অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಗರ ರಸ್ತೆಬದಿವ್ಯಾಪಾರಿಗಳ ಹೊಸ ಕಾಯ್ದೆಯಲ್ಲಿನ ಭರವಸೆಯ ಬದುಕು

ನಗರ ರಸ್ತೆಬದಿವ್ಯಾಪಾರಿಗಳ ಹೊಸ ಕಾಯ್ದೆಯಲ್ಲಿನ ಭರವಸೆಯ ಬದುಕು

ಆಧುನಿಕ ನಗರಗಳು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಇಂಜನ್‍ಗಳಾಗಿವೆ,ಇಂಜನಿನಲ್ಲಿರುವ ಯಾವುದಾದರು ಒಂದು ಭಾಗ ಕೈಕೊಟ್ಟರೆ ಸಕಾಲದಲ್ಲಿ ಅದನ್ನ ಸರಿಪಡಿಸದಿದ್ದರೆ, ಇಂಜನ್ ಮುಂದೋಂದು ದಿನ ಗುಜರಿ ಸೇರಬೇಕಾಗುತ್ತದೆ. ಆರ್ಥಿಕ ಬೆಳವಣಿಗೆ ಕೇವಲ ಸೇವಾವಲಯ ಇಲ್ಲವೇ ಸಂಘಟಿತ ವಲಯದಿಂದ ಮಾತ್ರ ಸಾದ್ಯವಿಲ್ಲಾ, ಬದಲಾಗಿ ಶೇಕಡಾ 93% ರಷ್ಟಿರುವ ಅಸಂಘಟಿತ ವಲಯದ ಪ್ರಯತ್ನವು ದೇಶದ ಅರ್ಥಿಕ ಬೆಳವಣಿಗೆÀ ಒಂದು ಭಾಗ, ಇದರಲ್ಲಿ ರಸ್ತೆಬದಿವ್ಯಾಪಾರಿಗಳು/ಬೀದಿವ್ಯಾಪಾರಿಗಳ ಪರಿಶ್ರಮವನ್ನು ಪರಿಗಣಿಸಲೇಬೇಕು. ಅಸಂಘಟಿತ ಕೆಲಸÀಗಾರರು 127ಕ್ಕೂ ಅಧಿಕ ವಿವಿಧ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಬಹುತೇಕರು ಬೀದಿವ್ಯಾಪಾರಿಗಳು, ಕಟ್ಟಡಕಾರ್ಮಿಕರು, ಚಿಂದೀಆಯುವವರು, ಮನೆಗೆಲಸದಲ್ಲಿ ನಿರತಾಗಿರುವ ಮಹಿಳೆಯರು, ಗ್ಯಾರೇಜ್-ಹೋಟಲ್‍ಗಳಲ್ಲಿ ಕೆಲಸ ಮಾಡುವವರು, ಲೈಂಗಿಕ ಚಟುವಟಿಕೆಯನ್ನು ಉದ್ಯೋಗವನ್ನಾಗಿರಿಸಿಕೊಂಡಿರುವವರೂ ಸೇರಿದಂತೆ ಸಂಘಟಿತ ವಲಯದಲ್ಲಿ ತಿಂಗಳ ಸಂಬಳವನ್ನು ಹೊರತುಪಡಿಸಿ ಇತರೇ ಕನಿಷ್ಟ ಸೌಲಬ್ಯಗಳಿಂದ ವಂಚಿತರಾದವರೂ ಸೇರಿದಂತೆ ಅಸಂಘಟಿತ ಕೆಲಸಗಾರೆಂದು ವಿವರಿಸಲಾಗಿದೆ. ಶೇ88ರಷ್ಟು ಪ.ಜಾ/ಪ.ಪ ಶೇ84ರಷ್ಟು ಅಲ್ಪ ಸಂಖ್ಯಾತರು (ವಿಶೇಷವಾಗಿ ಮುಸ್ಲಿಂರು),ಶೇ.80 ರಷ್ಟು ಇತರೇ ಹಿಂದುಳಿದ ವರ್ಗದವರು ಒಟ್ಟು ಕೆಲಸಗಾರರಲ್ಲೂ ಶೇ91ರಷ್ಟು ಮಹಿಳೆಯರೇ ಪ್ರಧಾನ ಸ್ಥಾನವನ್ನು ಹೊಂದಿದ್ದಾರೆ. ಇವರ ಕೊಡಿಗೆಯನ್ನು ನೋಡುವುದಾದರೆ, ವಿಷಾಲಾರ್ಥದಲ್ಲಿ ಶೇ 65%ಜಿಡಿಪಿಯ ಕೊಡಿಗೆಯ ಪಾಲನ್ನು ಹೊಂದಿದ್ದಾರೆ. ಇದಲ್ಲದೆ ಸಮಾಜಕ್ಕೆ ಸುಲಭವಾಗಿ ಮತ್ತು ಕೈಗೆಟುಕುವದರದಲ್ಲಿ ಎಲ್ಲ ಕ್ಷೇತ್ರದವರಿಗೆ ಸೇವೆ ನೀಡುವವರಾಗಿದ್ದಾರೆ. ಆರ್ಥಿಕ ತಗ್ನರು ವಿವರಿಸುವ ಹಣದುಬ್ಬರದ ಪರಿಣಾಮವನ್ನು ಸಾಮರ್ಥ್ಯವನ್ನು ಎದುರಿಸುವ ನಿಜವಾದ ವೀರರು ಸಹ ಇವರೇ ಆಗಿದ್ದಾರೆ.

ರಾಷ್ಟೀಯ ನಗರ ರಸ್ತೆವ್ಯಾಪಾರಿಗಳ ನೀತಿಯ ವರದಿಯಲ್ಲಿ ತಿಳಿಸಿರುವಂತೆ ಇವರನ್ನು ಅಸಂಘಟಿತ ಕೆಲಸಗಾರೆಂದು ಗುರುತಿಸಲಾಗಿದೆ. ಅಸಂಘಟಿತ ಕಾರ್ಮಿಕರು ಇರುವ ಕಾಯ್ದೆ-ಕಾನೂನುಗಳಿಂದ ಇವರು ಸಹ ಅವಕಾಶಗಳಿಂದ ವಂಚಿತರಾಗಿರುತ್ತಾರೆ, ಸಾಮಾಜಿಕ ಭದ್ರತೆಯೆಂಬುದು ಮರೀಚಿಕೆ. ದಿನನಿತ್ಯ ನಿರ್ವಹಿಸುವ ಕೆಲಸಕಾರ್ಯಗಳನ್ನು ಗೌರವದಿಂದ ನೋಡುವ ಅವಕಾಶಗಳು ಕಡಿಮೆ. ಕಡಿಮೆ ಕೂಲಿ, ಬಹುತೇಕ ಅಸಂಘಟಿತ ಕೆಲಸÀಗಾರರಿಗೆ ಇವುಗಳ ಅರಿವು ಸಹ ಇರುವುದಿಲ್ಲಾ. ಕೆಲಸದ ವಾತಾವರಣದಲ್ಲಿ ಅಪಾಯಕಾರಿ ಘಟನೆಗಳೇ ಅಧಿಕ. ಇವರನ್ನು ಕೆಲಸ ತೆಗೆದುಕೊಳ್ಳುವ ಸಂಸ್ಥೆಗಳು/ವ್ಯಕ್ತಿಗಳು ಕನಿಷ್ಟ ಗುರುತಿಸುವಿಕೆಯಿಂದ ವಂಚಿತರಾಗಿರುತ್ತಾರೆ. ಇವರು ದೇಶದ ಸಮಗ್ರ ಬೆಳವಣಿಯಲ್ಲಿ ಜನರಿಂದ ಆಯ್ಕೆಯಾದ ಸರ್ಕಾರಗಳು ಕನಿಷ್ಟ ಕೃತಗ್ನತೆಯನ್ನು ಸಹತೋರುವುದಿಲ್ಲಾ. ಇವರು ನಗರದ ನಿರಂತರ ಅಭಿವೃದ್ದಿ ಮತ್ತು ಬೆಳವಣಿಗೆಗೆ ನಾಂದಿಯಾಗಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ಆಕರ್ಷತರಾಗಿರುವ ಭೂರಹಿತ ಮದ್ಯಮ ಮತ್ತು ಕೆಳವರ್ಗದ ದುಡಿಯುವ ಶ್ರಮಿಕರಿಗೆ ರಸ್ತೆಬದಿವ್ಯಾಪಾರಿಗಳಾಗಿದ್ದಾರೆ ಮತ್ತು ಆಶ್ರಯದಾತರು ಇವರೇ.ಅಸಂಘಟಿತ ಕೆಲಸಗಾರರಲ್ಲಿ 2009 ರ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಶೇ 2% ರಷ್ಟು ಬೀದಿವ್ಯಾಪಾರಿಗಳು ಸ್ವಯಂ ಉದ್ಯೋಗವನ್ನು ನಂಬಿದ್ದಾರೆ.

