অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾಟ ಮತ್ತು ಯಕ್ಷಿಣಿ ವಿದ್ಯೆ

ಮಾಟ ಮತ್ತು ಯಕ್ಷಿಣಿ ವಿದ್ಯೆ

ಮಾಟ ಮತ್ತು ಯಕ್ಷಿಣಿ ವಿದ್ಯೆ - ಸಮಾಜಿಕ ಮತ್ತು ವೈದ್ಯಕೀಯ ದೃಷ್ಟಿಕೋನ

ಮಾಟ ಎಂದರೇನು?

ಮಾಟ ಎಂದರೆ; ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು.

ಭಾನಾಮತಿ ಎಂದರೇನು?

ಅಲೌಕಿಕ ಸಾಧನೆಯ ಮೂಲಕ ಇತರರನ್ನು ಹಾನಿಮಾಡಬಹುದು ಎಂಬ ನಂಬಿಕೆ.

ಮಾಟ/ಯಕ್ಷಿಣಿ ವಿದ್ಯೆಗೂ,ಮಂತ್ರವಾದಿಗೂ ಇರುವ ವ್ಯತ್ಯಾಸವೇನು?

ಮಾಟಗಾತಿ ಮಾಟಗಾತಿ ಒಬ್ಬ ಮಹಿಳೆ ಇತರರಿಗೆ ಹಾನಿ ಮಾಡಬಹುದಾದಂತಹ ಅತಿಮಾನಷ ಶಕ್ತಿ ಹೊಂದಿರುತ್ತಾಳೆ.ಮಾಂತ್ರ ಮಾಂತ್ರಿಕ ಕೆಟ್ಟ ಉದ್ದೇಶ ಹೊಂದಿರುವ ದ್ವೇಷ , ಮತ್ಸರಗಳಿಂದ ಕೂಡಿದ ಮಂತ್ರಶಕ್ತಿಯ ಅರಿವು ಇರುವ ವ್ಯಕ್ತಿ

ತೊಂದರೆಗೆ ಈಡಾಗುವ ಸಾಮಾಜಿಕ ವರ್ಗಗಳು

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು, ಬಡವರು, ಮಹಿಳೆಯರು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಮತ್ತು ಹಿಂದುಳಿದ ಜಾತಿಯವರು.

ಭಾನಾಮತಿಗೆ ಭಯ ಪಡಲು ಕಾರಣಗಳು

  • ಸಾಂಸ್ಕೃತಿಕ ನಂಬಿಕೆಗಳು
  • ಸಾಮಾಜಿಕ ವಾತಾವರಣ
  • ಹಿಂಸೆಗೆ ಮತ್ತು ತುಳಿತಕ್ಕೆ ಒಳಗಾದವರು
  • ಅನಕ್ಷರಸ್ಥರು
  • ಅಜ್ಞಾನಿಗಳು
  • ವೈಧ್ಯಕೀಯ ನೆರವಿನ ಕೊರತೆ
  • ರಾಜಕೀಯ ಮತ್ತು ಸಾಮಾಜಿಕ ಸ್ಪರ್ಧೆ
  • ದಾಂಪತ್ಯ / ವೈಯಕ್ತಿಕ ಸಮಸ್ಯೆಗಳು
  • ಮಾನಸಿಕ ತೊಂದರೆಗಳು
  • ಅಲೌಕಿಕ ಮತ್ತು ದುಷ್ಟಶಕ್ತಿಗಳಲ್ಲಿ ನಂಬಿಕೆ ಇರುವವರು
  • ಅಂಧವಿಶ್ವಾಸಿಗಳು/ಮೂಢ ನಂಬಿಕೆಯುಳ್ಳವರು.

ಭಾನಾಮತಿಯನ್ನು ನಂಬಲು ಕಾರಣಗಳು

  • ಬಡತನ - ೮೦%
  • ಅನಕ್ಷರತೆ - ೮೦%
  • ಪಯಣಕ್ಕೆ ಅನಾನುಕೂಲ - ೯೦%
  • ಅನಾರೋಗ್ಯ - ೮೦%
  • ಹಿಂಸೆಗೊಳಗಾಗುವುದು ಮತ್ತು ತುಳಿತಕ್ಕೆಒಳಗಾಗುವುದು - ೭೦%
  • ಮೂಢನಂಬಬಿಕೆ ಮತ್ತು ಮಂತ್ರ ಮಾಟದಲ್ಲಿ ನಂಬಿಕೆ ಇರುವವರು- ೯೫%

ಮಾಟಗಾತಿ ಅಥವಾ ಮಾಂತ್ರಿಕರನ್ನು ಹೇಗೆ ಶಂಕಿಸುವುದು?

  • ಅಸಹಜ ಮತ್ತು ವಿಚಿತ್ರ ವರ್ತನೆಯುಳ್ಳವರು
  • ಹಳ್ಳಿಗೆ ಅಪರಿಚಿತರು
  • ಸಾಮಾಜಿಕ ವೈಷಮ್ಯ
  • ಬೇರೆಯವರಿಗೆ ಅರ್ಥವಾಗದ ರೀತಿಯಲ್ಲಿ ಮಂತ್ರಪಠಿಸುವುದು.

ಸಂದೇಹಾಸ್ಪದ ವ್ಯಕ್ತಿಯು ಚಿತ್ರಹಿಂಸೆ ಕೊಡುವ ವಿಧಾನಗಳು

  • ದಂಡ ಹಾಕುವುದು - ವ್ಯಕ್ತಿಯ/ಕುಟುಂಬದ ಮೇಲೆ.
  • ಹೊಡೆಯುವುದು
  • ಹಲ್ಲುಗಳನ್ನು ಕೀಳುವುದು
  • ಕಿವಿ ಮತ್ತು ನಾಲಿಗೆಯನ್ನು ಕತ್ತರಿಸುವುದು
  • ಕೈಕಾಲು ಕತ್ತರಿಸುವುದು
  • ವಿರೂಪಗೊಳಿಸುವುದು
  • ಸಾಮಾಜಿಕ ಬಹಿಷ್ಕಾರ ಹಾಕುವುದು
  • ಮನೆ ಅಥವಾ ಜಮೀನು ತೆರವುಗೊಳಿಸುವಂತೆ ಒತ್ತಾಯಿಸುವುದು.
  • ಹಳ್ಳಿಯಿಂದ ಓಡಿಸುವುದು
  • ಆಸ್ತಿಯನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳುವುದು
  • ತಪ್ಪು/ಸುಳ್ಳು ಆಪಾದನೆ ಹೊರಿಸುವುದು.
  • ನೆಂಟರಿಗೆ ಚಿತ್ರಹಿಂಸೆ ಕೊಡುವುದು.
  • ಜೀವಂತ ಸುಡುವುದು.
  • ಮಾನಸಿಕವಾಗಿ ಚಿತ್ರಹಿಂಸೆ ಕೊಡುವುದು.

ಭಾನಾಮತಿ ತನಿಖೆ

"ಪ್ರೊ. ನರಸಿಂಹಯ್ಯ ಭಾನಾಮತಿ ತನಿಖೆ ಸಮಿತಿ ಭಾನಾಮತಿಯ ಬಗ್ಗೆ ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್ತು ಒಂದು ಸಮಿತಿಯನ್ನು ರಚಿಸಿತು. ಡಾ|| ಹೆಚ್. ನರಸಿಂಹಯ್ಯ, ವಿಧಾನ ಪರಿಷತ್ತಿನ ಸದಸ್ಯರಾದವರು, ಈ ತಂಡದ ಮುಖಂಡತ್ವ ವಹಿಸಿದರು. ಈ ತನಿಖೆಯಿಂದ ಹೊರಬಿದ್ದ ವಿಷಯಗಳೇನೆಂದರೆ; ಭಾನಾಮತಿ, ಮಾಟ/ಯಕ್ಷಿಣಿ ವಿದ್ಯೆ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ. ಜನರಲ್ಲಿ ಭಯ ಭೀತಿಯನ್ನು ಮೂಡಿಸಿ ಅದನ್ನೇ ಸತತವಾಗಿ ಮುಂದುವರೆಸಲು ಕೆಲವು ಹಿತಾಸಕ್ತಿಗಳು ವದಂತಿಗಳನ್ನು ಹುಟ್ಟಿಸಿ ಜನರ ಜೀವನದ ಜತೆ ವಿಧ್ವಂಸಕ ಕ್ರಿಯೆಯನ್ನು ನಡೆಸುವುದಾಗಿದೆ ಎಂದು ತಿಳಿಸಿಕೊಟ್ಟಿತು.

ಈ ಸಾಮಾಜಿಕ ಪಿಡುಗಿನಿಂದ ಪಾರಾಗಲು ಸಮಿತಿಯು ಮಾಡಿದ ಶಿಫಾರಸುಗಳು

  • ಭಾನಾಮತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು.
  • ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೌಕರ್ಯಗಳನ್ನು ಸುಧಾರಿಸುವುದು.
  • ಸಂಚಾರಿ ವೈದ್ಯಕೀಯ ತಂಡಗಳು.
  • ಭಾನಾಮತಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಅವರಿಗೆ ತತ್‌ಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಮತ್ತು ಭಾನಾಮತಿಯ ವಿರುದ್ಧ ಶಿಕ್ಷಣ ಕೊಡಿಸುವುದು.
  • ಮಂಡಲ ಕೇಂದ್ರಸ್ಥಾನಗಳಲ್ಲಿ ಮನಶಾಸ್ತ್ರಜ್ಞ ಮತ್ತು ಮನೋರೋಗ/ವೈದ್ಯಕೀಯ ಚಿಕಿತ್ಸಕರನ್ನು ಮತ್ತು ಸಮಾಜ ಕಾರ್ಯಕರ್ತರನ್ನು ನೇಮಿಸುವುದು.
  • ಸಾಮಾಜಿಕ ಮತ್ತು ಆರ್ಥಿಕ ಏಳಿಗೆ ಮತ್ತು ಬಡತನ ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದು.
  • ಗ್ರಾಮೀಣ ಪ್ರದೇಶದಲ್ಲಿ ವಿದ್ಯುನ್ಮಾನ ಮತ್ತು ಸಾರಿಗೆ ಸಂವಹನಗಳನ್ನು ಸುಧಾರಿಸುವುದು.
  • ಸರ್ಕಾರೇತರ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು.
  • ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಶಾಖೆಗಳನ್ನು ತೆರೆಯುವುದು.
  • ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ
  • ಭಾನಾಮತಿಯ ವಿರುದ್ಧ ಪಾಠಗಳನ್ನು ಶಾಲಾ ಪಠ್ಯಕ್ರಮಗಳಲ್ಲಿ ಅಳವಡಿಸುವುದು.
  • ಭಾನಾಮತಿಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು.
  • ಭಾನಾಮತಿ ಪ್ರಕರಣಗಳನ್ನು ವಿಚಾರಣೆಗೆ ಅರ್ಹವಾದ (ಕೋರ್ಟಿನ ಗಮನಕ್ಕೆ) ತರಬಹುದಾದ ಅಪರಾಧವನ್ನಾಗಿ ಪರಿಗಣಿಸುವುದು.
  • ಅಪರಾಧಿಗಳಿಗೆ ಕಠಿಣ ಶಿಕ್ಷೆ.
  • ಮಾಧ್ಯಮಗಳ ಪಾತ್ರ (ಮುದ್ರಿತ ಮತ್ತು ವಿದ್ಯುನ್ಮಾನ)
  • ಭಾನಾಮತಿ ನಂಬಿಕೆಯನ್ನು ಹೆಚ್ಚಿಸುವ ದೂರದರ್ಶನ ಧಾರಾವಾಹಿ ಮತ್ತು ಸಿನಿಮಾ ಕಾರ್ಯಕ್ರಮಗಳನ್ನು ನಿಷೇಧಿಸುವುದು.
  • ವಿಜ್ಞಾನ ಯಾತ್ರೆ / ಇಂದ್ರಜಾಲ ಪ್ರದರ್ಶನಗಳನ್ನು ಉತ್ತೇಜಿಸುವುದು.
  • ಯುವಕರು ಮತ್ತು ಮಹಿಳೆಯರನ್ನು ಸಂಘಟಿಸುವುದು.
  • ಸಾಂಸ್ಕೃತಿಕ ಕಾರ್ಯಕ್ರಮಗಳು
  • ಭಾನಾಮತಿಗೆ ಒಳಗಾದ ಬಲಿಪಶುಗಳನ್ನು ರಕ್ಷಿಸುವುದು.

ಸರ್ಕಾರದ ಪಾತ್ರ

  • ಅಂಧವಿಶ್ವಾಸವನ್ನು ತೊಲಗಿಸುವುದು
  • ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
  • ವೈಧ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು.
  • ಭಾನಾಮತಿ ನಿಷೇಧ ಕಾರ್ಯಕ್ರಮಗಳ ಪರವಾಗಿ ಪಾತ್ರವನ್ನು ನಿರ್ವಹಿಸುವುದು
  • ರಾಜಕೀಯ ಇಚ್ಛಾಶಕ್ತಿ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate