ಪೂರಕ ಪೌಷ್ಠಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ವೆಚ್ಚ ಮಾಡುವ ಮೊತ್ತದ ಶೇ 50% ಕೇಂದ್ರ ಸಕರ್ಾರವು ಮರುಪಾವತಿಸುತ್ತದೆ. ಫಲಾನುಭವಿಗಳು ಪ್ರತಿ ದಿನ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಪೂರಕವಾಗಿ ಪರಿಷ್ಕೃತ ಮಾರ್ಗಸೂಚಿಯಂತೆ 6ತಿಂಗಳಿಂದ - 6 ವರ್ಷದ ಮಕ್ಕಳಿಗೆ 500 ಕ್ಯಾಲೊರಿಗಳನ್ನು, 12-15 ಗ್ರಾಂ ಪ್ರೋಟಿನ್, ಗರ್ಭಿಣಿ / ಬಾಣಂತಿ/ಪ್ರಾಯಪೂರ್ವ ಬಾಲಕಿಯರಿಗೆ 600 ಕ್ಯಾಲೊರಿಗಳನ್ನು ಮತ್ತು 18-20 ಗ್ರಾಂ ಪ್ರೋಟಿನ್ ಅಲ್ಲದೆ ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿಗಳನ್ನು ಮತ್ತು 20-25 ಗ್ರಾಂ ಪ್ರೋಟಿನ್ ನೀಡುವ ಉದ್ದೇಶದಿಂದ ಯೋಜನೆಯಡಿ ಪೂರಕ ಪೌಷ್ಠಿಕ ಅಹಾರ ನೀಡಲಾಗುತ್ತಿದೆ. ಯೋಜನೆಯ ಮಾರ್ಗಸೂಚಿಯಂತೆ ವರ್ಷದಲ್ಲಿ 300 ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಸಾಮಾನ್ಯ ಆರೋಗ್ಯವಂತ ಮಕ್ಕಳಿಗೆ ಪ್ರತಿ ದಿನ ರೂ. 4.60 /- ರ ಘಟಕ ವೆಚ್ಚದಂತೆ,ಗರ್ಭಿಣಿ , ಬಾಣಂತಿಯರಿಗೆ ಹಾಗೂ ಪ್ರಾಯಪೂರ್ವ ಬಾಲಕಿಯರಿಗೆ ಘಟಕ ವೆಚ್ಚ ರೂ.5.75/- ರಂತೆ ಮತ್ತು ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ರೂ. 6.90 /- ರ ಘಟಕ ವೆಚ್ಚದಲ್ಲಿ ಆಹಾರವನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ಇಲಾಖೆಯ ಸಹಾಯದೊಂದಿಗೆ ಕಾರ್ಯನಿರತವಾಗಿದ್ದು, ಇದರಲ್ಲಿ 22-32 ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು ವಿಧವೆಯರು, ವಿಕಲಚೇತನರು, ಪರಿತ್ಯಕ್ತ ಮಹಿಳೆಯರು, ಫಲಾನುಭವಿಗಳ ತಾಯಂದಿರು, ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಆಗಿರುತ್ತಾರೆ. ಈ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ತಿನ್ನಲು ಸಿದ್ಧಪಡಿಸಿದ ಆಹಾರ/ಬೇಯಿಸಲು ಸಿದ್ಧವಿರುವ ಆಹಾರ ಪದಾರ್ಥಗಳನ್ನು ವಾರದ 6 ದಿನಗಳು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರತ ಒಖಕಖಿಅ ಮಹಿಳಾ ಪೂರಕ ಪೌಷ್ಠಿಕ ಕೇಂದ್ರಗಳ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಪ್ರತಿ ಜಿಲ್ಲೆಯ ಜಿಲ್ಲಾದಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಮೆನು ನಿಗದಿ ಪಡಿಸಲಾಗುವುದು, ಉದಾ:
ಕೊನೆಯ ಮಾರ್ಪಾಟು : 7/7/2020
ಆಹಾರವಿಜ್ಞಾನ ವಿವಿಧ ಶಾಖೆಗಳ ವಿಚಾರ ಅಭ್ಯಸಿಸುವುದಕ್ಕೆ ಪ್ರ...
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...