ಮಗುವಿನ ದುರ್ಬಳಕೆ
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ (GOI) ಸಚಿವಾಲಯವು, ಭಾರತ ೨೦೦೭-ಮಗುವಿನ ದುರ್ಬಳಕೆ ಎಂಬ ವಿಷಯದ ಮೇಲೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಮಕ್ಕಳ ವಿವಿಧ ರೀತಿಯ ದುರ್ಬಳಕೆಗಳಲ್ಲಿ ೫-೧೨ ವರ್ಷದ ವಯೋಮಾನದವರು ಅತಿ ಹೆಚ್ಚಿನ ದುರ್ಬಳಕೆ ಮತ್ತು ಶೋಷಣೆಗೆ ಗುರಿಯಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ. ದುರ್ಬಳ ಕೆಯು ದೈಹಿಕ, ಲೈಂಗಿಕ ಜೊತೆ ಜೊತೆಗೆ ಭಾವನಾತ್ಮಕವೂ ಆಗಿರುವುದು. ಈ ಅಧ್ಯಯನವು ಕೆಳ ಕಂಡ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲುವುದು:
ಹೆಣ್ಣು ಮಗುವಿನ ನಿರ್ಲಕ್ಷ್ಯ ಮತ್ತು ಭಾವನಾತ್ಮಕ ದುರ್ಬಳಕೆ
|

ದೈಹಿಕ ದುರ್ಬಳಕೆ
ಪ್ರತಿ ಮೂರು ಮಕ್ಕಳಲ್ಲಿ ಎರಡು ಮಕ್ಕಳು ದೈಹಿಕ ದುರ್ಬಳಕೆಗೆ ಒಳಗಾಗುತ್ತಿರುವುದು.
ದೈಹಿಕ ದುರ್ಬಳಕೆಗೆ ಒಳಗಾದ ೬೯% ಮಕ್ಕಳಲ್ಲಿ ೫೪.೬೮% ಜನ ಗಂಡು ಮಕ್ಕಳಾಗಿದ್ದಾರೆ
ಒಂದಲ್ಲ ಒಂದು ರೀತಿಯ ದೈಹಿಕ ದುರ್ಬಳಕೆಗೆ ೫೦% ಗಿಂತಲೂ ಹೆಚ್ಚು ಮಕ್ಕಳು ಒಳಗಾಗಿರುವರು
ದೈಹಿಕ ದುರ್ಬಳಕೆಗೆ ಒಳಗಾದ ಇವರಲ್ಲಿ ೮೮.೬% ಜನರು ಕೌಟುಂಬಿಕ ಪರಿಸರದಲ್ಲೇ ತಾಯಿ ತಂದೆಯರಿಂದ ದೈಹಿಕ ದುರ್ಬಳಕೆಗೆ ಗುರಿಯಾಗಿರುವರು.
ಬೇರೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಮತ್ತು ದೆಹಲಿ ರಾಜ್ಯಗಳಲ್ಲಿ ಎಲ್ಲ ವಿಧದ ದುರ್ಬಳಕೆಗಳು ಹೆಚ್ಚು
೫೦.೨% ಮಕ್ಕಳು ವಾರಕ್ಕೆ ೭ ದಿನ ದುಡಿಯುವರು
|
|
ಲೈಂಗಿಕ ದುರ್ಬಳಕೆ
೫೩.೨೨% ಮಕ್ಕಳು ಒಂದಲ್ಲ ಒಂದು ರೀತಿಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವುರು.
ಬೇರೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಮತ್ತು ದೆಹಲಿ ರಾಜ್ಯಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದುರ್ಬಳಕೆಗಳ ಪ್ರಮಾಣ ಹೆಚ್ಚು ಎಂದು ವರದಿ ಹೇಳುತ್ತದೆ.
೨೧.೯% ಪ್ರತಿಕ್ರಿಯಿಸಿದ ಮಕ್ಕಳು ತೀವ್ರ ವಾದ ಲೈಂಗಿಕ ದುರ್ಬಳಕೆಕ್ಕೆ ಒಳಗಾಗಿದ್ದಾರೆ ಮತ್ತು ೫೦.೭೬% ಜನ ಇತರ ರೀತಿಯ ಲೈಂಗಿಕ ದುರ್ಬಳಕೆ ಅನುಭವಿಸುವರು
ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಮತ್ತು ದೆಹಲಿ ರಾಜ್ಯಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದುರ್ಬಳಕೆಗಳ ಘಟನೆಗಳು ನಡೆದಿರುವುದು ಅತಿ ಹೆಚ್ಚು ವರದಿಯಾಗಿವೆ.
೫೦% ಮಕ್ಕಳಿಗೆ ಅವರಿಗೆ ಗೊತ್ತಿರುವ, ವಿಶ್ವಾಸಿಕ ಮತ್ತು ಹೊಣೆಗಾರ ವ್ಯಕ್ತಿಗಳಿಂದಲೆ ದುರ್ಬಳಕೆಯಾಗಿದೆ
|
|
ಹೆಣ್ಣು ಮಗುವಿನ ನಿರ್ಲಕ್ಷ್ಯ ಮತ್ತು ಭಾವನಾತ್ಮಕ ದುರ್ಬಳಕೆ
ಪ್ರತಿ ಎರಡನೆ ಹೆಣ್ಣು ಮಗುವು ಭಾವನಾತ್ಮಕ ದುರ್ಬಳಕೆಗೆ ಗುರಿಯಾಗಿದೆ
ಗಂಡು ಮತ್ತು ಹೆಣ್ಣು ಮಕ್ಕಳು ಸಮ ಪ್ರಮಾಣದಲ್ಲಿ ಭಾವನಾತ್ಮಕ ದುರ್ಬಳಕೆಯನ್ನು ಎದುರಿಸುವರು
ತಾಯಿ ತಂದೆಯರೇ ೮೩% ಸಂದರ್ಭದಲ್ಲಿ ದುರ್ಬಳಕೆಗೆ ಕಾರಣರು
೪೮.೪% ಹುಡುಗಿಯರು ತಾವು ಗಂಡಾಗಿದ್ದರೆ ಚೆನ್ನಾಗಿತ್ತು ಎಂದು ಬಯಸಿದವರಾಗಿರುತ್ತಾರೆ.
|
|
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.