2007-08 ನೇ ಸಾಲಿನಲ್ಲಿ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್ಕಾರದಿಂದ ಪ್ರಾರಂಬಿಸಲಾಗಿದ್ದು, ತೀವ್ರ ನ್ಯೂನಪೋಷಣೆಗೊಳಗಾದ ಮಕ್ಕಳ ಪೌಷ್ಠಿಕ ಮಟ್ಟ ಸುಧಾರಿಸಿ ಸಾಮಾನ್ಯ ದರ್ಜೆಗೆ ತರಲು ವೈದ್ಯಾದಿಕಾರಿಗಳ ಸೂಚನೆಯಂತೆ ಔಷದೋಪಚಾರ ಹಾಗೂ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವರ್ಷಕ್ಕೆ ರೂ.750/-ನ್ನು ನೀಡಲಾಗುತ್ತಿದೆ. 2012-13 ನೇ ಸಾಲಿನಲ್ಲಿ ತೀವ್ರ ನ್ಯೂನಪೋಷಣೆಗೆ ಒಳಗಾದ 54348 ಮಕ್ಕಳ ಔಷಧೋಪಚಾರದ ವೆಚ್ಚಕ್ಕಾಗಿ ರೊ 407.61 ಲಕ್ಷಗಳ ವೆಚ್ಚ ಭರಿಸಲಾಗಿದೆ.
2010-11 ನೇ ಸಾಲಿನಿಂದ ಈ ಯೋಜನೆಯಡಿ ಬಾಲಸಂಜೀವಿನಿ ಎಂಬ ಉಪ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಯೋಜನೆಯಡಿ 0-6 ವರ್ಷದ ಅಂಗನವಾಡಿ ಕೇಂದ್ರಗಳಲ್ಲಿನ ಬಿ.ಪಿ.ಎಲ್ ವರ್ಗದ ಅನಾರೋಗ್ಯ ಪೀಡಿತ ಹಾಗೂ 3 ನೇ ದಜರ್ೆಯ ಚಿಕಿತ್ಸೆಯ ಅವಶ್ಯಕತೆ ಇರುವ ಮಕ್ಕಳಿಗೆ ಈ ಕೆಳಕಂಡ ಆಯ್ದ 20 ಆಸ್ಪತ್ರೆಗಳಲ್ಲಿ ಉಚಿತ ಸೇವೆಯನ್ನು ಒದಗಿಸಲಾಗಿದೆ.
3 ನೇ ಹಂತದ ಚಿಕಿತ್ಸೆಯ ಅವಶ್ಯಕತೆ ಇರುವ ಮಗುವಿಗೆ ಗರಿಷ್ಟ ರೂ. 35000 ಹಾಗೂ ನವಜಾತ ಶಿಶುವಿನ ಆರೋಗ್ಯ ಮತ್ತು ಚಿಕಿತ್ಸೆಗೆ ರೂ 50000 ಗಳನ್ನು ಚಿಕಿತ್ಸಾ ವೆಚ್ಚವಾಗಿ ಒದಗಿಸಲಾಗುತ್ತದೆ. 2012-13 ನೇ ಸಾಲಿನಲ್ಲಿ ಇದಕ್ಕಾಗಿ ರೂ.1091.22 ಲಕ್ಷಗಳನ್ನು 7957 ಮಕ್ಕಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗಿದೆ.
ಕೊನೆಯ ಮಾರ್ಪಾಟು : 8/28/2019
ಐ.ಸಿ.ಡಿ.ಎಸ್ ಸೇವೆಗಳು
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಕರ್ನಾಟಕ ಜೈವಿಕ ಇಂಧನದ ಯೋಜನೆಗಳು ಕುರಿತು ಇಲ್ಲಿ ತಿಳಿಸಲಾಗ...
ರಾಜೀವ್ ಗಾಂಧಿ ಗ್ರಾಮೀಣ ಎಲ್. ಪಿ. ಜಿ. ವಿತರಕ ಯೋಜನೆಯು ಅಕ...