ವಿಶಾಲ ಅರ್ಥಶಾಸ್ರದ ಮೂಲ ಆಶಯಗಳಿಗನುಗುಣವಾಗಿ ಕೃಷಿ ವಲಯವು ಉತ್ಪಾದನಾ ವಲಯವಾಗಬೇಕು, ಸೇವಾವಲಯಗಳು ಸ್ವಯಂ ಆರ್ಥಿಕ ಸದೃಡತೆಯನ್ನು ಹೊಂದಬೇಕು,ಮಾಹಿತಿ ತಂತ್ರಗ್ನಾದ ಉಪಯೋಗ ಕೇವಲ ಉದೋಗ/ ಲಾಭಗಳಿಸುವÀ ವಲಯವಾಗದೇ ಬಡತನ ನಿವಾರಣೆ ಮತ್ತು ಸಾಮಾಜಿಕ ಸುಧಾರಣೆಯಗೆ ಪೂರಕವಾಗಬೇಕು ಇತ್ಯಾಧಿ ಆಶೋತ್ತರಗಳ ಹಿನ್ನೆಲೆಯಲ್ಲಿ ಆರಂಬವಾದ ಸುಧಾರಣಕ್ರಮಗಳು, 2020ರ ಹೊತ್ತಿಗೆ ತಲುಪಬೇಕಾದ ಮಿಲೇನಿಯಂ ಡೆವೆಲೆಪ್ಮೆಂಟ್ ಗುರಿಗಳಂತಹ ಹೊಸ ಕಾರ್ಯಕ್ರಮಗಳ ಪ್ರಯತ್ನಕ್ಕೆ ಕಾರಣವಾಗಿದೆ. ಸೇವಾ ವಲಯದ ಬೆಳವಣಿಗೆಯನ್ನು ಮಾತ್ರ ಪರಿಗಣಿಸದೆ, ಉಳಿದವಲಯಗಳ ಮೇಲೆ ಹೇಗೆ ಪರಿಮಾಣಾತ್ನಕ ಸಂಬಂಧÀಗಳನ್ನು ಹೊಂದಿದೆ ಎಂಬುದನ್ನು ತುಲನೆಮಾಡಲೇಬೇಕು. ಪ್ರಮುಖವಾಗಿ ಕೃಷಿ ಬೆಳವಣಿಗೆ, ಉದ್ಯೋಗದಲ್ಲಿ ಕಡಿಮೆ ಗುಣಮಟ್ಟ,ಶಿಕ್ಷಣದಲ್ಲಿ ನಿರೀಕ್ಷಿತ ಗುಣಮಟ್ಟ ಸಾಧನೆ ತಲುಪದೇಇರುವುದು, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಕೇವಲ ಸಂಘಟಿತವಲಯಕ್ಕೆ ಸೀಮಿತಗೊಳಿಸದೇ, ಆರೋಗ್ಯ ಸುಧಾರಣೆ ಸೇವೆಗಳು ಜನಸಾಮಾನ್ಯರಿಗೆ ತಲುಪದೇ ಇರುವುದು, ನಗರ ಮತ್ತು ಗ್ರಾಮಾಂತರದ ಬೆಳವಣಿಗೆಯಲ್ಲಿ ಸಮನಾಂತರ ಬೆಳವಣಿಗೆ ಇಲ್ಲದಿರುವಿಕೆ, ಸಾಮಾಜಿಕ ಸಮಾನತೆಗಳಲ್ಲಿ ಅಸಮಾನತೆಯ ಅಂತರ ವಿಸ್ತಾರಗೊಳ್ಳುವಿಕೆ ಮತ್ತು ಪ್ರಾದೇಶಿಕ ಅಸಮಾನತೆಗಳ ಅವಾಂತರಗಳು ಇತ್ಯಾಧಿ ಸಮಸ್ಯಗಳಿಗೆ ನಾವು ಹೇಗೆ ಸಕಾರಾತ್ಮಕವಾಗಿ ಪ್ರತಿಕ್ರೀಯೆಸಿದ್ದೇವೆ ಎನ್ನುವುದರ ಮೇಲೆ ನಮ್ಮ ಸಹಿತವಾದ ಬೆಳವಣಿಗೆಯನ್ನು (Iಟಿಛಿಟusive ಉಡಿoತಿಣh)ಯನ್ನು ನಿರ್ದರಿಸಬಹುದಾಗಿದೆ. ಸಹಿತವಾದ ಬೆಳವಣಿಗೆ ಮೊದಲು ಕುಟುಂಬದ ವ್ಯಯಕ್ತಿಕ ನೆಲೆಯಿಂದ ಆರಂಬಗೊಂಡು ಯೋಜನಾ ಆಯೋಗದ ಅಂತಿಮ ತೀರ್ಮಾನಗಳು,À ಅನುಷ್ಟಾನದ ನಂತರದ ಸಮಗ್ರ ಬೆಳವಣಿಗೆಯ ಪರಿಣಾಮಗಳನ್ನು ಆಧರಿಸಿವೆ. ಹಾಗೇಯೇ ಸುಸ್ತಿರ ಆರ್ಥಿಕ (Susಣಚಿiಟಿಚಿbಟe eಛಿoಟಿomiಛಿ gಡಿoತಿಣh) ಬೆಳವಣಿಗೆಗೆ ಬೇಕಾಗಿರುವುದು ಸಹಿತವಾದ ಬೆಳವಣಿಗೆ. ಅಸಂಘಟಿತವಲಯದಲ್ಲಿ ಸಹಿತವಾದ ಬೆಳವಣಿಗೆ ಕಾಣಬೇಕಾದರೆ ಸರ್ಕಾರದ ನೀತಿಗಳನ್ನು ರೂಪಿಸುವುದು, ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿದಾಗ ಮಾತ್ರ ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸಲು ಸಾದ್ಯವಾಗುತ್ತದೆ. ಇದರ ಅಂತಿಮ ಫಲಿತಾಂಶ ಕೇವಲ ಭೌತಿಕ-ಹಣಹಾಸಿನ ಅಂಕಿಅಂಶಗಳ ಸಮಾಗಮನವನ್ನು ವಾರ್ಷಿಕ ಆಯ್ಯುವ್ಯದ ಘೋಷಣೆ ಪಟ್ಟಿಯಾಗಿರದೇ, ಕುಟುಂಬದ ನೆಮ್ಮದಿಯ ಬದುಕಿನ ಫಲಿತಾಂಶಗಳು,ಆದಾಯ ಹಂಚಿಕೆ,ಉದ್ಯೋಗಾವಕಾಶಗಳು ಮತ್ತು ಸಾಮಾಜಿಕ ಭದ್ರತೆ ಕಾರ್ಯಕ್ರಮಗಳ ಅಸಂಘಟಿತವಲಯದಲ್ಲಿರುವವರಿಗೆ ಹೇಗೆ ತಲುಪಿವೆ, ಈ ಅವಕಾಶಗಳನ್ನು ಅಗತ್ಯವಿರುವ ಕುಟುಂಬಗಳಿಗೆ ವಿತರಿಸುವ ವಿಧಾನದ ಕ್ರಮದ ಮೇಲೆ ಕೌಟುಂಬಿಕ ನೆಮ್ಮದಿಯ ಜೀವನ ಅವಲಂಬಿಸಿರುತ್ತದೆ. ಇದನ್ನು ನಾವು ಕೇವಲ ಸಂಘಟಿತವಲಯದ ಪ್ರಗತಿಯಿಂದ ಪಲಿತಾಂಶಗಳನ್ನು ನಿರ್ದರಿಸದೇ, ಶೇಕಡಾ 93% ಅಸಂಘಟಿತವಲಯದಲ್ಲಿ ಹೇಗೆ ಪರಿಣಾಮಗಳನ್ನು ಬೀರಿದೆ ಮತ್ತು  ಕೇವಲ ಶೇಕಡಾ 2% ರಷ್ಟಿರುವ ರಸ್ತೆಬದಿವ್ಯಾಪಾರಿಗಳು ಈ  ಸವಾಲುಗ¼ನ್ನು ಹೇಗೆ ಎದುರಿಸುತ್ತಾರೆ, ಮತ್ತು ಹೂಸ ಕಾಯ್ದೆಯಲ್ಲಿ ಯಾವಯಾವ ಅವಕಾಶಗಳನ್ನು ಕಲ್ಪಿಸಲಾಗಿದೆ. ಇದರಿಂದ ರಸ್ತೆಬದಿವ್ಯಾಪಾರಿಗಳ ಬದುಕು ಹೇಗೆ ಬರವಸೆಯನ್ನು ಮೂಡಿಸುತ್ತದೆ ಎಂಬುದರ ಕುರಿತು ಚರ್ಚಿಸಲಾಗಿದೆ.

ರಸ್ತೆಬದಿವ್ಯಾಪಾರಿಗಳೆಂದರೆ ಯಾರು? ‘ನಗರ ಬೀದಿವ್ಯಾಪಾರಿಗಳ ನೀತಿ-2004’ ಹೇಳುವಂತೆ, “ಬೀದಿ ವ್ಯಾಪಾರಿ” ಎಂದರೆ ನಗರದ ರಸ್ತೆ, ಗಲ್ಲಿ, ಓಣಿ, ಪುಟ್‍ಪಾತ್, ಬೀದಿಬದಿ, ಸಾರ್ವಜನಿಕ ಉದ್ಯಾನವನ, ಇತರ ಯಾವುದೇ ಸಾರ್ವಜನಿಕ ಸ್ಥಳ ಅಥವಾ ಖಾಸಗಿ ಪ್ರದೇಶದಲ್ಲಿನ ತಾತ್ಕಾಲಿಕ ನಿರ್ಮಾಣದಿಂದ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತ, ಸಾರ್ವಜನಿಕರಿಗೆ ದಿನ ಬಳಕೆಯ ವಸ್ತುಗಳು, ಸರಕುಗಳು, ಸಾಮಗ್ರಿ, ಆಹಾರ ಪದಾರ್ಥಗಳ ಮಾರಾಟದಲ್ಲಿ ಅಥವಾ ಸೇವೆಗಳನ್ನು ನೀಡಲು ತೊಡಗಿರುವವರು. ಎಲ್ಲಾ ಸ್ಥಳೀಯ ಅಥವಾ ಪ್ರದೇಶ ಕೇಂದ್ರಿತವಾದ ಆಯಾ ಪ್ರದೇಶಗಳಲ್ಲಿ ಪದಬಳಕೆಯ ಅನುಸಾರ ಅರ್ಥೈ¸ಲಾಗಿದೆ. ಇದೇ ವ್ಯಾಖ್ಯಾನವನ್ನು ‘ಬೀದಿವ್ಯಾಪಾರಿಗಳ ಅಧಿನಿಯಮ-2014’ರಲ್ಲಿ ಪುಷ್ಟೀಕರಿಸಲಾಗಿದೆ. ಈ ಹೊಸ ಕಾಯ್ದೆಯು ನಗರದ ಬೀದಿವ್ಯಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣಕ್ಕೆ ಮಾತ್ರ ಕುರಿತಾದ ಕಾಯ್ದೆಯಾಗಿದೆ. ರಾಜ್ಯ ಸರ್ಕಾರಗಳು ಮತ್ತು ನಗರ ಸ್ಥಳೀಯ ಸರ್ಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೌಕರರು ಸೇರಿದಂತೆ ಗಮನಿಸಬೇಕಾದ ಪ್ರಮುಖ ಅಂಶಗಳೆಂದರೆ “ ಬೀದಿ ವ್ಯಾಪಾರವನ್ನು ಯಾರು ಮಾಡಬಹುದು” “ಸಂಚಾರಿ ವ್ಯಾಪಾರಿಗಳ ಸ್ವರೂಪಗಳೇನು” “ರೂಢಿಗತ ಮಾರುಕಟ್ಟೆಯಲ್ಲಿರುವ ಇತಿಮಿತಿಗಳೇನು” “ಸ್ಥಿರ ವ್ಯಾಪಾರಿಗಳೆಂದರೆ ಯಾರು” “ಪಟ್ಟಣ ಮಾರಾಟ ಸಮಿತಿಯ ರಚನೆ,ಕೆಲಸಕಾರ್ಯಗಳು ಮತ್ತು ಜವಾಬ್ದಾರಿಗಳು ಯಾವುವು” “ವ್ಯಾಪಾರ ವಲಯವೆಂದು ಘೋಷಿಸುವ ಮೊದಲು ಯಾವಯಾವ ಮಾನದಂಡಗಳನ್ನ ಅನುಸರಿಸಬೇಕು” “ವ್ಯಾಪಾರವಲ್ಲದ ವಲಯದಲ್ಲಿ ವ್ಯಾಪಾರ ಮಾಡಿದರೆ ಯಾವಯಾವ ಸಮಸ್ಯೆಗಳನ್ನು ಬೀದಿವ್ಯಾಪಾರಿಗಳು ಎದುರಿಸಬೇಕಾಗುತ್ತದೆ” “ಕಾರ್ಯಯೋಜನೆಯ ಮಹತ್ವ ಕಾರ್ಯಯೋಜನೆಯನ್ನು ಸಿದ್ದಪಡಿಸುವಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಮತ್ತು ಬೀದಿವ್ಯಾಪಾರಿಗಳ ಅನುಸರಿಸಬೇಕಾದ ಕ್ರಮಗಳು”ಇತ್ಯಾದಿ ಪರಿಭಾಷೆಗಳಲ್ಲಿ, ಕಳೆದ 40-50 ವರ್ಷಗಳಿಂದ ಎದುರಿಸುವ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೊಸ ಕಾಯ್ದೆಯನ್ನು ಯಥಾವತ್ತಾಗಿ ಅನುಷ್ಟಾನಗೊಳಿಸಿದರೆ ಸೂಕ್ತಪರಿಹಾರಗಳನ್ನು ಆರಂಬದಲ್ಲಿಯೇ ಕಂಡುಕೊಳ್ಳಲು ಅವಕಾಶಗಳಿವೆ. ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಹೋದರೆ ನಗರ ಸ್ಥಳೀಯ ಸರ್ಕಾರದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ ಭವಿಷ್ಯದಲ್ಲಿ ನಗರದ ಬೀದಿವ್ಯಾಪಾರಿಗಳು ಅನಾವಶ್ಯಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕಾಯ್ದೆಯ ಅನುಷ್ಟಾನಕಿಂತ ಉಪದ್ರವಗಳೇ ಅಧಿಕವಾಗಬಹುದು.

ಮಾರ್ಚ್-2007 ರಲ್ಲಿ ಸೆನೆಗಲ್ ನಲ್ಲಿ ‘ಸಾಂಘಿಕ ಅಸಂಘಟಿತ’ ವಲಯದ ಬೀದಿವ್ಯಾಪಾರಿಗಳ ವ್ಯಾಪಾರ ಒಂಪ್ಪಂದದಲ್ಲಿ ಆರ್ಥಿಕತೆ-ಕಾನೂನು ಮತ್ತು ದಾವೆ ಹೂಡುವ ತಂತ್ರಗಳು’ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವೂ ಸೇರಿದಂತೆ ಒಟ್ಟು 14ರಾಷ್ರ್ಟಗಳ  ಅಸಂಘಟಿತ ವಲಯದ ಕ್ಷೇತ್ರದಲ್ಲಿ ಆಸಕ್ತಿಯಿರುವ ಸಂಘಟನೆಗಳ ಪ್ರತಿನಿಧಿಗಳು ಸಭೆಸೇರಿದ್ದರು. ಈ ಸಮ್ಮೇಳನದಲ್ಲಿ ಅಸಂಘಟಿತ ವಲಯದಲ್ಲಿ ವಾಸ್ತವವಾಗಿ ಬೀದಿವ್ಯಾಪಾರಿಗಳು ಎದುರಿಸುವ ಸಮಸ್ಯಗಳ ಕುರಿತು ಚರ್ಚಿಸಿ,ಸಭೆಯಲ್ಲಿ ಭಾಗವಹಿಸಿದ ಎಲ್ಲ ರಾಷ್ರ್ಟಗಳಲ್ಲಿ ಎದುರಿಸುವ ಸಮಸ್ಯಗಳ ಕುರಿತು ಅಧ್ಯಯನ ಕೈಗೊಂಡು, ವರದಿಗಳ ಸಮೇತ ಆಗಷ್ಟ-2007ರಲ್ಲಿ ಪುನ್‍ಃ ಬ್ರ್ರಝಿಲ್ ನಲ್ಲಿ ಸಭೆ ಸೇರಲಾಯ್ತು, ಈ ಸಮ್ಮೇಳನದಲ್ಲಿ ಕೆಲವು ಪ್ರಮುಖ ನಿರ್ದಾರÀಗಳನ್ನು ತೆಗೆದುಕೊಳ್ಳಲಾಯಿತು. ಭಾಗವಹಿಸಿದ ಪ್ರತಿನಿಧಿಗಳು,ಈ ಕುರಿತು ನಿರ್ದಾರಗಳಿಗೆ ಪೂರಕವಾಗಿ ಕಾರ್ಯಪ್ರವೃತ್ತಾರಾಗಲು ಮತ್ತು ವಾಸ್ತವಾಗಿ ರಸ್ತೆಬದಿ ವ್ಯಾಪಾರಕ್ಕೆ ಸಂಬಂದಿಸಿದಂತೆ ಕೆಲವು ಪ್ರಮುಖ ತೀರ್ಮಾನಗಳೆಂದರೆ 1) ರಸ್ತೆಬದಿವ್ಯಾಪಾರಕ್ಕೆ ಕುರಿತಂತೆ ಚಾಲ್ತಿಯಲ್ಲಿರುವ ಕಾನೂನುಗಳು, ಕಾನೂನಿನ ಅರಿವು, ಅನುಷಾನಗೊಂಡ ಕ್ರಮಗಳು ಮತ್ತು ಪರಿಣಾಮಗಳು. ರಸ್ತೆಬದಿವ್ಯಾಪಾರಿಗಳ ಭಾಗವಹಿಸುವಿಕೆಯ ವಿಧಾನಗಳು 2) ರಸ್ತೆಬದಿವ್ಯಾಪಾರದ  ಕ್ಷೇತ್ರದ ವ್ಯಾಪಾರ ಸಾಂಘಿಕ ಒಂಪ್ಪಂದದಲ್ಲಿರುವ ತಿಳುವಳಿಕೆ, ಸಾರ್ವಜನಿಕರಿಗೆ, ಸರ್ಕಾರದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ  ರಸ್ತೆಬದಿವ್ಯಾಪಾರದÀ ಮಾಹಿತಿಯ ಒಳಹರಿವು.3)ವಿವಿಧ ದೇಶಗಳ ಬೀದಿವ್ಯಾಪಾರದ ಕ್ಷೇತ್ರದ ವ್ಯಾಪಾರ ವಹಿವಾಟಿನ ಅನುಭವಗಳ ಹಂಚಿಕೆ ಮಾಡಿಕ್ಕೊಳ್ಳಲು ಯಾವ ಕ್ರಮಗಳನ್ನು ಅನುಸರಿಸಬೇಕು.4)ವಿವಿಧ ದೇಶಗಳೊಂದೆಗೆ ಬೀದಿವ್ಯಾಪಾರವನ್ನು ಹೇಗೆ ಅಂತರ್ಜಾಲ ವಿಸ್ತಾರಗೊಳಿಸುವ ವಿಧಾನಗಳು.5) ಆರ್ಥಿಕವಲಯದ ಬೀದಿವ್ಯಾಪಾರಿಗಳ ಹಕ್ಕು ಮತ್ತು ಜವಾಬ್ದಾರಿಗಳ ಹೊಂದಿರುವ ಮಾಹಿತಿಗಳು.6) ಬೀದಿವ್ಯಾಪಾರಿಗಳು ಹೊಂದಿರುವ ಸಾಮರ್ಥವನ್ನು ಸಾರ್ವರ್ಥೀಕರಣಗೊಳಿಸುವಲ್ಲಿ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು  ಚರ್ಚಿಸಿದ ಹಿನ್ನೆಲೆಯಲ್ಲಿ, ನಾವು ಕಳೆದ ವರ್ಷ ಜಾರಿಗೆ ತಂದಿರುವ “ಬೀದಿ ವ್ಯಾಪಾರಿಗಳ ಅಧಿನಿಯಮ-2014”ಬೀದಿವ್ಯಾಪಾರಿಗಳ ಹೊಸ ಬದುಕನ್ನು ರೂಪಿಸಬಹುದೇ ಎಂಬುದನ್ನು ಅವಲೋಕಿಸಬೇಕಾಗಿದೆ.

ನಗರದ ಬೀದಿವ್ಯಾಪಾರಿಗಳ ಸಮಸ್ಯಗಳನ್ನು ಪರಿಹರಿಸುವಲ್ಲಿ ಈ ಕಾಯ್ದೆ ಪರಿಹಾರವಾಗಬಲ್ಲದೇ?. ಸಮಸ್ಯಗಳಿಗೆ ಸರ್ಕಾರವೊಂದೇ ಕಾರಣವಾಗಿರದೇ, ಸ್ಥಳೀಯ ಹಂತದಲ್ಲಿಯೂ ನಗರದ ಬೀದಿವ್ಯಾಪಾರಿಗಳ ಸಮಸ್ಯೆಗಳನ್ನು ಗುರುತಿಸಬಹುದು ಆದರೆ ಸರ್ಕಾರದ ಹಂತದಲ್ಲಿ ತೆಗೆದುಕೊಳ್ಳಬೇಕಾದಕ್ರಮಗಳು ಸುಲಭವಾಗಿ ಪರಿಹಸುವಂತಹಗಳಲ್ಲ. ಮೊದಲು ಐದು ಹಂತದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. 1) ಇದು ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯಾಗಿದೆ ರಾಜ್ಯ ಸರ್ಕಾರಕ್ಕೆ ಅಗತ್ಯವೆನಿಸುವ ಪ್ರಕರಣದಲ್ಲಿ ತಿದ್ದುಪಡಿಗೆ ಅವಕಾಶವಿಲ್ಲಾ. 2) ಜಾರಿಯಲ್ಲಿರುವ ಕರ್ನಾಟಕ ಪುರಸಭೆ ಕಾಯ್ದೆ 1964 ಹಾಗೂ ಕರ್ನಾಟಕ ನಗರಪಾಲಿಕೆ ಕಾಯ್ದೆ 1975 ರಲ್ಲಿ “ಬೀದಿ ವ್ಯಾಪಾರಿಗಳ ಅಧಿನಿಯಮ-2014 ಪೂರಕ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕಾಯ್ದೆ ಅನುಷ್ಟಾನಕ್ಕೆ ಸರಳವಾದ ನಿಯಮದ ಅಗತ್ಯವಿದೆ. 3) ರಾಜ್ಯ/ಕೇಂದ್ರ ಸರ್ಕಾರವು ಬೀದಿವ್ಯಾಪಾರಿಗಳ ಜೀವನೋಪಾಯ ಮತ್ತು ನಿಯಂತ್ರಣ ಕುರಿತು ಕಳೆದ 35 ವರ್ಷಗಳಿಂದ ತೆಗೆದುಕೊಳ್ಳದ ಕ್ರಮಗಳಿಗೆ ಕೂಡಲೇ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳು ವಿಸ್ತೃತ ಯೋಜನೆಯನ್ನು ಆಯಾ ಸ್ಥಳೀಯ ನಗರ ಪ್ರದೇಶಕ್ಕೆ ಹೊಂದಿಕೊಳ್ಳುವಂತೆ ಕೂಡಲೇ ತಯಾರಿಸುವುದು ಅತಿ ಅವಶ್ಯಕ.4) ನಗರದ ಬೀದಿವ್ಯಾಪಾರಿಗಳ ಆಂತರಿಕ ಸಮಸ್ಯೆಗಳನ್ನು ಗುರುತಿಸುವುದು ಅದಕ್ಕೆ ಕೂಡಲೇ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದು. ಮತ್ತು 5) ಸ್ಥಳೀಯ ಸರ್ಕಾರಗಳಿಗೆ ನಿಗದಿತ ಸಮಯದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಮೇಲ್ವಿಚಾರಣೆ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ.

ಕೇಂದ್ರ/ರಾಜ್ಯಸರ್ಕಾರಗÀಳ ಮದ್ಯ ನಗರದ ಬೀದಿವ್ಯಾಪಾರಿಗಳ ಕುರಿತು ಸಮಗ್ರ ಕಾಯ್ದೆಯನ್ನು ಜಾರಿಗೆತರುವಲ್ಲಿ ವಿಳಂಬತೆ ಮತ್ತು ಇದುವರೆಗೂ ಚಾಲ್ತಿಯಲ್ಲಿದ್ದ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಇಂದಿನ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಬೀದಿವ್ಯಾಪಾರಿಗಳಿಗೆ ಸಂವಿಧಾನಿಕ ಪ್ರಾತಿನಿದ್ಯ ಇಲ್ಲದಿರುವುದು, ನಗರದ ಬೀದಿವ್ಯಾಪಾರಿಗಳ ಭಲವಾದ ಸಂಘಟನೆಗಳ ಕೊರತೆ, ಸಂಬಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಗರದ ಬೀದಿವ್ಯಾಪಾರಿಗಳ ಸಮಸ್ಯೆಗಳತ್ತ ಗಮನಹರಿಸದಿರುವುದು. ಸಮಸ್ಯಗಳ ಪರಿಹಾರಕ್ಕೆ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ಥಳೀಯ ಸಂಸ್ಥೆಗಳಿಗಳ ಉದ್ದೇಶಪೂರಕವಾಗಿ ದೂರವಿರುವುದು, ಬೀದಿವ್ಯಾಪಾರಿಗಳನ್ನು ಗುರುತಿಸಿವುದು ಮತ್ತು ಅವರ ವ್ಯಾಪಾರಕ್ಕೆ ಅನುಕೂಲವಾಗುವಂತಹ ಸ್ಥಳವನ್ನು ಗುರುತಿಸಲು ಇದುವರೆಗೂ ಸ್ಥಳೀಯ ಸಂಸ್ಥೆಗಳಿಗೆ ಸಾದ್ಯವಾಗದೇ ಇರುವುದು. ಮುಖ್ಯವಾಗಿ ನಿಯಮಗಳನ್ನು ಮೀರಿ ನಡೆದುಕೊಳ್ಳುವ ವ್ಯಾಪಾರಿಗಳನ್ನು ನಿರ್ದಾಕ್ಷಣ್ಯವಾಗಿ  ನಿಯಂತ್ರಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಬೀದಿವ್ಯಾಪಾರಿಗಳನ್ನು ಮತಬ್ಯಾಂಕಗಳಾಗಿರಿಸಿಕೊಂಡಿರುವುದು ಅಧಿಕಾರಿಗಳು ಹಾಗೂ ಬೀದಿವ್ಯಾಪಾರಿಗಳ ಮದ್ಯ ಉತ್ತರದಾಯಿತ್ವವನ್ನು ಕೊರತೆಯಂತಹ ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದೇವೆ.

ಮೂಲಭೂತವಾಗಿ ಬೀದಿವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳು, ಹಳ್ಳಿಯಿಂದ ನಗರಕ್ಕೆ ಉದ್ಯೋಗ ಅರಸಿಕೊಂಡುಬರುವವರ ಸಂಖ್ಯೆ ದಿನೇದಿನ ಹೆಚ್ಚುತ್ತದೆ. ದಿನದ 14-16 ತಾಸುಗಳವರಗೆ ಕುಟುಂಬದ ಸದಸ್ಯರೊಂದಿಗೆ ಮಕ್ಕಳೂ ಸೇರಿದಂತೆ ಜನದಟ್ಟಣಿಯಲ್ಲಿಯೇ ಬದುಕಬೇಕು, ನಗರಸ್ಥಳೀಯ ಸಂಸ್ಥೆಯ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪೆÇೀಲೀಸ್‍ರಿಂದ ನಿರಂತರ ಕಿರುಕುಳ ಎದುರಿಸಬೇಕು. ಬೃಹತ ನಗರಗಳಲ್ಲಿ ಸಮಾಜಘಾತಕ ಶಕ್ತಿಗಳಿಂದ ಬೀದಿವ್ಯಾಪಾರಿಗಳ ನಿಯಂತ್ರಣ, ಕೆಲವು ಬೀದಿವ್ಯಾಪಾರಿಗಳು ನಗರಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಪೆÇೀಲೀಸರ ಮತ್ತು ರಾಜಕೀಯ ಹಿತಾಸಕ್ತಿಯನ್ನು ಉಪಯೋಗಿಸಿ ಒಡೆದಾಳುವ ನೀತಿಗೆ ಪೂರಕವಾಗಿ ವರ್ತಿಸುವುದು,ಸಾಮಾಜಿಕೆ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಯ ಕೊರತೆ, ಇವಲ್ಲವೂ ದಿನನಿತ್ಯದ ಬೀದಿವ್ಯಾಪಾರಿಗಳು ಗೋಳು. ಇಂತಹ ಸಮಸ್ಯೆಗಳಿಂದ ಹೇಗೆ ಹೊರಗೆ ಬರುವುದು. ಇದಲ್ಲದೆ ಬೀದಿವ್ಯಾಪಾರಿಗಳ ಸಮಸ್ಯಗಳಿಗೂ ಸಹ ಇಲ್ಲಿ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ.

ಎಲ್ಲ ನಗರಗಳಲ್ಲಿ ಈ ಮೇಲಿನ ಯಾವುದೇ ಅಂಶಗಳಿಗೆ ಕುರಿತಂತೆ ಯಾವ ರಾಜ್ಯ ಸರ್ಕಾರಗಳು ಸ್ವಯಿಚ್ಚೆಯಿಂದ ಅಸಂಘಟಿತ ಆರ್ಥಿಕ ವಲಯದ ಬೀದಿವ್ಯಾಪಾರಿಗಳ ಬದುಕನ್ನು ಗೌರವಯುತವಾಗಿ ಬದುಕುವುದಕ್ಕೆ ಪೂರಕವಾಗುವ ಹಕ್ಕುಗಳನ್ನಾಗಲಿ ಇಲ್ಲವೇ ಅವರ ಕುಟುಂಬಗಳಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವ ಕನಿಷ್ಟ ಕಾಳಜಿಯನ್ನು 2009ರವರೆಗೂ ವಹಿಸಿರಲಿಲ್ಲಾ. ಇದು ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಮೂಲಭೂತಹಕ್ಕಿನ  ಉಲ್ಲಂಗೆನೆಯಾಗಿತ್ತು. ಸರ್ವೂಚ್ಚ ನ್ಯಾಯಾಲಯದ ಐದು ನ್ಯಾಯಾದೀಶರುಗಳು ನೀಡಿದ ವರಧಿಯ ಫಲವಾಗಿ ಮತ್ತು ಗೈಂದಾ ರಾಮ್ ವಿರುದ್ದ ದೆಹಲಿ ಮೆಟ್ರೋಪಾಲಿಟಿನ್ ಸಿಟಿ ಸರ್ವೋಚ್ಚ ನ್ಯಾಯಾಲಯದ (ಅಕ್ಟೋಬರ್-2010) ರಂದು ತೀರ್ಪುನೀಡುವುದರ ಮೂಲಕ ಅನಿವಾರ್ಯವಾಗಿ ನಗರ ರಸ್ತೆಬದಿವ್ಯಾಪಾರಿಗಳ ಅಧಿನಿಯಮ-2014 ಎಂಬ ಹೊಸ ಕಾಯ್ದೆ ಜಾರಿಗೆ ಬರುವುದಕ್ಕೆ ಸಹಾಯಕವಾಗಿದೆ.ಇದು 3ಕೋಟಿ ರಸ್ತೆಬದಿವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ವಿನಿಯಂತ್ರಣಕ್ಕೆ ಕುರಿತಾದಗಿದೆ. ಈ ಹಿಂದೆ  ಕೇಂದ್ರಸರ್ಕಾರದ ನಗರ ಬಡತನ ನಿವಾರಣೆ ಮತ್ತು ವಸತಿ ಸಚಿವಾಲಯವು 2009 ರಲ್ಲಿ ಈ ಬಗ್ಗೆ ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ಬದುಕುವ ಹಕ್ಕನ್ನು ಪ್ರತಿಪಾದಿಸುವ ಬಲವಾದ ನಿಯಮಗಳು/ಕ್ರಮಗಳು ಕೊರತೆಯಿತ್ತು. ಇದು 1984 ರಿಂದ ನಿರಂತರವಾಗಿ ರಸ್ತೆಬದಿವ್ಯಾಪಾರಿಗಳ ಹಿತಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ದೇಶದ ಎಲ್ಲಾ ನಗರ ರಸ್ತೆ ಬದಿವ್ಯಾಪಾರಿಗಳಿಗೆ ಹೊಸ ಬದುಕಿನ ಬರವಸೆಯನ್ನು ಮೂಡಿಸಿದ ಆಶಾಕಿರಣÉ. ಈ ಕಾಯ್ದೆಯಿಂದ ರಾಜ್ಯಸರ್ಕಾರಗಳ ಮೇಲೆ ಮತ್ತು ವಿಷೇಶವಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಬೀದಿವ್ಯಾಪಾರಿಗಳಿಗೆ ಕೆಲವು ಕರ್ತವ್ಯ-ಜವಾಬ್ದಾರಿಗಳನ್ನು ಹೆಚ್ಚಿಸಿದೆ.ಸಂವಿಧಾನದ 21ನೇ ಪರಿಶ್ಚೇದದ’ಬದುಕುವಹಕ್ಕು’ನ್ನು ಬೀದಿವ್ಯಾಪಾರಿಗಳು ಚಲಾಯಿಸುವ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ಹೊಂದಿದ್ದಾರೆ.

ರಸ್ತೆಬದಿವ್ಯಾಪಾರಿಗಳು ತಮ್ಮ ಉದ್ಯೊಗವನ್ನು ಮುಂದುವರಿಸಲು ನಿಯಮಗಳು ಮತ್ತು ಕೆಲವು ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಸ್ಥಳೀಯ ನಗರಸಂಸ್ಥೆಗಳು, ಪೆÇೀಲೀಸರು ಸೇರಿದಂತೆ ರಸ್ತೆ ಬದಿವ್ಯಾಪಾರಿಗಳಿಗೆ ಅನಾವಶ್ಯಕವಾಗಿ ನೀಡುವ ಕಿರುಕುಳಕ್ಕೆ ಅಂತ್ಯಹಾಡಿದೆ. ಈ ಮೂಲಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಕಾಯ್ದೆಯ 22ನೇ ಪ್ರಕರಣದಲ್ಲಿ ರಾಜ್ಯಸರ್ಕಾರವು ರಚಿಸಿದ “ಪಟ್ಟಣ ಮಾರಾಟ ಸಮಿತಿ” ಶಾಸನಬದ್ದ ಸಂಸ್ಥೆಯನ್ನು ಹುಟ್ಟಿಹಾಕಿದೆ.ಇದುವೇ ನಗರ ರಸ್ತೆಬದಿವ್ಯಾಪಾರಿಗಳ ಯೋಗಕ್ಷೇಮದ ಕೇಂದ್ರ ಮತ್ತು ಕಚೇರಿಯು ಆಗಿದೆ.ಇನ್ನು ಮುಂದೆ ನಗರಯೋಜನಾ ಸಮಿತಿಗಳು ಹೊಸ ಯೋಜನೆಗಳನ್ನು ಸಿದ್ದಪಡಿಸುವಾಗ ರಸ್ತೆಬದಿವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣವನ್ನು ಗಮನದಲ್ಲಿರಿಸಿ, ಆದ್ಯತೆಯಲ್ಲಿ ರಸ್ತೆಬದಿ ವ್ಯಾಪಾರಿಗೆಳಿಗೆ ಅವಕಾಶನೀಡಬೇಕು. ಆರ್ಥಿಕವಾಗಿ ಸಬಲರನ್ನಾಗಿಸಲು ಸೂಕ್ತ ಹಣಕಾಸಿನ ನೆರವುಗಳನ್ನು ಬ್ಯಾಂಕುಗಳ ಸಹಾಯಕ್ಕಾಗಿ ಸೂಕ್ತ ನಿರ್ದೇಶನ ನೀಡುವುದು ಸರ್ಕಾರದ ಅತೀತುರ್ತಾದ ಕೆಲಸವಾಗಿದೆ. ಈ ಕಾಯ್ದೆಯನ್ನು ಕೆಳಹಂತದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಸಮರ್ಪಕವಾಗಿ ಅನುಷ್ಟಾನಗೊಳಿಸಿದರೆ ಈಗಿರುವ ರಸ್ತೆಬದಿವ್ಯಾಪಾರಿಗಳು ತಮ್ಮ ಮಕ್ಕಳ/ಕುಟುಂಬದ ಭವಿಷ್ಯರೂಪಿಸುವಲ್ಲಿ ಸಹಾಯಕವಾಗಲಿದೆ.

ಭಾರತವು ಸೇರಿದಂತೆ ಬಹುತೇಕ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಅಸಂಘಟಿತವಲಯದಲ್ಲಿ ಕಾರ್ಯನಿರತವಾಗಿರುವ ನೂರಾರು ಆದಾಯತರುವ ಉದ್ಯೋಗಗಳಲ್ಲಿ ಬೀದಿವ್ಯಾಪಾರಿಗಳು ಹೆಚ್ಚು ಸತ್ವವುಳ್ಳ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.ಆಧುನಿಕ ಮಾಲ್‍ಗಳು ಬಿರುಸಿನಿಂದ ಗ್ರಾಹಕರನ್ನು ಎಷ್ಟೇ ಆಕರ್ಶಿಸಿದ್ದರೂ ಬೀದಿವ್ಯಾಪಾರಿಗಳು ಸಾಮಾನ್ಯ ಬಡ ಮತ್ತು ಮದ್ಯಮವರ್ಗದವರಿಗೆ ಅಗತ್ಯವಿರುವ ಸರಕು ಮತ್ತು ಸೇವೆಗಳನ್ನು ನೀಡುವುದು ಆ ಮೂಲಕ ಮೌಲ್ಯಧಾರಿತ ಸೇವೆಗಳನ್ನು ನೀಡುತ್ತಾ ಆರ್ಥಿಕ ಬೆಳವಣಿಗೆ ಪೂರಕವಾಗಿ, ನಗರಗಳಲ್ಲಿ ನಡೆಯುವ ವ್ಯಾಪಾರವಹಿವಾಟಿನ ಕೇಂದ್ರಗಳಾಗಿವೆ. ಬೀದಿವ್ಯಾಪಾರಿಗಳಿಲ್ಲದೇ ನಗರಗಳಿಲ್ಲಾ, ನಗರಗಳಿಲ್ಲದೇ ಬೀದಿವ್ಯಾಪಾರಿಗಳಿಲ್ಲಾ. ಈ ಮೂಲಕ ಬೀದಿವ್ಯಾಪಾರಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ರಸ್ತೆಬದಿವಪಾರಿಗಳಿಲ್ಲದಿದ್ದರೆ ಗ್ರಾಮೀಣ ಪ್ರದೇಶಗಳಿಂದ ವಲಸೆಬಂದ ದುಡಿಯುವವರ್ಗದವರಿಗೆ ಕನಿಷ್ಟ ಸೇವೆಗಳನ್ನು ಸರ್ಕಾರವಾಗಲಿ ಅಥವಾ ಸ್ಥಳೀಯ ಸರ್ಕಾರಗಳಾಗಲಿ ನೀಡಲು ಸಾಧ್ಯವೇ ಇಲ್ಲಾ. ರಸ್ತೆಬದಿ ವ್ಯ್ಯಾಪಾರ ಕೇವಲ ಸ್ವಯಂ ಉದ್ಯೋಗವನ್ನು ಸೃಷ್ಟಿಸುವುದಷ್ಟೇ, ಬದಲಾಗಿ ನಗರದ ಗರಿಷ್ಟ ಜನರಿಗೆ ಕನಿಷ್ಟ ಕೈಗೆಟುಕುವದರದಲ್ಲಿ ಮತ್ತು ನಿಗದಿತ ಸಮಯದಲ್ಲಿ ಸೇವೆಗಳನ್ನು ನೀಡುವ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವವಸುತಿದ್ದಾರೆ. ಇದುವರೆಗೂ ಸ್ಥಳೀಯ ಸರ್ಕಾರಗಳು ರಸ್ತೆಬದಿವ್ಯಾಪಾರಿಗಳನ್ನು ‘ಉಪದ್ರವಿಗಳು’ ರಸ್ಥೆಬದಿ ನಡೆದಾಡುವ ಜನರಿಗೆ ತೊಂದರೆಕೊಡುವವವರೆಂದು ಇವರನ್ನು ಅನಾವಶ್ಯಕವಾಗಿ ಅಲ್ಲಿಂದ ಓಡಿಸುವುದು, ಹಪ್ತಾ ವಸೂಲಿಮಾಡುವು,ರಸ್ಥೆಬದಿ ಸ್ಥಳವನ್ನು ಅನಧಿಕೃತವಾಗಿ ಬಾಡಿಗೆ ನೀಡುವ ಜನರಿಗೆ ಕಡಿವಾಣಹಾಕಿದೆ. ರಸ್ತೆಬದಿವ್ಯಾಪಾರಿಗಳಿಗೆ ಹಣಕಾಸಿನ ಸಹಾಯದಲ್ಲಿ ಮಧ್ಯವರ್ಥಿಗಳ ಉಪಟಳಕ್ಕೆ ಕಡಿವಾಣಹಾಕಿ ಸರ್ಕಾರ/ಸ್ಥಳೀಯ ಸರ್ಕಾರಗಳು ರಸ್ಥೆಬದಿ ವ್ಯಾಪಾರಿಗಳ ಕುಟುಂಬಗಳಿಗೆ ಪರ್ಯಾಯ ಉದ್ಯೋಗವನ್ನು ಕಲ್ಪಿಸಲು ಕಾರ್ಯಯೋಜನೆ ಸಿದ್ದಪಡಿಸಲು ಅವಕಾಶ ಕಲ್ಪಿಸಲಾಗಿದೆ.  ಅಲ್ಲದೆ ಇತರೇ ನಿಯಮಬಾಹೀರ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇದ್ದ ಚಟುವಟಿಕೆಗಳಿಗೆ ನಿಯಂತ್ರಣವನ್ನು ಹಾಕಿದೆ. ಇದನ್ನು ರಸ್ಥೆಬದಿ ವ್ಯಾಪಾರಿಗಳು ಅನಿವಾರ್ಯವಾಗಿ ಸಹಿಸಿಕೊಂಡು ಬಂದಿದ್ದರು. ಇನ್ನು ಮುಂದೆ ರಸ್ತೆಬದಿವ್ಯಾಪಾರದ ಉದ್ಯೋಗವನ್ನು ಅವಲಂಬಿಸಿರುವವರಿಗೆ, ಸ್ಥಳೀಯ ಸರ್ಕಾರಗಳು ರಾಜ್ಯ ಸರ್ಕಾರದ ಸಹಕಾರದಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ರಚನಾತ್ಮಕ ಕಾರ್ಯಕ್ರಮಳನ್ನು ಹಮ್ಮಿಕೊಳ್ಳಬೇಕು.

ಹೊಸ ಕಾಯ್ದೆಯ ಪ್ರಕಾರ ಯಾರು ನಗರ ಬೀದಿವ್ಯಾಪಾರಿಗಳೆಂದರೆ, ಹದಿನಾಲ್ಕು ವರ್ಷ ತುಂಬಿದ ಯಾವೂದೇ ವ್ಯಕ್ತಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.ಬೀದಿವ್ಯಾಪಾರ ಮಾಡುವವರ ಕುಟುಂಬದಲ್ಲಿ ಯಾವುದೇ ಉದ್ಯೋಗ ವಿಲ್ಲದವರು ಮಾತ್ರ ನಗರ ಬೀದಿವ್ಯಾಪಾರ ಮಾಡಲಿಕ್ಕೆ ಅವಕಾಶವಿದೆ.ಕಡ್ದಾಯವಾಗಿ ಗುರುತಿನ ಚೀಟಿ ಮತ್ತು ಪರವಾನಿಗೆ ಪಡೆಯಲೇಬೇಕು. ಪರವಾನಿಗೆಯಲ್ಲಿ ನಿಗಧಿಪಡಿಸಿದ ಸ್ಥಳ, ಸಮಯ.ಮತ್ತು ವಲಯದಲ್ಲಿ ಮಾತ್ರ ಬೀದಿವ್ಯಾಪಾರ ಮಾಡÀಬೇಕು. ಪ್ರತಿಯೊಬ್ಬ ಬೀದಿ ವ್ಯಾಪಾರಿಯೂ  ವ್ಯಾಪಾರ ಪ್ರಮಾಣ ಪತ್ರಿಕೆ ಪಡೆಯುವ ಮುನ್ನ ‘ಪಟ್ಟಣ ವ್ಯಾಪಾರ ಸಮಿತಿ’ಗೆ ಬೀದಿ ವ್ಯಾಪಾರವನ್ನು ತಾನೇ ಅಥವಾ ತನ್ನ ಕುಟುಂಬದ ಸದಸ್ಯರ ಮೂಲಕವೇ ಮಾಡುತ್ತೇನೆ. ತನಗೆ ಇತರ ಯಾವುದೇ ಜೀವನೋಪಾಯವಿಲ್ಲ. ಬೇರೆಯವರಿಗೆ ನನ್ನ ಪರವಾನಿಗೆಯನ್ನು ಬಾಡಿಗೆಗೆ ಮತ್ತು ಇತರ ಯಾವುದೇ ವ್ಯಕ್ತಿಗೆ ವರ್ಗಾಯಿಸುವುದಿಲ್ಲವೆಂದು. ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಮತ್ತು ಇತರ ನಿಬಂಧನೆಗಳು ಉಲ್ಲಂಗಿಸುವುದಿಲ್ಲವೆಂದು ಮುಚ್ಚಳಿಕೆಯನ್ನು ಬರೆದುಕೊಡಬೇಕು.ಇದನ್ನು ಮೀರಿದರೆ ಪರವಾನಿಗೆ ರದ್ದಾಗುವುದು ಗ್ಯಾರಂಟಿ. ಈ ಬಗ್ಗೆ ಸ್ಪಷ್ಟವಾದ ಮಾನದಂಡಗಳನ್ನು ಕಾಯ್ದೆಯಲ್ಲಿಯೇ ವಿವರಿಸಲಾಗಿದೆ.

ನಗರದ ಬೀದಿ ವ್ಯಾಪಾರಿಗಳು ತಮ್ಮಹಕ್ಕನ್ನು ಚಲಾಯಿಸುವಾಗ ಕೆಲವು ಕರ್ತವ್ಯಗಳನ್ನು ಸಹ ಕಡ್ಡಾಯವಾಗಿ ಅನುಸರಿಸಲೇಬೇಕು. ಪರವಾನಿಗೆಯಲ್ಲಿ ವಿಧಿಸಿದ ಷರತ್ತುಗಳನ್ನು ಮೀರಿದರೆ, ವ್ಯಾಪಾರರಹಿತ ವಲಯವೆಂದು ಗೊತ್ತುಪಡಿಸಿದÀ ಸ್ಥಳ, ಸಮಯ.  ಮತ್ತು ವಲಯದಲ್ಲಿ ಬೀದಿ  ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳುವುದು ಕಾನೂನುಬಾಹೀರವಾಗುತ್ತದೆ. ವ್ಯಾಪಾರ ವಲಯಗಳಲ್ಲಿ ಒದಗಿಸಿಕೊಡಲಾಗಿರುವ ಮೂಲಭೂತಸೌಕರ್ಯಗಳನ್ನು ಮತ್ತು ಅನುಕೂಲಗಳಿಗೆ ಪ್ರತಿಯೊಬ್ಬ ಬೀದಿ ವ್ಯಾಪಾರಿಯೂ ಕಾಲಕಾಲಕ್ಕೆ ಸ್ಥಳೀಯ ಪ್ರಾಧಿಕಾರವು ನಿರ್ಧರಿಸಬಹುದಾದಂತಹ ನಿರ್ವಹಣಾ ವೆಚ್ಚಗಳನ್ನು ನಿಗದಿತ ಅವದಿಯೊಳಗೆ ಸಂದಾಯ ಮಾಡಲೇಬೇಕು.

ಪಟ್ಟಣ ವ್ಯಾಪಾರ ಸಮಿತಿಯು, ಕಾರ್ಯಯೋಜನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ಕಾಲಾವಧಿಯೊಳಗೆ ಪ್ರತಿ ಐದು ವರ್ಷಗಳಿಗೊಮ್ಮೆ ಸಮೀಕ್ಷೆಯನ್ನು ಮಾಡತಕ್ಕದ್ದು. ಈ ಸಮಿತಿಯು ಸಮೀಕ್ಷೆಯಲ್ಲಿ ಗುರುತಿಸಲಾದ ಸದ್ಯ ಗುರುತಿಸಲಾದ ಎಲ್ಲಾ ಬೀದಿ ವ್ಯಾಪಾರಿಗಳಿಗೂ ಬೀದಿ ವ್ಯಾಪಾರದ ಯೋಜನೆ ಮತ್ತು ಬೀದಿ ವ್ಯಾಪಾರ ವಲಯಗಳ ಧಾರಣ ಸಾಮರ್ಥ್ಯಕ್ಕನುಸಾರವಾಗಿ ಅಥವಾ ಪಟ್ಟಣ ಅಥವಾ ನಗರದ ಜನಸಂಖ್ಯೆಯ ಶೇ.2ರಷ್ಟು ಮಾನದಂಡಕ್ಕೊಳಪಟ್ಟಂತೆ ವ್ಯಾಪಾರ ವಲಯಗಳಲ್ಲಿ ಸ್ಥಳಾವಕಾಶವನ್ನು ಒದಗಿಸುವುದನ್ನು ಸ್ಪಷ್ಟಪಡಿಸಬೇಕು. ಇತರ ಯಾವುದೇ ರೂಪದ ಅನುಮತಿ ಎಂದಾಗಲಿ ಸ್ಥಿರ ವ್ಯಾಪಾರಿ ಅಥವಾ ಸಂಚಾರಿ ವ್ಯಾಪಾರಿ ಅಥವಾ ಯಾವುದೇ ಇತರ ವರ್ಗದಡಿಯಲ್ಲಿ ವ್ಯಾಪಾರದ ಪ್ರಮಾಣ ಪತ್ರಿಕೆಯನ್ನು ನೀಡಿದ್ದಲ್ಲಿ ಅಂತಹ ವ್ಯಕ್ತಿಯನ್ನು ವ್ಯಾಪಾರದ ಪ್ರಮಾಣ ಪತ್ರಿಕೆಯನ್ನು ಯಾವ ಅವಧಿಯವರೆಗೆ ಯಾವ ವರ್ಗಕ್ಕೆ ನೀಡಲಾಗಿದೆಯೋ ಆವರ್ಗಕ್ಕೆ ಬೀದಿ ವ್ಯಾಪಾರಿಯೆಂದು ಪರಿಗಣಿಸತಕ್ಕದ್ದು. ಇದಕ್ಕೆ ಸ್ಥಳೀಯ ಸರ್ಕಾರಗಳು ಬೀದಿವ್ಯಾಪಾರಿಗಳು ವ್ಯಾಪಾರದ ಪ್ರಮಾಣ ಪತ್ರಿಕೆ ನೀಡಿಕೆಯ ಷರತ್ತುಗಳನ್ನು ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಅಂತಹ ವ್ಯಾಪಾರದ ಪ್ರಮಾಣಪತ್ರಿಕೆಯನ್ನು ಬೀದಿ ವ್ಯಾಪಾರಿಯು ಸುಳ್ಳುಮಾಹಿತಿ ಅಥವಾ ವಂಚನೆಯ ಮೂಲಕ ಪಡೆದುಕೊಂಡಿರುತ್ತಾನೆಂದು ಪಟ್ಟಣ ವ್ಯಾಪಾರ ಸಮಿತಿಗೆ ಮನದಟ್ಟಾದರೆ, ಪಟ್ಟಣ ವ್ಯಾಪಾರ ಸಮಿತಿಯು, ಈ ಅಧಿನಿಯಮದ ಮೇರೆಗೆ ಬೀದಿ ವ್ಯಾಪಾರಿಗೆ ದಂಡವಿಧಿ¸ಬಹುದು ಇಲ್ಲವೇ ಪ್ರಮಾಣ ಪತ್ರಿಕೆಯನ್ನು ರದ್ದುಪಡಿಸಲು ಈ ಅಧಿನಿಯಮದಲ್ಲಿ ಅವಕಾಶಕಲ್ಪ್ಲಿಸಲಾಗಿದೆ. ಬೀದಿವ್ಯಾಪಾರಿಯನ್ನು ಸ್ಥಳೀಯ ಸರ್ಕಾರವು ಒಕ್ಕಲೆಬ್ಬಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಕಾಲಾವಧಿಯು ಮುಗಿದ ನಂತರ ವ್ಯಾಪಾರ ಪ್ರಮಾಣಪತ್ರಿಕೆಯಲ್ಲಿ ನಿರ್ದಿಷ್ಟಪಡಿಸಿದ ಸ್ಥಳದಿಂದ ಮರುಸ್ಥಾಪಿತಗೊಳ್ಳಲು ಅಥವಾ ಖಾಲಿಮಾಡಲು ತಪ್ಪಿದ ಪ್ರತಿಯೊಬ್ಬ ಬೀದಿವ್ಯಾಪಾರಿಗೆ ಪ್ರತಿದಿನಕ್ಕೆ ರೂ.250/-ವರೆಗೆ ವಿಸ್ತರಿಸಬಹುದಾದಂತಹ ಸ್ಥಳೀಯ ಪ್ರಾಧಿಕಾರವು ನಿರ್ಧರಿಸಬಹುದಾದಂತಹ  ದಂಡವನ್ನು ಸಂದಾಯಮಾಡಬೇಕು, ಆದರೆ ದಂಡದಮೊತ್ತವು ವಶಪಡಿಸಿಕೊಳ್ಳಲಾದ ಸರಕಿನಮೌಲ್ಯವನ್ನು ಮೀರತಕ್ಕದ್ದಲ್ಲ. ಬೀದಿ ವ್ಯಾಪಾರಿಗೆ ಪಟ್ಟಣ ವ್ಯಾಪಾರ ಸಮಿತಿಯ ಮುಂದೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ಸಹ ನೀಡಲಾಗಿದೆ.

ಈ ಸಮಿತಿಗೆ ಮುಖ್ಯಾಧಿಕಾರಿಯವರೇ ಅಧ್ಯಕ್ಷರಾಗಿರತ್ತಾರೆ. ಮತ್ತು ಸ್ಥಳೀಯ ಪ್ರಾಧಿಕಾರ, ಸ್ಥಳೀಯ ಪ್ರಾಧಿಕಾರದ ಆರೋಗ್ಯಾಧಿಕಾರಿ, ಯೋಜನಾ ಪ್ರಾಧಿಕಾರ, ಸಂಚಾರಿ ಪೆÇಲೀಸು, ಪೆÇಲೀಸು, ಬೀದಿ ವ್ಯಾಪಾರಿಗಳ ಸಂಘ ಪ್ರತಿನಿಧಿಗಳು ಸೇರಿದಂತೆ 15-20 ಪ್ರತಿನಿಧಿಗಳ ಇತರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಬೇಕಾದ ನಿಯಮಿಸಬಹುದಾದಂತಹ ಸಂಖ್ಯೆಯ ಸಮಿತಿಯಲ್ಲಿ ಶೇ 60-40% ಪ್ರಮಾಣದಲ್ಲಿ ಸದಸ್ಯರಾಗಿರುತ್ತಾರೆ ಇವರೆಲ್ಲರೂ ಸೇರಿ ತೆಗೆದುಕೊಳ್ಳುವ ಸಾಂಘಿಕ ತೀರ್ಮಾನಕ್ಕೆ ಬೀದಿವ್ಯಾಪಾರಿಗಳು ಬದ್ದರಾಗಬೇಕಾಗುತ್ತದೆ.

ಬೀದಿ ವ್ಯಾಪಾರದ ಯೋಜನೆ: ಪ್ರತಿಯೊಂದು ಸ್ಥಳೀಯ ಪ್ರಾಧಿಕಾರವೂ ಪ್ರತಿ ಐದು ವರ್ಷಗಳಿಗೊಮ್ಮೆ ಯೋಜನಾ ಪ್ರಾಧಿಕಾರದೊಡನೆ ಸಮಾಲೋಚನೆ ಮತ್ತು ಪಟ್ಟಣ ವ್ಯಾಪಾರ ಸಮಿತಿಯ ಶಿಫಾರಸ್ಸಿನ ಮೇಲೆ ಒಂದನೇ ಪರಿಶಿಷ್ಟದಲ್ಲಿ ಒಳಗೊಂಡಿರುವ ವಿಷಯಗಳನ್ನು ಒಳಗೂಡಿಸಿಕೊಂಡಂತೆ ಬೀದಿ ವ್ಯಾಪಾರ ವೃತ್ತಿಯನ್ನು ಪೆÇ್ರೀತ್ಸಾಹಿಸಲು ಒಂದು ಯೋಜನೆಯನ್ನು ಸಿದ್ಧಪಡಿಸತಕ್ಕದ್ದು.ಸ್ಥಳೀಯ ಪ್ರಾಧಿಕಾರವು ಸಿದ್ಧಪಡಿಸಿದ ಬೀದಿ ವ್ಯಾಪಾರದ ಯೋಜನೆಯನ್ನು ರಾಜ್ಯ ಸರ್ಕಾರದ ಅನುಮೋದನೆಗಾಗಿ ಸಲ್ಲಿಸತಕ್ಕದ್ದು ಮತ್ತು ಈ ಯೋಜನೆಯ ಅಧಿಸೂಚನೆಗೂ ಮುನ್ನ ಬೀದಿ ವ್ಯಾಪಾರಿಗಳಿಗೆ ಅನ್ವಯವಾಗುವ ಮಾನಕಗಳನ್ನು ನಿರ್ಧರಿಸತಕ್ಕದ್ದು. ಇದೇ ಈ ಕಾಯ್ದೆಯ ಪ್ರಮುಖ ಭಾಗ ಇದರ ಮೇಲೇಯೇ ಬೀದಿವ್ಯಾಪಾರಿಗಳ ಭವಿಷ್ಯರೂಪಿಸುವ ಕ್ರಮಗಳನ್ನು ಇಲ್ಲಿಯೇ ನಿರ್ದರಿಸಬೇಕು. ಬೀದಿವ್ಯಾಪಾರಿಗಳ ಪ್ರತಿನಿಧಿಗಳು ಈ ಬಗ್ಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ. ಬೀದಿವ್ಯಾಪಾರಿಗಳ ಮೇಲೆ ನಡೆಯುವ ಕಿರುಕುಳವನ್ನು ತಡೆಯಲು ಈ ಅಧಿನಿಯಮದ ಪ್ರಕಾರ ಸದ್ಯ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಇದ್ದಾಗ್ಯೂ ವ್ಯಾಪಾರದ ಪ್ರಮಾಣ ಪತ್ರಿಕೆಯಲ್ಲಿನ ನಿಬಂಧನೆಗಳು ಮತ್ತು ಷರತ್ತುಗಳಿಗನುಸಾರವಾಗಿ ಬೀದಿ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತಿರುವ ಯಾವ ಬೀದಿ ವ್ಯಾಪಾರಿಗೂ ಯಾವುದೇ ವ್ಯಕ್ತಿ ಅಥವಾ ಸರ್ಕಾರದ ಅಧಿಕಾರಿಗಳು ತನ್ನ ಹಕ್ಕುಗಳನ್ನು ಚಲಾಯಿಸಲು ತಡೆಯೊಡ್ಡತಕ್ಕದ್ದಲ್ಲ.

ವಿವಾದ ಪರಿಹಾರ ವ್ಯವಸ್ಥೆ: ಬೀದಿ ವ್ಯಾಪಾರಿಗಳ ಕಂದುಕೊರತೆಗಳ ನಿವಾರಣೆ ಮತ್ತು ವಿವಾದಗಳಪರಿಹಾರಕ್ಕೆ ಸ್ವೀಕೃತವಾದ ಅರ್ಜಿಗಳನ್ನು ಇತ್ಯರ್ಥಪಡಿಸುವ ಉದ್ದೇಶಕ್ಕಾಗಿ  ರಾಜ್ಯ ಸರ್ಕಾರವು ಸಿವಿಲ್ ಜಡ್ಜ್ ಅಥವಾ ಒಬ್ಬ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿರುವವರನ್ನು ಅಧ್ಯಕ್ಷರಾಗಿರುತ್ತಾರೆ. ಅನುಭವವನ್ನು ಹೊಂದಿರುವಂತಹ ನಗರ ಸ್ಥಳೀಯ ಸರ್ಕಾರದ ಆಡಳಿತದಲ್ಲಿ ಇಬ್ಬರು ವೃತ್ತಿಪರರು ಸಮಿತಿಯ ಸದಸ್ಯರಾಗಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಬೀದಿವ್ಯಾಪಾರಿಗಳ ಒಕ್ಕಲೆಬ್ಬಿಸುವಲ್ಲಿ ಸಮಸ್ಯ್ಯೆಗಳನ್ನು ಸೃಷ್ಟಿಸಿಕೊಂಡ ಆ ಸ್ಥಳೀಯ ಪ್ರಾಧಿಕಾರದ ಯಾವ ನೌಕರನನ್ನೂ ಈ ವಿಚಾರಣೆಯ ಸಮಿತಿಯ ಸದಸ್ಯರನ್ನಾಗಿ ನೇಮಕಮಾಡಲು ಅವಕಾಶವಿರುವುದಿಲ್ಲಾ.

ಬೀದಿ ವ್ಯಾಪಾರಿಗಳಿಗೆ ಕಾರ್ಯ ಯೋಜನೆ: ಸಮೀಕ್ಷೆಯಲ್ಲಿ ಗುರುತಿಸಲಾದ ಹಾಲಿ ಎಲ್ಲಾ ಬೀದಿ ವ್ಯಾಪಾರಿಗಳಿಗೂ ಸಂದರ್ಭಾನುಸಾರ ಪಟ್ಟಣದ ಜನಸಂಖ್ಯೆಯನ್ನು ಆದರಿಸಿ ನಿಬಂಧನೆಗೊಳಪಟ್ಟಂತೆ ಬೀದಿ ವ್ಯಾಪಾರದ ಯೋಜನೆಯಲ್ಲಿ ಸ್ಥಳಾವಕಾಶ ಕಲ್ಪಿಸುವುದನ್ನು ಸ್ಪಷ್ಟಪಡಿಸಬೇಕು. ಪುmಪಾತ್‍ನಲ್ಲ್ಲಿ ನಡೆದಾಡುವವರಿಗೆ  ಯಾವುದೇ ಅಡತಡೆಯಿಲ್ಲದೆ ಓಡಾಡುವಂತೆ ಮತ್ತು ರಸ್ತೆಯನ್ನು ಮುಕ್ತವಾಗಿ ಬಳಕೆ ಮಾಡಲು ಇರುವ ಅವಕಾಶಗಳನ್ನು ಸ್ಪಷ್ಟಪಡಿಸಬೇಕು. ಬೀದಿ ವ್ಯಾಪಾರಕ್ಕೆ ಒದಸಲಾಗಿರುವ ಪ್ರದೇಶವು ರೂಢಿಗತ  ಮಾರುಕಟ್ಟೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ವ್ಯಾಪಾರ ವಲಯಗಳೆಂದು ಗುರುತಿಸಲಾದ ಪ್ರದೇಶಗಳನ್ನು ಸೂಕ್ತವಾಗಿ ಬಳಕೆ ಮಾಡಲು ಅನುವಾಗುವಂತೆ ಬೇಕಾದ ಮೂಲಸೌಕರ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.ಸರಕುಗಳ ವಿತರಣೆ ಮತ್ತು ಸೇವೆಗಳ ನೀಡಲು ಅನುಕೂಲಕರವಾಗಿ ದಕ್ಷವಾಗಿ ಮತ್ತು ಯೋಗ್ಯ ಬೆಲೆಗೆ ಸಿಗುವಂತೆ ಉತ್ತೇಜಿಸತಕ್ಕದ್ದು. ಬೀದಿ ವ್ಯಾಪಾರದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕಾರ್ಯ ಯೋಜನೆಯಲ್ಲಿ ಕಲ್ಪಿಸಲು ಇರುವ ಅವಕಾಶಗಳೆಂದರೆ, ಬೀದಿ ವ್ಯಾಪಾರದ ಪ್ರದೇಶ ಯೋಜನೆಯ ಮಾನದಂಡಗಳ ನಿರ್ಧರಿಸುವುದು. ವ್ಯಾಪಾರ ವಲಯಗಳಿಗೆ ಸ್ಥಳ ಅಥವಾ ಪ್ರದೇಶದ ಗೊತ್ತುಪಡಿಸುವುದು. ವ್ಯಾಪಾರ ವಲಯಗಳನ್ನು ನಿರ್ಬಂಧ ಮುಕ್ತ ವ್ಯಾಪಾರ ವಲಯಗಳು, ನಿರ್ಬಂಧಿತ ವ್ಯಾಪಾರ ವಲಯಗಳು ಮತ್ತು ವ್ಯಾಪಾರ ರಹಿತ ವಲಯಗಳೆಂದು ನಿರ್ಧರಿಸುವುದು. ಗೊತ್ತುಪಡಿಸಿದ ವ್ಯಾಪಾರ ವಲಯಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಮಾಸ್ಟರ್‍ಪ್ಲಾನ್, ಅಭಿವೃದ್ಧಿ ಯೋಜನೆ, ವಲಯ ಯೋಜನೆ, ಬಡಾವಣೆಯೋಜನೆ ಮತ್ತು ಇತರ ಯಾವುದೇ ಯೋಜನೆಯಲ್ಲಿ ಪ್ರಾಯೋಗಿಕವಾಗಿ ಅಗತ್ಯವಿರುವ ಬದಲಾವಣೆಗಳಿಗೆ ಅವಕಾಶ ಕಲ್ಪಿಸಬೇಕು. ಯೋಜನೆಗಳನ್ನು ತಯಾರಿಸುವಾಗ ಬೀದಿವ್ಯಾಪಾರಿಗಳ ಅಹವಾಲುಗಳಿಗೆ ಪೂರಕವಾಗಿರಬೇಕು ಮತ್ತು ಸದರಿ ನಿಯಮಗಳ ವ್ಯಾಪ್ತಿಯಲ್ಲಿರಬೇಕು.

ವ್ಯಾಪಾರರಹಿತ ವಲಯವೆಂದು ಘೋಷಿಸುವಾಗ ಕನಿಷ್ಠ ಬೀದಿವ್ಯಾಪಾರಿಗಳು ಸ್ಥಳ ಜನಂದಣಿಯ ಕಾರಣ ಯಾವುದೇ ಸ್ಥಳವನ್ನು ವ್ಯಾಪಾರ ರಹಿತ ವಲಯವೆಂದು ಘೋಷಿಸುವುದಕ್ಕೆ ಆಧಾರವಾಗಿರದೆ, ಸಮೀಕ್ಷೆಯಲ್ಲಿ ಬೀದಿ ವ್ಯಾಪಾರಿಗಳೆಂದು ಗುರುತಿಸಿರದ ವ್ಯಕ್ತಿಗಳಿಗೆ ಅಂತಹ ಪ್ರದೇಶಗಳಲ್ಲಿ ವ್ಯಾಪಾರದ ಪ್ರಮಾಣಪತ್ರಿಕೆ ನೀಡುವಾಗ ನಿರ್ಬಂಧಗಳನ್ನು ವಿಧಿಸಬಹುದು. ನೈರ್ಮಲ್ಯದ ಸಮಸ್ಯೆಗಳಿಗೆ ಬೀದಿ ವ್ಯಾಪಾರಿಗಳೇ ಕಾರಣ ಮತ್ತು ಅವುಗಳನ್ನು ಸ್ಥಳೀಯ ಪ್ರಾಧಿಕಾರವು ಸೂಕ್ತ ಕ್ರಮಗಳ ಮೂಲಕ ಪರಿಹರಿಸಲು ಸಾಧ್ಯವಿಲ್ಲವೆಂದು ಮನದಟ್ಟಾದ ಹೊರತು ಯಾವುದೇ ಪ್ರದೇಶವನ್ನು ವ್ಯಾಪಾರ ರಹಿತ ಪ್ರದೇಶವೆಂದು ಘೋಷಿಸಲು ನೈರ್ಮಲ್ಯದ ಸಮಸ್ಯೆಗಳು ಆಧಾರವಾಗಿರಬಾರದು. ಸಮೀಕ್ಷೆಯನ್ನು ನಡೆಸದಿರುವವರೆಗೆ ಮತ್ತು ಬೀದಿ ವ್ಯಾಪಾರದ ಯೋಜನೆಯನ್ನು ರೂಪಿಸದಿರುವವರೆಗೆ ಯಾವುದೇ ವಲಯವನ್ನು ವ್ಯಾಪಾರರಹಿತ ವಲಯವೆಂದು ಘೋಷಿಸತಕ್ಕದ್ದಲ್ಲ.

ಈ ಕಾಯ್ದೆಯು ನಗರದ ಬೀದಿವ್ಯಾಪರಿಗಳಿಗೆ ಬದುಕುವ ಹಕ್ಕನ್ನು ನೀಡಿದೆ. ಶಾಸನಬದ್ದ ಪಟ್ಟಣವ್ಯಾಪಾರ ಸಮಿತಿಯ ಮುಂದೆ ಅನೇಕ ಸÀವಾಲುಗಳಿವೆ, ರಾಜ್ಯ ಸರ್ಕಾರವು ಸ್ಪಂದಿಸಬೇಕು. ಕೇವಲ ನಿಯಮಗಳಿಂದಲೇ ಬೀದಿವ್ಯಾಪಾರಿಗಳ ಬದುಕನ್ನು ಬದಲಾಯಿಸಲು ಸಾದ್ಯವಿಲ್ಲಾ,ಪೂರಕವಾಗಿರುವ ಹೊಸಹೊಸ ಸಾಮಾಜಿಕ ಆರ್ಥಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಗರ ಸ್ಥಳೀಯ ಸರ್ಕಾರಗಳು ರಾಜ್ಯ ಸರ್ಕಾರದ ನಿರ್ದೇಶನವನ್ನು ಕಾಯದೇ ನಗರ ಸ್ಥಳೀಯ ಸರ್ಕಾರಗಳಿಗೆ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಬೇಕು ಇದಕ್ಕಾಗಿ ಸಂವಿಧಾನದ 74ನೇ ತಿದ್ದುಪಡಿಯಲ್ಲಿರುವ 12ನೇಪರಿಶ್ಚೇದದಲ್ಲಿರುವ 18ಕಾರ್ಯಕ್ರಮಗಳಲ್ಲಿ ಬಡತನ ನಿವಾರಣೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಬೀದಿವ್ಯಾಪಾರಿಗಳ ಸಹಿತಬೆಳವಣಿಗೆಗೆ ನಗರ ಸ್ಥಳೀಯ ಸರ್ಕಾರಗಳು ತನ್ನ ಆದಾಯದ ಕನಿಷ್ಟ ಪಾಲನ್ನು ಕಾಯ್ದಿರಿಸುವ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು.‘ರಸ್ತೆಗಳ ಮೇಲೆ ರಸ್ತೆ, ಚರಂಡಿಗಳೊಳÀಗೆ ಚರಂಡಿ ನಿರ್ಮಿಸುವುದನ್ನು ಕಡಿಮೆಮಾಡಿ’ ನಗರ ಬಡತನ ನಿವಾರಣೆಯಲ್ಲಿ ಬೀದಿವ್ಯಾಪಾರಿಗಳ ಬೆಳವಣಿಗೆಗಾಗಿ ರಚನಾತ್ಮಕ ಕಾರ್ಯಕ್ರಮಗಳು ರೂಪಿಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನದ ಮೇಲೆ ಹೊಸಕಾಯ್ದೆಯ ಫಲಗಳನ್ನು ನಿರಿಕ್ಷಿಸಬಹುದು. ಅಗತ್ಯವಿರುವ ಬೀದಿವ್ಯಾಪಾರದ ಕುಟುಂಬದವರು ಇದರ ಸದುಪಯೋಗ ಪಡೆಯಲು ಮುಂದಾಗಬೇಕು. ನಗರದ ಬೀದಿವ್ಯಾಪರಿಗಳು ರೂಪಿಸಿರುವ ನಿಯಮವ್ಯಾಪ್ತಿಯಲ್ಲಿಯೇ ತಮ್ಮ ವ್ಯಾಪಾರವನ್ನು ಮುಂದುವರಿಸಿಬೇಕು, ನಮ್ಮ ನಗರಗಳು ಕೇವಲ ಆದಾಯ ಸಂಗ್ರಹಿಸುವ ಕೇಂದ್ರಗಳಾಗಿರದೇ, ಸ್ವಚ್ಚ ಭಾರತ ಕಣ್ಣಿಗೆ ಮುದನೀಡಲಿಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲರೂ ನೆಮ್ಮದಿ,ಆನಂದವನ್ನು ಅನುಭವಿಸುವ ಭವಿಷ್ಯದ ಭರವಸೆಯ ಹೆಮ್ಮೆಯ ನಗರಗಳಾಗಬೇಕು.

ಸಿ.ಅಶೋಕ. ಬೋಧಕರು

ರಾಜ್ಯ ನಗರಾಭಿವೃದ್ಧಿ ಸಂಸ್ಥೆ.

ಆಡಳಿತ ತರಬೇತಿ ಸಂಸ್ಥೆಯ ಆವರಣ. ಮೈಸೂರು

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate