, ರೋಗ ಮತ್ತು ಕಳೆಗಳನ್ನು ಜೈವಿಕ ಹಾಗೂ ಸಸ್ಯಜನ್ಯಗಳ ಬಳಕೆಯಿಂದ ನಿರ್ವಹಣೆ ಮಾಡುವುದು.
  • ಮಾನವ ಮತ್ತು ಜಾನುವಾರುಗಳ ಅವಶ್ಯಕತೆಗನುಗುಣವಾಗಿ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರವನ್ನು ಉತ್ಪಾದಿಸುವುದು.
  • ಸಮಗ್ರ ಬೆಳೆ ಪದ್ಧತಿಗಳು, ಬೆಳೆ ಪರಿವರ್ತನೆಮ ಅಂತರ ಬೆಳೆಗಳು, ಹೊದಿಕೆ ಬೆಳೆಗಳು ಮತ್ತು ಮಿಶ್ರ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.
  • ಮಿಶ್ರ ಕೃಷಿ ಅಂದರೆ ಬೆಳೆಗಳ ಉತ್ಪಾದನೆಯ ಜೊತೆಗೆ ಹೈನುಗಾರಿಕೆ, ಕೋಳಿಸಾಕಾಣಿಕೆ, ಇತ್ಯಾದಿ ಉಪ ಕಸುಬುಗಳನ್ನು ಒಳಗೊಂಡಂತೆ ಕೃಷಿಯನ್ನು ಮಾಡುವುದು.
  • ಎಲ್ಲಾ ಕೃಷಿ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವುದು.

ಸಾವಯವ ಕೃಷಿಯ ಮೂಲ ತತ್ವಗಳು

  • ಸುಸ್ಥಿರ ಸ್ವಾವಲಂಬಿ ಬೇಸಾಯ ಪದ್ಧತಿ : ಸಾವಯವ ಕೃಷಿಯಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹಾಗೂ ಭೂಮಿಯಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಭೂಮಿಯಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ನಿರಂತರವಾಗಿ ಬಹಳ ಕಾಲದವರೆಗೆ ಕಾಪಾಡುವುದು.
  • ಜೀವನ ವೈವಿಧ್ಯತೆ ಕಾಪಾಡುವುದು :  ಆಯಾ ಪ್ರದೇಶ, ಪರಿಸರ ಮಣ್ಣುಗಳಿಗೆ ಅನುಗುಣವಾಗಿ ತಳಿಗಳನ್ನು ಬಳಸಿ ಕೃಷಿ ಮಾಡುವುದರಿಂದ ಸಸ್ಯಗಳ, ಮಾನವ, ಪ್ರಾಣಿ ಸಂಕುಲ, ಸೂಕ್ಷ್ಮಾಣು ಜೀವಿಗಳ ಪ್ರಕೃತಿ ಸಂಬಂಧ ಸಮತೋಲನವನ್ನು ಕಪಾಡಬಹುದು.
  • ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವುದು : ನೈಸರ್ಗಿಕವಾಗಿ ದೊರೆಯುವ ವಸ್ತುಗಳ ಸಾವಯವ ಗೊಬ್ಬರ ಹಾಗೂ ಇತರೆ ಕೃಷಿ ತ್ಯಾಜ್ಯಗಳ ಬಳಕೆ, ವಿವಿಧ ಬೆಳೆ ಪದ್ಧತಿಗಳಿಂದ ಮತ್ತು ಮಿಶ್ರ ಕೃಷಿ ಪದ್ಧತಿಗಳ ಅಳವಡಿಕೆಯಿಂದ ಮಣ್ಣಿನ ಫಲವತ್ತತೆ ಮತ್ತು ಉತ್ಪಾದನೆಯನ್ನು ಕಾಪಾಡುವುದರೊಂದಿಗೆ ಮಣ್ಣಿನ ಭೌತಿಕ, ರಾಸಾಯನಿಕ  ಹಾಗೂ ಜೈವಿಕ ಗುಣಗಳನ್ನು ಸಂರಕ್ಷಿಸಿಕೊಳ್ಳಬಹುದು.
  • ಕೃಷಿ ಸಂಪನ್ಮೂಲಗಳ ಸಂರಕ್ಷಣೆ : ಮಣ್ಣು ಮತ್ತು ನೀರು ಸಂರಕ್ಷಣೆಯಿಂದ ಸವಕಳಿ ತಡೆಗಟ್ಟುವುದರ ಮೂಲಕ ನೈಸರ್ಗಿಕ ಸಂಪನ್ಮೂಲಗಳು ನಶಿಸಿಹೊಗದಂತೆ ಕಾಪಾಡಬಹುದು.
  • ರೋಗ ಹಾಗೂ ಕೀಟಗಳ ನಿರ್ವಹಣೆ : ರೋಗ ನಿರೋಧಕ ತಳಿಗಳ ಬಳಕೆ ಬೆಳೆಗಳ ಪರಿವರ್ತನೆ, ಜೈವಿಕ ಪೀಡೆ ನಾಶಕ, ಪರೋಪಜೀವಿ, ಪರಾವಲಂಬಿ ಜೀವಿ, ಸೂಕ್ಷ್ಮ ಜೀವಿಗಳು, ಜೈವಿಕ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳ ಒಳಕೆಯಿಂದ ಕೀಟ ಮತ್ತು ರೋಗಗಳನ್ನು ತಡೆಗಟ್ಟಿ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು.

ಮೂಲ :

ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate