অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಜೀವ್ ಗಾಂಧಿ ಚೈತನ್ಯ ಯೋಜನೆ

ರಾಜೀವ್ ಗಾಂಧಿ ಚೈತನ್ಯ ಯೋಜನೆ


ಜಿಲ್ಲಾ ಮಟ್ಟದ ತಜ್ಞರ ಸಮಿತಿ

  • ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು       ಅಧ್ಯಕ್ಷರು
  • ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು                  ಸದಸ್ಯರು
  • ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ನಬಾರ್ಡ್               ಸದಸ್ಯರು
  • ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್  ಸದಸ್ಯರು
  • ಜಿಲ್ಲೆಯ ಪ್ರಮುಖ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ    ಸದಸ್ಯರು
  • ಜಿಲ್ಲಾ ರೂಡಸೆಟಿಯ ಪ್ರತಿನಿಧಿ                   ಸದಸ್ಯರು
  • ಜಿಲ್ಲೆಯ ಕೃಷಿವಿಜ್ಞಾನ ಕೇಂದ್ರದ ಪ್ರತಿನಿಧಿ                 ಸದಸ್ಯರು
  • ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು      ಸದಸ್ಯರು
  • ಜಿಲ್ಲಾ ಮಟ್ಟದ ಯೋಜನಾ ಅನುಷ್ಠಾನ ಮತ್ತು ಸಲಹಾ ಸಮಿತಿಯಿಂದ ನಾಮ ನಿರ್ದೇಶನಗೊಂಡ ಇಬ್ಬರು ತಾಂತ್ರಿಕ ತಜ್ಞರು.   ಸದಸ್ಯರು
  • ಕಾರ್ಯರ್ನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್     ಸದಸ್ಯರು
  • ಯೋಜನಾ ನಿರ್ದೇಶಕರು (ಡಿಆರ್‍ಡಿಎ)   ಸದಸ್ಯ ಕಾರ್ಯದರ್ಶಿ

 

ಜಿಲ್ಲಾ ಮಟ್ಟದ ಯೋಜನಾ ಅನುಷ್ಠಾನ ಸಮಿತಿ ಸಮಿತಿಯ ಕಾರ್ಯಗಳು:

  • ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಡಿಸುವ ಯುವ ಮೇಳಗಳಿಗೆ ಸಹಕಾರ ನೀಡುವುದು.
  • ಯೋಜನಾ ಬೆಂಬಲ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸಲಹೆ ನೀಡುವುದು.
  • ಜಿಲ್ಲೆಯಲ್ಲಿರುವ ಉತ್ತಮ ತರಬೇತಿ ಸಂಸ್ಥೆಗಳನ್ನು ಗುರುತಿಸುವುದು.
  • ಉದ್ಯಮ ಶೀಲತಾ ತರಬೇತಿ/ಕೌಶಲ್ಯಾಧಾರಿತ ಉದ್ಯಮ ಶೀಲತಾ ತರಬೇತಿಯ ಪಠ್ಯಕ್ರಮವನ್ನು ರೂಡ್‍ಸೆಟಿ/ಆರ್ ಸೆಟಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಇವರ ಮಾರ್ಗದರ್ಶನದಂತೆ ರೂಪಿಸುವುದು. ತರಬೇತಿ ಸಮಯದಲ್ಲಿ ನೀಡಬೇಕಾದ ಊಟದ (ಈooಜ ಒeಟಿu) ಬಗ್ಗೆಯೂ ಅಂತಿಮಗೊಳಿಸುವುದು.
  • ಯುವಜನರು ಕೈಗೊಳ್ಳುವ ಚಟುವಟಿಕೆಗಳಿಗೆ ಪೂರಕವಾಗಿ ಯೋಜನಾ ತಯಾರಿಕೆ, ಮಾರುಕಟ್ಟೆ ಸೌಲಭ್ಯ ಕುರಿತು ಮಾರ್ಗದರ್ಶನ ನೀಡುವುದು.
  • ಜಿಲ್ಲಾ / ತಾಲ್ಲೂಕು / ಹೋಬಳಿ / ಗ್ರಾಮಗಳ ಹಂತಗಳಲ್ಲಿ ಯುವಜನತೆ ಉತ್ಪಾದಿಸುವ ಉತ್ಪನ್ನಗಳ ಮಾರಾಟಕ್ಕೆ ಪೂರಕವಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾ ಪಂಚಾಯತಿಗಳಲ್ಲಿ ಬೇರೆ ಯೋಜನೆಗಳಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ಸಲಹೆ ನೀಡುವುದು.
  • ತಜ್ಞರ ಸಮಿತಿಯು ಯೋಜನೆಯ ಆರಂಭದಲ್ಲಿ 6 ತಿಂಗಳುಗಳವರೆಗೆ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸುವುದು.
  • ನಂತರದ ಅವಧಿಯಲ್ಲಿ 3 ತಿಂಗಳಿಗೊಮ್ಮೆ ಅಥವಾ ಅಗತ್ಯಕ್ಕನುಗುಣವಾಗಿ ಸಭೆ ನಡೆಸುವುದು.
  • ಯೋಜನೆ ಮಾರ್ಗಸೂಚಿಗೆ ವಿರುದ್ಧವಾಗಿ ಯೋಜನಾ ಬೆಂಬಲ ಸಂಸ್ಥೆಯ ನಡೆದುಕೊಳ್ಳುತ್ತಿದ್ದಲ್ಲಿ, ವಿಷಯಗಳನ್ನು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದು.

ತಾಲ್ಲೂಕು ಮಟ್ಟದಲ್ಲಿ

ಚುನಾಯಿತ ಪ್ರತಿನಿಧಿಗಳು, ಕಾರ್ಯನಿರ್ವಾಹಣಾಧಿಕಾರಿಗಳು, ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳಿಗೆ ರಾಜೀವ್ ಗಾಂಧಿ ಚೈತನ್ಯ ಯೋಜನೆ ಬಗ್ಗೆ ಒಂದು ದಿನದ ಪರಿಚಯಾತ್ಮಕ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು.

ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಮಿತಿಯನ್ನು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ರಚಿಸುವುದು.

  • ತಾಲ್ಲೂಕು ಪಂಚಾಯತಿ ಅಧ್ಯಕ್ಷರು    ಅಧ್ಯಕ್ಷರು
  • ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರು         ಸದಸ್ಯರು
  • ಲೀಡ್ ಬ್ಯಾಂಕ್ ಮ್ಯಾನೇಜರ್         ಸದಸ್ಯರು
  • ಅಭಿವೃದ್ಧಿ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಸದಸ್ಯರು
  • ತಾಲ್ಲೂಕು ಪಂಚಾಯತಿ, ಕಾರ್ಯನಿರ್ವಾಹಣಾಧಿಕಾರಿಗಳು,               ಸದಸ್ಯ ಕಾರ್ಯದರ್ಶಿಗಳು
  • ಗ್ರಾಮ ಸಭೆಯಲ್ಲಿ ಅಂತಿಮಗೊಳಿಸಲಾದ ಅರ್ಹ ಯುವಜನರ ಪಟ್ಟಿ ಹಾಗೂ ಗುರುತಿಸಲ್ಪಟ್ಟ ಸ್ವಯಂ ಉದ್ಯೋಗ ಮತ್ತು ವೃತಿಪರ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ವಿವರವನ್ನು ತಾಲ್ಲೂಕು ಪಂಚಾಯತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಮಿತಿಗೆ ಕಳುಹಿಸುವುದು.

ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿ

 

  • ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರುವುದು.
  • ಆಯಾಯ ಪ್ರದೇಶಗಳ ಸಾಮಾಜಿಕ ಮತ್ತು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಕೈಗೊಳ್ಳಬಹುದಾದ ಸ್ವ-ಉದ್ಯೋಗ ಚಟುವಟಿಕೆಗಳು ಮತ್ತು ಉತ್ಪನ್ನಗಳ ಮಾರುಕಟ್ಟೆಗೆ ಲಭ್ಯವಿರುವ ವ್ಯವಸ್ಥೆಯ ಕುರಿತು ಪರಾಮರ್ಶೆ ನಡೆಸುವುದು.
  • ವಿವಿಧ ಇಲಾಖೆಗಳಿಂದ ಸಿಗಬಹುದಾದ ತಾಂತ್ರಿಕ ಬೆಂಬಲದ ಲಭ್ಯತೆಯ ಬಗ್ಗೆ ಪರಾಮರ್ಶೆ ಮಾಡುವುದು.
  • ತಾಲ್ಲೂಕು ಮಟ್ಟದ ಬ್ಯಾಂಕರುಗಳ ಸಮಿತಿ
  • ಈಗಾಗಲೇ ಅಸ್ಥಿತ್ವದಲ್ಲಿರುವ ತಾಲ್ಲೂಕು ಮಟ್ಟದ ಬ್ಯಾಂಕರ್ಸ್ ಸಮಿತಿಯಲ್ಲಿ (ಬಿಎಲ್‍ಬಿಸಿ) ಬ್ಯಾಂಕ್‍ನ ಲಿಂಕೇಜ್‍ಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವುದು.
  • ಗ್ರಾಮ ಸಭಾ ಆಯೋಜನೆಯ ಮೂಲಕ ಅರ್ಹ ಯುವಜನರ ಪಟ್ಟಿಯನ್ನು ಅಂತಿಮಗೊಳಿಸುವುದು:
  • ಯೋಜನಾ ಸೌಲಭ್ಯ ಪಡೆಯಲು ಗುರುತಿಸಲಾದ ಸಂಭವನೀಯ ಯುವಜನರ ಪಟ್ಟಿಯನ್ನು ರಾಜೀವ್ ಗಾಂಧಿ ಚೈತನ್ಯ ಯೋಜನೆಯ ಮಾರ್ಗಸೂಚಿಯನ್ವಯ ಗ್ರಾಮ ಸಭೆಯಲ್ಲಿ ಅಂತಿಮಗೊಳಿಸುವುದು.
  • ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳ ಸಹಯೋಗದೊಂದಿಗೆ ನಿರುದ್ಯೋಗಿ ಯುವಜನರನ್ನು ಗುರುತಿಸುವ ಸಲುವಾಗಿ ವಿಶೇಷ ಗ್ರಾಮ ಸಭೆಯನ್ನು ಅಯೋಜಿಸಲು ಕ್ರಮವಹಿಸುವುದು.

ತರಬೇತಿ ಮತ್ತು ಸಾಮಗ್ರಿಗಳ ತಯಾರಿಕೆ

ಸ್ಯಾಟ್‍ಕಾಂ ಮೂಲಕ ತರಬೇತಿ

  • ಪ್ರತಿ ಗ್ರಾಮ ಪಂಚಾಯತಿಗೆ 40 ಯುವಜನರಂತೆ 5,627 ಗ್ರಾಮಪಂಚಾಯತ್‍ಗಳಿಂದ 2,25,080 ಅಭ್ಯರ್ಥಿಗಳಿಗೆ ಉಪಗ್ರಹ ಆಧಾರಿತ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಕೆಎಸ್‍ಆರ್‍ಎಲ್‍ಪಿಎಸ್- “ಸಂಜೀವಿನಿ” ಏರ್ಪಡಿಸುವುದು.
  • ಒಟ್ಟು 175 ತಾಲ್ಲೂಕುಗಳಿಂದ ಪ್ರತಿ ತಾಲ್ಲೂಕಿಗೆ 1 ಪಂಚಾಯತಿಯಂತೆ, 34 ಪ್ರಸರಣಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
  • 175 ತಾಲ್ಲೂಕುಗಳಿಂದ ಪ್ರತಿ ಪ್ರಸರಣದಲ್ಲಿ 40 ಶಿಬಿರಾರ್ಥಿಗಳು ಆಯಾಯ ಪಂಚಾಯಿತಿಯನ್ನು ಪ್ರತಿನಿಧಿಸುವರು ಅದರಂತೆ 175*40 = 7,000 ಯುವಜನರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಾಗೂ ಸ್ವ-ಉದ್ಯೋಗ ಮತ್ತು ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಅವಕಾಶಗಳ ಬಗ್ಗೆ ಯಶೋಗಾಥೆಯ ಹಾಗೂ ಕಿರು ಚಿತ್ರಗಳ ಮೂಲಕ ಪ್ರೇರಣೆ ನೀಡಿ ಆಯ್ಕೆ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು.
  • ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಯುವಜನರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಯೋಜನೆಯ ಬಗ್ಗೆ ಅರಿವು ಮೂಡಿಸುವುದು.

ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ತಯಾರಿಕೆ

  • ಅಗತ್ಯವಿರುವ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ತಯಾರಿಕೆ ಕುರಿತಂತೆ “ಸಂಜೀವಿನಿ”- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು (ಕೆಎಸ್‍ಆರ್‍ಎಲ್‍ಪಿಎಸ್) ಕ್ರಮ ಕೈಗೊಳ್ಳುವುದು.
  • ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ವಿವರಣಾತ್ಮಕ ಹಾಗೂ ಸುಲಭವಾಗಿ ಅರ್ಥವಾಗುವಂತಹ ಸಾಮಗ್ರಿಗಳನ್ನು ತಯಾರಿಸಲಾಗುವುದು.
  • ಗ್ರಾಮ ಪಂಚಾಯತಿ ಮಟ್ಟಕ್ಕೆ ಚಿತ್ರಗಳ ಮೂಲಕ ಸುಲಭವಾಗಿ ಅರ್ಥವಾಗುವಂತಹ ಸಾಮಗ್ರಿಗಳನ್ನು ತಯಾರಿಸಲಾಗುವುದು.
  • ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ರಾಜೀವ್ ಗಾಂಧಿ ಚೈತನ್ಯ ಯೋಜನೆ(ಆರ್.ಜಿ.ಸಿ.ವೈ.) ಬಗ್ಗೆ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗುವುದು.
  • ವ್ಯಾಪಕ ಪ್ರಚಾರದ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರÀ ಭಾಗವಹಿಸುವಿಕೆ ಖಾತ್ರಿಪಡಿಸಿಕೊಳ್ಳುವುದು.

ಸ್ವ-ಉದ್ಯೋಗ ಕಾರ್ಯಕ್ರಮ

  • ಆಯ್ಕೆಯಾದ ಯುವಜನರಿಗೆ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ :
  • ಈಗಾಗಲೇ ಸ್ವ-ಉದ್ಯೋಗ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಪರಿಣತಿ ಹೊಂದಿರುವ ಸರ್ಕಾರ / ಸರ್ಕಾರೇತರ ಸಂಸ್ಥೆಗಳನ್ನು (ಯೋಜನಾ ಬೆಂಬಲ ಸಂಸ್ಥೆ) ಗುರುತಿಸಲಾಗುವುದು.
  • ಪ್ರತಿ ಜಿಲ್ಲೆಗೆ ಯೋಜನಾ ಬೆಂಬಲ ಸಂಸ್ಥೆ/ ಸಂಸ್ಥೆಗಳನ್ನು ಆಯ್ಕೆ ಮಾಡಿ ಹಂಚಿಕೆ ಮಾಡಲಾಗುವುದು. ಯೋಜನಾ ಬೆಂಬಲ ಸಂಸ್ಥೆಗಳಿಗಿರುವ ಮೂಲಭೂತ ಸೌಕರ್ಯ, ಕಾರ್ಯಕ್ಷಮತೆ ಹಾಗೂ ಅನುಭವಗಳನ್ನು ಪರಿಗಣಿಸಿ ಫಲಾನುಭವಿಗಳ ಹಂಚಿಕೆ ಮಾಡುವುದು.
  • ಈ ಯೋಜನಾ ಬೆಂಬಲ ಸಂಸ್ಥೆಗಳು ಉದ್ಯಮಶೀಲತಾ ಅಭಿವೃಧ್ಧಿ ಕಾರ್ಯಕ್ರಮದ (ಇಡಿಪಿ) ಕೌಶಲ್ಯಾಧಾರಿತ ಮತ್ತು ಉದ್ಯಮ ಶೀಲತಾ ಕಾರ್ಯಕ್ರಮವನ್ನು ರೂಡ್‍ಸೆಟಿ / ಆರ್‍ಸೆಟಿ / ಸಿಡಾಕ್ / ಜನಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ ನಂತಹ ತರಬೇತಿ ಸಂಸ್ಥೆಗಳ ಮೂಲಕ ಮಾಡುವುದು.
  • ಫಲಾನುಭವಿಗಳು ಆಯ್ಕೆ ಮಾಡಿಕೊಂಡ ಚಟುವಟಿಕೆಗಳಿಗೆ ಬ್ಯಾಂಕುಗಳಿಂದ ಸಾಲ ಮಂಜೂರಾತಿ ನಂತರ ಅಗತ್ಯವಾದ ಕೌಶಲ್ಯಾಧಾರಿತ ತರಬೇತಿಯನ್ನು ಯೋಜನಾ ಬೆಂಬಲ ಸಂಸ್ಥೆಗಳು ರೂಡ್‍ಸೆಟಿ/ಆರ್‍ಸೆಟಿ ಕೃಷಿ ವಿಜ್ಞಾನ ಕೇಂದ್ರಗಳಂತಹ ಸಂಸ್ಥೆಗಳ ಮೂಲಕ ಏರ್ಪಡಿಸುವುದು.

