- ಮಹಿಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆ ಎನ್ನುತ್ತಾರೆ.
- ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ. ಸಬಲೀಕರಣ ಸಶಕ್ತತೆ ಎಂದರೆ, ಕೆಳಗೆ ಕಾಣಿಸಿದ ಅಂಶಗಳಲ್ಲಿ ಒಟ್ಟಾರೆಯಾಗಿ ಅವರ ಅರ್ಹತೆ ಸಾಮರ್ಥ್ಯವನ್ನು ಹೆಚ್ಚಿಸುವುದು.
- ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು.
- ಮಾಹಿತಿ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುವುದು.
- ಅವರ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶಗಳನ್ನು ಹೊಂದುವುದು.( ಬರಿ ಹೌದು/ಇಲ್ಲ,ಎರಡರಲ್ಲಿ/ ಅಥವ) ಎನ್ನದಿರುವುದು
- ಒಟ್ಟಿಗೇ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವುದರಲ್ಲಿ ವಿಶ್ವಾಸದಿಂದ ಧೃಡಪಡಿಸುವ ಸಾಮರ್ಥ್ಯವನ್ನು ಹೊಂದುವುದು.
- ಬದಲಾವಣೆಯನ್ನು ಮಾಡುವುದರಲ್ಲಿ ಧನಾತ್ಮಕ ಭಾವನೆಯನ್ನು ಹೊಂದುವುದು.
- ಸ್ವಯಂ ಮತ್ತು ಗುಂಪು ಪ್ರಾಬಲ್ಯವನ್ನು ಹೆಚ್ಚಿಸಲು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು.
- ಪ್ರಜಾ ಪ್ರಭುತ್ವದ ಮಾರ್ಗದಲ್ಲಿ ಇತರರ ಗ್ರಹಿಕೆ ಶಕ್ತಿಯನ್ನು ಬದಲಾಯಿಸುವಂತೆ ಮಾಡುವುದು.
- ಸ್ವಯಂ ಪ್ರೇರೇಪಿತರಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.
- ಆತ್ಮಾಭಿಮಾನ ಹೆಚ್ಚು ಮಾಡುವುದರಲ್ಲಿ ಹಾಗೂ ಕಳಂಕದಿಂದ ಪಾರಾಗುವುದರಲ್ಲಿ ತೊಡಗಿಕೊಳ್ಳುವುದು.
ಭಾರತದಲ್ಲಿ ಮಹಿಳೆಯರ ಸ್ಥಾನಮಾನ
- ಇತ್ತೀಚೆಗೆ ಭಾರತದಲ್ಲಿ ಮಹಿಳೆಯರು ಶಿಕ್ಷಣ, ರಾಜಕೀಯ, ಮಾಧ್ಯಮ, ಕಲೆ, ಸಾಂಸ್ಕೃತಿಕ, ಸೇವಾ ವಿಭಾಗಗಳು, ವಿಜ್ಞಾನ ಮತ್ತು ತಾಂತ್ರಿಕ ಇತ್ಯಾದಿ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ.
- ಭಾರತೀಯ ಸಂವಿಧಾನವು ಮಹಿಳೆಯರೆಲ್ಲರಿಗೂ ಸಮಾನತೆ (ಅನುಚ್ಛೇದ ೧೪) ರಾಜ್ಯದಿಂದ ತಾರತಮ್ಯವಿರಕೂಡದು (ಅನುಚ್ಛೇದ-೩೯) ಸಮಾನ ಅವಕಾಶ (ಅನುಚ್ಛೇದ-೩೯ಡಿ) ಇತ್ಯಾದಿಗಳನ್ನು ಖಾತ್ರಿಗೊಳಿಸಿದೆ. ಇಷ್ಟಲ್ಲದೆ ರಾಜ್ಯಗಳು ಮಹಿಳೆಯರು ಮತ್ತು ಮಕ್ಕಳ ಪರವಾಗಿ ಹಲವು ಸವಲತ್ತುಗಳನ್ನು ಒದಗಿಸಿದೆ. (ಅನುಚ್ಛೇದ-೧೫(೩), ಮಹಿಳೆಯರಿಗೆ ಸೂಕ್ತವಾದ ಮತ್ತು ಮಾನವೀಯತೆಯಿಂದ ಕೂಡಿದ ಕೆಲಸದ ವಾತಾವರಣ ಮತ್ತು ಮಾತೃತ್ವದ ಸವಲತ್ತುಗಳನ್ನು, ಭದ್ರತೆ ನೀಡುವಂತಹ ಅವಕಾಶಗಳನ್ನು ಕಲ್ಪಿಸಿದೆ (ಅನುಚ್ಛೇದ೪೨).
ಭಾರತದಲ್ಲಿ ೧೯೭೦ನೇ ಇಸವಿಯಿಂದ ಸ್ತ್ರೀವಾದವು ಶೀಘ್ರಗತಿಯಲ್ಲಿ ಮೊದಲಾಯಿತು. ರಾಷ್ಟ್ರಮಟ್ಟದಲ್ಲಿ ಮಹಿಳಾಗುಂಪುಗಳು ಮೊಟ್ಟ ಮೊದಲನೆಯದಾಗಿ ಕೈಗೆತ್ತಿಕೊಂಡ ವಿಷಯವೇನೆಂದರೆ; ಮಧುರೆಯಲ್ಲಿ ನಡೆದ ಬಲಾತ್ಕಾರ ಪ್ರಕರಣ. ಮಧುರೆಯಲ್ಲಿ ಹದಿ ಹರೆಯದ ವಯಸ್ಸಿನ ಹೆಂಡತಿಯನ್ನು ಬಲಾತ್ಕಾರವಾಗಿ ಮಾನಭಂಗ ಮಾಡಿದ ಪೊಲೀಸ್ ಪೇದೆಯನ್ನು ನಿರಪರಾಧಿ ಎಂದು ಘೋಷಿಸಿದ್ದು ೧೯೭೯-೧೯೮೦ರಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ವ್ಯಕ್ತಪಡಿಸಲು ಕಾರಣವಾಯಿತು.ಸ್ತ್ರೀವಾದಿಗಳು ಮಹಿಳೆಯರ ಕುರಿತು ಇರುವ ವಿವಾದಗಳಾದ ಹೆಣ್ಣುಮಗುವಿನ ಭ್ರೂಣಹತ್ಯೆ, ಲಿಂಗಭೇಧ, ಮಹಿಳೆಯರ ಆರೋಗ್ಯ, ಮತ್ತು ಸಾಕ್ಷರತೆಗಾಗಿ ಒಗ್ಗಟ್ಟಾಗಿ ಕೆಲಸಮಾಡಿದರು. ಭಾರತದಲ್ಲಿ ಕುಡಿತವು ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿರುವುದರಿಂದ ಮಹಿಳಾ ಗುಂಪುಗಳು ಕುಡಿತದ ವಿರುದ್ಧ ಆಂದೋಲನಗಳನ್ನು ಆಂಧ್ರಪ್ರದೇಶ, ಹರಿಯಾಣ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಆರಂಭಿಸಿದವು. ಬಹು ಮಂದಿ ಮುಸ್ಲಿಂ ಮಹಿಳೆಯರು, ಮುಸ್ಲಿಂ ಮೂಲದ ನಾಯಕರುಗಳು ಶೆರಿಯತ್ ಕಾನೂನಿನಲ್ಲಿ ಮಹಿಳೆಯರ ಹಕ್ಕುಗಳ ಅರ್ಥವಿವರಣೆ ಹಾಗೂ ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಕುರಿತು ಟೀಕೆ ಮಾಡಿದ್ದಾರೆ. ೧೯೯೦ನೇ ಇಸವಿಯಲ್ಲಿ ವಿದೇಶೀ ದಾನಿ ಸಂಸ್ಥೆಗಳು ನೀಡಿದ ಅನುದಾನ ಹಣದ ಸಹಾಯದಿಂದ ಮಹಿಳಾ ವಿಕಸನ ಕುರಿತಾದ ಸರ್ಕಾರೇತರ ಸಂಸ್ಥೆಗಳನ್ನು ಸ್ಥಾಪಿಸಲು ಸಹಕಾರಿಯಾಯಿತು. ಸ್ವ-ಸಹಾಯ ಸಂಘಗಳು, ಸ್ವಯಂ ಉದ್ಯೋಗಿಗಳ ಸಂಘ (SEWA) ದಂತಹ ಸರ್ಕಾರೇತರ ಸಂಘಟನೆಗಳು ಮಹಿಳೆಯರ ಹಕ್ಕುಗಳ ಬಗ್ಗೆ ಪ್ರಮುಖವಾದ ಪಾತ್ರವನ್ನು ವಹಿಸಿವೆ. ಬಹಳ ಮಹಿಳೆಯರು ಸ್ಥಳೀಯ ಚಳುವಳಿಗಳ ಮುಖಾಂತರ ನಾಯಕಿಯರಾಗಿ ಮುಂದೆ ಬಂದಿದ್ದಾರೆ. ಉದಾ:- ನರ್ಮದಾ ಬಚಾವೋ (ನರ್ಮದಾ ಉಳಿಸಿ) ಆಂದೋಲನದ ಮೇಧಾ ಪಾಟ್ಕರ್ರಂತವರು.ಭಾರತ ಸರ್ಕಾರವು ೨೦೦೧ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷ ಎಂದು ಘೋಷಿಸಿತ್ತು. ರಾಷ್ಟ್ರೀಯ ಮಹಿಳಾ ಸಬಲೀಕರಣ ರಾಜ್ಯನೀತಿಯು ೨೦೦೧ರಲ್ಲಿ ಜಾರಿಗೆ ಬಂದಿತು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/29/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.