অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಎಲ್ಲರೂ ಸಮಾನರು

ಎಲ್ಲರೂ ಸಮಾನರು

ವರದಕ್ಷಿಣಯು ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿದ್ದು, ಊಹಿಸಲು ಸಾಧ್ಯವಾದಂತಹ ಚಿತ್ರಹಿಂಸೆ, ದುಷ್ಕಾರ್ಯವನ್ನು ಮಹಿಳೆಯರ ವಿರುದ್ಧ ನಡೆಸಲು ಕಾರಣವಾಗುತ್ತದೆ. ಈ ಪಿಡುಗು ಸಮಾಜದಲ್ಲಿ ಬಡವ, ಮಧ್ಯಮ ಅಥವಾ ಶ್ರೀಮಂತ ವರ್ಗದವರು ಯಾರೆ ಇರಲಿ ಎಲ್ಲರ ಜೀವವನ್ನು ಬಲಿತೆಗೆದುಕೊಂಡಿದೆ. ಆದರೆ ಬಡವರು ಮಾಹಿತಿಯ ಕೊರತೆ ಇರುವುದರಿಂದ, ಹಾಗೂ ಶಿಕ್ಷಣ ಕೊರತೆಯಿಂದಾಗಿ ಈ ಪಿಡುಗಿಗೆ ಸುಲಭವಾಗಿ ಬಲಿಯಾಗುತ್ತಾರೆ. ವರದಕ್ಷಿಣೆ ಪದ್ಧತಿಯಿಂದಾಗಿ ಗಂಡು ಮಕ್ಕಳನ್ನು ನೋಡುವಷ್ಟು ಮೌಲ್ಯಯುತವಾಗಿ ಹೆಣ್ಣು ಮಕ್ಕಳನ್ನು ನೋಡಲಾಗುತ್ತಿಲ್ಲ. ಸಮಾಜದಲ್ಲಿ ಬಹಳಷ್ಟು ಸಂಧರ್ಭದಲ್ಲಿ ಹೆಣ್ಣು ಮಕ್ಕಳನ್ನು ಹೊರೆ ಎಂದು ಭಾವಿಸಲಾಗುತ್ತದೆ ಹಾಗೂ ಅವರನ್ನು ಪರಾಧೀನ ರಾಗಿಸಿ, ಶಿಕ್ಷಣ ಇನ್ನೂ ಮುಂತಾದ ಸೌಲಭ್ಯಗಳಲ್ಲಿ ಎರಡನೇ ದರ್ಜೆಯ ಸೌಲಭ್ಯ ನೀಡಲಾಗುತ್ತದೆ.

ವರದಕ್ಷಿಣೆ ಪಿಡುಗನ್ನು ತೊಲಗಿಸಲು, ಸರ್ಕಾರವು ಹಲವು ಕಾನೂನು ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಂಡು, ವಿವಿಧ ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

  • ಸಮಾಜ ಈಗ ಎಚ್ಚೆತ್ತು, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ವರದಕ್ಷಿಣೆಯನ್ನು ಕೊಡದೇ ಇರುವುದು ಮತ್ತು ತೆಗೆದುಕೊಳ್ಳದೇ ಇರುವುದರ ಮೂಲಕ ನಾವೆಲ್ಲರೂ ಮುಂದೆ ಹೆಜ್ಜೆಯನ್ನಿಟ್ಟರೆ, ಅಗತ್ಯವಾದ ಬದಲಾವಣೆಗಳನ್ನು ತರಬಹುದು. ನಾವೆಲ್ಲರೂ ನಮ್ಮ ಹೆಣ್ಣು ಮಕ್ಕಳ ಮೌಲ್ಯವನ್ನು ಅವರಿಗೆ ಮನದಟ್ಟು ಮಾಡಬೇಕು. ಅಂದಾಗ ಮಾತ್ರ ಅವರು ಬೆಳೆದ ನಂತರ ಅವರಿಗೂ ಮತ್ತು ಊಳಿದವರಿಗೂ ಅವರ ಮೌಲ್ಯದ ಅರಿವು ಆಗುತ್ತದೆ. ಇದಕ್ಕಾಗಿ ಹಲವು ಅಭ್ಯಾಸಗಳನ್ನು ರಾಢಿಸಿಕೊಳ್ಳಬೆಕಾಗಿದೆ. ಇವು ಯಾವುವೆಂದರೆ.
  • ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದು.
  • ಅವರ ಇಮನೊಪ್ಪಿದ ಉದ್ಯೋಗವನ್ನು ಅವರೇ ಆರಿಸಿಕೊಳ್ಳುವಂತೆ ನೋಡಿಕೊಳ್ಳುವುದು
  • ಸ್ವತಂತ್ರವಾಗಿರಲು ಮತ್ತು ಜವಾಬ್ದಾರಿಯುತರಲು ಶಿಕ್ಷಣ ಕೊಡುವುದು.
  • ತಮ್ಮ ಹೆಣ್ಣು ಮಕ್ಕಳನ್ನು ಯಾವುದೇ ತಾರತಮ್ಯವಿಲ್ಲದೆ ನೋಡಿಕೊಳ್ಳುವುದು.
  • ವರದಕ್ಷಿಣೆ ಕೊಡುವ ಅಥವಾ ತೆಗೆದುಕೊಳ್ಳುವ ಅಭ್ಯಾಸವನ್ನು ಪ್ರೋತ್ಸಾಹಿಸದಿರುವುದು. ಮೇಲಿನ ಅಭ್ಯಾಸಗಳು ಮನೋಭಾವದಲ್ಲಿ ಅಗತ್ಯವಾದ ಬದಲಾವಣೆ ತರುತ್ತವೆ.

ಮೇಲಿನ ಅಭ್ಯಾಸಗಳು ಮನೋಭಾವದಲ್ಲಿ ಅಗತ್ಯವಾದ ಬದಲಾವಣೆ ತರುತ್ತವೆ.

  • ತಂದೆ ತಾಯಿಗಳು ಹೆಣ್ಣು ಮಕ್ಕಳನ್ನು ಅವರ ಗಂಡಂದಿರು ನೋಡಿಕೊಳ್ಳುತ್ತಾರೆ ಎಂಬ ಭಾವನೆಯಿಂದ ಅವರು ಶಿಕ್ಷಣದ ಬಗ್ಗೆ ಅಗತ್ಯವಾದ ಗಮನ ಹರಿಸುವುದಿಲ್ಲ.
  • ಸಮಾಜದ ಬಡವರ್ಗದವರು ತಮ್ಮ ಹೆಣ್ಣು ಮಕ್ಕಳನ್ನು ಹೊರಗಡೆ ಹಣ ಸಂಪಾದನೆ ಮಾಡಲು ಕೆಲಸಕ್ಕೆ ಕಳಿಸುತ್ತಾರೆ ಏಕೆಂದರೆ ಅದು ವರದಕ್ಷಿಣೆ ನೀಡಲು ಬೇಕಾದ ಉಳಿತಾಯ ವಾಗುವುದು.
  • ಮಧ್ಯಮ ಮತ್ತು ಮೇಲ್ವರ್ಗದ ಹಿನ್ನೆಲೆಯಿರುವವರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ ಆದರೆ ಅವರ ಜೀವನ ವೃತ್ತಿಯ ಅವಕಾಶಗಳ ಬಗ್ಗೆ ಯೋಚಿಸುವುದಿಲ್ಲ.

ಅತಿ ಶ್ರೀಮಂತ ವರ್ಗದ ತಂದೆ ತಾಯಿಗಳು ತಮ್ಮ ಮಗಳನ್ನು ಮದುವೆಯಾಗುವ ವರೆಗೆ ಸಂತೋಷದಿಂದ ಬೆಂಬಲಿಸಸುವುರು ನಂತರ ವರದಕ್ಷಿಣೆಯನ್ನು ನೀಡುವರು

ಆದ್ದರಿಂದಲೇ ಹೆಣ್ಣುಮಗಳಿಗೆ ಶಿಕ್ಷಣ ಮತ್ತು ಸ್ವಾತಂತ್ರ್ಯ ನೀವು ನೀಡುವ ಬಹಳ ಶಕ್ತಿಯುತ ಮತ್ತು ಮೌಲ್ಯಯುತ ಕೊಡುಗೆಯಾಗಿದೆ. ಆದ್ದರಿಂದಲೇ ಅವಳು ಹಣದ ವಿಷಯದಲ್ಲಿ ಮನೆಯವರಿಗೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿರುತ್ತಾಳೆ ಹಾಗೂ ಕುಟುಂಬದಲ್ಲಿ ಗೌರವದ ಮತ್ತು ಸರಿಯಾದ ಸ್ಥಾನಮಾನವನ್ನು ಪಡೆಯುತ್ತಾಳೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate