অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು

ಬಾಲನ್ಯಾಯ ಕಾಯಿದೆ

ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2000 ಕೇಂದ್ರ ಕಾಯ್ದೆಯಾಗಿದ್ದು 01-04-2001ರಿಂದ ಜಾರಿಗೆ ಬಂದಿದೆ. ಕಾಯ್ದೆಗೆ 23006ರಲ್ಲಿ ತಿದ್ದುಪಡಿ ಮಾಡಲಾಗಿದ್ದು 23-08-06ರ ;ಅಧಿಕೃತ ಗೆಜೆಟ್ನಲ್ಲಿ ಪ್ರಕಟಣೆಯಾಗಿದೆ. ಕೇಂದ್ರ ಸಕರ್ಾರದ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ನಿಯಮ, 2007ನ್ನು 25-09-08ರ ಕನರ್ಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ರಾಜ್ಯವು ಕರಡು ನಿಯಮಗಳನ್ನು ಸಿದ್ದಪಡಿಸಿ ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಇಲಾಖೆಯ ಅನುಮೋದನೆಗೆ ಕಳುಹಿಸಿದೆ. ಈ ಕಾಯ್ದೆಯಲ್ಲಿನ ಅವಕಾಶದಂತೆ ಸಕರ್ಾರವು 28 ಮಕ್ಕಳ ಕಲ್ಯಾಣ ಸಮಿತಿಗಳನ್ನು 27 ಜಿಲ್ಲೆಗಳಲ್ಲಿ ಸ್ಥಾಪಿಸಿದೆ. ಇವುಗಳಲ್ಲಿ ಬೆಂಗಳೂರು ನಗರದಲ್ಲಿ 2 ಮಕ್ಕಳ ಕಲ್ಯಾಣ ಸಮಿತಿಗಳು ಕಾರ್ಯ ನಿರ್ವಹಿಸುತ್ತದೆ. ರಾಜ್ಯದಲ್ಲಿ 8 ಬಾಲನ್ಯಾಯ ಮಂಡಳಿಗಳನ್ನು 8 ವೀಕ್ಷಣಾಲಯಗಳ ಕಾರ್ಯ ನಿರ್ವಹಣೆಗಾಗಿ ಸ್ಥಾಪಿಸಲಾಗಿದೆ. 21 ವೀಕ್ಷಣಾಲಯಗಳನ್ನು ಸ್ಥಾಪಿಸಲು ಸಕರ್ಾರ ಆದೇಶ ಹೊರಡಿಸಿದೆ. 21 ಬಾಲನ್ಯಾಯ ಮಂಡಳಿಗಳ ರಚನೆ ಹಂತದಲ್ಲಿದೆ. ಹೀಗೆ 29 ಬಾಲನ್ಯಾಯ ಮಂಡಳಿಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ.

ವೀಕ್ಷಣಾಲಯ

ವೀಕ್ಷಣಾಲಯಗಳು ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳಿಗಾಗಿ ಅವರ ವಿರುದ್ದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಸ್ವೀಕರಿಸುವ ಸಂಸ್ಥೆಗಳಾಗಿರುತ್ತದೆ.

ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಶಾಸನಗಳನ್ವಯ ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳನ್ನು ಮಾತ್ರ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಕಾನೂನಿನೊಡನೆ ಸಂಘರ್ಷಣೆಗೆ ಒಳಪಟ್ಟ ಮಕ್ಕಳನ್ನು ಪೊಲೀಸರ ಮುಖಾಂತರ ದಾಖಲು ಪಡಿಸಲಾಗುತ್ತದೆ. ಅಲ್ಲಿ 4 ತಿಂಗಳವರೆಗೆ ಸಾಮಾನ್ಯವಾಗಿ ಪರಿವೀಕ್ಷಣೆಗಾಗಿ ಇಡಲಾಗುವುದು. ಮಂಜೂರಾಗಿರುವ 29 ವೀಕ್ಷಣಾಲಯಗಳಲ್ಲಿ 8 ವೀಕ್ಷಣಾಲಯಗಳು ಬೆಂಗಳೂರು ನಗರ, ಮೈಸುರು, ದಾರವಾಡ, ಗುಲ್ಬರ್ಗ, ಶಿವಮೊಗ್ಗ, ಬಳ್ಳಾರಿ, ಬಿಜಾಪುರ ಮತ್ತು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದ 21 ವೀಕ್ಷಣಾಲಯಗಳೂ ಪ್ರಾರಂಭವಾಗಬೇಕಾಗಿದೆ.

ಜನವರಿ 2010ರ ಅಂತ್ಯದವರೆಗೆ 8 ವೀಕ್ಷಣಾಲಯಗಳಲ್ಲಿ 181 ಮಕ್ಕಳು ದಾಖಲಾಗಿದ್ದು ಜನವರಿ ಅಂತ್ಯಕ್ಕೆ 136 ಮಕ್ಕಳು ಇದ್ದಾರೆ. 6 ವೀಕ್ಷಣಾಲಯಗಳೂ ಸಕರ್ಾರಿ ಕಟ್ಟಡದಲ್ಲಿದ್ದು 2 ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತವೆ.
ಬಾಲಾಪರಾಧಿಗಳ ಪುನರ್ವಸತಿಗಾಗಿ ವೀಕ್ಷಣಾಲಯಕ್ಕೆ ಸೇರಿದಂತೆ 2 ವಿಶೇಷ ಗೃಹಗಳ ಘಟಕವನ್ನು ಸ್ಥಾಪಿಸಲಾಗಿದೆ. ಬಾಲಕಿಯರಿಗಾಗಿ ಬೆಂಗಳೂರಿನಲ್ಲಿ ಒಂದು ಬಾಲಕಿಯರ ಬಾಲಮಂದಿರಕ್ಕೆ ಹೊಂದಿಕೊಂಡಂತೆ ಹಾಗೂ ಬಾಲಕರಿಗಾಗಿ ಧಾರವಾಡದಲ್ಲಿ ವೀಕ್ಷಣಾಲಯಕ್ಕೆ ಹೊಂಡಿಕೊಂಡಂತೆ ಬಾಲಕರಿಗಾಗಿ ಧಾರವಾಡದಲ್ಲಿ ವೀಕ್ಷಣಾಲಯಕ್ಕೆ ಹೊಂದಿಕೊಂಡಂತೆ ಸ್ಥಾಪಿಸಲಾಗಿದೆ. ಜನವರಿ 2010ರಂತ್ಯಕ್ಕೆ ವಿಶೇಷ ಗೃಹಗಳಿಗೆ ಯಾವುದೇ ಮಕ್ಕಳು ದಾಖಲಾಗಿಲ್ಲ.

ಬಾಲ ಮಂದಿರಗಳು

ಬಾಲ ಮಂದಿರಗಳು ಯಾವುದೇ ವಿಚಾರಣೆ ಕಾಯ್ದಿಟ್ಟ ಅವಧಿಯಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಇರುವ ಸ್ವಾಗತ ಕೇಂದ್ರಗಳು. ಹೆಣ್ಣು ಮಕ್ಕಳಿಗಾಗಿ 17 ಬಾಲ ಮಂದಿರಗಳು ಗಂಡು ಮಕ್ಕಳಿಗಾಗಿ 26 ಬಾಲ ಮಂದಿರಗಳುನ್ನು ನಡೆಸಲಾಗುತ್ತಿದೆ. ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ತಂದು ಬಾಲ ಮಂದಿರಗಳಿಗೆ ದಾಖಲು ಮಾಡಲಾಗುವುದು. ಬಾಲಮಂದಿರವು ವಸತಿಯ ಜೊತೆಗೆ ಶಿಕ್ಷಣ, ಮನೋರಂಜನೆ, ತರಬೇತಿ ಹಾಗು ಮಕ್ಕಳ ಪುನರ್ವಸತಿಯನ್ನು ಮಾಡುತ್ತದೆ. ಸಕರ್ಾರ ನಿಗದಿಪಡಿಸಿರುವ ಅಳತೆಯಲ್ಲಿ ಮಕ್ಕಳಿಗೆ ಆಹಾರ, ಬಟ್ಟೆ ಹಾಗು ಹಾಸಿಗೆ ಹೊದಿಕೆಯನ್ನು ಒದಗಿಸಲಾಗುವುದು. ಮಕ್ಕಳಿಗೆ ಶಿಕ್ಪ್ಷಣದ ಜೊತೆಗೆ ವಿವಿದ ಕಲೆಗಳಲ್ಲಿ ತರಬೇತಿ ನೀಡಲಾಗುವುದು. 6 ವರ್ಷಕ್ಕಿಂತ ಚಿಕ್ಕ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಶಿಶು ಮಂದಿರ ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ಬುದ್ದಿ ಮಾಂದ್ಯ ಬಾಲಕರಿಗಾಗಿ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಹಾಗೂ ಬಾಲಕಿಯರಿಗಾಗಿ ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಬಾಲಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು 18 ವರ್ಷ ಒಳಗಿನ ಬುದ್ದಿಮಾಂಧ್ಯ ಮಕ್ಕಳನ್ನು ಈ ಸಂಸ್ಥೆಗಳಿಗೆ ದಾಖಲು ಮಾಡಲಾಗುವುದು.

ಮಕ್ಕಳ ಕಲ್ಯಾಣ ಸಮಿತಿಯ ಮತ್ತು ಬಾಲನ್ಯಾಯ ಮಂಡಳಿಯ ಸದಸ್ಯರುಗಳಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ.

2009-10 ಸಾಲಿನಲ್ಲಿ 884 ಗಂಡು ಮತ್ತು 353 ಹೆಣ್ಣು ಮಕ್ಕಳು ಸಂಸ್ಥೆಗೆ ದಾಖಾಲಾಗಿದ್ದಾರೆ, 2010 ರ ಜನವರಿ ಅಂತ್ಯಕ್ಕೆ ಸಂಸ್ಥೆಗಳಲ್ಲಿ 714 ಬಾಲಕ್ಪರು ಮತ್ತು 611 ಬಾಲಕಿಯರು ಪಾಲನೆ ಮತ್ತು ರಕ್ಷಣೆ ಪಡೆಯುತ್ತಿದ್ದಾರೆ. 46 ಮಕ್ಕಳು ಶಿಶು ಮಂದಿರಕ್ಕೆ ದಾಖಲಾಗಿದ್ದು ಜನವರಿ 2010ರ ಅಂತ್ಯಕ್ಕೆ 40 ಮಕ್ಕಳು ಇರುತ್ತಾರೆ. 34 ಬಾಲ ಮಂದಿರಗಳು ಸಕರ್ಾರಿ ಕಟ್ಟಡದಲ್ ಲಿ ಉಳಿದವುಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ

ಅರ್ಹ ಸಂಸ್ಥೆಗಳು

ಅನಾಥ ಶಿಶುಗಳ, ನಿರ್ಗತಿಕ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒದಗಿಸಲು ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಒಟ್ಟು 39 ಸ್ವಯಂ ಸೇವಾ ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ಗುರುತಿಸಲಾಗಿದ್ದು 700 ಮಕ್ಕಳು ಈ ಸಂಸ್ಥೆಗಳಲ್ಲಿ ಜನವರಿ 2010ರ ಅಂತ್ಯಕ್ಕೆ ಇರುತ್ತಾರೆ. ಇದರಲ್ಲಿ 10 ಸಂಸ್ಥೆಗಳಿಗೆ ಮಾತ್ರ 500/- ರೂಪಾಯಿಯಂತೆ ಮಾಸಿಕ ನಿರ್ವಹಣಾ ವೆಚ್ಚವನ್ನು ಮತ್ತು ಸಿಬ್ಬಂದಿ ವ್ಭೆತನವನ್ನು ನೀಡಲಾಗುತ್ತಿದೆ.

ಅನಾಥ ಶಿಶುಗಳ, ನಿರ್ಗತಿಕ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒದಗಿಸಲು ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಒಟ್ಟು 39 ಸ್ವಯಂ ಸೇವಾ ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ಗುರುತಿಸಲಾಗಿದ್ದು 700 ಮಕ್ಕಳು ಈ ಸಂಸ್ಥೆಗಳಲ್ಲಿ ಜನವರಿ 2010ರ ಅಂತ್ಯಕ್ಕೆ ಇರುತ್ತಾರೆ. ಇದರಲ್ಲಿ 10 ಸಂಸ್ಥೆಗಳಿಗೆ ಮಾತ್ರ 500/- ರೂಪಾಯಿಯಂತೆ ಮಾಸಿಕ ನಿರ್ವಹಣಾ ವೆಚ್ಚವನ್ನು ಮತ್ತು ಸಿಬ್ಬಂದಿ ವ್ಭೆತನವನ್ನು ನೀಡಲಾಗುತ್ತಿದೆ.

ವಿ.ಬಾ.ಘಟಕಗಳ ಸ್ಥಾಪನೆ

ಒಂದು ಪೋಲೀಸ್ ಆಯುಕ್ತರ ಕಛೇರಿಯಲ್ಲಿ ಮತ್ತು 19 ಜಿಲ್ಲೆಗಳಲ್ಲಿ ವಿಶೇಷ ಬಾಲ ಪೋಲೀಸ್ ಘಟಕವನ್ನು ತೆರೆಯಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳನ್ನಾಗಿ ಪೋಲೀಸ್ ನಿರೀಕ್ಷಕರ ಶ್ರೇಣಿಯ ಅಧಿಕಾರಿಗಳನ್ನು ಗುರುತಿಸಲಾಗಿದೆ .

ಪ್ರತಿ ಪೋಲೀಸ್ ಠಾಣೆಯಲ್ಲಿ ಬಾಲ ನ್ಯಾಯ ವ್ಯವಸ್ಥೆಯಡಿಯಲ್ಲಿ ಬರುವ ಮಕ್ಕಳನ್ನು ನೋಡಿಕೊಳ್ಳಲು ಸಹಾಯಕ ಸಬ್ಇನ್ಸಪೆಕ್ಟರ್ ಶ್ರೇಣಿಯ ಒಂದು ಅಥವಾ ಎರಡು ಪೋಲೀಸ್ ಅಧಿಕಾರಿಗಳನ್ನು ಮಕ್ಕಳ ಕಲ್ಯಾಣ ಅಧಿಕಾರಿಗಳೆಂದು ಗುರುತಿಸಲಾಗಿದೆ.

ಇಲಾಖೆಯು ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಕಲ್ಯಾಣ ಅಧಿಕಾರಿಗಳಿಗೆ ತರಬೇತಿ ನೀಡಲು 6 ಲಕ್ಷ ರೂಪಾಯಿಗಳನ್ನು ಪೋಲೀಸ್ ಇಲಾಖೆಗೆ ನೀಡಿದೆ.

ಸ್ವೀಕಾರ ಕೇಂದ್ರಗಳು

ರಾಜ್ಯದಲ್ಲಿ 4 ಸ್ವೀಕಾರ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಆಶ್ರಯ ಮತ್ತು ಪೋಷಣೆಗಾಗಿ ಸ್ವಇಚ್ಛೆ ಮೇಲೆ ಹಾಗು ನ್ಯಾಯಾಲಯದಿಂದ ಅನೈತಿಕ ವ್ಯವಹಾರಗಳ (ತಡೆಗಟ್ಟುವುದು) ಅಧಿನಿಯಮದಡಿ ಕಳುಹಿಸಲ್ಪಟ್ಟ ಮಹಿಳೆ ಮತ್ತು ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳಲಾಗುವ್ಯದು. ಇಲ್ಲಿ ಅವರಿಗೆ ಮುಂದಿನ ಪುನರ್ವಸತಿಗಾಗಿ ವಿವಿಧ ತರಬೇತಿಗಳು ಉದಾಹರಣೆ: ಹೊಲಿಗೆ, ಬ್ಯೂಟೀಷಿಯನ್, ಮೆಹಂದಿ ಹಾಕುವ, ಕೈದೋಟ ಮುಂತಾದ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ನೀಡಲಾಗುತ್ತಿದೆ. ಈ ವರ್ಷದಲ್ಲಿ 77 ದಾಖಲಾತಿಗಳಾಗಿದ್ದು ಜನವರಿ 2010ರ ಅಂತ್ಯಕ್ಕೆ 77 ಮಹಿಳೆಚಿುರು ಸಂಸ್ಥೆಯಲ್ಲಿರುತ್ತಾರೆ. ಬೆಂಗಳೂರು ಕೇಂದ್ರದ 2 ಮಹಿಳೆಯರ ಮತ್ತು ಕಾರವಾರ ಸ್ವೀಕಾರ ಕೇಂದ್ರದ 4 ಮಹಿಳೆಯರಿಗೆ ಮದುವೆ ನಡೆಸಲಾಗಿದೆ. ಎಲ್ಲಾ ಸ್ವೀಕಾರ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ.

ರಾಜ್ಯ ಮಹಿಳಾ ನಿಲಯಗಳು

ಪ್ರಸ್ತುತ ರಾಜ್ಯದಲ್ಲಿ 8 ಮಹಿಳಾ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಹಿಳೆಯರನ್ನು ದಾಖಲು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿರುವ ರಕ್ಷಣಾ ಗೃಹವು ಅನೈತಿಕ ವ್ಯವಹಾರಗಳ (ತಡೆಗಟ್ಟುವಿಕೆ) ಅಧಿನಿಯಮ 1956 ಅಡಿಯಲ್ಲಿ ನ್ಯಾಯಾಲಯದಲ್ಲಿ ದಾಖಲಿಸಿದ ಪ್ರಕರಣಗಳು ಹಾಗೂ ಇತರೆ ರಾಜ್ಯ ಗೃಹ ಮತ್ತು ಸ್ವೀಕಾರ ಕೇಂದ್ರಗಳಿಂದ ವಗರ್ಾವಣೆಯಾದ ಪ್ರಕರಣಗಳನ್ನು ಸ್ವೀಕರಿಸುತ್ತದೆ. 7 ರಾಜ್ಯ ಮಹಿಳಾ ನಿಲಯಗಳು ಸಕರ್ಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇಲಾಖೆಯು ಈ ವರ್ಷದಲ್ಲಿ ಈ ಸಂಸ್ಥೆಗಳಲ್ಲಿನ 26 ಮಹಿಳೆಯರಿಗೆ ವಿವಾಹವನ್ನು ನೆರವೇರಿಸಿದೆ. 7 ಮಹಿಳೆಯರನ್ನು ಮನೆ ಕೆಲಸ ನಿರ್ವಹಿಸಲು ತರಬೇತಿ ನೀಡಿ ಕಳುಹಿಸಿದೆ. 52 ಮಹಿಳೆಯರನ್ನು ಪೋಷಕರ ವಶಕ್ಕೆ ಬಿಡುಗಡೆ ಮಾಡಿದೆ. ಸಂಸ್ಥೆಗಳಲ್ಲಿ ಕೆಲವು ಮಹಿಳೆಯರು ಉನ್ನತ ಶಿಕ್ಷಣವನ್ನು ಇಲಾಖಾ ವತಿಯಿಂದ ಪಡೆಯುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ;ಹೊಲಿಗೆ, ಎಂಬ್ರಾಯ್ಡರಿ, ಬ್ಯೂಟಿಷಿಯನ್, ಜೀನ್ಸ್ ಉಡುಪು ತಯಾರಿಸುವುದು, ಸಿದ್ದ ಉಡುಪು, ಟ್ರಾಫಿಕ್ ಪೊಲೀಸ್, ಗಣಕ ಯಂತ್ರ, ಫ್ರಂಡ್ ಶಿಪ್ ಬ್ಯಾಂಡ್ ತಯಾರಿಕೆಯಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. 2010ರ ಜನವರಿ ಅಂತ್ಯಕ್ಕೆ 393 ಮಹಿಳೆಯರು ದಾಖಲಾಗಿದ್ದು 268 ಮಹಿಳೆಯರು ಜನವರಿ 2010ಕ್ಕೆ ಸಂಸ್ಥೆಗಳಲ್ಲಿ ಇರುತ್ತಾರೆ

ಅನುಪಾಲನಾ ಸೇವೆಗಳು

ಬಾಲಕರ ಬಾಲಮಂದಿರಗಳಿಂದ 18 ವರ್ಷ ಪೂರ್ಣಗೊ0ಡು ವಗರ್ಾವಣೆಗೊಳಪಟ್ಟ ಮಕ್ಕಳನ್ನು ದಾಖಲಿಸಿಕೊಳ್ಳಲು 3 ಪುರುಷರ ಅನುಪಾಲನಾ ಗೃಹಗಳು ಕಾರ್ಯ ನಿರ್ವಹಿಸುತ್ತಿವೆ. ಐ.ಟಿ.ಐ. ಪಾಲಿಟೆಕ್ನಿಕ್ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪಡೆಯಲು ಮಕ್ಕಳನ್ನು ಪ್ರೋತ್ಸಾಹಿಸಲಾಗಿ ಇವರಿಗೆ ಸೂಕ್ತ ಉದ್ಯೋಗಗಳನ್ನು ದೊರಕಿಸಿ ಪುನರ್ವಸತಿ ಕಲ್ಪಿಸಲು ಶ್ರಮಿಸಲಾಗುತ್ತದೆ. ಈ ಸಾಲಿನಲ್ಲಿ 100 ದಾಖಲೆಯಾಗಿದ್ದು ಜನವರಿ 2010ರ ಅಂತ್ಯಕ್ಕೆ 100 ಯವಕರು ಸಂಸ್ಥೆಗಳಲ್ಲಿ ಇದ್ದಾರೆ.ಬಾಲಕರ ಬಾಲಮಂದಿರಗಳಿಂದ 18 ವರ್ಷ ಪೂರ್ಣಗೊ0ಡು ವಗರ್ಾವಣೆಗೊಳಪಟ್ಟ ಮಕ್ಕಳನ್ನು ದಾಖಲಿಸಿಕೊಳ್ಳಲು 3 ಪುರುಷರ ಅನುಪಾಲನಾ ಗೃಹಗಳು ಕಾರ್ಯ ನಿರ್ವಹಿಸುತ್ತಿವೆ. ಐ.ಟಿ.ಐ. ಪಾಲಿಟೆಕ್ನಿಕ್ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪಡೆಯಲು ಮಕ್ಕಳನ್ನು ಪ್ರೋತ್ಸಾಹಿಸಲಾಗಿ ಇವರಿಗೆ ಸೂಕ್ತ ಉದ್ಯೋಗಗಳನ್ನು ದೊರಕಿಸಿ ಪುನರ್ವಸತಿ ಕಲ್ಪಿಸಲು ಶ್ರಮಿಸಲಾಗುತ್ತದೆ. ಈ ಸಾಲಿನಲ್ಲಿ 100 ದಾಖಲೆಯಾಗಿದ್ದು ಜನವರಿ 2010ರ ಅಂತ್ಯಕ್ಕೆ 100 ಯವಕರು ಸಂಸ್ಥೆಗಳಲ್ಲಿ ಇದ್ದಾರೆ.

ಸು.ಸಂ.ನಿ.ಕೌ.ಯೋಜನೆ

ಸುಧಾರಣಾ ಸಂಸ್ಥೆಗಳಲ್ಲಿ ದಾಖಲಾಗುವ ಮಹಿಳೆಯರು ಮತ್ತು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನುಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ರೂಪಿಸಲಾಗಿದೆ. ಇದನ್ನು ಶಿಕ್ಷಣದ ಜೊತೆಗೆ ವಿವಿಧ ಕುಶಲ ಕಲೆಗಳಲ್ಲಿ ತರಬೇತಿ ನೀಡಿ ಅವರಿಗೆ ಮುಂದಿನ ಜೀವನಕ್ಕೆ ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯಡಿ ಎಲ್ಲಾ ಸುಧಾರಣಾ ಸಂಸ್ಥೆಯ ನಿವಾಸಿಗಳು ಆಸಕ್ತಿ ಅರ್ಹತೆಗೆ ಅನುಗುಣವಾಗಿ ಯಾವುದೇ ಕುಶಲತೆಯಲ್ಲಿ ಪ್ರತಿಷ್ಟಿತ ತರಬೇತಿ ಕೇಂದ್ರಗಳಲ್ಲಿ ಅಥವಾ ಪ್ರತಿಸ್ಠಿತ ಸಂಸ್ಥೆಗಳ ಮೂಲಕ ಸುಧಾರಣಾ ಸಂಸ್ಥೆಗಳ ಆವರಣದಲ್ಲಿ ತರಬೇತಿಯನ್ನು ಪಡೆಯಬಹುದಾಗಿದೆ.

ವಿವಿಧ ವಯೋವರ್ಗದ ನಿವಾಸಿಗಳಿಗೆ ಸೈಕಲ್ ದುರಸ್ತಿ, ಮೊಬೈಲ್ ದುರಸ್ತಿ, ಆಟೋಮೊಬೈಲ್ ರಿಪೇರಿ, ಪ್ಲಂಬಿಂಗ್ ಕೆಲಸ, ಬಾರ್ ಬೆಂಡಿಂಗ್, ಹೇರ್ ಕಟಿಂಗ್, ಕಂಪ್ಯೂಟರ್ ತರಬೇತಿ, ಅಗರಬತ್ತಿ ಮತ್ತು ಅಗರಬತ್ತಿ ಕೊಳವೆಗಳ ತಯಾರಿಕೆ, ಚಾಲನಾ ತರಬೇತಿ, ಆಹಾರ ಸಂಸ್ಖರಣೆ, ಚರ್ಮದ ಚೀಲ, ಬ್ಯೂಟೀಷಿಯನ್ ತರಬೇತಿ, ಹೊಲಿಗೆ ತರಬೇತಿ ಹೋಂ ನಸರ್ಿಂಗ್, ಜರಿ ಕೆಲಸ, ಸಿದ್ದ ಉಡುಪು ಪ್ರತಿ ನಿವಾಸಿಗೆ ವರ್ಷದಲ್ಲಿ ಎರಡು ತರಬೇತಿ ಪಡೆಯಲು ಅವಕಾಶ ಇರುತ್ತದೆ. ಇದರೊಂದಿಗೆ ಅವರು ಗುಂಪು ತರಬೇತಿಯನ್ನು ಪಡೆಯಬಹುದಾಗಿದೆ. ಪ್ರತಿ ನಿವಾಸಿಗಿ ಗರಿಷ್ಟ 10000/- ರೂಪಾಯಿಗಳವರೆಗೂ ಹಣಕಾಸು ನೆರವು ನೀಡಲಾಗುವುದು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದವರು ಡಿಪ್ಲೋಮಾ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಸದರಿ ತರಬೇತಿಗೆ ತಗಲುವ ವೆಚ್ಚವನ್ನು ಇಲಾಖೆಯು ಭರಿಸುತ್ತದೆ.

ಈ ಕಾರ್ಯಕ್ರಮಕ್ಕಾಗಿ 20 ಲಕ್ಷ ರೂಪಾಯಿಗಳನ್ನು ನಿಗದಿಮಾಡಲಾಗಿದ್ದು ಈ ಸಾಲಿನಲ್ಲಿ 3.22 ಲಕ್ಷ ರೂಪಾಯಿಗಳನ್ನು ಜನವರಿ 2010ರವರೆಗೆ ಖಚರ್ು ಮಾಡಲಾಗಿದೆ.

ಮಕ್ಕಳ ಸಹಾಯವಾಣಿ ಸೇವೆ

ಇದು ಕೇಂದ್ರ ಸಕರ್ಾರದ ಯೋಜನೆಯಾಗಿದ್ದು, ತೊಂದರೆಯಲ್ಲಿರುವ ಹಾಗೂ ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಕರೆಗಳಿಗೆ ಸ್ಪಂದಿಸಿ ಮಕ್ಕಳ ರಕ್ಷಣೆಗಾಗಿ ಅಂತಜರ್ಾಲ ಸೃಷ್ಠಿಸುವ ಉದ್ದೇಶವನ್ನು ಹೊಂದಿದೆ.  ಈ ಸೇವೆಯಡಿ 1098 ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಯಾವುದೇ ತೊಂದರೆಗೆ ಒಳಗಾದ ಮಕ್ಕಳು, ಮಕ್ಕಳ ಪರವಾಗಿ ಯಾರಾದರೂ ದಿನದ 24 ಗಂಟೆಗಳಲ್ಲಿಯೂ ನೆರವು ಪಡೆಯಬಹುದಾಗಿರುತ್ತದೆ.  ಈ ಸೇವೆಗಳನ್ನು ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಒದಗಿಸಲಾಗುತ್ತಿದೆ. ವಿವಿಧ ಇಲಾಖೆಗಳ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಸ್ವಯಂ ಸೇವಾ ಸಂಸ್ಥಗಳ ಸದಸ್ಯರನ್ನೊಳಗೊಂಡ ಸಲಹಾ ಮಂಡಲಿಯನ್ನು ರಚಿಸಲಾಗಿದೆ.

ಬೆಂಗಳೂರಿನಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯನ್ನು ನೋಡಲ್ ಏಜೆನ್ಸಿಯನ್ನಾಗಿ ಗುರುತಿಸಿದೆ.  ನಗರವನ್ನು ಮೂರು ವಲಯಗಳನ್ನಾಗಿ ವಿಭಾಗಿಸಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಾದ ಅಪ್ಸಾ, ಬಾಸ್ಕೋ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರವು ಕಾರ್ಯ ನಿರ್ವಹಿಸುತ್ತಿವೆ.

ಮಂಗಳೂರಿನಲ್ಲಿಯೂ ಚೈಲ್ಡ್ ಲೈನ್ ಸೇವೆಯು ಕಾರ್ಯ ನಿರ್ವಹಿಸುತ್ತಿದೆ.  ಈ ಸಂಸ್ಥೆಗಳಿಗೆ ಕೇಂದ್ರ ಸಕರ್ಾರದಿಂದ ಅನುದಾನ ಒದಗಿಸಲಾಗುತ್ತದೆ.  ಜನವರಿ 2010ರ ಅಂತ್ಯಕ್ಕೆ ಬೆಂಗಳೂರಿನಲ್ಲಿ ಒಡ್ಟು 62884 ಕರೆಗಳು ಮತ್ತು ಮಂಗಳೂರಿನಲ್ಲಿ ಒಟ್ಟು 15920 ಕರೆಗಳನ್ನು ಜನವರಿ 2010ರ ಅಂತ್ಯಕ್ಕೆ ಸ್ವೀಕರಿಸಲಾಗಿದೆ.

ಮಕ್ಕಳ ಸಹಾಯವಾಣಿ ಸೇವೆಯನ್ನು ಗಉಲ್ಬರ್ಗ ಜಿಲ್ಲೆಯಲ್ಲಿಯೂ 25-09-08ರಂದು ಸ್ಥಾಪಿಸಲಾಗಿದೆ.  ಹಾಗೂ ಮಾಚರ್್ 2009ರಿಂದ ಈ ಸೇವೆಯು ಜಾರಿಗೆ ಬಂದಿದೆ.  2009-10ರಲ್ಲಿ ರಾಜ್ಯದ ವತಿಯಿಂದ  ದಾವಣಗೆರೆ, ಮೈಸುರು, ಶಿವಮೊಗ್ಗ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿಯನ್ನು ಸಥಾಪಿಸಲು ಮಂಜೂರಾತಿ ದೊರೆತಿದ್ದು 50 ಲಕ್ಷ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ.  ಇದರಲ್ಲಿ 7.80 ಲಕ್ಷ ರೂಪಾಯಿಗಳ ಹಣವನ್ನು ಖಚರ್ು ಭರಿಸಲಾಗಿದೆ.

ದತ್ತು ಸ್ವೀಕಾರ

ರಾಜ್ಯದಲ್ಲಿ ಒಂದು ದತ್ತು ಸಮನ್ವಯ ಸಂಸ್ಥೆ (ಂಅಂ) ದತ್ತು ಪ್ರಕ್ರಿಯೆಗೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಹಾಗೂ ಕಾನೂನುಬದ್ದವಾಗಿ ಮಕ್ಕಳನ್ನು ದತ್ತು ನೀಡಲುಸಹಕರಿಸುತ್ತದೆ. ದತ್ತು ಸಮನ್ವಯ ಸಂಸ್ಥೆಯು ಸಾರ್ವಜನಿಕರಲ್ಲಿ ದತ್ತು ಪ್ರಕ್ರಿಯೆ ಸಂಬಂಧಪಟ್ಟ ಎಲ್ಲಾ ಕಾನೂನುಗಳನ್ನು ಹಾಗೂ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ದತ್ತು ಸಂಸ್ಥೆಗಳ ಮೇಲ್ವಿಚಾರಣೆಯನ್ನು ನಡೆಸಿ ಹಾಗೂ ಅನಧಿಕೃತವಾಗಿ ದತ್ತು ಪಡೆಯುವುದನ್ನು ತಡೆಯುತ್ತದೆ.

ಕೇಂದ್ರ ಸಕರ್ಾರವು ದತ್ತು ಸಮನ್ವಯ ಸಮಿತಿಗೆ ಅನುದಾನವನ್ನು ಈ ಕಾರ್ಯಕ್ರಮಗಳಿಗಾಗಿ ಒದಗಿಸುತ್ತದೆ. ದತ್ತು ಪ್ರಕ್ರಿಯೆಗೆ ಸಂಬಂಧಪಟ್ಟ ಎಲ್ಲಾ ಕಾಗದ ಪತ್ರಗಳನ್ನು ಪರಿಶೀಲನೆಯನ್ನು ಕನರ್ಾಟಕ ರಾಜ್ಯ ಶಿಶು ಮಂಡಲಿ ಸಂಸ್ಥೆಯು ನಿರ್ವಹಿಸುತ್ತದೆ.

ರಾಜ್ಯದಲ್ಲಿ 25 ಸ್ವಯಂ ಸೇವಾ ಸಂಸ್ಥೆಗಳು ದತ್ತು ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನವರಿ 2010ರ ಅಂತ್ಯಕ್ಕೆ ಒಟ್ಟು 163 ಮಕ್ಕಳನ್ನು ಸ್ವದೇಶಿ ದತ್ತು ಮತ್ತು 39 ಮಕ್ಕಳನ್ನು ಅಂತರ್ ದೇಶೀಯವಾಗಿ ದತ್ತು ನೀಡಲಾಗಿರುತ್ತದೆ.

ಕು.ವಾ.ದಲ್ಲಿ ಮಕ್ಕಳನ್ನು ಬೆಳೆಸಲು ಕಾರ್ಯಕ್ರಮ

ಮಕ್ಕಳ ರಕ್ಷಣೆ ಮತ್ತು ಪಾಲನೆಗಾಗಿ ಸಂಸ್ಥೆಗಳಲ್ಲಿ ಸೇರಿಸುವಿಕೆಯನ್ನು ಕಡಿಮೆಗೊಳಿಸಿ ಪೋಷಕರು ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಪಾಲನೆ ಮಾಡುವಂತೆ ಪ್ರೋತ್ಸಾಹಿಸಲು ರಾಜ್ಯ ಸಕರ್ಾರವು ಪ್ರಾಯೋಜಿತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಿರುತ್ತದೆ.

ಪ್ರಾಯೋಜಿತ ಕಾರ್ಯಕ್ರಮವು

  • ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಬರುವ ಮಕ್ಕಳಿಗೆ ಪೂರಕವಾಗಿ ಸಂಪನ್ಮೂಲವನ್ನು ಹೆಚ್ಚಿಸುತ್ತದೆ.
  • ಮಗುವಿನ ಶಿಕ್ಷಣ, ವೃತ್ತಿ ತರಬೇತಿ ಆರೋಗ್ಯ ಸೇವೆಗೆ ಧನ ಸಹಾಯವನ್ನು ಒದಗಿಸುತ್ತದೆ.
  • ಕುಟುಂಬಕ್ಕೆ ಪೂರಕ ಸಹಾಯವನ್ನು ದೊರಕಿಸಿದಂತಾಗುತ್ತದೆ.
  • ಮಕ್ಕಳು ಸಂಸ್ಥೆಗಳಿಂದ ಬಿಡುಗಡೆಯಾದಾಗ ಅವರ ಅವಶ್ಯಕತೆಗೆ ಅನುಗುಣವಾಗಿ ಸಹಕಾರವನ್ನು ಒದಗಿಸುತ್ತದೆ.


ಮಕ್ಕಳ ಕಲ್ಯಾಣ ಸಮಿತಿ ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಆಥರ್ಿಕ ಸಹಾಯ ನೀಡಲು ಶಿಫಾರಸ್ಸು ಮಾಡುವ ಅಧಿಕಾರ ಹೊಂದಿರುತ್ತದೆ.

ಮಕ್ಕಳ ಕಲ್ಯಾಣ ಸಮಿತಿ ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಆಥರ್ಿಕ ಸಹಾಯ ನೀಡಲು ಶಿಫಾರಸ್ಸು ಮಾಡುವ ಅದಿಕಾರ ಹೊಂದಿರುತ್ತದೆ.  ಜಿಲ್ಲಾ ಉಪ ನಿದರ್ೇಶಕರು   ಮಂಜೂರಾತಿ ನೀಡುವರು.   ಈ ಕಾರ್ಯಕ್ರಮಕ್ಕಾಗಿ 30.10 ಲಕ್ಷ ಅನುದಾನ ನಿಗದಿಯಾಗಿದ್ದು  14.58 ಲಕ್ಷ ರೂಪಾಯಿಗಳನ್ನು  ಆಥರ್ಿಕ ಧನ ಸಹಾಯವಾಗಿ 1006 ಫಲಾನುಭವಿಗಳಿಗೆ  ಜನವರಿ 2010ರ ಅಂತ್ಯಕ್ಕೆ ರೂ 19.71 ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ.

 

ಮೂಲ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate