অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಹಿಳೆಯರ ಸವಾಲು

ಮಹಿಳೆಯರ ಸವಾಲು

ವೃಂದಾವನದ ವಿಧವೆಯರ ಬಳಿ ಬ್ಯಾಂಕ್ ಬ್ಯಾಲೆನ್ಸು, ಉಣ್ಣಲು ಪಂಚಭಕ್ಷ್ಯ ಪರಮಾನ್ನಗಳು ಮಳಗಳು ಸುಖದ ಸುಪತ್ತಿಗೆ ಎಲ್ಲವೂ ಉಂಟಂತೆ. ಇಷ್ಟೆಲ್ಲ ಇದ್ದರೂ ಅವರು ಚಟಕ್ಕಾಗಿ ತಿರುಪೆ ಎತ್ತುವರಂತೆ! ಹೊರ ರಾಜ್ಯಗಳಿಂದ ಬರುವ ವಿಧವೆಯರು ವೃಂದಾವನವನ್ನು ಗಬ್ಬೆಬ್ಬಿಸಿದ್ದಾರಂತೆ. ಬಂಗಾಳ ಮತ್ತು ಬಿಹಾರದ ಈ ವಿಧವೆಯರು ವೃಂದಾವನಕ್ಕೆ ಬರಬಾರದಂತೆ. ಅವರವರ ರಾಜ್ಯಗಳಲ್ಲೇ ಸುಂದರ ದೇವಾಲಯಗಳು ಇವೆಯಂತೆ. ಆ ದೇವಾಲಯಗಳಲ್ಲೇ ಅವರು ಆಶ್ರಯ ಪಡೆಯಬೇಕಂತೆ... ವಿಕಟ ವಿಪರ್ಯಾಸದ ಈ ಮಾತುಗಳನ್ನು ಆಡಿರುವ ಹೆಣ್ಣು ಮಗಳ ಹೆಸರು ಹೇಮಾಮಾಲಿನಿ, ಮಥುರಾ ಲೋಕಸಭಾ ಕ್ಷೇತ್ರದ ಸದಸ್ಯೆ.

ಸಂತ ಮೀರಾಬಾಯಿ ಕೂಡ ವಿಧವೆಯಾಗುತ್ತಾಳೆ. ಮೈದನಿಂದ ಬಗೆಬಗೆಯ ಕಿರುಕುಳ ಎದಿರುಸುತ್ತಾಳೆ. ವೃಂದಾವನಕ್ಕೂ ಬರುತ್ತಾಳೆ. ಆಕೆಯ ಹೆಸರಿನ ಗೂಡಿಯನ್ನು ಇಂದಿಗೂ ಕಾಣಬಹುದು ಅಲ್ಲಿ ಗುಲ್ಜಾರರು ನಿರ್ದೇಶಿಸಿದ “ಮೀರಾ”  ಚಲನಚಿತ್ರದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದರು ಹೇಮಾಮಾಲಿನಿ ವಿಧವೆಯರು ಕಷ್ಟಕೋಟಲೆಗಳನ್ನೂ ಪ್ರಾಯಶಃ ಮರೆತಿರಬೇಕು ಪಾಪ. ಹೀಗಾಗಿಯೇ ಬಡಬಡಿಸಿದ್ದಾರೆ. ನಿರ್ಗತಿಕ ವಿಧವೆಯರ ಗಾಯದ ಮೇಲೆ ಉಪ್ಪು  ಎರೆಚಿದ್ದಾರೆ. ನಮ್ಮ ಬಹು ದೊಡ್ಡ ನಾಚಿಕೆಗೇಡಿನ ಸಾಮಾಜಿಕ ಹುಣ್ಣನ್ನು ತಮ್ಮ ಅರಿವಿಲ್ಲದೆಯೇ ಕೆದಕಿದ್ದಾರೆ.  ಈ ಚಲನಚಿತ್ರ ತಾರೆ ನಿಜವಾಗಿಯೂ ಧ್ವನಿ ಎತ್ತಬೇಕಾದದ್ದು ಈ ಹೆಣ್ಣು ಮಕ್ಕಳನ್ನು ಬೀದಿಪಾಲು ಮಾಡುವ ವ್ಯವಸ್ಥೆಯ ವಿರುದ್ದ. ಬಲಿ ಹಾಕುವವರ ಬದಲಿಗೆ ಬಲಿಪಶುಗಳ ವಿರುದ್ದ ಗುಡುಗುವ ಹೇಮಾಮಾಲಿನಿ, ಮಹಾತಾಯಿ ದುರ್ಗೆಯಾಗಿ ನಟಿಸುವ ನೃತ್ಯ ರೂಪಕಗಳನ್ನು ದೇಶ ವಿದೇಶಗಳಲ್ಲಿ  ಪ್ರದರ್ಶಿಸುತ್ತಾ ತಿರುಗುವುದನ್ನು ವಿಪಾರ್ಯಾಸ ಎನ್ನದೆ ಇನ್ನೇನೆಂದು ಕರೆಯಲು ಬಂದಿತು ?

ಸತ್ತ ಗಂಡನ ಚಿತೆಗೆ ಬದುಕಿದ್ದು ಅವನ ಪತಿಯನ್ನು ದೂಡಿ ಆಕೆಯನ್ನು ಜೀವಂತವಾಗಿ ಸುಡುವ ಸತಿ ಪದ್ದತಿಯನ್ನು ನಿಷೇದಿಸಿದೆ ನೂರೈವತ್ತು ವರ್ಷಗಳು ಸಂದಿವೆ. ಅಂದಿನ ದಿನಗಳಿಂದಲೂ ಶ್ರೀ ಕೃಷ್ಣ ಜನ್ಮಸೀಮೆ ಉದ್ಯಾನವು ಸಾವಿರಾರು ವೈಷ್ಣವ ವಿಧವೆಯರ ಪಾಲಿಗೆ ಇಳೆಯ ಮೇಲಿನ ಪರಂಧಾಮ ಬಂಧು ಬಾಂಧವರೇ ಬೀದಿಗೆ ಅಟ್ಟಿದ್ದ ಎದೆ ಹಾಲು ಬತ್ತಿದ ಮಂದಿ ಹಸುಗಳಿಗೆ ಹೋಗಲು ಬೇರೆಲ್ಲೂ ಎಡೆಯಿಲ್ಲ. ಆದರೆ ವೃಂದಾವನ ವಾಸ ಇವರ ಪಾಲಿಗೆ ವಾಸ್ತವ ಅರ್ಥದಲ್ಲಿ ಬದುಕಿದ್ದಾಗಲೇ ಅನುಭವಿಸುವ ಘೋರ ನರಕ. ಸಾವೆಂಬ ಬಿಡುಗಡೆ ದೊರೆಯುವ ತನಕ ಈಜದೆ ವಿಧಿಯಿಲ್ಲ. ಶೋಷಣೆ ತುಂಬಿದ ಕೊಳಕು ಆಶ್ರಮಗಳು, ದೇವಾಲಯಗಳ ಪಾವಟಿಕೆಗೆಗಳು, ಇರುಳು ಮುಚ್ಚಿದ ಮುಂಗಟ್ಟುಗಳ ಅಂಗಗಳೇ ಇವರ ಆಶ್ರಮ ತಾಣಗಳು.

ನಾಲ್ಕು ತಿಂಗಳ ಹಿಂದೆ ಲೋಕಸಭೆ ಚುನಾವಣೆ ಜರುಗಿದಾಗ ಕಾಶಿಯ “ಕೆಂಪು ದೀಪ”ದ ಕೂಪಗಳಿಗೆ ಮತ ಯಾಚಿಸಲು ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಹೋಗಿದ್ದ ಸಂಗತಿ ಸುದ್ದಿಯಾಗಿತ್ತು. ತಮ್ಮ ಭಾವ ಆ ಹೆಣ್ಣುಮಕ್ಕಳಲ್ಲಿ ಮೂಡಿತ್ತು. ಇಂತಹ ಹುಸು ವರ್ಗದ ಸುಖದಿಂದಲೂ ವಂಚಿತರು ವೃಂದಾವನದ ವಿಧವೆಯರು, ಯಾಕೆಂದರೆ, ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಮತ ಕೇಳಲು ಯಾರು ಅವರ ಬಳಿಗೆ ತೆರಳುವುದಿಲ್ಲ. ಮತಾಧಿಕಾರಿ ಇದ್ದವರನ್ನೆ ಲೆಕ್ಕಿಸದ ವ್ಯವಸ್ಥೆಯಲ್ಲಿ ಅಂತಹ ಅಧಿಕಾರ ಇಲ್ಲದವರನ್ನು ಕೇಳುವವರು ಯಾರು ?

ಬಂಗಾಳ ಮತ್ತು ಬಿಹಾರದ ವಿಧವೆಯರು ವೃಂದಾವನಕ್ಕೆ ಬರಬಾರದು ಎಂಬ ಹೇಮಾ ಮಾತುಗಳು ಮುಂಬಾಯಿಯಲ್ಲಿ ಠಾಕರೆಗಳ ಘರ್ಜನೆಯನ್ನು ಧ್ವನಿಸಿವೆ. ಸರಕಾರ ನೀಡುವ ಮಾಸಿಕ 300 ರೂ, ಕೊಂಚ ಕಾಳುಕಡ್ಡಿಗಳು ಸಾಲುವುದಿಲ್ಲ. ಮೇಲಾಗಿ ಇಂತಹ ಕನಿಷ್ಠ ಸೌಕರ್ಯ ಎಲ್ಲರ ಹಣೆಯಲ್ಲೂ  ಬರೆದಿಲ್ಲ. ಹಸಿವು, ಅಸಹಾಯಕತೆ, ಕಣ್ಣೀರು-ಕಾರ್ಪಣ್ಯ ಬೆಳಕು-ಬಣ್ಣ-ನಗುವಿಲ್ಲದ ಬದುಕು. ವಿಧವೆಯಾಗುವಂತೆ ದೇವರೇ ತಮ್ಮನ್ನು ಶಿಕ್ಷೀಸಿದ್ದಾನೆ ಎಂಬ ಭಾವನೆ. ಈ ಶಿಕ್ಷೆಯನ್ನು ಗೌರವಿಸದಿದ್ದರೆ ಮರು ಜನ್ಮದಲ್ಲಿ ಪುನಃ ವಿಧವೆಯಾಗುವ ಶಿಕ್ಷೆ ದೊರೆತಿದೆಂಬ ಭಯ .

ಇತ್ತೀಚಿಗೆ ಸ್ವಯಂ ಸೇವ ಸಂಸ್ಥೆಯೊಂದು ವಿಧವೆಯರಿಗೆ ಮಾಡಿದ ಅನ್ನಸಂತರ್ಪಣೆಗೆ ಬಾರಿ ನೂಕುನುಗ್ಗಲು, ಆಳಿಗೊಂದು ಜಿಲೇಬಿಯನ್ನು ಊಟದ ಜೊತೆ ಹಂಚಿದ್ದೇ ಈ ತುಳಿದಾಟದ ಹಿಂದಿನ ಕಾರಣವಂತೆ ಬ್ಯಾಂಕ್ ಬ್ಯಾಲೇನ್ಸ್ ಸುಖದ ಸುಪತ್ತಿಗೆ ಇದ್ದವರು, ಚಟಕ್ಕಾಗಿ ತಿರುಪೆ ಎತ್ತುವವರು ಜಿಲೇಬಿ ತುಂಡುಗಳಿಗಾಗಿ ಬಡಿದಾಡುವರೇ ? ಧರ್ಮಾರ್ಥಿಗಳು ಕಟ್ಟಿಸಿ ನಡೆಸುವ ಭೋಜನಾಶ್ರಮಗಳಲ್ಲಿ ಸಾವಿರಾರು ವಿಧವೆಯರು ನಿತ್ಯ ಅನ್ನಕ್ಕಾಗಿ ಭಜನೆ ಮಾಡುತ್ತಾರೆ, ಸಾವಿಗಾಗಿ ಎದುರು ನೋಡುತ್ತಾರೆ. ಬೆಳಗ್ಗೆ ಸಂಜೆ ನಾಲ್ಕು ಗಂಟೆ ಶ್ರೀಕೃಷ್ಣನನ್ನು ಭಜಿಸಿದರೆ ಈ ವೃದ್ದೆಯರ ಮಡಿಲಿಗೆ ಬೀಳುವುದು ಮೂರು-ನಾಲ್ಕು ರೂಪಾಯಿ ಮತ್ತು ಮುಷ್ಟಿ ಅಕ್ಕಿ ಬೆಳೆ, ಅದೂ ಅಲ್ಲದೆ, ಈ ಆಶ್ರಮಗಳ ಪ್ರವೇಶಕ್ಕೆ ಮುಂಚಿತವಾಗಿಯೇ ನೊಂದಾಣಿ ಮಾಡಿಸಿಕೊಂಡಿರಬೇಕು.

ಕಾಶಿ ಮತ್ತು ವೃಂದಾವನದಲ್ಲಿ ಪ್ರಾಣಬಿಡುವುದೆಂದರೆ ಜನನ ಮರಣ ಚಕ್ರದಿಂದ ಬಿಡುಗಡೆ ಎಂಬುದು ಹಿಂದೂಗಳ ನಂಬಿಕೆ. ವೈದವ್ಯದ ಭಯಾನಕತೆಗೆ ಬೆದರಿದ ವಿಧವೆಯರಿಗೆ ಪುನರ್ಜನ್ಮ ಶಾಪವೇ ಸರಿ "ನೀನಿನ್ನು ಮುದಿಗೊಡ್ಡು ದಂಡದ ಕೂಳು ತಿಂದು ಬಿದ್ದಿರಬೇಡ, ತೊಲಗು” ಎಂದು ಓಡಿಸುವವರು ತಾನೇ ಲಾಲಿಸಿ ಪಾಲಿಸಿದ ತನ್ನದೇ ರಕ್ತಮಾಂಸ ಧರಿಸಿದ ಮಕ್ಕಳು ಮುಂಜಾನೆ ಎದ್ದರೆ ಮುಖ ನೋಡಲು ಹೇಸಿ ಅಟ್ಟುವ ಹೆತ್ತಮಕ್ಕಳು, ಬಂಧು ಬಾಂಧವರು, ಕರುಳ ಕುಡಿಗಳು, ತೋರುವ ತಿರಸ್ಕಾರ, ಉಂಟು ಮಾಡುವ ದೈಹಿಕ-ಮಾನಸಿಕ ಚಿತ್ರಹಿಂಸೆಯಿಂದ ದೂರ ಓಡುವುದೊಂದೆ ದಾರಿ. ಎದೆಹೊಡೆದು ಅರೆ ಜೀವವಾಗುವ ವೃದ್ದೆಯರ ಪ್ರಾಣ ಪಕ್ಷಿ ಹಾರುವವರೆಗೆ ಶಿಥಿಲ ಶರೀರವನ್ನು ಪೊರೆಯಲು ಪಡುವ ಪಾಡು ಘನಘೋರ. ತುತ್ತು ಅನ್ನಕ್ಕೆ ಗುಟುಕು ನೀರಿಗೆ, ಉಡುವ ಅರಿವೆಗೆ, ನೆತ್ತಿಯ ಮೇಲೊಂದು ನೆರಳಿಗೆ ನಿತ್ಯ ಹೋರಾಟ ಸ್ವಾಭಿಮಾನ ಬಿಟ್ಟು ಕಡೆಗಾಲದಲ್ಲಿ ಕೈಚಾಚುವ ದೈನೇಸಿ ಸ್ಥಿತಿಗೆ ಈಕೆಯನ್ನು ದೂಡುವ ಹೆಮ್ಮೆಯ ಸಂಸ್ಕೃತಿ ಯಾವುದು ?

ಪುರುಷ ಪ್ರಧಾನ ವ್ಯವಸ್ಥೆಯ ದಬ್ಬಾಳಿಕೆಯಲ್ಲಿ ಜೀವಿಸುವ ಸ್ತ್ರೀ ಹುಟ್ಟಿನಿಂದಲೇ ತಾರತಮ್ಯ ಎದುರಿಸಬೇಕು. ವೈದವ್ಯ ಪ್ರಾಪ್ತಿಯ ನಂತರ ಸಾಂಸ್ಕೃತಿಕ ಬಹಿಷ್ಕಾರ, ಸಾಮಾಜಿಕ ತಿರಸ್ಕಾರ, ಗಂಡನನ್ನು ಕಳೆದುಕೊಂಡ ವೈಯಕ್ತಿಕ ದುಖಃ ಆರ್ಥಿಕ ಗತಿಗೇಡು ಎಲ್ಲವೂ ಕಲೆತರೆ ಆಕೆ ಎದುರಿಸಬೇಕಾದದ್ದು ತಾರತಮ್ಯ ಆಯುಷ್ಯ ಕಳೆದ ಮುಪ್ಪಿನ ವಿಧವೆಯರ ಪೈಕಿ ಬಹು ಮುಂದಿನ ಊರುಗೋಲಿನ ಆಸರೆ ಇಲ್ಲದೆ ಹೆಜ್ಜೆ ಇಡಲಾರದವರು.

ವೃಂದಾವನಕ್ಕೆ ರಸ್ತೆಯ ಬದಿಗಳಲ್ಲಿ ಬೆನ್ನು ಬಾಗಿಸಿ ಕಸವಿಲ್ಲದೆ ಕುಸಿದು ಶರೀರದ ಒಜ್ಜೆಯನ್ನು ಊರುಗೋಲಿಗೆ ದಾಟಿಸಿ ಹೆಜ್ಜೆ ಕಿತ್ತಿಡುತ್ತಾರೆ. ನೋವುಂಟು ಸುಕ್ಕು ಗಟ್ಟಿದ ಮುಖ ಬೋಳಿಸಿದ ತಲೆ, ಹಣೆಯಿಂದ ಆರಂಭವಾಗಿ ಮೂಗಿನವರೆಗೂ ಚಾಚಿಕೊಂಡ ವೈಷ್ಣವ ಮುದ್ರೆ. ಹೀಗೆ ವೃಂದಾವನಕ್ಕೆ ಬಂದು ಸೇರಿರುವ ವಿಧವೆಯರ ಒಟ್ಟು ಸಂಖ್ಯೆ 15 ಸಾವಿರಕ್ಕೂ ಹೆಚ್ಚೂ ಎನ್ನಲಾಗಿದೆ. ಉಳ್ಳವರು ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಾರೆ. ಇದ್ದುದ್ದರಲ್ಲೇ ಘನತೆಯ ಬದುಕು ಸಾಗಿಸುತ್ತಾರೆ ಇಕ್ಕಾಟ್ಟಾದ ಕೋಣೆಯನ್ನು ನಾಲ್ಕಾರು ಮಂದಿ ಹಂಚಿಕೊಂಡು ಬಾಡಿಗೆ ನೀಡುತ್ತಿರುವವರೂ ಇದ್ದಾರೆ ತಮ್ಮದೇ ಸೂರನ್ನು ಹೊಂದಿದ ಇಂತಹವರ ಸಂಖ್ಯೆ ಕಡಿಮೆ ಹರೆಯದ ಮಾಸದ ವಿಧವೆಯರು ಲೈಂಗಿಕ ಶೋಷಣೆ ವರದಿಗಳಿವೆ.

ಬದುಕು ಮಾತ್ರವಲ್ಲ ಸಾವಿನಲ್ಲೂ ಕೂಡ ಘನತೆ ಎಂಬುವುದು ಇವರ ಬಳಿಗೆ ಸುಳಿಯುವುದಿಲ್ಲ. ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನ ಮುಂದೆ ವಿಚಾರಣೆಗೆ ಬಂದಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯೊಂದು ಸುಪ್ರೀಂ ಕೋರ್ಟ್ ನ, ನ್ಯಾಯ ಪೀಠಕ್ಕೆ  ಆಘಾತ ಉಂಟುಮಾಡಿತ್ತು. ಶ್ರೀಕೃಷ್ಣನ ಜನ್ಮಸೀಮೆಯಾದ ಮಥುರದ ವೃಂದಾವನ ಆಶ್ರಮಗಳಲ್ಲಿ ಆಸರೆ ಪಡೆದು ಕಡೆಯುಸಿರೆಳೆಯುವ ಮುಪ್ಪಿನ ವಿಧವೆಯರ ತಲೆ ಬುರುಡೆಗಳನ್ನು ಕತ್ತರಿಸಿ ತುಂಡು ಮಾಡಿ ವಿಲೇವಾರಿ ಮಾಡಲಾಗುತ್ತಿದೆಯಂತೆ, ದಿಕ್ಕಿಲ್ಲದ ಬಡ ದಂಡ ದೋರಣೆ ! ಆಶ್ರಮಧಾಮಗಳು ಮೃತದೇಹದ ಅಂತ್ಯ ಸಂಸ್ಕಾರದ ಹೊಣೆ ತಮ್ಮದಲ್ಲ ಎಂದು ಆರಂಭದಲ್ಲೇ ಸಾರಿರುತ್ತಾರೆ. ಈ ದೇಹಗಳನ್ನು ರಾತ್ರಿ ವೇಳೆ ಸಫಾಯಿ ಕರ್ಮಚಾರಿಗಳಿಗೆ ಒಪ್ಪಿಸಲಾಗುತ್ತದೆ. ಕೈಗೆ ಒಂದಷ್ಟು ಹಣ ಇಟ್ಟ ನಂತರ ಅವರು ದೇಹವನ್ನು ಕತ್ತರಿಸಿ ತುಂಡುಮಾಡಿ ಗೋಣಿಚೀಲದಲ್ಲಿ ತುಂಬಿ ದೂರ ಎಸೆಯುತ್ತಾರೆ. ಈ ಅಘಾತಕಾರಿ ಅಂಶವನ್ನು ವರ್ಷಗಳ ಹಿಂದೆ ಹೊರಹಾಕಿದ್ದು ಮಥುರಾ ಜಿಲ್ಲೆ ಕಾನೂನು ಸೇವೆಗಳ ಪ್ರಾಧಿಕಾರದ ವರದಿ.

ಹೆಣ್ಣು ಮಕ್ಕಳನ್ನು ದೇವತೆಗಳೆಂದು ಬರೀ ಮಾತುಗಳ ಬೂಕಟದ ಭಾರತದಲ್ಲಿ 2001 ರ ಜನಗಣತಿಯ ಪ್ರಕಾರ ನಾಲ್ಕೂವರೆ ಕೋಟಿ ವಿಧವೆಯರಿದ್ದರು. ಈ ಅಂಕಿ ಅಂಶವನ್ನು ಇತ್ತೀಚಿನ ಜನಗಣತಿಯ ಅಂಶಗಳಿಗೆ  ಪರಿಷ್ಕರಿಸಿಕೊಳ್ಳಬೇಕಿದೆ. ವಿಧವೆಯರು ಮತ್ತು ದಿಕ್ಕಿಲ್ಲದ ಹೆಂಗಸರಿಗೆ ಮಾಶಾಸನ ನೀಡುವ ರಾಜ್ಯ ಸರ್ಕಾರಗಳು ಉಂಟು........ ಉಣ್ಣಲೂ ಆಗದ, ಊಡಲೂ ಸಾಲದ ಈ ಜುಜುಬಿ ಮಾಶಾಸನ ಅನಕ್ಷರಸ್ಥ ವಿಧವೆಯರು ಅರ್ಜಿ ತುಂಬಿ, ತಮ್ಮ ಬಳಿಯ ಇಲ್ಲದ ಹುಟ್ಟಿದ ದಿನಾಂಕದ ರುಜುವಾತನ್ನು ವೈದ್ಯರನ್ನು ಕಾಡಿ ಬೇಡಿ ಪಡೆದು ಒದಗಿಸಿದ ನಂತರ ಕಛೇರಿಗಳಿಗೆ ತಿಂಗಳುಗಟ್ಟಳೆ ಅಲೆಯುವುದು ತಪ್ಪದು. ಸಿಬಂದ್ದಿ ಸ್ಥಳಕ್ಕೆ ಬಂದು ನೋಡಬೇಕು,. ವಿಧವೆ ನಿಜವಾಗಿಯೂ ದಿಕ್ಕಿಲ್ಲದವಳೇ ಎಂಬ ಸರಕಾರದ ಪ್ರಶ್ನೇಯೇ ಆಕೆಯನ್ನು ಕಾಡಬಿಡಬಲ್ಲದು. ಮಗನೋ, ಮೊಮ್ಮಗನೋ, ಇದ್ದರೆ ಕಣ್ಣು ಕಿವಿಗಳಿಲ್ಲದ ಸರಕಾರದ ಲೆಕ್ಕದಲ್ಲಿ ಆಕೆ ದಿಕ್ಕಿಲ್ಲದವಳು ಹೇಗಾದಳು ? ಬಡ ಹೆಂಗಸಿನ ಅರ್ಜಿಯನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಎತ್ತಿ ಎಸೆಯಬಲ್ಲದು. ಅದೃಷ್ಟ ಸರಿಯಿದ್ದು ಅರ್ಜಿ ಅಂಗೀಕಾರ ಆದರೂ ಕೈಗೆ ಸಿಗುವ ಮಾಶಾಸನ ಯಾತಕ್ಕೂ ಸಾಲದು.

ತಮಿಳುನಾಡಿನ ಹೇಮಾಮಾಲಿನಿ ಮುಂಬಾಯಿಯಲ್ಲಿ ನೆಲೆಗೊಂಡು, ಕರ್ನಾಟಕ, ಮಧ್ಯಪ್ರದೇಶಗಳಿಂದ ರಾಜ್ಯಸಭೆಗೆ ಮತ್ತು ಇದೀಗ ಉತ್ತರಪ್ರದೇಶದ ಮಥುರಾಯಿಂದ ಲೋಕಸಭೆಗೆ ಆಯ್ಕೆ ಆಗುವುದಾದರೆ ಬಂಗಾಳ, ಬಿಹಾರ ಬಡವಿಧವೆಯರು ತುತ್ತು ಅನ್ನ ಗುಟುಕು ನೀರಿಗಾಗಿ ವೃಂದಾವನಕ್ಕೆ ಯಾಕೆ ಬರಬಾರದು ?

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate