অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಕ್ಕುಗಳು

ಮುನ್ನುಡಿ

1948ರ ಎರಡನೇ ಮಹಾಯುದ್ಧದ ಪರಿಣಾಮವಾಗಿ ಆದ ಸಾವು ನೋವುಗಳ ಬಳಿಕ ಎಲ್ಲಾ ರಾಷ್ಟ್ರಗಳ ಚಿಂತನೆ ಒಂದೇ ಆಗಿತ್ತು. ಪ್ರತಿಯೊಬ್ಬ ಮನುಷ್ಯನನ್ನು ಗೌರವ ಹಾಗೂ ಆಎರದಿಂದ ಕಂಡರೆ ಪ್ರಪಂಚದಲ್ಲೆಡೆ ಶಾಂತಿ ನೆಲೆಸುತ್ತದೆ. ಈ ಅನಿಸಿಕೆಯ ಪರಿಣಾಮವಾಗಿಯೇ ವಿಶ್ವದಾದ್ಯಂತ ಮಾನವ ಹಕ್ಕುಗಳ ಘೋಷಣೆ ಜಾರಿಗೆ ಬಂದಿತು.  ಈ ಘೋಷಣೆಯನ್ನು ನಮ್ಮ ರಾಷ್ಟ್ರವು ಒಪ್ಪಿಕೊಂಡಿರುತ್ತದೆ.

ಎಲ್ಲರೂ ಸಮಾನರು ಜನಾಂತ, ಲಿಂಗ ಅಥವಾ ಬಣ್ಣ, ಏದವಿಲ್ಲದೆ ಸರ್ವರಿಗೂ ಒಂದೇ ಸಮಾನಾದ ಹಕ್ಕು, ಸ್ವಾತಂತ್ರ್ಯವಿರಬೇಕು. ಬಡವರು, ಸಿರಿವಂತರು. ಎಲ್ಲೇ ಹುಟ್ಟಿರಲಿ ಯಾವ ಭಾಷೆಯನ್ನಾದರೂ  ಮಾತನಾಡಲೀ, ಯಾವುದೇ ಮತದವರಾಗಿರಲೀ ಅಥವಾ ಯಾವ ರಾಜಕೀಯ ಪಂಗಡಕ್ಕಾದರೂ ಸೇರಿರಲಿ, ಬೇದಭಾವಕ್ಕೆ ಆಸ್ಪದವಿರಬಾರದು.

ಪ್ರತಿಯೊಬ್ಬರಿಗೂ, ಸುರಕ್ಷಿತವಾಗಿ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ.

ಗಂಡು, ಹೆಣ್ಣು ಯಾವ ದೇಶದವರಾಗಿರಲೀ ಅಥವಾ ಜನಾಂಗ ಮತ್ತು ಮತದವರಾಗಿರಲೀ ಪ್ರಾಪ್ತ ವಯಸ್ಸಿಗೆ ಮದುವೆಯಾಗಿ, ಸಂಸಾರಸ್ತರಾಗಲು ಅವರಿಗೆ ಹಕ್ಕಿದ್ದು, ಯಾರೂ ಅವರನ್ನು, ದೇಶ, ಮತ ಹಾಗೂ ಜನಾಂಗದ ಆಧಾರದ ಮೇಲೆ ತಡೆಗಟ್ಟಬಾರದು. ಇಬ್ಬರೂ ಪರಸ್ಪರ ಸಮ್ಮತಿಯಿಂದ ಯವಾಗ ಬೇಕೋ ಆವಾಗ ವಿವಾಹವಾಗುವ ಹಕ್ಕಿರುತ್ತದೆ ಮತ್ತು ಅದರ ಬಳಿಕ ಎಂದು ಬೇಡವೋ ಅಂದು ವಿವಾಹ ಸಂಬಂಧವನ್ನು ಕೊನೆಗೊಳಿಸಬಹುದು ಕೂಡ.

ಪ್ರತಿಯೊಬ್ಬರು ತಮ್ಮದೇ ಆದ ನಂಬಿಕೆಗಳನ್ನು ನಂಬಬಹುದು ಹಾಗೂ ತಮ್ಮದೇ ಆದ ಸರಿ ತಪ್ಪುಗಳ ಭಾವನೆ ಹೊಂದಿರಬಹುದು. ತಮಗೆ ಬೇಕಾದ ಧರ್ಮವನ್ನು ಅಳವಡಿಸಿಕೊಳ್ಳಬಹುದು ಮತ್ತು ಯಾರ ಹಂಗೂ ಇಲ್ಲದೇ ಧರ್ಮವನ್ನು ಬದಲಾಯಿಸಬಹುದು.

ಹೀಗೆ ಮಾನವ ಹಕ್ಕುಗಳು ಹಲವಾರು ಹಾಗೂ ಬಹುವ್ಯಾಪಿ. ಅವೆಲ್ಲವನ್ನು ನಾವಿಲ್ಲಿ ಚರ್ಚಿಸುವುದಿಲ್ಲ. ಈಗ ನಾವು ಮೂಲಭೂತ ಹಕ್ಕುಗಳು ಏನೆಂದು ಅರ್ಥ ಮಾಡಿಕೊಳ್ಳೋಣ.

ಮೂಲಭೂತ ಹಕ್ಕುಗಳು

ನಮ್ಮ ದೇಶದಲ್ಲಿ, ಭಾರತೀಯರಾಗಿ ನಮಗೆ ಆರು (6) ಮೂಲಭೂತ ಹಕ್ಕುಗಳನ್ನು ದಯಪಾಲಿಸಲಾಗಿದೆ. ಅವು ಯಾವುದೆಂದರೆ :

  • ಸಮಾನತೆಯ ಹಕ್ಕು
  • ಸ್ವಾತಂತ್ರ್ಯದ ಹಕ್ಕು
  • ದುರುಪಯೋಗ ವಿರೋಧಿಸುವ ಹಕ್ಕು
  • ಧರ್ಮ ಪಾಲಿಸುವ ಹಕ್ಕು
  • ಸಾಂಸ್ಕøತಿಕ ಮತ್ತು ಶಿಕ್ಷಣದ ಹಕ್ಕು
  • ಸಂವಿಧಾನದ ಅಡಿಯಲ್ಲಿ ಪರಿಹಾರ ಪಡೆಯುವ ಹಕ್ಕು

ಸಮಾನತೆಯ ಹಕ್ಕು

ಒಬ್ಬ ಪ್ರಜೆಯನ್ನು ಅವನ ಜನಾಂಗ, ಜಾತಿ, ಲಿಂಗ ಮತ, ಹುಟ್ಟಿದ ಸ್ಥಳದ ಆಧಾರದ ಮೇಲೆ ರಾಜ್ಯವು ತಾರತಮ್ಯ ಮಾಡುವಂತಿಲ್ಲ. ಹಾಗೆಯೇ, ರಾಜ್ಯವು ಅವರ ಔದ್ಯೋಗಿಕ ವಿಷಯಗಳಲ್ಲಿ ತಾರತಮ್ಯವೆಸಗುವಂತಿಲ್ಲ. ಎಲ್ಲಾ ಪ್ರಜೆಗಳು ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ, ಈ ಹಕ್ಕುಗಳನ್ನು ಪ್ರತಿಪಾದಿಸುವಾಗ ಕೆಲಬು ಞರತ್ತುಗಳು ಇರುತ್ತವೆ. ಅವು ಏನೆಂದರೆ, ಕೆಲಬು ಕೆಲಸಗಳಿಗೆ ಸಂವಿಧಾನದಲ್ಲಿ ಕೆಲವು ಪಂಗಡಗಳಿಗೆ, ವಿಶೇಷವಾಗಿ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಹಾಗಾಗಿ, ಸಮಾನತೆಯ ಹಕ್ಕು ಚಲಾಯಿಸುವಾಗ ಕಾಯ್ದಿರಿಸುವಿಕೆಯನ್ನು ಗಮನದಲ್ಲಿ ಇಟ್ಟಿಕೊಳ್ಳಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ಗುಂಪುಗಳಿಗೆ ವಿಶೇಷವಾಗಿ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಈ ಕಾಯ್ದಿರಿಸುವಿಕೆ ಸೌಲಭ್ಯ ಹೆಂಗಸರು ಮತ್ತು ಮಕ್ಕಳಿಗೂ ಸಹ ಅನ್ವಹಿಸುತ್ತದೆ. ನಮ್ಮ ಸಮಾಜದಲ್ಲಿ ಇರುವ ಹಲವಾರು ಅಸಮಾನತೆಗಳೇ ಈ ಕಾಯ್ದಿರಿಸುವಿಕೆಗೆ ಮುಖ್ಯ ಕಾರಣ. ನೀವು ಕೂಡ, ಕೆಲವು ಜನರು ಈ ಅಸಮಾನಗೆತೆ ಒಳಪಟ್ಟು ನೋವನನುಭವಿಸಿರುವುದನ್ನು ನೋಡಿರಬಹುದು. ಅಂತಹವರಿಗೆ ರಕ್ಷಣೆ ಕೊಡುವ ಸಲುವಾಗಿ ಹುದ್ದೆಗಳನ್ನು ಕಾಯ್ದಿರಿಸುವ ನಿಯಮ, ಸಮಾನತೆಯ ಹಕ್ಕನ್ನು, ಉಲ್ಲಂಘಿಸಲಾಗದು. ಇಂತಹ ಸಕಾರಾತ್ಮಕ ನಿಯಮಾವಳಿಗಳನ್ನು "ರಕ್ಷಣಾತ್ಮಕ ತಾರತಮ್ಯ ನಿಯಮ" ಎಂದು ಕರೆಯಲಾಗುತ್ತದೆ.

ಸ್ವಾತಂತ್ರ್ಯದ ಹಕ್ಕು

ಸ್ವಾತಂತ್ರ್ಯದ ಹಕ್ಕು ಒಟ್ಟು 6 ಸ್ವಾತಂತ್ರ್ಯಗಳನ್ನು ಒಳಗೊಂಡಿರುತ್ತದೆ.

  • ಮಾತು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ
  • ಆಯುಧಗಳಿಲ್ಲದೆ ಶಾಂತಿಯುತವಾಗಿ ಜನಗಳು ಒಟ್ಟುಗೂಡುವ ಸ್ವಾತಂತ್ರ್ಯ.
  • ಸಂಸ್ಥೆಗಳನ್ನು ಮತ್ತು ಸಂಘಟನೆಗಳನ್ನು ರೂಪಿಸುವ ಸ್ವಾತಂತ್ರ್ಯ.
  • ಭಾರತ ದೇಶದಾದ್ಯಂತ ಆತಂಕವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ
  • ಭಾರತದ ಯಾವುದೇ ಪ್ರಾಂತ್‍ಯದಲ್ಲಿ ನೆಲೆಸುವ ಸ್ವಾತಂತ್ರ್ಯ
  • ಪ್ರಜೆ ತನಗೆ ಬೇಕಾದ ಉದ್ಯೋಗ, ಕೆಲಸ, ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಸ್ವಾತಂತ್ರ್ಯ.

ಒಬ್ಬ ಪ್ರಜೆಯನ್ನು ಪ್ರಗತಿಯತ್ತ ಕೊಂಡೊಯ್ಯುವುದೇ ಸ್ವಾತಂತ್ರ್ಯದ ಹಕ್ಕಿನ ಸದುದ್ದೇಶ. ಆ ಹಕ್ಕನ್ನು ಉಪಯೋಗಿಸಿಕೊಂಡು ಅಋಓಗ್ಯಕರವಾದ ಹಾಗೂ ಸಮಾಜಿಕವಾದ ಬದುಕನ್ನು ಜೀವಿಸಬೇಕು. ಪ್ರಜಾಪ್ರಭುತ್ವದಲ್ಲಿ ಈ ಹಕ್ಕು ಬಹಳ ಮುಖ್ಯವಾದುದು.

