ರಾಜ್ಯ ಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಐ.ಎ.ಎಸ್. ವೃಂದದ ಅಧಿಕಾರಿಗಳು ಇಲಾಖೆಯ ನಿರ್ದೇಶಕರಾಗಿರುತ್ತಾರೆ. ನಿರ್ದೇಶನಾಲಯದಲ್ಲಿ ಇರುವ ನಾಲ್ಕು ಶಾಖೆಗಳ ಜಂಟಿ ನಿರ್ದೇಶಕರುಗಳು ನಿರ್ದೇಶಕರಿಗೆ ಆಡಳಿತದಲ್ಲಿ ಸಹಕರಿಸುತ್ತಾರೆ.
ಜಿಲ್ಲಾ ವಲಯ ಯೋಜನೆಗಳ ಅನುಷ್ಠಾನವನ್ನು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಉಪ ನಿದರ್ೇಶಕರುಗಳ ಮೂಲಕ ಮಾಡಲಾಗುತ್ತಿದೆ. ಇವರಿಗೆ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕ್ರಮವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಒಬ್ಬರು ಸಹಾಯಕ ನಿರ್ದೇಶಕರು, ನಿರೂಪಣಾಧಿಕಾರಿ ಮತ್ತು ಇತರೆ ಸಿಬ್ಬಂದಿಗಳು ಇರುತ್ತಾರೆ.
ರಾಜ್ಯ ವಲಯ ಯೋಜನೆಗಳನ್ನು ನೇರವಾಗಿ ಜಿಲ್ಲೆಯ ಉಪ ನಿದರ್ೇಶಕರುಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
ತಾಲ್ಲೂಕು ಮಟ್ಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಇತರೆ ಕಾರ್ಯಕ್ರಮಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅನುಷ್ಠಾನಗೊಳಿಸುತ್ತಿದ್ದಾರೆ. ಅವರಿಗೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಿಕೆಯರು ಹಾಗೂ ಇತರೆ ಸಿಬ್ಬಂದಿಗಳು ಸಹಕರಿಸುತ್ತಾರೆ.
ಕೊನೆಯ ಮಾರ್ಪಾಟು : 2/15/2020