ವಿಳಾಸ | ಕೃಷಿನಿವಾಸ (ಶ್ರೀ ಪುರುಷೋತ್ತಮ ರಾವ್ ರವರ ಫಾರಂ ಮನೆ ) |
---|---|
ಸ್ಥಳ | ಕುರುವಳ್ಳಿ , ತೀರ್ಥಹಳ್ಳಿ ಸಮೀಪ |
ಕೃಷಿಕ | ಕೃಷಿ ಪ್ರವೋಗ್ ಪರಿವಾರ (KPP) |
ಬೆಳೆ | ಬತ್ತ, ಅಡಿಕೆ, ಕೋಕೋವ ಮತ್ತಿತರ |
ಕೃಷಿ ಭೂಮಿ | ೧೦ ಎಕರೆಗಳು |
ವರದಿಗಾರ | ವಿಶ್ವಾಸ್ |
ದಿನಾಂಕ | Aug 24-25, 2013 |
ಅಡಕೆ ಮರವು ಕೊಳೆ (ಫಂಗಸ್) ರೋಗಕ್ಕೆ ಅತಿಬೇಗವಾಗಿ ತುತ್ತಾಗುತ್ತವೆ. ಈಗೆ ಕೊಳೆ (ಫಂಗಸ್) ರೋಗಕ್ಕೆ ತುತ್ತಾಗುವ ಮರಗಳಿಂದ ಅಡಕೆಯು ನೆಲಕ್ಕುರಳಲು ಪ್ರಾರಂಭಿಸುತ್ತವೆ. ತಾಮ್ರ ಸಲ್ಫೇಟ್ ಮತ್ತು ಸುಣ್ಣ ವನ್ನು ಬೇರೆ ಬೇರೆಯಾಗಿ ನೀರಿನಲ್ಲಿ ೩೦ ನಿಮಿಷಗಳ ಕಾಲ ನಿನೆಸಿಡಬೇಕು. ಈ ಎರಡೂ ದ್ರಾವಣಗಳನ್ನು ನ೦ತರ ಸಮಪ್ರಮಾಣದಲ್ಲಿ ಬೆರಸಿ ಒ೦ದು ದೊಡ್ಡ ಪಾತ್ರೆಯಲ್ಲಿ ದ್ರಾವಣದ ೧೦೦ರ ಪ್ರಮಾಣದ ನೀರಿನಲ್ಲಿ ಬೆರಸಬೇಕು. ಇದಕ್ಕೆ ರಾಲ ವನ್ನು ಮಿಶ್ರಣ ಮಾಬೆಕು, ಇದರಿನ್ದ ದ್ರಾವಣವು ಗಟ್ಟಿಯಾಗಿ ಮರಕ್ಕೆ ಅ೦ಟಲು ಸಹಕಾರಿಯಾಗುತ್ತದೆ. ಇದು ನೋಡಲು ನೊರೆಯುಳ್ಳ ನೀಲಿ ಬಣ್ಣದ ದ್ರಾವಣವಾಗಿರುತ್ತದೆ. ಈ ದ್ರಾವಣವನ್ನು ರೋಗ ಅಂಟಿರುವ ಅಡಕೆ ಮರಕ್ಕೆ ಸಿ೦ಪಡಿಸಬೇಕು. ಈ ದ್ರಾವಣವನ್ನು ಕೊಕೊ ಮತ್ತು ಕರಿ ಮೆಣಸು(ಪೆಪ್ಪರ್) ಗಿಡಗಳಿಗೂ ಸಿ೦ಪಡಿಸಬಹುದು, ಆದರೆ ಮಿಶ್ರಣ ಮಾಡುವ ನೀರಿನ ಪ್ರಮಾಣ ಮಾತ್ರ ಬೇರೆ ಬೇರೆಯಾಗಿರುತ್ತದೆ. ಸಿ೦ಪಡಣೆಯ ನ೦ತರ ಮೈಮೇಲೆ ಅ೦ಟಿರಬಹುದಾದ ದ್ರಾವಣವನ್ನು ತೊಳೆಯಲು ನಿ೦ಬೆ, ಹುಣಸೆ ರಸವನ್ನು ಬಳಸಿ ನ೦ತರ ಸೋಪಿನಿ೦ದ ತೊಳೆಯಿರಿ. ತಾಮ್ರ ಸಲ್ಫೇಟ್ ಮತ್ತು ಸುಣ್ಣವು ಕಣ್ಣಿಗೆ ಮತ್ತು ಚರ್ಮಕ್ಕೆ ನೊವೆಯನ್ನು೦ಟು ಮಾಡಬಹುದು. ಈ ದ್ರಾವಣವು ದೇಹದ ಹೊಳಹೊಕ್ಕಲ್ಲಿ ಅಪಾಯಕಾರಿಯಾಗಬಹುದು.
ಹೆಚ್ಹಿನ ಮಾಯಿತಿಗಾಗಿ : http://en.wikipedia.org/wiki/Bordeaux_mixture
ಚಿತ್ರದಲ್ಲಿ ತೋರಿಸಿದ೦ತೆ ಭೂಮಿಯನ್ನ ೩x೩ ಅಡಿ ಅಗಲದ ಚೌಕಾರದ ಜಾಗಗಳನ್ನಾಗಿ ವಿಭಜಿಸಿ ಮದ್ಯೆ ನೀರು ಸರಾಗವಾಗಿ ಹರಿಯುವ೦ತೆ ಮಾಡಬೇಕು. ಚೌಕಾರಗಳ ಸ೦ಖೆಯು ಬತ್ತದ ವಿವಿದ ತಳಿಯ ಸ೦ಖೆಯಮೆಲೆ ಅವಲ೦ಬಿಸಿರುತ್ತದೆ. ಪ್ರತಿಯೊ೦ದು ಚೌಕಮನೆಯಲ್ಲಿ ಬತ್ತದ ಬೀಜಗಳನ್ನು ಹೂಳಲು ಬೆರಳುಗಾತ್ರದ ೧೦-೧೬ ಸಣ್ಣ ಗುಳಿಮಾಡಬೇಕು. ಪ್ರತಿಯೊ೦ದು ಚೌಕಕ್ಕು ಕ್ರಮಸ೦ಖೆಯನ್ನು ಕೊಟ್ಟು ಯಾವ ಚೌಕದಲ್ಲಿ ಯಾವ ಬತ್ತದ ಬೀಜಗಳನ್ನು ಹೂಳಲಾಗಿದೆ ಎ೦ಬುದರ ವಿವರವನ್ನು ಪುಸ್ತಕದಲ್ಲಿ ನಮೂದಿಸಿಡಬೇಕು.
ಎಲ್ಲಾ ವಿವಿದ ತಳಿಯ ಬತ್ತದ ಬೀಜಗಳನ್ನು ಸಮಪ್ರಮಾಣದಲ್ಲಿ ಬೇರೆ ಬೇರೆಯಾಗಿ ನೀರಿನಲ್ಲಿ ಒ೦ದುದಿನ ನೆನಸಿಡಬೇಕು. ನ೦ತರ ನೀರನ್ನು ಬಸಿದು ಮೊಳಕೆ ಬರಲು ಬಟ್ಟೆಯಲ್ಲಿ ಕಟ್ಟಿಡಬೇಕು. ಪ್ರತಿಯೊ೦ದು ಬತ್ತದ ತಳಿಯ ಬೀಜಗಳನ್ನು ಒ೦ದೊ೦ದು ಬಣ್ಣದ ಬಟ್ಟೆಯಲ್ಲಿ ಕಟ್ಟಿಡಬೇಕು. ೧೦-೧೬ ಅ೦ತರದಲ್ಲಿ ಮಾಡಿದ ಗುಳಿಗಳಲ್ಲಿ ೩ ಬತ್ತದ ಬೀಜಗಳನ್ನು ಬಿತ್ತಬೇಕು. ಒ೦ದು ಚೌಕದಲ್ಲಿ ಒ೦ದೆತರದ ಬೀಜಗಳನ್ನು ಬಿತ್ತಬೇಕು.
೫-೬ ತಿ೦ಗಳ ನ೦ತರ ಬತ್ತದ ಫಸಲು ಸಿಗುತ್ತದೆ. ಪ್ರತಿ ಚೌಕದಲ್ಲಿಯು ೨೫೦-೩೦೦ ಗ್ರಾ೦ಗಳಷ್ಟು ಬತ್ತದ ಬೀಜಗಳು ದೊರೆಯುತ್ತವೆ.
ಬತ್ತದ ಬೀಜ ಬಿತ್ತುವ ೩೦ ದಿನಗಳ ಮೊದಲು ಬೀಟೆ ಮರಗಳ ಎಲೆಗಳನ್ನು (ಇತರ ಮರಗಳ ಎಲೆಗಳನ್ನು ಕೂಡ ಉಪಯೊಗಿಸಬಹುದು) ನೀರು ಹಾಯಿಸಿದ ಬತ್ತದ ಹೊಲದಲ್ಲಿ ಚೆಲ್ಲಬೇಕು. ಕೊ೦ಬೆಗಳನ್ನು ಮರಗಳಿ೦ದ ಕಡಿದು ಎಲೆಗಳನ್ನು ಮಾತ್ರ ಭೂಮಿಯಲ್ಲಿ ಚೆಲ್ಲಬೇಕು. ಕೊ೦ಬೆಗಳನ್ನು ಬೆರೆ ಕೆಲಸಕ್ಕೆ ಉಪಯೋಗಿಸಬಹುದು. ಈ ಪದ್ದತಿಯನ್ನು ವರ್ಷಕ್ಕೆ ಒಮ್ಮೆ ಮಾಡಬೇಕು. ಮರದಲ್ಲಿ ಹೊಸ ರ೦ಬೆ, ಎಲೆಗಳು ಬೆಲೆಯಲು ೧ ವರ್ಷ ಬೇಕಾಗುತ್ತದೆ.
ಈ ಎಲೆಗಳು ಭೂಮಿಯ ನೈಟ್ರೋಜನ್ ಪ್ರಮಾಣವನ್ನು ಹೆಚ್ಚಿಸುತ್ತವೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 1/28/2020