ತಾಯ್ತನ ಸಿಗುತ್ತದೆಂಬ ಸಂತೋಷದಲ್ಲಿದ್ದಳಾಕೆ. ತಿಳಿದಿರಲಿಲ್ಲ ಜೀವನದ ಮುಂದಿನ ಯಾವೊಂದು ಗತಿಗಳ ಬಗ್ಗೆ. ಹೀಗಾಗಿ ಸಾಮಾನ್ಯ ಜೀವನ ಶೈಲಿಯೊಂದಿಗೆ ಆಕೆ ಮುಂಬರುವ ಆನಂದದ ಗಳಿಗೆಗಳಿಗಾಗಿ ಕ್ಷಣಗಣನೆ ಮಾಡುತ್ತಿದ್ದಳು. ಮನೆಯ ಹಿರಿಯ ಮಗಳಾಗಿದ್ದರಿಂದ ಆಕೆಯ ಪೋಷಕರು ಅವಳ ಮದುವೆಯನ್ನು ಬಹುಬೇಗ(ಬಾಲ್ಯವಿವಾಹ) ಮಾಡಿದ್ದರು. ಸಂಸಾರ, ಜವಾಬ್ದಾರಿ, ಆತ್ಮಗೌರವ ಇಂತಹ ದೊಡ್ಡ ದೊಡ್ಡ ಪದಗಲಿಗೇನರ್ಥವಿದೆ ಎಂಬುದರ ಅರಿವೂ ಆಕೆಗಿರಲಿಲ್ಲ. ಆದರು ತಾಯ್ತನದ ಭಾಗ್ಯ ಪಡೆಯುವಂತಳಾದಳು. ಅದು ಆಕೆಯ ಸೌಭಾಗ್ಯವೋ ದೌರ್ಭಾಗ್ಯವೋ ತಿಳಿಯದು. ಮುಗ್ಧತೆಯ ಅಂಚಿನಲ್ಲಿಯೇ ಆಕೆ ಹೆಣ್ಣು ಮಗುವಿಗೆ ಜನ್ಮವಿತ್ತಳು. ಆಗಲೇ ಪ್ರಾರಂಭವಾದದ್ದು ಅವಳ ಬದುಕಿನ ಪ್ರಾಲಬ್ಧಗಳು.
ಸಮಾಜದ ಆಗು-ಹೋಗುಗಳ ಪರಿಚಯವಿಲ್ಲದ ಆಕೆ ತನ್ನ ಜೀವನದಲ್ಲಿ ಆಗಮಿಸಿದ ಹೊಸ ಅತಿಥಿಯೊಂದಿಗೆ ಸಂತಸ ಹಂಚಿಕೊಳ್ಳುತ್ತಿದ್ದಳು. ಆಕೆಯ ಗಂಡನೂ ಸಂತೋಷದ ಆಗಸದಲ್ಲಿ ತೇಲಾಡುತ್ತಿದ್ದ. ಆದರೆ ಆಕೆಯ ಅತ್ತೆಗೆ ಈ ಅಂಶಗಳಿಂದಾ ಕಿಂಚಿತ್ತು ಸಂತೋಷವಾಗಲಿಲ್ಲ. ಕಾರಣವಿಷ್ಟೆ, ತನ್ನ ಸೊಸೆ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದು!. ಅಂದಿನಿಂದ ಅತ್ತೆ ತನ್ನ ಹೊಸರೂಪವನ್ನ ಸೊಸೆಯ ಮುಂದೆ ಪ್ರಸ್ತುತ ಪಡಿಸಲಾರಂಭಿಸಿದಳು. ಪ್ರತೀ ಸಂವಹನದಲ್ಲಿ ಕಹಿಭಾವವೇ ಹೊರಹೊಮ್ಮುತ್ತಿತ್ತು. ಅತ್ತೆಯ ನಡವಳಿಕೆಯಲ್ಲಾದಂತಹ ಬದಲಾವಣೆಯೆಂದರೆ, ಸೊಸೆಯ ಪ್ರತಿಯೊಂದು ಹೆಜ್ಜೆಗು ಮುಳ್ಳಂಚಿನ ಮಾತುಗಳು!. ಮುಗ್ಧ ಹೆಣ್ಣು ಮಗಳಿಗೆ ತನ್ನ ತಪ್ಪೇನೆಂಬುದು ತಿಳಿಯಲಾಗಲಿಲ್ಲ. ತನ್ನ ಅತ್ತೆಯ ವರ್ತನೆಯಲ್ಲಾದ ಬದಲಾವಣೆಗಳಿಗೆ ಮನಸ್ಸಿನಲ್ಲಿಯೇ ಅಚ್ಚರಿ ಪಡುತ್ತಾ, ಎಂದಿನಂತೆ ದೈನಂದಿನ ಕೆಲಸಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಂಸಾರಿಕ ಭಿನ್ನಾಭಿಪ್ರಾಯಗಳನ್ನು ಮರೆಯಲೆತ್ನಿಸಿದಳು.
ಮನೆಗೆಲಸದಲ್ಲಿ ಅತ್ತೆ ಕಿಂಚಿತ್ತು ಆಸಕ್ತಿ ತೋರಲಿಲ್ಲ. ತನ್ನ ಕಂದಮ್ಮನಿಗೆ ಸಂಪೂರ್ಣವಾಗಿ ಪ್ರೀತಿ ತೋರಲು ಆಗಲಿಲ್ಲ. ಆಕೆಗೆ ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತಳಾಗಿರುತ್ತಿದ್ದಳು. ಆಕೆಯ ಊಟ ಆರೋಗ್ಯದ ಬಗ್ಗೆ ಯಾರೊಬ್ಬರು ವಿಚಾರಿಸುತ್ತಿರಲಿಲ್ಲ. ಗಂಡನೋ ಕೆಲಸದಲ್ಲಿ ನಿರತನಾಗಿರುತ್ತಿದ್ದ. ಆಕೆ ಮನೆಯಲ್ಲಿದ್ದ ಸುಮಾರು ೧೫ ಮಂದಿಗೆ ಅಡುಗೆ ಮಾಡಿ ಉಣಬಡಿಸಬೇಕಿತ್ತು. ಅತ್ತೆ ಅಡುಗೆ ಸಾಮಗ್ರಿಗಳನ್ನೂ ಸಹ ಅಳತೆ ಮಾಡಿ ಕೊಡುವಂತಳಾದಳು. ಆಕೆ ಮನೆಯಲ್ಲಿದ್ದ ಅಷ್ಟೂ ಜನರಿಗೆ ಅಡುಗೆ ಮಾಡಿ ಬಡಿಸಿ ಉಳಿದದ್ದನ್ನು ತಿನ್ನಬೇಕಿತ್ತು. ಅದೂ ಉಳಿದರೆ! ಇಷ್ಟೆಲ್ಲಾ ಬದಲಾವಣೆಗಳು ಆಕೆಯ ಜೀವನದಲ್ಲೇಕೆ? ಕೇವಲ ಹೆಣ್ಣು ಮಗಳಿಗೆ ಜನ್ಮವಿತ್ತಿದ್ದಕ್ಕೆ!.
ಇದು ಕೇವಲ ಒಂದು ಕಥೆಯಲ್ಲ. ನಮ್ಮ ದೇಶದಲ್ಲಿನ ಬಹಳಷ್ಟು ಹೆಣ್ಣು ಮಕ್ಕಳ ಜೀವನ ಗಾಥೆ. ಹೆಣ್ಣನ್ನು ದೇವತೆಗಳ ಸ್ಥಾನದಲ್ಲಿರಿಸಿದ ನಮ್ಮ ದೇಶದಲ್ಲಿನ ಬಹಳಷ್ಟು ಹೆಣ್ಣು ಮಕ್ಕಳ ಸ್ಥಿತಿ. ಈ ಸ್ಥಿತಿಯು ಈಗಿನ ಆಧುನಿಕ ಯುಗದಲ್ಲಿ ಇನ್ನೂ ಹೆಚ್ಚಾಗಿ ಕಾಣಲು ಸಿಗುವುದು ಶೋಚನೀಯ ಸಂಗತಿ. ಈಗಲೇ ನಾವು ಎಚ್ಚೆತ್ತು ಕೊಳ್ಳದಿದ್ದರೆ, ಮುಂದುಂದು ದಿನ ಹೀಗೂ ಬರಬಹುದು.”ಹೆಣ್ಣಿನ ಸಂತತಿಯೇ ಕಡಿಮೆಯಾಗಿ, ಒಂದು ಹೆಣ್ಣನ್ನು ಇಬ್ಬರು ಮೂವರು ಮದುವೆಯಾಗುವ ಸ್ಥಿತಿ ಬರಬಹುದು”. ಹೀಗಾಗಿ ಹೆಣ್ಣಿನ ಸ್ಥಾನ ಮಾನವನ್ನು ಗುರುತಿಸಿ, ಅವಳು ಕೇವಲ ಭೋಗದ ವಸ್ತುವಲ್ಲ. ಅವಳು ಜೀವವಿರುವ ಜೀವಿ ಎಂದು ತಿಳಿದು ತಾವು ಬದುಕಿ ಅವಳನ್ನು ಬದುಕಿಸಿ, ಬದುಕಲು ಬಿಡಿ.
ಕೊನೆಯ ಮಾರ್ಪಾಟು : 5/28/2020
ಹೈಡ್ರಾಮ್ನಿಯಾಸ್ ಎಂಬುದು ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಸುರಕ್ಷಿತ ತಾಯ್ತನ ಎಂದರೆ ಎಲ್ಲ ಮಹಿಳೆಯರಿಗೂ ಗರ್ಭಧಾರಣೆ ಮತ...
ಗರ್ಭಿಣಿಯಲ್ಲಿ ಸೋಂಕುರೋಗಗಳು ಹರಡುವ ಬಗೆ,ಮಗುವಿಗಿರುವ ಅಪಾಯ...