অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾರತದ ಸಂವಿಧಾನ ದಿನ


ಅಕ್ಟೋಬರ್ 12ರಂದು ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ನವೆಂಬರ್ 26ನ್ನು ದೇಶದ ಸಂವಿಧಾನ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಸಂವಿಧಾನ ದಿನ ಆಚರಿಸುವ ಮುಖ್ಯ ಉದ್ದೇಶವೆಂದರೆ, ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದು. ಈ ದಿನದಂದು ಪ್ರತಿ ವರ್ಷ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಬೋಧಿಸಲಾಗುವುದು ಎಂದು ಮೋದಿ ಘೋಷಿಸಿದ್ದರು.
1949ರ ಆ ದಿನ ಸಂವಿಧಾನವನ್ನು ಆಂಗೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಇದು ಭಾರತದ ಇತಿಹಾಸದಲ್ಲಿ ಹೊಸ ಶಖೆಯನ್ನು ಆರಂಭಿಸಿತ್ತು. ಈ ವರ್ಷವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷವಾಗಿಯೂ ಆಚರಿಸಲಾಗುತ್ತಿದೆ.

ಭಾರತದ ಸಂವಿಧಾನ ಬಗ್ಗೆ


  • ಭಾರತದಲ್ಲಿ ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು.
  • ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.
  • ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
  • ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.
  • ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.
  • ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.
  • ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ
  • ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‍ನಿಂದ ಎರವಲು ಪಡೆಯಲಾಗಿದೆ.
  • ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
  • ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98 ತಿದ್ದುಪಡಿಗಳಿವೆ.
  • ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.
  • ಇದರ ಕರಡನ್ನು 1949ರ ನವೆಂಬರ್‍ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.
  • ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು.
  • 1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ ಬಂತು.
  • ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು.
  • ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.

ಉದ್ದೇಶಗಳು


  • ದೇಶಾದ್ಯಂತ ವರ್ಷವಿಡೀ ನಡೆಯುವ 125ನೇ ಜಯಂತಿ ಆಚರಣೆಯ ಭಾಗವಾಗಿ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.
  • ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇದನ್ನು ಆಚರಿಸಲಾಗುತ್ತಿದೆ.
  • ಸಂವಿಧಾನ ದಿನಾಚರಣೆಯ ಸಮಾರಂಭ ಆಯೋಜಿಸುವ ಹೊಣೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ವಹಿಸಲಾಗಿದೆ.
  • ಎಲ್ಲ ಸಿಬಿಎಸ್‍ಇ, ಕೇಮದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ, ಕೇಂದ್ರೀಯ ಟಿಬೇಟಿಯನ್ ಸ್ಕೂಲ್ ಅಡ್ಮಿನಿಸಟ್ರೇಷನ್ ಮತ್ತು ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಹಾಗೂ ಎಲ್ಲ ರಾಜ್ಯ ಸರ್ಕಾರಗಳ ಆಧೀನದ ಶಾಲೆಗಳು ಮೊಟ್ಟಮೊದಲ ಸಂವಿಧಾನ ದಿನಾಚರಣೆ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ.
  • 2015ರ ನವೆಂಬರ್ 26ರಂದು ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ಶಾಲಾ ಅಸೆಂಬ್ಲಿಯನ್ನು ಓದಿ ಹೇಳಬೇಕು.
  • 2015ರ ನವೆಂಬರ್ 26ರಂದು ಒಂದು ಪಿರಿಯೇಡನ್ನು ಕಡ್ಡಾಯವಾಗಿ ಸಂವಿಧಾನದ ಪ್ರಮುಖ ಲಕ್ಷಣಗಳು ಹಾಗೂ ಅದರ ರಚನೆ ಬಗ್ಗೆ ಅತಿಥಿ ಉಪನ್ಯಾಸಕರು ಅಥವಾ ಒಬ್ಬ ಶಿಕ್ಷಕರಿಂದ ಉಪನ್ಯಾಸ ನೀಡಬೇಕು.
  • ಭಾರತದ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಬೇಕು.
  • ಎಲ್ಲ ಸಿಬಿಎಸ್‍ಇ ಅಧೀನದ ಶಾಲೆಗಳ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಆನ್‍ಲೈನ್ ಪ್ರಬಂಧ ಸ್ಪರ್ಧೆಯನ್ನೂ ಆಯೋಜಿಸಬೇಕು.
  • ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಯು ಈಗಾಗಲೇ ಯುಜಿಸಿ, ಎಐಸಿಟಿಇಗೆ ಸೂಚನೆ ನೀಡಿ ಸಂವಿಧಾನ ದಿನದ ಆಚರಣೆಗೆ ಸೂಚನೆ ನೀಡಿದೆ.
  • ಎಲ್ಲ ಕಾಲೇಜುಗಳು ಸಾಧ್ಯವಿರುವ ಕಡೆಗಳಲ್ಲೆಲ್ಲ ಭಾರತದ ಸಂಸತ್ತಿನ ಬಗ್ಗೆ 2015ರ ನವೆಂಬರ್ 26ರಂದು ಅಣಕು ಸಂಸತ್ ಅಧಿವೇಶನ ಹಾಗೂ ಚರ್ಚಾಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ.
ಲಖನೌನಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಲು ಸೂಚಿಸಲಾಗಿದೆ ಎಂದು ಯುಜಿಸಿ ಮಾಹಿತಿ ನೀಡಿದೆ. ಇದರಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ.
ಯುವಜನ ವ್ಯವಹಾರಗಳ ಇಲಾಖೆ ಈ ಕೆಳಗಿನ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿದೆ.
  • ರಾಜೀವ್‍ಗಾಂಧಿ ರಾಷ್ಟ್ರೀಯ ಯುವ ಅಭಿವೃದ್ಧಿ ಸಂಸ್ಥೆಯು ಸಂವಿಧಾನದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಿದೆ.
  • ಎಲ್ಲ ಶಾಲಾ ಕಾಲೇಜುಗಳ ಎನ್‍ಎಸ್‍ಎಸ್ ಘಟಕಗಳು ಸಂವಿಧಾನದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಿವೆ.
  • ನೆಹರೂ ಯುವ ಸೇವಾ ಕೇಂದ್ರ ಹಾಗೂ ಎನ್‍ವೈಕೆಸ್ ಯುವಕ ಮಂಡಲಿಗಳು ಭಾರತದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂವಿಧಾನದ ಇತಿಹಾಸವನ್ನು ತಮ್ಮ ಪ್ರದೇಶಗಳಲ್ಲಿ ವಿವರಿಸಲು ಸೂಚಿಸಲಾಗಿದೆ.
  • ಸಂವಿಧಾನದ ಪೀಠಿಕೆಯನ್ನು ಕೇಂದ್ರ ಕಚೇರಿಯಲ್ಲಿ ಮತ್ತು ಎಲ್ಲ ಕ್ಷೇತ್ರ ಕಚೇರಿಗಳಲ್ಲಿ ಪ್ರದರ್ಶಿಸಲಾಗುವುದು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಶಾಲೆಗಳಿರುವ ಎಲ್ಲ ಕೇಂದ್ರಗಳಲ್ಲಿ ಸಂವಿಧಾನ ದಿನವನ್ನು ಆಚರಿಸುವಂತೆ ಸೂಚಿಸಿದೆ. ಅಂತೆಯೇ ಎಲ್ಲ ಮಿಷನ್‍ಗಳು ಹಾಗೂ ಸಂಸ್ಥೆಗಳು ಸಾಧ್ಯವಿರುವ ಕಡೆಗಳಲ್ಲಿ ಭಾರತದ ಸಂವಿಧಾನವನ್ನು ಸ್ಥಳೀಯ ಭಾಷೆಗಳಿಗೆ ಭಾಷಾಂತರ ಮಾಡಿ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದರ ಜತೆಗೆ ಸಂಸತ್ತು, ಭಾರತೀಯ ಕೇಂದ್ರಗಳಿಗೂ ಇದನ್ನು ವಿತರಿಸಲು ಸೂಚಿಸಲಾಗಿದೆ. ಉದಾಹರಣೆಗೆ ಭಾರತದ ಸಂವಿಧಾನವನ್ನು ಇತ್ತೀಚೆಗೆ ಅರಬ್ ಭಾಷೆಗೆ ಅನುವಾದಿಸಲಾಗಿತ್ತು.
ಗೃಹ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಅವುಗಳ ಸಂಸ್ಥೆಗಳು ಪೊಲೀಸ್-2 ವಿಭಾಗದಲ್ಲಿ ಸಂವಿಧಾನ ದಿನವನ್ನು ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

  • ಕ್ರೀಡಾ ಸಚಿವಾಲಯವು ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
  • ಎಲ್ಲ ಮುಖ್ಯ ಕಾರ್ಯದರ್ಶಿಗಳು, ಕ್ರಿಡಾ ಕಾರ್ಯದರ್ಶಿಗಳು, ಆಡಳಿತಗಾರರು ಹಾಗೂ ಸಲಹೆಗಾರರಿಗೆ ಸೂಚನೆ ನೀಡಿ, ಸಮಾನತೆಗಾಗಿ ಓಟವನ್ನು ಆಯೋಜಿಸುವಂತೆ ಕೇಳಿಕೊಳ್ಳಲಾಗಿದೆ.
  • ಭಾರತದ ಕ್ರೀಡಾ ಪ್ರಾಧಿಕಾರವು ಈ ಕೆಳಗಿನ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಿಕೊಂಡಿದೆ.
  • ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸಾಂಕೇತಿಕ ಓಟ ನಡೆಯಲಿದ್ದು, ಸಮಾನತೆಗಾಗಿ ಓಟದಲ್ಲಿ ಎಲ್ಲ ಸಾಯಿ ತರಬೇತುದಾರರು ಭಾಗವಹಿಸುವರು.
  • ಇದೇ ವ್ಯವಸ್ಥೆಯನ್ನು ಎಲ್ಲ ಪ್ರಾದೇಶಿಕ ಕೇಂದ್ರಗಳಲ್ಲೂ ಮಾಡಲಾಗಿದ್ದು, ಇಲ್ಲಿ ಸಂಘಟಿಸಿರುವ ಓಟದಲ್ಲಿ ಸಾಯಿ ತರಬೇತಿ ಪಡೆಯುತ್ತಿರುವವರು ಹಾಗೂ ಕಮ್ ಅಂಡ್ ಪ್ಲೇ ಯೋಜನೆಯ ತರಬೇತಿ ಪಡೆಯುತ್ತಿರುವವರು ಪಾಲ್ಗೊಳ್ಳುವರು.
  • 2015ರ ಅಕ್ಟೋಬರ್ 31ರಂದು ಆಯೋಜಿಸಿದ್ದ ಏಕತೆಗಾಗಿ ಓಟದ ಮಾದರಿಯಲ್ಲಿ ಈ ಬಾರಿ ಸಮಾನತೆಗಾಗಿ ಓಟವನ್ನೂ ಆಯೋಜಿಸಲಾಗುವುದು.
  • ಸಂಸದೀಯ ವ್ಯವಹಾರಗಳ ಸಚಿವಾಲವು 2015ರ ನವೆಂಬರ್ 26ರಂದು ಸಂಸತ್ ಭವನಕ್ಕೆ ದೀಪಾಲಂಕಾರ ಮಾಡಲು ನಿರ್ಧರಿಸಿದೆ. ಇದೇ ಉದ್ದೇಶದಿಂದ ಆ ದಿನದಂದು ವಿಶೇಷ ಅಧಿವೇಶನ ಕರೆಯಲಾಗಿದೆ.

ಮೂಲ : ಯು ಸಿ ಸಿ  ಇಂಡಿಯಾ

ಕೊನೆಯ ಮಾರ್ಪಾಟು : 7/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate