ಜೈವಿಕ ಗೊಬ್ಬರಗಳು ಸೂಕ್ಷ್ಮಾಣುಜೀವಿಗಳಿಂದ ತಯಾರಿಸಲ್ಪಡುತ್ತವೆ. ಇವು ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳ್ನು ಗಿಡಕ್ಕೆ ಒದಗಿಸುವಲ್ಲಿ ಸಹಾಯಕವಾಗಿದೆ. ಜೊತೆಗೆ ಸಸ್ಯ ಬೆಳವಣಿಗೆಗೆ ಪ್ರಚೋದಿಸುವ ಸೂಕ್ಷ್ಮಾಣುಜೀವಿಗಳು, ಸಾವಯವ ಪದಾರ್ಥಗಳನ್ನು, ಜೈವಿಕ ಗೊಬ್ಬರಗಳನ್ನು ಯಾವುದೇ ಕಾರಣಕ್ಕೂ ರಾಸಾಯನಿಕ, ರಸಗೊಬ್ಬರಗಳು ಹಾಗೂ ಕೀಟನಾಶಕಗಳೊಂದಿಗೆ ಹಾಗೂ ಮಿಶ್ರ ಮಾಡಿ ಕಳೆನಾಶಕಗಳೊಂದಿಗೆ ಬಳಸಬಾರದು. ಜೈವಿಕ ಗೊಬ್ಬರಗಳ ಮಹತ್ವ ಹಾಗೂ ಬಳಕೆಯ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.
ರೈಜೋಬಿಯಂ ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಾಣು ಜೀವಿಯಾಗಿದ್ದು ಎಲ್ಲಾ ದ್ವಿದಳ ಧಾನ್ಯ ಬೇರುಗಳ ಮೇಲೆ ಗಂಟುಗಳನ್ನು ಉತ್ಪತ್ತಿ ಮಾಡಿ ವಾಯುಮಂಡಲದಲ್ಲಿರುವ ಸಾರಜನಕ ಗಿಡದ ಬೆಳವಣಿಗೆಗೆ ಒದಗಿಸುತ್ತದೆ. ಈ ಸೂಕ್ಷ್ಮಾಣುಜೀವಿಯ ಎಲ್ಲಾ ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಉದ್ದು, ಕಡಲೆ, ಅವರೆ, ತಿಂಗಲ ಹುರುಳಿ, ಹೆಸರು, ಹುರುಳಿ ಹಾಗೂ ಎಣ್ಣೆ ಕಾಳುಗಳಾದ ಶೇಂಗಾ, ಸೋಯಾ ಅವರೆ ಇತ್ಯಾದಿ ಬೆಳೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬಳಕೆಯಲ್ಲಿ ಗಮನದಲ್ಲಿಡಬೇಕಾದ ಅತಿ ಮುಖ್ಯವಾದ ಅಂಶವೆಂದರೆ ಬೆಳೆಗೆ ಅನುಗುಣವಾದ ರೈಜೋಬಿಯಂ ತಳಿಯನ್ನು ಉಪಯೋಗಿಸುವುದು.
ಈ ಸೂಕ್ಷ್ಮಣುಜೀವಿಯು ಸಾರಜನಕವನ್ನು ಸ್ಥರೀಕರಿಸುತ್ತದೆ. ಇದನ್ನು ಎಲ್ಲಾ ಧಾನ್ಯಗಳಾದ ರಾಗಿ, ಭತ್ತ, ಜೋಳ, ಮುಸುಕಿನ ಜೋಳ, ಗೋಧಿ ಬೆಳೆಗಳು, ತರಕಾರಿ ಬೆಳೇಗಳು, ಅಲಂಕೃತ ಹೂ ಗಿಡಗಳು, ಹಣ್ಣಿನ ಗಿಡಗಳಾದ ಮಾವು, ಬಾಳೆ, ಹಲಸು, ಅಡಿಕೆ,. ತೆಂಗು ಮುಂತಾದವು ಹಾಗೂ ಪ್ಲಾಂಟೇಷನ್ ಬೆಳೆಗಳಾದ ರಬ್ಬರ್, ಟೀ, ಕಾಫೀ, ಕೋಕೊ ಇತ್ಯಾದಿ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ತಂಬಾಕು, ಮೆಣಸಿನಕಾಯಿ, ಹತ್ತಿ ಇತ್ತಾದಿ ಬೆಳೆಗಳಿಗೆ ಉಪಯೋಗಿಸಬಹುದು. ಈ ಸೂಕ್ಷ್ಮಾಣುಜೀವಿಯ ಸಾವಯವ ಗೊಬ್ಬರಕ್ಕೆ ಚಾನ್ನಾಗಿ ಸ್ಪಂದಿಸಿ ಅಭಿವೃದ್ಧಿಗೊಳ್ಳುತ್ತವೆ.
ಈ ಸೂಕ್ಷ್ಮಾಣುಜೀವಿಯು ಸಾರಜನಕವನ್ನು ಸ್ಥರೀಕರಿಸುತ್ತದೆ, ಮತ್ತು ಸ್ವಲ್ಪ ಆಮ್ಲಜನಕವಿದ್ದರೂ ಬದುಕುಳಿಯಬಲ್ಲದು. ಅಜೋಸ್ಟೈರಿಲಂ ಜೀವಿಯು ಬೆಳೆಯ ಬೇರಿನ ಸಮೀಪ ಹಾಗು ಬೇರುಗಳಲ್ಲಿ ಪ್ರವೇಶಿಸಿ ಸಾರಜನಕ ಸ್ಥಿರೀಕರಣ ಮಾಡುತ್ತದೆ. ಇದನ್ನು ಏಕದಳ ಧಾನ್ಯಗಳು, ಎಣ್ಣೆಕಾಳು ಸಸ್ಯಗಳಾದ ಸೂರ್ಯಕಾಂತಿ ಮುಂತಾದವು ತೃಣ ಧಾನ್ಯ, ತರಕಾರಿ ಬೆಳೆಗಳು, ಹಿಪ್ಪುನೇರಳೆ, ಹುಲ್ಲು ಮತ್ತು ಅಲಂಕಾರಿಕ ಗಿಡಗಳಲ್ಲಿ ಬಳಸಬಹುದು. ಕುಂಡಗಳಲ್ಲಿ ಬೆಳೆಸುವ ಸಸ್ಯಗಳಿಗೆ ಹಾಗೂ ನೀರಾವರಿ ಬೆಳೆಗಳಾದ ಭತ್ತ ಮತ್ತು ಕಬ್ಬಿನ ಬೆಳೆಗೆ ಅತಿ ಸೂಕ್ತ.
ಈ ಸೂಕ್ಷ್ಮಾಣುಜೀವಿಯು ಕಬ್ಬು, ಗೆಣಸು, ಟಾಪಿಯೋಕಾ, ಬೀಟ್‍ರೂಟ್ ಇತ್ಯಾದಿ ಬೆಳೆಗಳಲ್ಲಿ ಬೇರು, ಎಲೆ ಮತ್ತು ಕಾಂಡದಲ್ಲಿ ನೆಲೆಸಿ ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಈ ಜೀವಾಣುವನ್ನು ಕಬ್ಬಿನಲ್ಲಿ ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಜೊತೆಗೆ ಕಬ್ಬಿನಲ್ಲಿ ಕಾಂಡದ ಕೆಂಪು ಕೊಳೆಯುವಿಕೆಯನ್ನು ತಡೆಗಟ್ಟುವಲ್ಲಿಯೂ ಸಹಾಯಕವಾಗಿದೆ.
ಮೂಲ :
ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 4/26/2020
ಜೈವಿಕ ಗೊಬ್ಬರ ಬಳಕೆಯ ವಿಧಾನದ ಬಗ್ಗೆ