ಯೋಜನಾ ಬೆಂಬಲ ಸಂಸ್ಥೆಯ ಚಟುವಟಿಕೆಗಳು

ರಾಜೀವ್ ಗಾಂಧಿ ಚೈತನ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನಾ ಬೆಂಬಲ ಸಂಸ್ಥೆಯು ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಯೋಜನೆ ಕುರಿತು ವಿವರವಾದ ಮಾಹಿತಿಯನ್ನು ನೀಡುವುದು.

  • ಆಯ್ಕೆಯಾದ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಅಗತ್ಯತೆಗನುಗುಣವಾಗಿ ತರಬೇತಿ ನೀಡುವುದು.
  • ಯೋಜನೆಯ ಅನುಷ್ಠಾನದಲ್ಲಿ ಅವರ ಪಾತ್ರ ಮತ್ತು ಹೊಣೆಗಾರಿಕೆಯನ್ನು ಮನದಟ್ಟು ಮಾಡುವುದು.
  • ಯೋಜನೆಯ ಸೌಲಭ್ಯ ಪಡೆಯುವ ಯುವಜನರನ್ನು ಗುರುತಿಸಲು ಗ್ರಾಮ ಪಂಚಾಯಿತಿಗೆ ನೆರವಾಗುವುದು.
  • ಯುವಜನರ ಗುಂಪುಗಳನ್ನು ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿಕೊಳ್ಳಲು ನೆರವು ನೀಡುವುದು.
  • ಸಮಾನ ಮನಸ್ಕರ ಯುವಜನರ ಸಭೆಗಳನ್ನು ಆಯೋಜಿಸಿ ಜಂಟಿ ಹೊಣೆಗಾರಿಕಾ ಗುಂಪುಗಳನ್ನು ರಚಿಸಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ನೀಡುವುದು.
  • ಸೌಲಭ್ಯವನ್ನು ಪಡೆಯಲು ಗುರುತಿಸಿರುವ ಯುವಜನರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅವಶ್ಯಕತೆ ಇರುವ ತರಬೇತಿ ಕಾರ್ಯಕ್ರಮಗಳನ್ನು ಅಯೋಜಿಸಲು ಗ್ರಾಮ ಪಂಚಾಯಿತಿ, ಹಣಕಾಸು ಸಂಸ್ಥೆ ಮತ್ತು ರೂಡ್‍ಸೆಟ್ /ಕೃಷಿ ವಿಜ್ಞಾನ ಕೇಂದ್ರಗಳು / ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಗುರುತಿಸುವ ತರಬೇತಿ ಕೇಂದ್ರಗಳ ಜೊತೆ ಸಮನ್ವಯ ಸಾಧಿಸುವುದು.
  • ಯುವ ಜನರಿಗೆ ಬ್ಯಾಂಕ್ ಮತ್ತು ಜಿಲ್ಲಾ ಪಂಚಾಯತ್‍ಗಳ ಮೂಲಕ ಸಾಲ ಮತ್ತು ಸಹಾಯಧನ ಸಿಗುವಂತೆ ಸಂಪರ್ಕ ಕಲ್ಪಿಸಿ ಅನುಸರಣಿ ಮಾಡುವುದು.
  • ಯೋಜನೆಗೆ ಸಂಬಂದಿಸಿದÀ ಗ್ರಾಮ ಸಭೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಮಟ್ಟದ ಸಭೆಯಲ್ಲಿ ಭಾಗವಹಿಸುವುದು.
  • ಯೋಜನೆಯ ಅನುಷ್ಠಾನದ ಪ್ರಗತಿಯ ವರದಿಯನ್ನು ದಾಖಲಿಸಿ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸಲ್ಲಿಸುವುದು.
  • ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳು ರಾಜೀವ್‍ಗಾಂಧಿ ಚೈತನ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜೊತೆಗೂಡಿ ಕಾರ್ಯ ನಿರ್ವಹಿಸುವುದು.
  • ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು.
  • ತಜ್ಞರ ಸಮಿತಿ ನೀಡುವ ಮಾರ್ಗಸೂಚಿಯನ್ನು ಪಾಲಿಸುವುದು.
  • ತಿಂಗಳಿಗೊಮ್ಮೆ ಸಭೆ ಸೇರಿ ಪರಸ್ಪರ ಕಲಿಕೆಯ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವುದು.
  • ಮಾರುಕಟ್ಟೆ ಸಂಶೋಧನೆ ಮತ್ತು ಜಂಟಿ ಬಾಧ್ಯತಾ ಗುಂಪಿನ ಯುವಜನರ ಉತ್ಪನ್ನಗಳಿಗೆ ಮಾರುಕಟ್ಟೆ ಲಿಂಕೇಜ್ ಒದಗಿಸುವುದು.
  • ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು ಮತ್ತು ಯುವಜನರಿಗೆ ಲಿಂಕೇಜ್ ಕಲ್ಪಿಸುವುದು.
  • ಯುವಜನರ ಮೇಳ ಸಂಘಟನೆ ಹಾಗೂ ಯುವಜನರು ಉತ್ಪಾದಿಸಿದ ಪದಾರ್ಥಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ವಸ್ತು ಪ್ರದರ್ಶನ ಏರ್ಪಡಿಸುವುದು.
  • ಉದ್ಯಮಶೀಲತೆಗೆ ಪೂರಕವಾದ ಯಶಸ್ವಿ ಉದ್ದಿಮೆದಾರರ ಯಶೋಗಾಥೆಗಳನ್ನು ಹೊರತರುವುದು.
  • ಉದ್ಯಮ ಸುಗಮವಾಗಿ ನಡೆಸಿಕೊಂಡು ಹೋಗಲು ಅಡ್ಡಿ ಆತಂಕಗಳಿದ್ದಲ್ಲಿ ಬಗೆಹರಿಸುವುದು ಹಾಗೂ ಕಾನೂನಿನ ನೆರವು ಅವಶ್ಯಕತೆಯಿದ್ದಲ್ಲಿ ಸಹಾಯ ಮಾಡತಕ್ಕದ್ದು.
  • ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಚಟುವಟಿಕೆಗಳ ಪ್ರಕರಣಗಳನ್ನು (ಕೇಸ್ ಸ್ಟಡಿ) ದಾಖಲೀಕರಣ ಮಾಡಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸಿಕೊಡುವುದು.

ಜೆಎಲ್ಜಿ

ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ (ಜೆಎಲ್‍ಜಿ) :

  • ತರಬೇತಿಯ ನಂತರ ಯುವಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಗುರುತಿಸಿಕೊಂಡ ಸ್ವ-ಉದ್ಯೋಗ ಚಟುವಟಿಕೆಯ ಆಧಾರದ ಮೇಲೆ, ಆಯ್ಕೆ ಮಾಡಿದ ಒಂದೇ ರೀತಿಯ ಚಟುವಟಿಕೆಯ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿಕೊಳ್ಳಲು ಪ್ರೇರಣೆ ನೀಡುವುದು.
  • ಒಂದೇ ರೀತಿಯ ಸ್ವ-ಉದ್ಯೋಗ ಚಟುವಟಿಕೆಯನ್ನು ಕೈಗೊಳ್ಳಲು ಸಿದ್ದರಿರುವ 5 ಯುವಜನರನ್ನೊಳಗೊಂಡ ಜಂಟಿ ಹೊಣೆಗಾರಿಕೆ ಗುಂಪನ್ನು ರಚಿಸುವುದು.
  • ಜಂಟಿ ಹೊಣೆಗಾರಿಕೆ ಗುಂಪು ರಚನೆ ಸಾಧ್ಯವಾಗದಿದ್ದಲ್ಲಿ ಮಾತ್ರ ವೈಯಕ್ತಿಕವಾಗಿಯೂ ಚಟುವಟಿಕೆಗಳ ಆಯ್ಕೆಗೂ ಅವಕಾಶವಿರುವುದು.
  • ಬ್ಯಾಂಕು / ಹಣಕಾಸು ಸಂಸ್ಥೆಗಳಲ್ಲಿ ಉಳಿತಾಯ ಖಾತೆ ತೆರೆಯುವುದು.
  • ನಿಗದಿತ ಸ್ಥಳದಲ್ಲಿ ವಾರಕ್ಕೊಮ್ಮೆ ಸಭೆ ಸೇರುವುದು.
  • ಮೇಲ್ಕಂಡ ಹಂತಗಳಲ್ಲಿ ಯೋಜನಾ ಬೆಂಬಲ ಸಂಸ್ಥೆಯು (ಪಿಎಸ್‍ಎ) ಮಾರ್ಗದರ್ಶನ ನೀಡುವುದು.
  • ಜಂಟಿ ಹೊಣೆಗಾರಿಕೆ ಗುಂಪಿನ 5 ಸದಸ್ಯರು ಒಂದೇ ಉದ್ಯಮದ ಆಯ್ಕೆ ಅಥವಾ 5 ಸದಸ್ಯರು ಪ್ರತ್ಯೇಕವಾದ ಉದ್ಯಮದ ಆಯ್ಕೆಗೆ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಉದ್ಯಮ ಆರಂಭಿಸಲು ಬೇಕಾದ ಸಾಲ ಸೌಲಭ್ಯವನ್ನು ಒದಗಿಸಲು ಸಹಾಯ ಮಾಡುವುದು.
  • ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ ಮತ್ತು ಉದ್ಯಮಗಳ ಆಯ್ಕೆಯಾದ ನಂತರ ಮಾಹಿತಿಯನ್ನು ಮೇಲ್ವಿಚಾರಣಾ ತಂತ್ರಾಂಶ (ಎಂ.ಐ.ಎಸ್) ಅಳವಡಿಸಲು ತಾಲ್ಲೂಕು / ಜಿಲ್ಲಾ ಪಂಚಾಯಿತಿಗೆ ಕಾರ್ಯಕ್ರಮ ಬೆಂಬಲ ಸಂಸ್ಥೆಯು (ಪಿ.ಎಸ್.ಎ) ಕಳುಹಿಸಿಕೊಡುವುದು.
  • ಬೆಂಬಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಕುರಿತು ಆಗಿಂದಾಗ್ಗೆ ಹೊರಡಿಸುವ ಆದೇಶದಲ್ಲಿನ ಷರತ್ತುಗಳನ್ವಯ ಬಿಡುಗಡೆ ಮಾಡಲಾಗುವುದು.

ವೃತ್ತಿ ತರಬೇತಿಗಳುಮತ್ತು ಪ್ರಸ್ತಾವನೆ

ವೃತ್ತಿ ತರಬೇತಿಗಳು:

  • ಚಟುವಟಿಕೆಗೆ ಸಾಲ ಮಂಜೂರಾತಿ ನಂತರ ಯೋಜನಾ ಬೆಂಬಲ ಸಂಸ್ಥೆಗಳು 3 ದಿನಗಳ ಉದ್ಯಮಶೀಲತಾ ತರಬೇತಿಯನ್ನು / 6 ದಿನಗಳ ಕೌಶಲ್ಯಧಾರಿತ ಉದ್ಯಮಶೀಲತಾ ತರಬೇತಿಯನ್ನು ರೂಡ್‍ಸೆಟಿ / ಆರ್‍ಸೆಟಿ / ಸಿಡಾಕ್ ಜನಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ / ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ವ್ಯವಸ್ಥೆ ಮಾಡುವುದು.
  • ರೂಡ್‍ಸೆಟಿ / ಆರ್‍ಸೆಟಿ ತರಬೇತಿ ಸಂಸ್ಥೆಗಳಿಗೆ ಅಭ್ಯರ್ಥಿಗಳನ್ನು ನಿಯೋಜಿಸಿದಾಗ ತರಬೇತಿಯ ಅವಧಿಯು 6 ದಿನಗಳು ಮತ್ತು 6 ದಿನಗಳಿಗಿಂತ ಹೆಚ್ಚಾಗಿದ್ದಲ್ಲಿ ಅದರ ವೆಚ್ಚವನ್ನು ಜಿಲ್ಲೆಗೆ ನೀಡಲಾಗಿರುವ ಆರ್‍ಸೆಟಿ ಅನುದಾನದಲ್ಲಿ ಭರಿಸುವುದು.

ಯೋಜನಾ ಪ್ರಸ್ತಾವನೆಗಳ ತಯಾರಿಕೆ

  • ಯುವಜನರು ತಾವು ಕೈಗೊಳ್ಳಲು ತೀರ್ಮಾನಿಸಿರುವ ಚಟುವಟಿಕೆಗಳ ಬಗ್ಗೆ ಯೋಜನಾ ವರದಿಯನ್ನು ತಯಾರಿಸುವುದು.
  • ಯೋಜನಾ ಬೆಂಬಲ ಸಂಸ್ಥೆಯು ಜಂಟಿ ಹೊಣೆಗಾರಿಕೆ ಗುಂಪುಗಳಿಲ್ಲಿನ ಯುವಜನರು ಆಯ್ಕೆ ಮಾಡಿದ ಉದ್ಯಮಕ್ಕೆ ಯೋಜನಾ ಪ್ರಸ್ತಾವನೆಯನ್ನು 2 ವಾರಗಳೊಳಗೆÉ ತಯಾರಿಸಲು ನೆರವು ನೀಡುವುದು.
  • ಯೋಜನಾ ಪ್ರಸ್ತಾವನೆಗಳ ಆಧಾರದ ಮೇಲೆ ಬ್ಯಾಂಕ್ / ಹಣಕಾಸು ಸಂಸ್ಥೆಗಳು ಹಣಕಾಸಿನ ನೆರವನ್ನು ಒದಿಗಿಸುತ್ತವೆ. ಈ ಎಲ್ಲಾ ಹಂತದ ಪ್ರಕ್ರಿಯೆಯಲ್ಲಿ ಯೋಜನಾ ಬೆಂಬಲ ಸಂಸ್ಥೆಗಳು ಸಕಲ ಸಹಕಾರವನ್ನು ನೀಡತಕ್ಕದ್ದು.

ಹಣಕಾಸು


ಬ್ಯಾಂಕ್ ಮತ್ತು ಇತರ ಸಂಸ್ಥೆಗಳೊಂದಿಗೆ ಹಣಕಾಸು ಸಂಪರ್ಕ ಕಲ್ಪಿಸುವುದು:

  • ಅಭ್ಯರ್ಥಿಗಳು ಸ್ವ-ಉದ್ಯೋಗ ಚಟುವಟಿಕೆ ನಿರ್ಧಾರ ಕೈಗೊಳ್ಳಲು ಪ್ರೇರಣೆ, ಸಮಾಲೋಚನೆ ನಡೆಸುವುದು.  ಸಮಾಲೋಚನೆ ಸಭೆಗಳಿಗೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಆಹ್ವಾನಿಸುವುದು.
  • ನಂತರ ಯೋಜನಾ ವರದಿ ತಯಾರಿಸಿ ಬ್ಯಾಂಕುಗಳಿಗೆ ಅರ್ಜಿಗಳನ್ನು ತಾಲ್ಲೂಕು ಪಂಚಾಯತಿ ಮೂಲಕ ಸಲ್ಲಿಸಲು ಸಹಕರಿಸಬೇಕು.
  • ಜಂಟಿ ಹೊಣೆಗಾರಿಕೆಯ ಅಭ್ಯರ್ಥಿಗಳು/ವೈಯಕ್ತಿಕ ಅಭ್ಯರ್ಥಿಗಳಿಗೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ.  ಐದು ಜನರನ್ನೊಳಗೊಂಡ ಒಂದು ಜಂಟಿ ಹೊಣೆಗಾರಿಕೆ ಗುಂಪಿಗೆ ರೂ.50,000/- ಅಥವಾ ಜಂಟಿ ಹೊಣೆಗಾರಿಕೆ ಗುಂಪಿನ ಒಬ್ಬ ಸದಸ್ಯರಿಗೆ ರೂ.10,000/- ರೂಪಾಯಿಗಳನ್ನು ಸಹಾಯಧನ ನೀಡಲಾಗುವುದು.  ಸಹಾಯಧನದ ಮೊತ್ತವನ್ನು ಹಣಕಾಸು ಸಂಸ್ಥೆಗೆ ನೀಡಲು ಜಿಲ್ಲಾ/ತಾಲ್ಲೂಕು ಪಂಚಾಯತಿಗಳಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸಲು ಸಹಕರಿಸುವುದು.  ಈ ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿರುತ್ತದೆ.  ಸಾಲ ಮರುಪಾವತಿಯಾದ ನಂತರ ಸಹಾಯಧನವನ್ನು ಬ್ಯಾಂಕುಗಳು ಆಯಾ ಫಲಾನುಭವಿಯ ಖಾತೆಗೆ ಜಮೆ ಮಾಡುವುದು.  ಕನಿಷ್ಠ ಎರಡು ವರ್ಷಗಳ ವರೆಗೆ ಸಹಾಯಧನವನ್ನು ವೈಯಕ್ತಿಕ ಖಾತೆಗಳಿಗೆ ಜಮೆ ಮಾಡಲು ಅವಕಾಶವಿರುವುದಿಲ್ಲ.
  • ಜಂಟಿ ಹೊಣೆಗಾರಿಕೆ ಗುಂಪುಗಳಲ್ಲಿನ ಅಭ್ಯರ್ಥಿಗಳು ವೃತ್ತಿ ತರಬೇತಿಗಳನ್ನು ಪಡೆದ ನಂತರ, ಚಟುವಟಿಕೆ ಆರಂಭಕ್ಕೆ ಬ್ಯಾಂಕುಗಳ ಮೂಲಕ ಸಾಲದ ಒಟ್ಟು ಮೊತ್ತ ಬಿಡುಗಡೆಯಾಗುವಲ್ಲಿ/ ಸೌಲಭ್ಯ ಪಡೆಯುವಲ್ಲಿ ಸಹಕರಿಸುವುದು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳು

  • ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಎಲ್ಲಾ ವಾಣಿಜ್ಯ ಮತ್ತು ಗ್ರಾಮೀಣ ಪ್ರಾದೇಶಿಕ ಹಾಗೂ ಸಹಕಾರಿ ಬ್ಯಾಂಕುಗಳ ಜಿಲ್ಲಾ ನಿಯಂತ್ರಕರು ಮತ್ತು ಪ್ರತಿನಿಧಿಗಳನ್ನೊಳಗೊಂಡ ಸಭೆಯನ್ನು ಆಯೋಜಿಸುವುದು.
  • ಸಭೆಯಲ್ಲಿ ಯೋಜನಾ ಮಾಹಿತಿಯನ್ನು ನೀಡುವುದಲ್ಲದೇ ಯುವಜನರು ಬಯಸುವ ಹಣಕಾಸು ನೆರವು ನೀಡುವಂತೆ ಕ್ರಮಕೈಗೊಳ್ಳುವುದು.
  • ಈ ಸಭೆಗೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಜನಾ ಬೆಂಬಲ ಸಂಸ್ಥೆಯು ಪಾಲ್ಗೊಳ್ಳತಕ್ಕದ್ದು.
  • ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳು ಸಭೆಯಲ್ಲಿ ತೆಗೆದು ಕೊಂಡ ನಿರ್ಣಯಗಳನ್ನು ಜಾರಿಗೊಳಿಸಲು ಪೂರಕವಾಗಿ ಸುತ್ತೋಲೆಗಳನ್ನು ಎಲ್ಲಾ ಬ್ಯಾಂಕುಗಳ ಶಾಖೆಗಳಿಗೆ ಹೊರಡಿಸುವುದು.

ಯೋಜನಾ ಬೆಂಬಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ

ಯೋಜನಾ ಬೆಂಬಲ ಸಂಸ್ಥೆಗಳಿಗೆ ರೂ.2,000/- ಅನುದಾನವನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

  • ಕರಾರು ಒಪ್ಪಂದ ಸಹಿಯ ನಂತರ ಸ್ವ-ಉದ್ಯೋಗ ಕೈಗೊಳ್ಳುವ ಅಭ್ಯರ್ಥಿಗಳ ತ್ರೈಮಾಸಿಕ ಗುರಿ ಆಧಾರದ ಮೇಲೆ ಮುಂಗಡ ಹಣವನ್ನು ಪ್ರತಿ ಅಭ್ಯರ್ಥಿಗೆ ರೂ.500/- ರಂತೆ ಬ್ಯಾಂಕ್ ಗ್ಯಾರೆಂಟಿ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು.  ಅಭ್ಯರ್ಥಿಗೆ ಸ್ವ-ಉದ್ಯೋಗ ಕೈಗೊಳ್ಳಲು ಪ್ರೇರಣೆ, ಸಮಾಲೋಚನೆ ಮತ್ತು ಚಟುವಟಿಕೆಯ ನಿರ್ಧಾರ ಕೈಗೊಳ್ಳಲು ಸಹಕರಿಸುವುದು.  ನಂತರ ಯೋಜನಾ ವರದಿ ತಯಾರಿಸಿ ಬ್ಯಾಂಕುಗಳಿಗೆ ಅರ್ಜಿಗಳನ್ನು ತಾಲ್ಲೂಕು ಪಂಚಾಯತಿ ಮೂಲಕ ಸಲ್ಲಿಸಲು ಸಹಕರಿಸಬೇಕು.
  • ಅಭ್ಯರ್ಥಿಗಳಿಗೆ ಸಾಲ ಮಂಜೂರಾಗದಿದ್ದಲ್ಲಿ ಬೆಂಬಲ ಸಂಸ್ಥೆಗಳಿಗೆ ಯಾವುದೇ ಅನುದಾನವನ್ನು ನೀಡಲಾಗುವುದಿಲ್ಲ.
  • ಸ್ವ-ಉದ್ಯೋಗ ಕೈಗೊಳ್ಳುವ ಸಾಲ ಮಂಜೂರಾದ ಅಭ್ಯರ್ಥಿಗಳಿಗೆ ರೂಡ್‍ಸೆಟಿ / ಆರ್‍ಸೆಟಿ / ಸಿಡಾಕ್ / ಜನ ಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ / ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಸಂಸ್ಥೆಗಳಲ್ಲಿ 3/6 ದಿನಗಳ ತರಬೇತಿಗಳನ್ನು ಪರಿಪೂರ್ಣಗೊಳಿಸಿದ ನಂತರ ಪ್ರತಿ ಅಭ್ಯರ್ಥಿಗೆ ಪ್ರತಿ ದಿನಕ್ಕೆ ರೂ.250/-ರಂತೆ ಮೂರು ದಿನಗಳ ತರಬೇತಿಗೆ ಪ್ರತಿ ಅಭ್ಯರ್ಥಿಗೆ ರೂ.750/- ಹಾಗೂ 6 ದಿನಗಳ ತರಬೇತಿಗೆ ಪ್ರತಿ ಅಭ್ಯರ್ಥಿಗೆ ರೂ.1,500/-ನ್ನು ಸಂಬಂಧಪಟ್ಟ ತರಬೇತಿ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು. ಉದಾ: ರೂಡ್‍ಸೆಟಿ ಸಂಸ್ಥೆಯಲ್ಲಿ ಎಲ್ಲಾ ತಾಲ್ಲೂಕುಗಳಿಂದ ಗೃಹೊಪಯೋಗಿ ವಿದ್ಯುತ್ ಉಪಕರಣಗಳ ದುರಸ್ಥಿ ಚಟುವಟಿಕೆ ಬಗ್ಗೆ ತರಬೇತಿ ಪಡೆದಿದ್ದಲ್ಲಿ ಅದರ ಒಟ್ಟು ವೆಚ್ಚವನ್ನು ಜಿಲ್ಲಾ ಪಂಚಾಯತ್‍ನಿಂದ ನೇರವಾಗಿ ರೂಡ್‍ಸೆಟಿ ಸಂಸ್ಥೆಗೆ ಬಿಡುಗಡೆ ಮಾಡುವುದು. ಇದೇ ರೀತಿ ತರಬೇತಿ ನೀಡಿದ ಸಂಸ್ಥೆಗಳಿಗೆ ಅಭ್ಯರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ನೇರವಾಗಿ ಹಣ ಬಿಡುಗಡೆ ಮಾಡಲಾಗುವುದು.
  • ಯೋಜನಾ ಬೆಂಬಲ ಸಂಸ್ಥೆ ತರಬೇತಿಗೆ ಅವಶ್ಯವಿರುವ ಮೂಲಭೂತ ಸೌಕರ್ಯ ಮತ್ತು ತರಬೇತುದಾರರನ್ನು ಹೊಂದಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಅನುಮೋದನೆ ಪಡೆದು ತರಬೇತಿ ನೀಡಬಹುದು.  ಅಂತಹ ಸಮಯದಲ್ಲಿ ತರಬೇತಿಯ ವೆಚ್ಚವನ್ನು ಆಯಾ ಯೋಜನಾ ಬೆಂಬಲ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು.
  • ಅಭ್ಯರ್ಥಿಗಳ ಚಟುವಟಿಕೆಗಳ ಆಧಾರದ ಮೇಲೆ ಜಂಟಿ ಹೊಣೆಗಾರಿಕೆ ಗುಂಪುಗಳಿಗೆ/ವೈಯಕ್ತಿಕ ಅಭ್ಯರ್ಥಿಗಳಿಗೆ ಬ್ಯಾಂಕುಗಳಿಂದ ಸಾಲ ಬಿಡುಗಡೆಯಾಗಿ ಉದ್ಯಮದ ಸ್ಥಾಪನೆಯಾದ ನಂತರ ಪ್ರತಿ ಅಭ್ಯರ್ಥಿಗೆ ರೂ.1,000/- ದಂತೆ ಅನುದಾನ ಬಿಡುಗಡೆ ಮಾಡಲಾಗುವುದು.
  • ಅಭ್ಯರ್ಥಿಗಳು ಉದ್ಯಮವನ್ನು ಕೈಗೊಳ್ಳುತ್ತಿರುವ ಬಗ್ಗೆ ಅನುಸರಣೆÂ: ಉತ್ಪನ್ನಗಳ ಮಾರಾಟ ಹಾಗೂ ಸಾಲ ಮರುಪಾವತಿ ಬಗ್ಗೆ ನಿಯಮಿತವಾಗಿ 3 ವರ್ಷದ ವರೆಗೆ ಅನುಸರಣಿ ಮಾಡುವ ಆಧಾರದ ಮೇಲೆ ಪ್ರತಿ ಅಭ್ಯರ್ಥಿಗೆ ರೂ.500/- ಗಳಂತೆ (ಮೂರು ಕಂತುಗಳಲ್ಲಿ ಪ್ರಥಮ ವರ್ಷ ರೂ.200/-, ದ್ವಿತೀಯ ವರ್ಷ ರೂ.150/- ಮತ್ತು ತೃತೀಯ ವರ್ಷ ರೂ.150/- ಗಳಂತೆ) ಬಿಡುಗಡೆ ಮಾಡಲಾಗುವುದು.

ಉದ್ದಿಮೆಗಳ ಸ್ಥಾಪನೆ

  • ಆಯಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಜನಾ ಬೆಂಬಲ ಸಂಸ್ಥೆಯು ಯುವಜನರಿಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಎಲ್ಲಾ ರೀತಿಯ ಪ್ರಕ್ರಿಯೆಗಳಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಪೋಷಕರಿಗೆ / ಅಭ್ಯರ್ಥಿಗಳಿಗೆ ಸಮಾಲೋಚನೆ ನೀಡುವುದು.
  • ಉದ್ದಿಮೆ ಆರಂಭಕ್ಕೆ ಬೇಕಾದ ಹಣಕಾಸು ಕೊಡಿಸಲು ನೆರವಾಗುವುದಲ್ಲದೇ ಈ ಎಲ್ಲಾ ಬೆಳವಣಿಗೆ ಕುರಿತು ನಡೆಯುವ ಪ್ರಕ್ರಿಯಗಳ ವರದಿಯನ್ನು ಸಂಬಂಧಿಸಿದ ಅಧಿಕಾರಿಗೆ / ಪ್ರಾಧಿಕಾರಗಳಿಗೆ ನಿಗಧಿಪಡಿಸಿದ ನಮೂನೆಯಲ್ಲಿ ತಿಂಗಳಿಗೊಮ್ಮೆ ನೀಡುವುದು.
  • ಮಾರುಕಟ್ಟೆ ಸಂಪರ್ಕ,ವೃತ್ತಿ ಮೇಳ

ಮಾರುಕಟ್ಟೆ ಸಂಪರ್ಕ

  • ಜಿಲ್ಲಾ ಮಟ್ಟದ ತಜ್ಞರ ಸಮಿತಿಯು ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು.
  • ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಜಿಲ್ಲಾ ಪಂಚಾಯತ್‍ಗಳಲ್ಲಿ ಬೇರೆ ಯೋಜನೆಗಳಲ್ಲಿ ಲಭ್ಯವಿರುವ ಅನುದಾನದಿಂದ ಒದಗಿಸಲು ಕ್ರಮಕೈಗೊಳ್ಳಬೇಕು
  • ಯುವಜನ ವೃತ್ತಿ ಮೇಳಗಳ ಸಂಘಟನೆ :
  • ಯೋಜನಾ ಬೆಂಬಲ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಯುವಜನರ ಒಕ್ಕೂಟ ರಚನೆಯಾದ ನಂತರ ಜಿಲ್ಲೆಯಲ್ಲಿ ಯುವ ಜನರ ಮೇಳವನ್ನು ಸಂಘಟಿಸಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಚಾಲನೆ ನೀಡುವುದು.
  • ಯೋಜನಾ ಬೆಂಬಲ ಸಂಸ್ಥೆಗಳ ಸಮಿತಿ ಮತ್ತು ಯುವಜನರ ಒಕ್ಕೂಟಗಳ ಸಹಯೋಗದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಯುವಜನ ಮೇಳವನ್ನು ಸಂಘಟಿಸುವುದು.
  • ಯುವಜನ ಮೇಳಗಳಲ್ಲಿ ಜಂಟಿ ಭಾದ್ಯತಾ ಗುಂಪು (ಜೆಎಲ್‍ಜಿ)ಗಳು ಯುವಜನರು ಉದ್ಯಮದ ಮೂಲಕ ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸುವುದು.
  • ಯುವಜನರೊಂದಿಗೆ ಜಿಲ್ಲಾ ಮಟ್ಟದ ತಜ್ಞರ ಸಮಿತಿ ಸಂವಾದ ಮಾಡುವುದಲ್ಲದೇ ಉದ್ದಿಮೆಯನ್ನು ಉತ್ತಮಗೊಳಿಸಲು ಅಗತ್ಯವಾದ ಸಲಹೆ / ಸೂಚನೆಗಳನ್ನು ನೀಡುವುದು.

ಉದ್ಯೋಗ ಕಲ್ಪಿಸುವಿಕೆ

  • ವೃತ್ತಿಪರ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಒದಗಿಸುವ ಸಂಸ್ಥೆಗಳ (ಯೋಜನಾ ಅನುಷ್ಠಾನ ಸಂಸ್ಥೆ-ಪಿ.ಐ.ಎ.) ಆಯ್ಕೆ
  • ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆಯು, ಪ್ರಸ್ತುತ ಬೇಡಿಕೆ ಇರುವ ಕೌಶಲ್ಯಗಳಲ್ಲಿ ವೃತ್ತಿ ತರಬೇತಿ ನೀಡಿ ಉದ್ಯೋಗ ಒದಗಿಸುತ್ತಿರುವ ಅನುಭವ ಹೊಂದಿದ ಪಿ.ಐ.ಎ.ಯನ್ನು ಆಯ್ಕೆ ಮಾಡುವುದು.
  • ಆಯ್ಕೆ ಹೊಂದಿದ ಯೋಜನಾ ಅನುಷ್ಠಾನ ಸಂಸ್ಥೆಯು 3 ವರ್ಷಗಳ ಕಾಲ ವೃತ್ತಿ ತರಬೇತಿ ಮತ್ತು ಉದ್ಯೋಗ ಒದಗಿಸುವ ಸಂಸ್ಥೆಗಳಾಗಿ ಕೆಲಸ ನಿರ್ವಹಿಸಿರುವ ಅನುಭವ ಹೊಂದಿರುವುದು.
  • ಯೋಜನಾ ಅನುಷ್ಠಾನ ಸಂಸ್ಥೆಗಳು ಆಯಾಯ ಜಿಲ್ಲೆಗಳಲ್ಲಿರುವ ಕರ್ನಾಟಕ ವೃತ್ತಿಪರ ಶಿಕ್ಷಣ ತರಬೇತಿ ಸಂಸ್ಥೆಗಳಡಿಯ ವಿ.ಟಿ.ಪಿ. / ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ ವಿವಿಧ ಇಲಾಖೆಗಳಲ್ಲಿ ಕೌಶಲ್ಯ ತರಬೇತಿ ನೀಡಲು ನೊಂದಣಿಯಾಗಿರಬೇಕು.
  • ಯೋಜನಾ ಅನುಷ್ಠಾನ ಸಂಸ್ಥೆಯು ಆಸಕ್ತ ನಿರುದ್ಯೋಗಿ ಯುವಜನರಿಗೆ ಹಾಗೂ ಪೋಷಕರಿಗೆ ಸಮಾಲೋಚನೆ ಮತ್ತು ಮಾರ್ಗದರ್ಶನ ಕೊಟ್ಟು ಕೌಶಲ್ಯ ತರಬೇತಿಗೆ ಸಿದ್ದಗೊಳಿಸುವುದು.
  • ಆಸಕ್ತ ನಿರುದ್ಯೋಗಿ ಯುವಜನರಿಗೆ ಯೋಜನಾ ಅನುಷ್ಠಾನ ಸಂಸ್ಥೆಯು (ಪಿ.ಐ.ಎ) ಕೌಶಲ್ಯ ತರಬೇತಿ ನೀಡಿ ಕೈಗಾರಿಕೆ / ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದು.
  • ಯೋಜನಾ ಅನುಷ್ಠಾನ ಸಂಸ್ಥೆಯು ಕೌಶಲ್ಯ ತರಬೇತಿ ಪಡೆದ ಯುವಜನರಿಗೆ ಶೇ.75% ಉದ್ಯೋಗ ಕಲ್ಪಿಸುವುದು.
  • ಯೋಜನಾ ಅನುಷ್ಠಾನ ಸಂಸ್ಥೆಯು (ಪಿ.ಐ.ಎ) ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಒದಗಿಸುವುದು ಹಾಗೂ ನಂತರ ಅನುಸರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುವುದು.
  • ಕೌಶಲ್ಯ ತರಬೇತಿಯ ಅವಧಿಯು ವ್ಯಕ್ತಿತ್ವ ವಿಕಸನದ ವಿಷಯಗಳನ್ನೊಳಗೊಂಡು ವಿವಿಧ ಕೋರ್ಸ್‍ಗಳ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ.
  • ವೃತ್ತಿಪರ ಕೌಶಲ್ಯ ತರಬೇತಿಗಳು ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆಗಳ (ವಿ.ಟಿ.ಪಿ). / ಕೇಂದ್ರ ಹಾಗೂ ರಾಜ್ಯಗಳಿಂದ ಅನುಮೋದಿತ ತರಬೇತಿ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ.
  • ಪ್ರಸ್ತುತ ಉದ್ಯೋಗ ಬೇಡಿಕೆಗನುಗುಣವಾಗಿ ವಿವಿಧ ಕಂಪನಿ / ಸಂಸ್ಥೆಗಳ ಉದ್ಯೋಗದಾತರುಗಳನ್ನು ಗುರುತಿಸಿ ಸೂಕ್ತ ಉದ್ಯೋಗಗಳನ್ನು ಕಲ್ಪಿಸುವುದು.
  • ಯೋಜನಾ ಅನುಷ್ಠಾನ ಸಂಸ್ಥೆಗಳು ವೃತ್ತಿಪರ ಕೌಶಲ್ಯ ತರಬೇತಿಯ ನಂತರ ಪ್ರತಿ ಅಭ್ಯರ್ಥಿಗಳ ವೈಯಕ್ತಿಕ ವಿವರಗಳನ್ನು ನಿಗದಿತ ಅರ್ಜಿ ನಮೂನೆಯ ಮೂಲಕ ಉದ್ಯೋಗÀ ಕಲ್ಪಿಸುವ ವ್ಯವಸ್ಥೆ ಮಾಡುವುದು.
  • ಪ್ರತಿ ಫಲಾನುಭವಿಗಳ ವೃತ್ತಿಪರ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಕಲ್ಪಿಸಲು, ಗರಿಷ್ಟ ಅನುದಾನ ರೂ 15,000/- ವೆಚ್ಚ ಮಾಡುವುದು. (ತರಬೇತಿ ವೆಚ್ಚ, ವಸತಿ ಮತ್ತು ಊಟೋಪಚಾರ, ನಿರ್ಧರಣ ಮತ್ತು ಪ್ರಮಾಣೀಕರಣ, ಉದ್ಯೋಗಾವಕಾಶ ಕಲ್ಪಿಸಲು, ಮಾಹಿತಿ ನಿರ್ವಹಣಾ ವ್ಯವಸ್ಥೆ, ಸಂಸ್ಥೆಯ ಆಡಳಿತ ವೆಚ್ಚ, ಉದ್ಯೋಗಾವಕಾಶದ ನಂತರ ಅನುಸರಣೆ ಇತ್ಯಾದಿ)

ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಕಲ್ಪಿಸುವಿಕೆ

ಅ) ವಸತಿ ಸಹಿತ 45 ದಿನಗಳ ತರಬೇತಿಗೆ

1. ಕೌಶಲ್ಯ ತರಬೇತಿಗೆ      6,000

2) ವಸತಿ ಮತ್ತು ಉಟೋಪಚಾರ ಹಾಗೂ ಒಂದು ಬಾರಿ ಪ್ರಯಾಣ ವೆಚ್ಚ      4,500

3) ಪ್ರಮಾಣೀಕರಣ ಮತ್ತು ಉದ್ಯೋಗಾವಕಾಶ ಕಲ್ಪಿಸಲು 1,800

4) ಯೋಜನಾ ಅನುಷ್ಠಾನ ಸಂಸ್ಥೆಯ ಆಡಳಿತ  ಹಾಗೂ ಇತರೆ ವೆಚ್ಚ          700

5) ಉದ್ಯೋಗದಲ್ಲಿ ಮುಂದುವರಿಯುತ್ತಿರುವ ಬಗ್ಗೆ ಅನುಸರಣಾ ವೆಚ್ಚ (3 ವರ್ಷ) 2,000

ಒಟ್ಟು ರೂ.        15,000

 

ಆ) ವಸತಿ ರಹಿತ 45 ದಿನಗಳ ತರಬೇತಿಗೆ

1)ಕೌಶಲ್ಯ ತರಬೇತಿಗೆ       6,000

2) ಉಟೋಪಚಾರ ಹಾಗೂ ಪ್ರಯಾಣ ವೆಚ್ಚ ಪೂರ್ಣ ತರಬೇತಿ ಅವಧಿಗೆ      4,500

3) ಪ್ರಮಾಣೀಕರಣ ಮತ್ತು ಉದ್ಯೋಗಾವಕಾಶ ಕಲ್ಪಿಸಲು 1,800

4) ಯೋಜನಾ ಅನುಷ್ಠಾನ ಸಂಸ್ಥೆಯ ಆಡಳಿತ  ಹಾಗೂ ಇತರೆ ವೆಚ್ಚ          700

5) ಉದ್ಯೋಗದಲ್ಲಿ ಮುಂದುವರಿಯುತ್ತಿರುವ ಬಗ್ಗೆ ಅನುಸರಣಾ ವೆಚ್ಚ (3 ವರ್ಷ) 2,000

ಒಟ್ಟು ರೂ.        15,000

ಅನುದಾನ ಬಿಡುಗಡೆ

ಯೋಜನಾ ಅನುಷ್ಠಾನ ಸಂಸ್ಥೆಗಳು ನೀಡುವ ವೃತ್ತಿ ತರಬೇತಿಗಳಿಗೆ ಫಲಾನುಭವಿಗಳ ಆಯ್ಕೆಯ ನಂತರ, ಅನುಷ್ಠಾನ ಸಂಸ್ಥೆಗಳು ಹೊಂದಿರುವ ತರಬೇತಿ ಸಂಸ್ಥೆಗಳ ಸಾಮಥ್ರ್ಯದ ಆಧಾರದ ಮೇಲೆ ನಿಗದಿಪಡಿಸುವ ಅರ್ಧ ವಾರ್ಷಿಕ ಗುರಿಯ ಶೇ.25 ರಷ್ಟು  ಅವಶ್ಯಕವಿರುವ ಅನುದಾನವನ್ನು ಬ್ಯಾಂಕ್ ಗ್ಯಾರೆಂಟಿ ಆಧಾರದ ಮೇಲೆ ಮುಂಗಡವಾಗಿ ಬಿಡುಗಡೆ ಮಾಡಲಾಗುವುದು. ಒಂದು ವೇಳೆ ಯೋಜನಾ ಅನುಷ್ಠಾನ ಸಂಸ್ಥೆಗಳು ಕಡಿಮೆ ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡಿದ್ದಲ್ಲಿ ಅದಕ್ಕನುಗುಣವಾಗಿ ಮುಂಗಡ ಅನುದಾನವನ್ನು ಬಿಡುಗಡೆ ಮಾಡಲಾಗುವುದು.

ಯೋಜನಾ ಅನುಷ್ಠಾನ ಸಂಸ್ಥೆಗಳು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಖ್ಯೆಯ ಆಧಾರದ ಮೇಲೆ ಕಂತುಗಳಲ್ಲಿ ನಿಯಮಾನುಸಾರ ಮುಂದಿನ ಅನುದಾನ ಬಿಡುಗಡೆ ಮಾಡಲಾಗುವುದು.

ಫಲಾನುಭವಿಗಳ ಆಯ್ಕೆಯ ವಿಧಾನ

  • ಯೋಜನೆಯ ಬಗ್ಗೆ ವೃತ್ತ ಪತ್ರಿಕೆ ಹಾಗೂ ವಿದ್ಯುನ್ಮಾನ್ಯ ಮಾಧ್ಯಮಗಳ ಮೂಲಕ ಪ್ರಚಾರ ನೀಡುವುದು.
  • ಪ್ರತಿ ಗ್ರಾಮ ಪಂಚಾಯತಿಗೆ 40 ಯುವಜನರಂತೆ 18 ರಿಂದ 35 ವರ್ಷ ವಯೋಮಾನದ 1 ಲಕ್ಷ ನಿರುದ್ಯೋಗ ಯುವಜನರನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡುವುದು.
  • ಅಭ್ಯರ್ಥಿಗಳ ಆಯ್ಕೆಯಲ್ಲಿ ಸರ್ಕಾರದ ಮೀಸಲಾತಿ ನಿಯಮಾವಳಿಗಳಂತೆ ಕನಿಷ್ಠ ಶೇ.20 ರಷ್ಟು ಪರಿಶಿಷ್ಠ ಜಾತಿ ಹಾಗೂ ಶೇ.9 ರಷ್ಟು ಪರಿಶಿಷ್ಠ ಪಂಗಡದ ಯುವಜನರನ್ನು ಆಯ್ಕೆ ಮಾಡಿಕೊಳ್ಳಬೇಕು.  (ಜಾತಿ ಪ್ರಮಾಣ ಪತ್ರ ಒದಗಿಸುವುದು).
  • ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು.  (ಸೂಕ್ತ ದಾಖಲೆಗಳನ್ನು ಒದಗಿಸುವುದು).
  • ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಸಭೆ ನಡೆಸಲು ವ್ಯವಸ್ಥೆ ಮಾಡುವುದು.
  • ಗ್ರಾಮಸಭೆಗಳ ಮೂಲಕ ಆಯ್ಕೆಯಾದ 40 ಯುವಜನರ ಪೈಕಿ ವೃತ್ತಿ ತರಬೇತಿಯೊಂದಿಗೆ ಉದ್ಯೋಗ ಮಾಡಬಯಸುವ ಯುವಜನರ ಆಯ್ಕೆ ಮಾಡುವುದು.

ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ

  • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಅಸ್ಥಿತ್ವದಲ್ಲಿರುವ ಎನ್.ಆರ್.ಎಲ್.ಎಂ. ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಿತಿಯು ಯೋಜನೆ ಅನುಷ್ಠಾನದ ನೀತಿಗೆ ಮಾರ್ಗದರ್ಶನ ಮತ್ತು ಯೋಜನಾ ಪ್ರಗತಿ ಪರಿಶೀಲನೆ ಮಾಡುವುದು.
  • ಜಿಲ್ಲಾ ಮಟ್ಟದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ತಜ್ಞರ ಯೋಜನಾ ಅನುಷ್ಠಾನ ಸಮಿತಿಗಳು ಯೋಜನೆಗಳ ಅನುಷ್ಠಾನದ ಹಂತದಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸುವುದು ಅಥವಾ ಸಲಹೆಗಳನ್ನು ನೀಡುವುದು.
  • ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಯೋಜನಾ ಅನುಷ್ಠಾನದ ಹಂತದಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸುವುದು ಅಥವಾ ಸಲಹೆಗಳನ್ನು ನೀಡುವುದು.
  • ಜಿಲ್ಲಾ / ತಾಲ್ಲೂಕು ಮಟ್ಟದ ಸಮಿತಿಗಳು ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಲ್ಲಾ ಜಿಲ್ಲೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವರದಿಯನ್ನು ಅಭಿಯಾನ ನಿರ್ದೇಶಕರು, ಕೆಎಸ್‍ಆರ್‍ಎಲ್‍ಪಿಎಸ್, ಇವರಿಗೆ ಕಳುಹಿಸುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 7/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate