ವಿಳಾಸ | ಸುಬ್ಬಾರಾವರ ಕೃಷಿಕೇಂದ್ರ |
---|---|
ಸ್ಥಳ | ಮಂಗನಕುಡಿಗೆ, ತೀರ್ಥಹಳ್ಳಿ |
ಕೃಷಿಕ | ಶ್ರೀ ಸುಬ್ಬಾರಾವ್ |
ಬೆಳೆ | ಅಡಿಕೆ, ಮೆಣಸು ಮತ್ತು ಇತರೆ |
ಕೃಷಿ ಭೂಮಿ | 6 ಎಕರೆಗಳು |
ವರದಿಗಾರ | ಶ್ರೀ ರಘು |
ದಿನಾಂಕ | Nov 9, 2013 |
ಎಂ.ಎಸ್.ಸುಬ್ಬಾರಾವರವರು ತಮ್ಮ ಜೀವನವಿಡೀ ರೈತರಾಗಿಯೇ ಜೀವನ ನಡೆಸಿದ್ದು, ಕಳೆದ 5 ವರ್ಷಗಳಿಂದ ಸಾವಯವ ಕೃಷಿ ರೂಢಿಸಿಕೊಂಡಿದ್ದಾರೆ. ಇವರ 6 ಎಕರೆ ಭೂಮಿಯನ್ನು ಈಗ ಇವರ ಮಗ ನಿರಂಜನರವರು ನೋಡಿಕೊಳ್ಳುತ್ತಿದ್ದಾರೆ. ಇವರ ಮೂಲ ಬೆಳೆಗಳು ಅಡಿಕೆ ಮತ್ತು ಮೆಣಸು. ನಿರಂಜನರವರು ತೀವ್ರ ಆಸಕ್ತಿಯಿಂದ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರು ಹೊಲದಲ್ಲಿನ ವಸ್ತುಗಳನ್ನು ಸಾಗಿಸಲು ಸ್ವತಃ ತಾವೇ ಮೋಟಾರ್ ಬಂಡಿಯ ವಿನ್ಯಾಸ ಮತ್ತು ನಿರ್ಮಾಣವನ್ನು ಮಾಡಿದ್ದು, ಅದರಿಂದಾಗಿ ಹೊಲದಲ್ಲಿ ಕೆಲಸ ಮಾಡುವವರ ಕಷ್ಟ ನಿವಾರಣೆಯಾಗಿದೆ. ಇವರು ಸಾವಯವ ಪ್ರಮಾಣ ಪತ್ರ ಪಡೆಯಲು ಕೂಡಾ ಪ್ರಯತ್ನಿಸುತ್ತಿದ್ದಾರೆ.
ಇವರು ನಮಗೆ ಇರುವೆಗಳ ವರ್ತನೆಯ ಬಗ್ಗೆಯೂ ಪ್ರಬುಧ್ದ ಪರಿಚಯ ನೀಡಿದರು. ಇವರು ಹೇಳುವುದು, “ಇರುವೆಗಳಿಂದ ಮುಕ್ತಿ ಪಡೆಯಲು, ಅವುಗಳಿಗೆ ಸರಿಯಾಗಿ ಆಹಾರ ನೀಡಬೇಕು. ಆಗ ಅವುಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗುವುದರಿಂದ ಹಿಂದಿರುಗಿ ಬರುವದಿಲ್ಲ. ಆದ್ದರಿಂದ ಇರುವೆಗಳು ತುಂಬಾ ಇದ್ದಲ್ಲಿ ಅಕ್ಕಿ ಹಿಟ್ಟು ಅಥವಾ ಸಕ್ಕರೆಯನ್ನು ಹಾಕಬೇಕು”. ಮತ್ತೊಂದು ಕುತೂಹಲಕಾರಿ ಸಂಗತಿಯೆನೆಂದರೆ, ಇರುವೆಗಳು ಜಿರಳೆಗಳ ಮೊಟ್ಟೆಗಳನ್ನು ತಿನ್ನುವುದರಿಂದ ಮನೆಯಲ್ಲಿ ಅವುಗಳ ಸಂತತಿಯನ್ನು ನಿಯಂತ್ರಣದಲ್ಲಿಡುತ್ತವೆ.
ಇದಲ್ಲದೆ, ಇವರು ಸಾವಯವ ಕೃಷಿಯ ಕುರಿತಾದ ಕುತೂಹಲಕಾರಿ ಸಂಗತಿಗಳನ್ನೂ ಹಂಚಿಕೊಂಡರು. ಇವರು ಹೇಳುವುದೇನೆಂದರೆ ಸಾವಯವ ಕೃಷಿಕನು ರಾಸಾಯನ ಮತ್ತು ಕೀಟನಾಶಕಗಳನ್ನು ಬಳಿಸುವ ಕೃಷಿಕನಿಗಿಂತ ಅಪಾರ ಪರಿಶ್ರಮ ಪಡಬೇಕಾಗುತ್ತದೆ. ಉದಾಹರಣೆಗೆ, ಕೀಟಗಳನ್ನು ತಡೆಯಲು ರೈತನು ಒಂದೇ ದಿನದಲ್ಲಿ, ತನ್ನ ಗದ್ದೆಯಲ್ಲೆಲ್ಲಾ ಕೀಟನಾಶಕವನ್ನು ಹೊಡೆದು ಮನೆಗೆ ಹೋಗಿ, ಟಿವಿ ನೋಡುತ್ತಾ ವಿಶ್ರಾಂತಿ ಪಡೆಯಬಹುದು. ಆದರೆ, ಸಾವಯವ ರೈತ ತೀವ್ರ ಪರಿಶ್ರಮದಿಂದ ಸಾವಯವ ಗೊಬ್ಬರವನ್ನು ತಯಾರಿಸುತ್ತಾನೆ, ಅದಕ್ಕಾಗಿ ಜಾನುವಾರುಗಳ ಪಾಲನೆಯನ್ನೂ ಮಾಡುತ್ತಾನೆ. ಸುಗ್ಗಿಯ ಸಮಯದಲ್ಲೂ ಕೂಡಾ, ಸಾವಯವ ರೈತನಿಗೆ ಒಂದೇ ಋತುವಿನಲ್ಲಿ ಮೂರು ಬಾರಿ ಕೆಲಸಗಾರರು ಬೇಕಾಗುತ್ತಾರೆ ಏಕೆಂದರೆ, ಒಂದೇ ಮೆಣಸಿನ ಬಳ್ಳಿಯಲ್ಲಿ ವಿವಿಧ ಭಾಗಗಳು ವಿವಿಧ ಸಮಯದಲ್ಲಿ ಕೊಯ್ಲಿಗೆ ಬರುತ್ತವೆ. ಅದೇ, ಕೀಟನಾಶಕಗಳನ್ನು ಬಳಸುವ ರೈತನು ಒಂದೇ ಬಾರಿಗೆ, ಒಂದೇ ಸಮಯಕ್ಕೆ ಕೊಯ್ಲಿನ ಕೆಲಸವನ್ನು ಮುಗಿಸುತ್ತಾನೆ. ಈಗ ನೀವು ಯೋಚಿಸಬಹುದು, “ಹಾಗಾದರೆ ಸಾವಯವ ಕೃಷಿಯು ಏಕೆ ಬೇಕು?” ಎಂದು. ಏಕಂದರೆ, ಸಾವಯವ ಕೃಷಿಯಿಂದ ಬೆಳೆದ ಬಳ್ಳಿ ರಾಸಾಯನದಿಂದ ಬೆಳೆದ ಬಳ್ಳಿಗಿಂತ ಐದು ವರ್ಷ ಹೆಚ್ಚು ಕಾಲ ಬಾಳುತ್ತದೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 10/26/2019
ಒದೆಕರ್ ತೋಟ, ತುಮಕೂರು ಇದರ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್...