ಸಾಮಾನ್ಯವಾಗಿ ನಿಪ್ಸೆಡ್ ಎಂದು ಗುರುತಿಸಲಾಗಿರುವ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆ ( ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೊಆಪರೇಶನ್ ಆಂಡ್ ಚೈಲ್ಡ್ ಡೆವಲಪ್ಮೆಂಟ್ ) ಯು ಬಹುಮುಖ್ಯವಾಗಿ ಸಮಗ್ರ ಮಕ್ಕಳ ಅಭಿವೃದ್ದಿ ಕ್ಷೇತ್ರದಲ್ಲಿನ ಸ್ವಾಯಪ್ರೇರಿತ ಸಂಶೋದನೆ, ತರಬೇತಿ ಹಾಗೂ ದಾಖಲೀಕರಣವನ್ನು ಪ್ರೋತ್ಸಾಹಿಸುವ ಪಾರಿತೋಷಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ಸಂಸ್ಥೆಗಳ ನೋಂದಣಿ ಕಾಯ್ದೆ 1860 ದಲ್ಲಿ ನವ ದೆಹಲಿಯಲ್ಲಿ ನೊಂದಾಯಿತವಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶದ ಕ್ಷೇತ್ರಿಯ ಬೇಡಿಕೆಗಳಿಗನುಗುಣವಾಗಿ ಸಂಸ್ಥೆಯೂ ಕಾಲಕ್ರಮೇಣ ನಾಲ್ಕು ಕ್ಷೇತ್ರಿಯ ಸಂಸ್ಥೆಗಳನ್ನು ಗುಹವಾಟಿ (1978 ), ಬೆಂಗಳೂರು ( 1980 ), ಲಕ್ನೌ ( 1982 ) ಮತ್ತು ಇಂಡೋರ್ (2001 ) ನಲ್ಲಿ ಸ್ಥಾಪಿಸಲಾಯಿತು.
ಸಮಗ್ರ ಶಿಶು ಅಭಿವೃದ್ದಿ ಸೇವೆಗಳು ( ಐ.ಸಿ.ಡಿ.ಎಸ್) ಕಾರ್ಯಕ್ರಮದಡಿಯಲ್ಲಿನ ಅಧಿಕಾರಿಗಳಿಗೆ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯ ಸಂಪನ್ಮೂಲ ಸಂಸ್ಥೆಯಾಗಿರುವ ಈ ಸಂಸ್ಥೆಗೆ, ಹೊಸ ಯೋಜನೆಯಾದ ಸಮಗ್ರ ಶಿಶು ಸಂರಕ್ಷಣೆ ಯೋಜನೆ ( ಐ.ಸಿ.ಪಿ.ಎಸ್) ಅಡಿಯಲ್ಲಿ ರಾಷ್ಟ್ರೀಯ ಮತ್ತು ಕ್ಷೇತ್ರೀಯ ಮಟ್ಟದ ಅಧಿಕಾರಿಗಳ ತರಬೇತಿ ಹಾಗೂ ಸಾಮಾರ್ಥ್ಯಾಭಿವೃದ್ದಿಯ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಬಹು ಮುಖ್ಯವಾದ ಎರಡು ವಿಷಯಗಳಾದ ಮಕ್ಕಳ ಹಕ್ಕುಗಳು ಹಾಗೂ ಮಹಿಳೆಯರ ಮತ್ತು ಮಕ್ಕಳ ಮಾನವ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ಕ್ ದೇಶಗಳಿಗೆ ತರಬೇತಿಯನ್ನು ನೀಡಲು ಈ ಸಂಸ್ಥೆಯನ್ನು ಮುಖ್ಯ ಸಂಪನ್ಮೂಲ ಸಂಸ್ಥೆಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯವು ಪರಿಗಣಿಸಿದೆ. ಸಂಸ್ಥೆಯ ಪ್ರಾವಿಣ್ಯತೆ ಹಾಗೂ ಪ್ರದರ್ಶನ ಗುರುತಿಸಿ, 1985 ರಲ್ಲಿ ಯುನಿಸೆಫ್ ಈ ಸಂಸ್ಥೆಗೆ ಮೌರಿಸ್ ಪೇಟ್ ಪಾರಿತೋಶಕವನ್ನು ನೀಡಿತು. ಈ ಬಹುಮಾನವನ್ನು ಸಂಸ್ಥೆಗೆ ಮಕ್ಕಳ ಅಭಿವೃದ್ದಿ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ ನೀಡಲಾಯಿತು.
ಮುಂಚಿತ ಬಾಲ್ಯಾವಸ್ಥೆ ಆರೈಕೆ ಹಾಗೂ ಅಭಿವೃದ್ದಿ
ಎಳೆಯ ಮಕ್ಕಳ ಮತ್ತು ತಾಯಂದಿರ ಅರೋಗ್ಯ ಹಾಗೂ ಪೋಷಣೆ
ಶಿಶು ಹಾಗೂ ಎಳೆಯ ಮಕ್ಕಳ ಹಾಲುಣಿಸುವಿಕೆ
ಕಿರುಪೋಷಕಾಂಶಗಳು (ಮೈಕ್ರೋನ್ಯುಟ್ರಿಯೆಂಟ್ ) ಅಪೌಷ್ಠಿಕತೆಯ ತಡೆಗಟ್ಟುವುಕೆ
ಹದಿಹರೆಯದ ಆರೋಗ್ಯ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಹೆಚ್.ಐ.ವಿ ಏಡ್ಸ್
ಬೆಳವಣಿಗೆ ಮೇಲ್ವಿಚಾರಣೆ
ಪೋಷಣೆ ಮತ್ತು ಆರೋಗ್ಯ ಶಿಕ್ಷಣ
ಶಿಶು ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ
ಶಿಶು ಮದುಮೇಹದ ಮುಂಚಿತ ಪತ್ತೆ ಹಾಗೂ ತಡಗಟ್ಟುವಿಕೆ
ಮಕ್ಕಳ ಕಲಿಕೆ ಮತ್ತು ವರ್ತನೆ ಸಂಬಂಧಿತ ಸಮಸ್ಯೆಗಳು ಹಾಗೂ ಪೋಷಕರ ಶಿಕ್ಷಣ
ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸುರಕ್ಷತೆ
ಬಾಲಾಪರಾಧಿ ನ್ಯಾಯ
ಮಹಿಳೆಯರ ಸಶಕ್ತತೆ ಮತ್ತು ಲಿಂಗತ್ವ ಮುಖ್ಯವಾಹಿನಿಗೆ ತರುವುದು
ಹದಿಹರೆಯದ ಹುಡುಗಿಯರ ಸಮಗ್ರ ಅಭಿವೃದ್ದಿ ಮತ್ತು ಕೌಟುಂಬಿಕ ಜೀವನ ಶಿಕ್ಷಣ
ಬಾಲ್ಯವಿವಾಹ, ಹೆಣ್ಣು ಮಕ್ಕಳ ಭ್ರೂಣಾ ಹತ್ಯೆ ಹಾಗೂ ಹೆಣ್ಣು ಮಕ್ಕಳ ಶಿಶು ಹತ್ಯೆ ತಡೆಗಟ್ಟುವಿಕೆ
ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಪ್ತಸಮಾಲೋಚನೆ ಹಾಗೂ ಬೆಂಬಲ ಸೇವೆಗಳು
ಸ್ವಸಹಾಯ ಸಂಘಗಳ ರಚನೆ ಹಾಗೂ ನಿರ್ವಹಣೆ
ಮಹಿಳೆಯರ ಹಾಗೂ ಮಕ್ಕಳ ಮಾನವ ಸಾಗಾಣಿಕೆ ತಡೆಗಟ್ಟುವಿಕೆ
ಲಿಂಗಾಧರಿತ ದೌರ್ಜನ್ಯದ ತಡೆಗಟ್ಟುವಿಕೆ
ಲಿಂಗಾಧಾರಿತ ಅಯವ್ಯಯ
ಕಾನೂನು ಜಾರಿಗೊಳಿಸುತ್ತಿರುವ ಸಂಸ್ಥೆಗಳಿಗೆ ಲಿಂಗತ್ವದ ಅರಿವು ಮೂಡಿಸುವಿಕೆ
ಮಕ್ಕಳ ಅಭಿವೃದ್ದಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ /ಸಾಮಾಜಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಕ್ರಮಗಳು
ಸಾಮಾಜಿಕ ಅಭಿವೃದ್ದಿ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ
ಸಮಾಜಿಕ ಸಂಸ್ಥೆಗಳ ಸಾಮಾರ್ಥ್ಯ ವರ್ಧನೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/5/2020
ಜಾರ್ಜ್ ಬರ್ನಾಡ್ ಷಾ ರವರ ಹೆಸರಾಂತ ಹೇಳಿಕೆಯನ್ನು ನೀವು ಕೇ...
ಎಲ್ಲ ವರ್ಗದ ಹೆಣ್ಣು ಮಕ್ಕಳು ಹೆಚ್ಚು ಅಸಾಹಾಯಕ.ಮಕ್ಕಳ ಶೋಷಣ...
ಅಯ್ದ ಪ್ರಮುಖ ಮಕ್ಕಳ ಸಾಹಿತಿಗಳ ಕಿರುಪರಿಚಯ
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...