ದುರುಪಯೋಗ ವಿರೋಧಿಸುವ ಹಕ್ಕು

ಪ್ರತಿ ಮನುಷ್ಯನು ಒಬ್ಬ ಮಾನವನು. ಅದನ್ನು ಒಪ್ಪಿಕೊಂಡಾಗ ಅವನನ್ನು, ಕೀಳಾಗಿ ಒಬ್ಬ ಕೂಲಿಯಾಗಿ ನಾವು ನಡೆಸಿಕೊಳ್ಳಬಾರದು. ಅವನನ್ನು/ಅವಳನ್ನು ಬಂಧನದಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ. ಕೂಲಿಗೆ ಒತ್ತಾಯಿಸಲಾಗುವುದಿಲ್ಲ. ಈ ತರಹದ ದುರುಪಯೋಗದ ವಿರುದ್ಧ ಜನಗಳನ್ನು ಕಾಪಾಡಲು ಪ್ರಜೆಗಳಿಗೆ ಹಕ್ಕಿದೆ. ಇಂತಹ ಸಂಪ್ರದಾಯಗಳು ಕೆಲವೊಮ್ಮೆ ಎಷ್ಟೋ ತಲೆಮಾರುಗಳಿಂದ ಹರಿದು ಬಂದಿರುತ್ತದೆ. ಈಗ ಜೀತಪದ್ಧತಿ ನಿರ್ಮೂಲಗೊಂಡಿದೆ. ಜೀತ ಪದ್ಧತಿಯನ್ನು ಅನುಸರಿಸುವುದು ಒಂದು ಅಪರಾಧ ಮತ್ತು ಕಾನೂನು ರೀತಿ ಶಿಕ್ಷಾರ್ಹ.

ಹಾಗೆಯೇ 14 ವರ್ಷದ ಮಕ್ಕಳನ್ನು ಅವರ ಶಕ್ತಿಮೀರಿ ದುಡಿಸಿಕೊಳ್ಳುವುದು, ಕಾರ್ಖಾನೆ, ಗಣಿ ಮತ್ತು ಕತರೆ ಅಪಾಯಕಾರಿ ಜಾಗಗಳಲ್ಲಿ ಅವರನ್ನು ಕೆಲಸಕ್ಕೆ ಇಟ್ಟುಕೊಂಡರೆ ಅದು ಮಕ್ಕಳ ದುರುಪಯೋಗವಾಗಿ ಪರಿಗಣಿಸಲ್ಪಡುತ್ತದೆ. ಇದು ಕೂಡ "ಬಾಲ ಕಾರ್ಮಿಕ ನಿರ್ಮೂಲನಾ ಕಾಯಿದೆ" ಅಡಿಯಲ್ಲಿ ಅಪರಾದ.

ಧರ್ಮ ಸ್ವಾತಂತ್ರ್ಯದ ಹಕ್ಕು

ಧರ್ಮ ಸ್ವಾತಂತ್ರ್ಯದ ಹಕ್ಕಿನಡೆಯಲ್ಲಿ ಭಾರತ ದೇಶದ ಎಲ್ಲಾ ಪ್ರಜೆಗಳಿಗೂ ತಮಗೆ ಬೇಕಾದ ಧರ್ಮವನ್ನು ಆರಿಸಕೊಳ್ಳಲು ಸ್ವಾತಂತ್‍ರಯ ನೀಡುತ್ತದೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಧರ್ಮವೂ ಸಮಾನ ಮತ್ತು ಯಾವುದೇ ಧರ್ಮಕ್ಕೂ ಇನ್ನೊಂದು ಧರ್ಮಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ.

ಆದಾಗ್ಯೂ ಧರ್ಮದ ಸ್ವಾತಂತ್ರ್ಯವನ್ನು ಪಾಲಿಸಲು ಕೆಲವು ಚೌಕಟ್ಟುಗಳಿವೆ. ಅದೇನೆಂದರೆ ಸಾಮಾಜಿಕ ನ್ಯಾಯ, ಆಗುವ ಮರಣ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಲು, ಯಾವುದೇ ಧರ್ಮ ಸಂಸ್ಥೆಯವರು ಎಸಗುವ ಅಧರ್ಮ ಕೃತ್ಯಗಳನ್ನು ಸರ್ಕಾರ ನಿಯಂತ್ರಿಸಬಹುದಾಗಿದೆ.

ಸಾಂಸ್ಕೃತಿಕ  ಮತ್ತು ಶಿಕ್ಷಣದ ಹಕ್ಕು

ಭಾರತ ದೇಶವು ಹಲವು ಧರ್ಮಗಳ, ಭಾಷೆಗಳ, ಸಂಸ್ಕøತಿಗಳ ಬೀಡು, ಯಾವುದೇ ಪಂಗಡ ತನ್ನದೇ ಆದ ಭಾಷೆ ಮತ್ತು ಲಿಪಿ ಇದ್ದರೆ ಅದನ್ನು ಕಾಪಾಡುವ ಮತ್ತು ಅಭಿವೃದ್ಧಿಗೊಳಿಸುವ ಹಕ್ಕು ಆ ಪಂಗಡಕ್ಕೆ ಇದೆ, ಎಲ್ಲಾ ಅಲ್ಪ ಸಂಖ್ಯಾತರು ಜಾತಿ ಮತ್ತು ಪಂತಡಗಳಿಗನುಸಾರ ತಮ್ಮದೇ ಆದ ವಿದ್ಯಾ ಸಂಸ್ಥೆಗಳನ್ನು ನಿರ್ಮಿಸಬಹುದು. ಹೀಗೆ ಮಾಡುವಲ್ಲಿ ಆ ಸಂಸ್ಥೆಗಳು ತಮ್ಮದೇ ಆದ ಸಂಸ್ಕ್ರುತಿ  ಕಾಪಾಡಿ ಅಭೀವೃದ್ಧಿಪಡಿಸಬಹುದು.

ಸಂವಿಧಾನದಿಂದ ಪರಿಹಾರದ ಹಕ್ಕು

ಮೂಲಭೂತ ಹಕ್ಕುಗಳಲ್ಲಿ ಯವುದಾದರೊಂದು ಹಕ್ಕನ್ನು ಒಬ್ಬ ಪ್ರಜೆಗೆ ನಿರಾಕರಿಸಿದಾಗ, ಆ ಪ್ರಜೆಗೆ ನ್ಯಾಯಾಲಯದ ಮೊರೆ ಹೋಗುವ ಹಕ್ಕಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ಅವನನ್ನು ರಕ್ಷಿಸುತ್ತದೆ. ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಪರಿಶಿಲಿಸುವುದು ನ್ಯಾಯಾಲಯದ ಕರ್ತವ್ಯ ಎಂದು ಈ ಹಕ್ಕು ಪ್ರತಿಪಾದಿಸುತ್ತದೆ.

ನಿರ್ದೇಶಿತ ತತ್ವಗಳು

ಮೂಲಭೂತ ಹಕ್ಕುಗಳನ್ನಲ್ಲದೆ, ಸರ್ಕಾರವು ತನ್ನ ನೀತಿಯಲ್ಲಿ ಕೆಲವು ನಿರ್ದೇಶಿತ ತತ್ವಗಳನ್ನು ಒಳಗೊಂಡಿರುತ್ತದೆ. ಈ ತತ್ವಗಳು ಮಾನವನ ಸರ್ವಾನುಮುಖ ವಿಕಾಸಕ್ಕೆ ಬೇಕಾದ ಹಕ್ಕುಗಳನ್ನು ತಿಳಿಸುತ್ತದೆ.

ನಿರ್ದೇಶಿತ ತತ್ವದ ಅಡಿಯಲ್ಲಿ ಬರುವ ಹಕ್ಕುಗಳೆಂದರೆ - ದುಡಿಯುವ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು, ಸಮರ್ಪಕವಾದ ಜೀವನಶೈಲಿಯ ಹಕ್ಕು, 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ವಿದ್ಯಾಭ್ಯಾಸದ ಹಕ್ಕು ಮುಂತಾದವುಗಳು.

ಸರ್ಕಾರವು ಕೂಲಿ ಕೆಲಸ ಮಾಡುವವರಿಗೆ ಮತ್ತು ಅಪ್ರಾಪ್ತ ಬಯಸ್ಸಿನ ಮಕ್ಕಳಿಗೆ ಒಳ್ಳೆಯ ಆರೋಗ್ಯ ಕಾಪಾಡುವಲ್ಲಿ ಮತ್ತು ಆರೋಗ್ಯಕ್ಕೆ ಹಾನಿ ತರುವಂತಹ ಕೆಲಸದಲ್ಲಿ ತೊಡಗದಂತೆ ಕ್ರಮ ಕೈಗೊಳ್ಳಬೇಕು.

ಸರ್ಕಾರವು ಸಮುದಾಯದಲ್ಲಿ ಆರೋಗ್ಯ ಮತ್ತು ಪಶು ಸಂಗೋಪನಾ ರ್ಕಾಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.

ಅಧಿಕಾರದ ವಿಕೇಂದ್ರೀಕರಣದ ಫಲಿತಾಂಶ ಕೆಳಗಿನ ಮಟ್ಟದವರಿಗೆ ತಲುಪಬೇಕು. ಅದಕ್ಕಾಗಿ ಪಂಚಾಯಿತಿ ರಾಜ್ಯಗಳನ್ನು ಸ್ಥಾಪಿಸಬೇಕು.

ಸರ್ಕಾರವು, ದುರ್ಬಲ ವರ್ಗಗಳಿಗೆ ಶಯಕ್ಷಣಿಕವಾಗಿ ಮತ್ತು ಆರ್ಥಿಕ ಲಾಭಗಳು ದೊರಕುವಂತೆ ಮಾಡಬೇಕು. ಅಲ್ಲದೆ ಈ ಜನಗಳ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಆರ್ಥಿಕ ದುರ್ಬಲ ಪಂಗಡಗಳಿಗೆ ನ್ಯಾಯ ದೊರಕಿಸಲು ಉಚಿತ ಕಾನೂನು ಸೌಲಭ್ಯವನ್ನು ಒದಗಿಸಬೇಕು.

ಈ ಕೆಳಗಿನ  ನಮೂದಿಸಿರುವ ಹೇಳಿಕೆಗಳನ್ನು  ಓದಿ, - ಮಾನವ ಹಕ್ಕು ಮತ್ತು ಸಮುದಾಯದ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತಿದೆಯೇ ಎಂದು ನಿರ್ಧರಿಸಿ.

ನನ್ನ ಗ್ರಾಮ ಸುರ್ಷಿತ ಮತ್ತು ಭದ್ರವಾಗಿದೆ. ಇಲ್ಲಿನ ಎಲ್ಲಾ ಸಮುದಾಯದವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವುಳ್ಳವರಾಗಿ, ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ ಮತ್ತು ಎಲ್ಲರೂ ಈ ಸರ್ಕಾರಿ ಸೇವೆಯ ಅವಕಾಶವನ್ನು ಪಡೆಯುತ್ತಿದ್ದಾರೆ.

ನನ್ನ ಗ್ರಾಮದಲ್ಲಿರುವ ಎಲ್ಲಾ ಸಂಪನ್ಮೂಲಗಳು, ವಿಶೇಷವಾಗಿ ನೀರು, ಜಾತಿ, ಧರ್ಮ, ಅಥವಾ ಲಿಂಗ ಭೇಧವಿದಲ್ಲದೆ ಎಲ್ಲಾ ನಿವಾಸಿಗಳಿಗೂ ಸಿಗುತ್ತದೆ.

ಒಬ್ಬ ಗ್ರಾಮಸ್ಥ ಇನ್ನೊಬ್ಬನ ಹಕ್ಕನ್ನು ಉಲ್ಲಂಘಿಸಿದಲ್ಲಿ, ಗ್ರಾಮ ಪಂಚಾಯತಿ ಇದನ್ನು ಗಮನಿಸಿ, ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದು ಒಮ್ಮತವಾದ ನಿರ್ಧಾರ ಕೈಗೊಳ್ಳುತ್ತದೆ. ಈ ನಿರ್ಧಾರ ಕೈಗೊಳ್ಳುವಾಗ, ಪಂದಾಯಿತಿಯ ತತ್ವ ಮತ್ತು ನಡವಳಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಅದರ ವ್ಯಾಪ್ತಿಯಲ್ಲೇ ನಿರ್ಧರಿಸುತ್ತದೆ.

ಆರೋಗ್ಯದ ಹಕ್ಕು

ಆರೋಗ್ಯದ ಹಕ್ಕನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ

ಇಲ್ಲಿಯರೆಗೆ ನಾವು ಮಾನವ ಹಕ್ಕು ಮತ್ತು ಮೂಲಭೂತ ಹಕಕುಗಳನ್ನು ಚರ್ಚಿಸಿದೆವು. ಅಲ್ಲದೆ ಹಕ್ಕುಗಳಿಗೆ ಬೇಕಾದ ಮೂಲ ಮಾಹಿತಿಗಳನ್ನು ಸಹ ಚರ್ಚಿಸಿದೆವು. ಈಗ ನಾವು ಆರೋಗ್ಯ ಹಕ್ಕಿನ ಬಗ್ಗೆ ಚರ್ಚಿಸಬೇಕಾಗಿದೆ. ಆಶಾ ಸದಸ್ಯೆಯಾಗಿ ಈ ಹಕ್ಕಿನ ಅರಿವು ಅವಶ್ಯಕ ಇದರಿಂದ ಸಮುದಾಯದ ಸದಸ್ಯರಿಗೆ, ಅವರಿಗೆ ಬೇಕಾದ ಸವಲತ್ತುಗಳನ್ನು ತಿಳಿಸಲು ಮತ್ತು ಜಾಗೃತರಾಗಿರಲು ಸಹಾಯಕವಾಗುತ್ತದೆ. ನೀವು, ಆರೋಗ್ಯದ ಹಕ್ಕನ್ನು ಅರ್ಥಮಾಡಿಕೊಂಡರೆ, ನಿಮಗೆ, ಸಾರ್ವಜನಿಕ ಆರೋಗ್ಯ ಪದ್ಧತಿಯಿಂದ ನಿಮಗೆ ಬೇಕಾದ ಆರೋಗ್ಯ ಸೇವೆಯನ್ನು ಪಡೆಯಲು, ಸಿರಯಾದ ಕಾರ್ಯಾಚಟುವಟಿಕೆ ರೂಪಿಸಲು, ಸಹಾಯಕವಾಗುತ್ತದೆ.

ಮೊದಲಿಗೆ ಆರೋಗ್ಯ ಹಕ್ಕು ಎಂದರೇನು ? ತಿಳಿದುಕೊಳ್ಳೋಣ :

ಆರೋತ್ಯದ ಹಕ್ಕು ಎಂದರೆ

  • ಸಾರ್ವಜನಿಕ ಆರೋಗ್ಯ ಸೇವೆಯ ಸೌಲಭ್ಯ ಉಪಸ್ಥಿತಿಯಲ್ಲಿ ಇರಬೇಕು ಮತ್ತು ಅಲ್ಲಿ ಸಾಕಷ್ಟು ಔಷಧಿ ಹಗೂ ಉಪಕರಣಗಳು ಇರಬೇಕು. ಈ ಸೌಲಭ್ಯಗಳು ಕಾರ್ಯ ನಿರ್ವಹಿಸುವಂರಿರಬೇಕು ಮತ್ತು ಸರ್ವತೋಮುಖ ಹಾಗೂ ಲಿಂಗ ಸೂಕ್ಷ್ಮತೆ ಇರುವ ಆರೋಗ್ಯ ಕಾರ್ಯಕ್ರಮಗಳಾಗಿರಬೇಕು.
  • ಆರೋಗ್ಯ ಸೌಲಭ್ಯಗಳು ಮತ್ತು ಸಏವೆಗಳು ಯಾವ ಭೇದವೂ ಇಲ್ಲದೇ ಸರ್ವರಿಗೂ ಲಭಿಸುವಂತಿರಬೇಕು.
  • ಧರ್ಮ, ಜಾತಿ, ಆರ್ಥಿಕ, ಸ್ಥಿತಿ, ಲಿಂಗ ಇತರೆ ಆಧಾರಗಳ ಮೇಲೆ ಯಾರಿಗೂ ಚಿಕಿತ್ಸೆ ನೀಡಲು ನಿರಾಕರಿಸಬಾರದು.
  • ಸಾರ್ವನಿಕ ಆರೋಗ್ಯ ಸೌಲಭ್ಯ ಸಿಗುವ ಸ್ಥಳಗಳು ಹತ್ತಿರದಲ್ಲಿದ್ದು, ಸುಲಭವಾಗಿ ಮತ್ತು ಶೀಘ್ರವಾಗಿ ತಲುಪುವ ಸ್ಥಳದಲ್ಲಿರಬೇಕು.
  • ಆರೋಗ್ಯ ಸೇವೆಗಳು ಹೆಚ್ಚು ಜನರಿಗೆ ಎಟಕುವಂತಿರಬೇಕು.
  • ಈ ಸೌಲಭ್ಯ ಉಚಿತವಾಗಿ ಸಿಗುವಂತಿರಬೇಕು.
  • ಸಿರುವ ಸೌಲಭ್ಯಗಳ ಮಾಹಿತಿ ಸಮುದಾಯದ ಜನಗಳಿಗೆ ಯಾವ ಜಾತಿ, ಆರ್ಥಿಕ ಸ್ಥಿತಿ, ಧರ್ಮ, ಲಿಂಗ ಭೇದವಿಲ್ಲದೆ ತಿಳಿಯುವಂತಿರಬೇಕು. ಸಾರ್ವನಿಕ ಆರೋಗ್ಯ ಪದ್ಧತಿಯ ಅಡಿಯಲ್ಲಿ ತಮ್ಮ ಅರ್ಹತೆಯ ಬಗೆಗೂ ಅವರಿಗೆ ಅರಿವಿರಬೇಕು.
  • ಎಲ್ಲಾ ಆರೋಗ್ಯ ಸೇವೆಯು ಲಿಂಗ ಸೂಕ್ಷ್ಮತೆ ಉಳ್ಳದ್ದಾಗಿರಬೇಕು ಮತ್ತು ಪ್ರತಿಯೊಬ್ಬರ ಜೀವಿತ ಹಂತಗಳ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು.
  • ಆರೋಗ್ಯ ಸೌಲಭ್ಯಗಳು ಮತ್ತು ಸೇವೆಗಳ ವೈಜ್ಷಾನಿಕವಾಗಿ ಮತ್ತು ವಐದ್ಯಕೀಯವಾಗಿ ಅನುರೂಪಬಾಗಿದ್ದು ಒಳ್ಲೆಯ ಗುಣಮಟ್ಟದ್ದಾತಿರಬೇಕು.

ಮೂಲ: ಆಶಾ ಕೈಪಿಡಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate