অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮುಟ್ಟು ನಿಲ್ಲುವುದು ಸಹಜ ಪ್ರಕ್ರಿಯೆ

ಗ್ರೀಕ್ ಶಬ್ದಗಳಾದ ಮೆನೊ (ತಿಂಗಳು) ಮತ್ತು ಪೌಸ್ (ನಿಲ್ಲುವುದು) ಜೊತೆ ಸೇರಿ ಬಂದಿರುವ ಮೆನೊಪೌಸ್ (ತಿಂಗಳ ಮುಟ್ಟು ನಿಲ್ಲುವುದು) ಎಂಬ ಶಬ್ದದ ಅರ್ಥ ಮಾಸಿಕ ಋತುಸ್ರಾವದ ಚಕ್ರ ನಿಲ್ಲುವುದು ಎಂದು. ಒಂದು ವರ್ಷದ ಕಾಲ ಮಾಸಿಕ ಋತುಸ್ರಾವ ನಿಂತಿರುವವರಲ್ಲಿ ಋತುಚಕ್ರ ನಿಂತಿದೆ ಎಂದು ಪರಿಗಣಿಸಲಾಗುತ್ತದೆ. ಮುಟ್ಟು ನಿಲ್ಲುವುದು ಎಂದರೆ ಬದುಕಿನ ಅಂಶವೇನಿಲ್ಲ. ಅದೊಂದು ನೈಸರ್ಗಿಕ ಬದಲಾವಣೆ.

ಹೊಸ, ಆನಂದದಾ ಯಕ ಬದುಕಿಗೆ ಹಾದಿ. ಇನ್ಗಂತೂ ಆಯಸ್ಸಿನ ಅವಧಿ ಹೆಚ್ಚಿರುವುದರಿಂದ, ಹೆಂಗಸರು ತಮ್ಮ ಬದುಕಿನ ಮೂರನೆ ಒಂದು ಭಾಗವನ್ನು ಮುಟ್ಟು ನಿಂತ ಬಳಿಕವೇ ಕಳೆಯುತ್ತಾರೆ. ನೈಸರ್ಗಿಕ ಪ್ರಕ್ರಿಯೆ ಸಾಮಾನ್ಯವಾಗಿ 45ರಿಂದ 55ರ ಪ್ರಾಯ ದಲ್ಲಿ (ಭಾರತದಲ್ಲಿ ಸರಾಸರಿ 47ನೇ ಪ್ರಾಯ ಮತ್ತು ವಿದೇಶಗಳಲ್ಲಿ 51ನೇ ಪ್ರಾಯ) ಈ ಸ್ಥಿತಿ ಸಂಭವಿಸುತ್ತದೆ. ಅಂಡಾಶಯಗಳ ಚಟುವಟಿಕೆ ಕುಂದುತ್ತಾ ಬಂದು ಕ್ರಮೇಣ ನಿಲ್ಲುವುದೇ ಈ ಬದಲಾವಣೆಗೆ ಕಾರಣ. ಅವು ಈ ಹಂತದಲ್ಲಿ ಈಸ್ಟ್ರೊಜೆನ್‌ ಸ್ತ್ರೀ ಹಾರ್ಮೋನುಗಳನ್ನು ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಅಸಮರ್ಥ ವಾಗಿರುತ್ತದೆ. 45ನೇ ಪ್ರಾಯ ದಾಟಿದ ಬಳಿಕ ನಿಧಾನವಾಗಿ ಆರಂಭವಾಗುವ ಈ ಪ್ರಕ್ರಿ ಯೆಯ ಆರಂಭದಲ್ಲಿ ಒಂದೂವರೆಯಿಂದ 3 ತಿಂಗಳಿಗೊಮ್ಮೆ ಋತುಸ್ರಾವ ಸಂಭವಿಸುತ್ತದೆ.ಋತುಸ್ರಾವದ ಅವಧಿಯಲ್ಲಿ ರಕ್ತಸ್ರಾವ ನಿಧಾನವಾಗಿ ಕಡಿಮೆಯಾಗುತ್ತಾ ಬಂದು, ಕೊನೆಗೊಮ್ಮೆ ನಿಂತುಬಿಡುತ್ತದೆ. ಬದಲಾವಣೆಯ ಅವಧಿಯನ್ನು ಮುಟ್ಟು ನಿಲ್ಲುವ ಪೂರ್ವ ಸ್ಥಿತಿ ಎನ್ನುತ್ತಾರೆ. ಈ ಅವಧಿ 2ರಿಂದ 7ವರ್ಷಗಳ ತನಕ ಕಾಣಬಹುದು. ಹಲವರಲ್ಲಿ ಇದು ಹೆಚ್ಚಿನ ಸೂಚನೆಗಳಿಲ್ಲದೇ ದಾಟಿ ಹೋಗುವುದಾದರೆ,

ಕೆಲವರಲ್ಲಿ ಇದು ಹಲ ವಾರು ತೊಂದರೆಯ ಲಕ್ಷಣಗಳಿಗೆ ಕಾರಣವಾಗಬಹುದು. ಶಸ್ತ್ರಕ್ರಿಯೆಯ ಕಾರಣದಿಂದ ಗರ್ಭಾಶಯ ತೆಗೆಯುವ ಹಿಸ್ಟರೆಕ್ಟಮಿ ಶಸ್ತ್ರಕ್ರಿಯೆ ಆಗಿರುವವರಲ್ಲಿ ಅಂಡಾಶಯಗಳೆರಡನ್ನೂ ತೆಗೆದುಬಿಡುವುದರಿಂದ, ದೇಹ ದಲ್ಲಿ ಈಸ್ತ್ರೊಜೆನ್ ಪ್ರಮಾಣ ಹಠಾತ್ ಕಡಿಮೆ ಯಾಗಿ, ಮುಟ್ಟು ನಿಂತ ಲಕ್ಷಣಗಳು ಬಹಿರಂಗವಾಗಿ ಕಾಣಸಿಗುವ ಸಾಧ್ಯತೆಗಳು ಹೆಚ್ಚು.ಪರಿಣಾಮಗಳು ಮುಟ್ಟು ನಿಂತು, ಈಸ್ತ್ರೊಜೆನ್ ಪ್ರಮಾಣ ಕಡಿಮೆಯಾಗುವುದರಿಂದ ಕಾಣಸಿಗುವ ತೊಂದರೆಗಳು ದೀರ್ಘ‌ಕಾಲಿಕವೇ ಹೊರತು ಹಠಾ¢é ಅಲ್ಲ. ಆದರೆ ಗಮನಕ್ಕೆ ಬರುವುದು ಹಠಾತ್ ತೊಂದರೆಗಳು ಮಾತ್ರ. ಅಂತಹ ಕೆಲವು ತೊಂದರೆಗಳು ಇಲ್ಲಿವೆ.ದೇಹದ ಉಷ್ಣತೆ ಹಠಾತ್ ಏರುವುದು (ಹಾಟ್‌ ಫ್ಲಾಷಸ್‌) ನೈಸರ್ಗಿಕವಾಗಿ ಮುಟ್ಟು ನಿಲ್ಲುತ್ತಿರುವ ನೂರಕ್ಕೆ 50 ಮಹಿಳೆಯರಲ್ಲಿ ಈ ಸ್ಥಿತಿ ಕಂಡುಬರುತ್ತದೆ. ತಲೆ ಮತ್ತು ಕುತ್ತಿಗೆಯ ಭಾಗದಲ್ಲಿ ದೇಹದ ಉಷ್ಣತೆ ಹಠಾತ್ ಏರುವುದು ಈ ತೊಂದರೆಯ ಲಕ್ಷಣ. ಬೆವರು, ಎದೆಬಡಿತ ಹೆಚ್ಚುವುದು,

ಉದ್ವಿಗ್ನತೆ ಮತ್ತು ಕೆಲವೊಮ್ಮೆ ನಡುಕದ ಜೊತೆ ಕಾಣಿಸಿಕೊಳ್ಳುವ ಈ ಸ್ಥಿತಿ ಒಂದರಿಂದ ಮೂರು ನಿಮಿಷಗಳ ಕಾಲ ದಿನಕ್ಕೆ ಐದರಿಂದ 10 ಬಾರಿ ತಲೆದೊರಬಹುದು. ಕಾಫಿ ಸೇವನೆ, ಮದ್ಯ, ಖಡಕ್ ಆಹಾರ ಸೇವನೆ, ಸೆಖೆಯ ವಾತಾವರಣ ಅಥವಾ ಭಾವನಾತ್ಮಕ ಉದ್ವಿಗ್ನತೆಗಳ ಸ್ಥಿತಿಯಲ್ಲಿ ಈ ಲಕ್ಷಣ ಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ರಾತ್ರಿ ಯಲ್ಲಿ ಈ ಸ್ಥಿತಿ ಕಾಣಿಸಿಕೊಂಡಾಗ ಹಠಾತ್ ಬೆವರುವಿಕೆ ಕಂಡುಬರುತ್ತದೆ. ಯಾವುದೇ ಚಿಕಿತ್ಸೆ ಅಗತ್ಯವಿಲ್ಲದ ಈ ಲಕ್ಷಣಗಳು 3ರಿಂದ 5ವರ್ಷಗಳಲ್ಲಿ ತನ್ನಿಂತಾನೆ ಮಾಯವಾಗುತ್ತದೆ. ಈ ಸ್ಥಿತಿಗೆ ಮೆದುಳಿನಲ್ಲಾಗುವ ಹಾರ್ಮೋನು ಸಂಬಂಧ ಬದಲಾವಣೆಗಳು ಕಾರಣ ಎಂದು ಅಂದಾಜಿಸಲಾಗಿದೆ. ಈಸ್ತ್ರೊಜೆನ್ ಮರುಪೂರಣ ಚಿಕಿತ್ಸೆಯ ಮೂಲಕ ಈ ತೊಂದರೆಯನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ಮಾತ್ರೆಯ ರೂಪದಲ್ಲಿ ಈಸ್ತ್ರೊಜೆನ್ನ್ನು ದಿನಕ್ಕೊಮ್ಮೆ ಸೇವಿಸಬಹುದು. ನಮ್ಮದೇಶದಲ್ಲಿ ಚರ್ಮಕ್ಕೆ ಹಚ್ಚುವ ತೇಪೆ ಪಟ್ಟಿ ಮಾದರಿ ಅಷ್ಟು ಬಳಕೆ ಯಲ್ಲಿಲ್ಲ. ಈಸ್ತ್ರೊಜೆನ್ ಬಳಕೆ ಸಾಧ್ಯವಾಗದ ವರಲ್ಲಿ ಪ್ರೋಜೆಸ್ತಿನ ಹಾರ್ಮೋನು (ಮೆಡ್ರಾಕ್ಸಿ ಪ್ರೋಜೆಸ್ತೆರೋನ್ ಅಸೆಟೇಟ್‌ ಅಥವಾ ಕ್ಲೋನಿದೈನೆ ನೀಡಲಾಗುತ್ತದೆ.

ಇದಲ್ಲದೆ ಕೋಣೆಯನ್ನು ತಂಪಾಗಿರಿಸುವುದು, ತೆಳುವಾದ ಬಟ್ಟೆಗಳನ್ನು ಧರಿಸುವುದು, ಆಗಾಗ ತಂಪು ಪಾನೀಯಗಳನ್ನು ಕುಡಿಯುವುದು, ಯೋಗ ಮತ್ತು ಆಳ ಉಸಿರಾಟದ ವ್ಯಾಯಾಮಗಳು ಈ ತೊಂದರೆಯ ನಿಯಂತ್ರಣದಲ್ಲಿ ಸಹಕಾರಿ.ಮಾನಸಿಕ ಲಕ್ಷಣಗಳು ಈ ಸ್ಥಿತಿ ತಲುಪಿರುವ ಮಹಿಳೆಯರು ಉದ್ವಿಗ್ನತೆ, ಕಿರಿಕಿರಿ, ನರ್ವಸ್ ಸ್ಥಿತಿ, ಮರೆಗುಳಿತನ, ನಿದ್ದೆ ಇಲ್ಲದಿರುವಿಕೆ, ಖಿನ್ನತೆಯಂತಹ ಸ್ಥಿತಿ ಗಳನ್ನು ಅನುಭವಿಸಬಹುದು. ಈ ಬದಲಾವಣೆಗಳಿಗೆ ಹಾರ್ಮೋನು ಸಂಬಂಧಿ ಬದಲಾವಣೆಗಳಿಗಿಂತ ಹೆಚ್ಚಾಗಿ ಕೌಟುಂಬಿಕ ಬದಲಾವಣೆಗಳು, ಮಕ್ಕಳ ಜೊತೆ ಸಂಬಂಧಗಳಲ್ಲಾಗುವ ಏರುಪೇರುಗಳೇ ಹೆಚ್ಚು ಕಾರಣವಾಗುತ್ತದೆ.ಲೈಂಗಿಕ ಲಕ್ಷಣಗಳು ಅತಿ ಲೈಂಗಿಕತೆ ಅಥವಾ ಲೈಂಗಿಕ ಆಸಕ್ತಿ ಕುಂದುವಿಕೆ ಕೆಲವರಲ್ಲಿ ಕಂಡುಬರಬಹುದು. ಯೋನಿ ಒದ್ದೆಯಾಗುವಿಕೆಯ ಪ್ರಮಾಣ ಕುಂದುವುದರಿಂದ, ಲೈಂಗಿಕ ಸಂಭೋಗ ನೋವು ತರಬಹುದು. ಇದಲ್ಲದೆ ಯೋನಿಯ ಗೋಡೆ ತೆಳ್ಳಗಾಗಿರುತ್ತದೆ. ಈ ಸ್ಥಿತಿಯನ್ನು ಈಸ್ತ್ರೊಜೆನ್ ತೆರಪಿಯ ಮೂಲಕ ಸುಲಭ ವಾಗಿ ನಿವಾರಿಸಬಹುದು. ಯೋನಿ ಒಣಕ ಲಾಗಿರುವ ಸ್ಥಿತಿಯನ್ನು ಹೋಗಲಾಡಿಸಲು ಇಂದು ಕೃತಕ ಲ್ಯುಬ್ರಿಕೆಂಟ್ಗಳು ಲಭ್ಯವಿವೆ.

ದೀರ್ಘ‌ಕಾಲಿಕ ತೊಂದರೆಗಳು 1. ಹೃದಯದ ರಕ್ತನಾಳ ವ್ಯವಸ್ಥೆ: ನೈಸರ್ಗಿಕ ಈಸ್ತ್ರೊಜೆನ್ ಸ್ತ್ರೀಯರನ್ನು ಹೃದಯ ರೋಗಗಳಿಂದ ರಕ್ಷಿಸುತ್ತದೆ. ಮುಟ್ಟು ನಿಲ್ಲುವ ಮೊದಲಿನ ಸ್ಥಿತಿಯಲ್ಲಿ ಸ್ತ್ರೀಯರಿಗೆ ಹೃದಯಾಘಾತದ ಸಾಧ್ಯತೆ ಪುರುಷರಿಗಿಂತ ಮೂರು ಪಾಲು ಕಡಿಮೆ. ಮುಟ್ಟು ನಿಂತ ಬಳಿಕ ಹೆಚ್ಚುವ ಈ ಸಂಭಾವ್ಯ ಅಪಾಯದ ಸಾಧ್ಯತೆಯನ್ನು ಈಸ್ತ್ರೊಜೆನ್ ಮರುಪೂರಣ ಚಿಕಿತ್ಸೆ ಯ ಮೂಲಕ ನಿವಾರಿಸಬಹುದು.ಮೂಳೆ ಹಂದರ ಮಟ್ಟು ನಿಂತ ಬಳಿಕ ಮೂಳೆಗಳ ಸಾಂಧ್ರತೆ ಕಡಿಮೆಯಾಗುವ ಆಸ್ಟಿಯೋಪೋರೋಸಿಸ್ ತೊಂದರೆ ಕಾಣಿಸಿಕೊಳ್ಳ·ಹುದು.ಕೇಂದ್ರ ನರಮಂಡಲ ಮುಟ್ಟು ನಿಲ್ಲುವ ಅವಧಿಯ ಆರಂಭದ ಹಂತದಲ್ಲಿರುವವರಿಗೆ ಗಮನ ಕೇಂದ್ರೀಕರಿ ಸಲು ಕಷ್ಟವಾಗುವುದು, ನೆನಪಿಲ್ಲದಿರುವುದೇ ಮತ್ತಿತರ ತೊಂದರೆಗಳು ಕಾಡಬಹುದು.

ಈಸ್ತ್ರೊಜೆನ್ ಕೊರತೆಯಿಂದ ಅಲ್ಜ್ಹೀಮರ್ಸ್ ರೋಗ ಅಥವಾ ವೃದಾಪ್ಯಪೂರ್ವ ಮರೆಗುಳಿಗನದ ತೊಂದರೆಗಳೂ ತಲೆದೋರಬಹುದು.ಪ್ರಜನನ, ಮೂತ್ರಾಂಗ ವ್ಯವಸ್ಥೆ ಯೋನಿಯಲ್ಲಿ ಒಣಕಲುತನ, ಸಂಭೋಗದ ವೇಳೆ ನೋವು ಮತ್ತು ಪದೇಪದೇ ಯೋನಿಯ ಸೋಂಕುಗಳು ಕಾಣಿಸಿಕೊಳ್ಳುವ ಲಕ್ಷಣಗಳಿರುವವರಲ್ಲಿ, ಆ ಭಾಗಕ್ಕೆ ಈಸ್ತ್ರೊಜೆನ್ ಕ್ರೀಂ ಹಚ್ಚುವ ಮೂಲಕ ಚಿಕಿತ್ಸೆ ನೀಡಬಹುದು. ಮೂತ್ರಾಂಗದಲ್ಲಿ ಮೂತ್ರ ವಿಸರ್ಜನೆಗೆ ತೊಂದರೆ, ಮೂತ್ರ ವಿಸರ್ಜನೆಗೆ ತುರ್ತು, ಪೂರ್ತಿ ಮೂತ್ರವಿಸರ್ಜನೆ ಆಗದಿರುವುದು, ಮೂತ್ರಾಂಗದ ಸೋಂಕುಗಳು ಕಂಡುಬರುವುದು ಈ ತೊಂದರೆಯ ಲಕ್ಷಣಗಳು. ಕೆಲವರಲ್ಲಿ ಈಸ್ತ್ರೊಜೆನ್ ಸಾಮರ್ಥ್ಯ ಕುಂದಿರುವುದರಿಂದ, ಸ್ನಾಯುಗಳು ಮತ್ತು ಬಂಧಕ ಅಂಗಾಂಶಗಳು ಸತ್ವಹೀನವಾಗಿ, ಗರ್ಭಾಶಯ ಜಾರುವ ತೊಂದರೆ ಕೂಡ ಕಂಡುಬರಬಹುದು.

ಚರ್ಮ ಚರ್ಮವು ತೆಳ್ಳಗಾಗಿ ನೆರಿಗೆ ಕಾಣಿಸಿಕೊಳ್ಳುತ್ತದೆ. ಕೂದಲುದುರುವಿಕೆ, ಉಗುರುಗಳು ಪೆಡಸಾಗಿ ಒಡೆಯುವ ತೊಂದರೆ ಕೂಡ ಕಂಡುಬರಬಹುದು.ಹಾರ್ಮೋನು ಮರುಪೂರಣ ಚಿಕಿತ್ಸೆ ಇತ್ತೀಚೆಗಿನ ದಿನಗಳಲ್ಲಿ ಸ್ತ್ರೀಯರ ಜೀವನಾವಧಿ ಹೆಚ್ಚುತ್ತಿರುವುದರಿಂದ, ಈಸ್ತ್ರೊಜೆನ್ ಕೊರತೆಯ ದೀರ್ಘಕಾಲಿಕ ಪರಿಣಾಮಗಳು ಸ್ಪಷ್ಟವಾಗಿ ವ್ಯಕ್ತವಾಗತೊಡಗಿವೆ. ಈ ಹಿನ್ನೆಲೆಯಲ್ಲಿ ಮುಟ್ಟುನಿಲ್ಲುವುದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಕೂಡ, ಅದರ ಅಪಾಯಗಳಿಂದ ಪಾರಾಗಲು ಹಾರ್ಮೋನು ತೆರಪಿ ಸಹಕಾರಿ.

ಯಾರಿಗೆ ಈ ತೆರಪಿ?

  • ದೇಹದ ಉಷ್ಣತೆ ಹಠಾತ್ ಏರುವಿಕೆ (hot flashes) ಕಾಣಿಸಿದವರು.
  • ಯೋನಿಯ ಕುಸಿಯುವಿಕೆ (vaginal atrophy) ಇರುವವರು.
  • ಮೂತ್ರನಾಳದ ಸೋಂಕುಗಳು ಪದೇಪದೇ ಕಾಣಿಸಿಕೊಂಡವರು.
  • ಮೂಳೆಗಳ ದೌರ್ಬಲ್ಯಕ್ಕೆ ಸಿಲುಕುವ ಅಪಾಯ ವರ್ಗದಲ್ಲಿ ಬರುವವರು. (ಕೌಟುಂಬಿಕ ಹಿನ್ನೆಲೆ, ಧೂಮಪಾನ, ದೇಹ ತೂಕ ಕಡಿಮೆ, ಕ್ಷ-ಕಿರಣದ ವೇಳೆ ತೊಂದರೆ ಪತ್ತೆಆದವರು ಆದವರು)
  • ಹೃದ್ರೋಗಗಳ ಅಪಾಯ ವರ್ಗದಲ್ಲಿ ·ರುವವರು (ರಕ್ತದೊತ್ತಡ, ಮಧುಮೇಹ, ಧೂಮಪಾನ, ಕೌಟುಂಬಿಕ ಹಿನ್ನೆಲೆ, ಈ ಹಿಂದೆ ಹೃದಯಾಘಾತ ಅಥವಾ ಆಂಜಿನಾ ಕಾಣಿಸಿಕೊಂಡಿರುವವರು).
  • ಅಂಡಾಶಯ ಅವಧಿಪೂರ್ವ ವೈಫಲ್ಯಕ್ಕೆ ತುತ್ತಾಗಿರುವವರು‌.

ಈ ಚಿಕಿತ್ಸೆಗೆ ಒಳಗಾಗಬಹುದು.ಯಾರಿಗೆ ಈ ತೆರಪಿ ಸಲ್ಲದು?

  • ಯಾವುದೇ ರೀತಿಯ ಪಿತ್ತಜನಕಾಂಗದ ತೊಂದರೆಗಳಿರುವವರಿಗೆ.
  • ಮೂತ್ರದ ಜೊತೆ ರಕ್ತಸ್ರಾವ ಇರುವವರಿಗೆ.
  • ರಕ್ತನಾಳಗಳ ಉರಿಯೂತ ಇರುವವರಿಗೆ.
  • ಪಿತ್ತಕೋಶದ ರೋಗಗಳಿರುವವರಿಗೆ.
  • ಸ್ತನ ಅಥವಾ ಗರ್ಭಕೋಶದ ಕ್ಯಾನ್ಸರ್ನ ಚರಿತ್ರೆ ಹೊಂದಿರುವವರಿಗೆ.
  • . ಗರ್ಭಿಣಿಯರಿಗೆ ಈ ಚಿಕಿತ್ಸೆ ಸಲ್ಲದು.

ತೆರಪಿಯ ಲಾಭಗಳು ಹಾರ್ಮೋನು ಮರುಪೂರಣ ತೆರಪಿಯಿಂದ ಕೆಲವು ಲಾಭಗಳು ತತ್ಕ್ಷಣ ಕಂಡುಬಂದರೆ, ಇನ್ನು ಕೆಲವು ದೀರ್ಘ‌ಕಾಲಿಕ ಲಾಭಗಳು.

  • ದೇಹದ ಉಷ್ಣತೆ ಏರುಪೇರಾಗುವವರು ಹೆಚ್ಚಾಗಿ ಹಾರ್ಮೋನು ಮರುಪೂರಣ ತೆರಪಿಗೆ ಮನ ಮಾಡುತ್ತಾರೆ. ಈ ಚಿಕಿತ್ಸೆಯ ಫಲಿತಾಂಶ ಕೆಲವೇ ದಿನಗಳಲ್ಲಿ ವ್ಯಕ್ತವಾಗುತ್ತದೆ.
  • ಮೂಳೆಗಳ ದೌರ್ಬಲ್ಯ ತಡೆಯಲು ಹಾರ್ಮೋನು ಮರುಪೂರಣ ತೆರಪಿಯನ್ನು ತೊಂದರೆಯ ಲಕ್ಷಣಗಳು ಕಾಣಸಿಕ್ಕಲ್ಲಿ ಮುಟ್ಟು ನಿಲ್ಲುವ ಅವಧಿಗೆ ಮುನ್ನವೇ ಮತ್ತು ಯಾವುದೇ ಲಕ್ಷಣಗಳಿಲ್ಲದಲ್ಲಿ ಮುಟ್ಟು ನಿಂತ ತತ್ಕ್ಷಣ ಆರಂಭಿಸಬೇಕು. ಕನಿಷ್ಠ 5 ವರ್ಷಗಳ ತನಕ ಈ ಚಿಕಿತ್ಸೆ ಮುಂದುವರಿಸಬೇಕಾಗಬಹುದು. ಮೂಳೆಗಳ ಸಾಂಧ್ರತೆ ಕಾಪಾಡಿಕೊಳ್ಳುವಲ್ಲಿ, ವೃದಾಪ್ಯದ ಮೂಳೆ ಮುರಿತಗಳನ್ನು ತಡೆಯುವಲ್ಲಿ ಇದು ಸಹಕಾರಿ.
  • ಈಸ್ತ್ರೊಜೆನ್ ದೇಹದಲ್ಲಿ ಕೆಟ್ಟ ಕೊಲೆಸ್ತೋರಲ್ (LDL) ಪ್ರಮಾಣವನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ತೋರಲ್ (HDL) ಪ್ರಮಾಣವನ್ನು ಏರಿಸುವ ಮೂಲಕ ಹೃದಯಾಘಾತದ ಸಾಧ್ಯತೆಗಳನ್ನು ನೂರಕ್ಕೆ 50ರಷ್ಟು ತ‌ಡೆಯಬಲ್ಲುದು. ಆದರೆ ಗರ್ಭಾಶಯ ಸುಸ್ಥಿತಿಯಲ್ಲಿರುವ ಸ್ತ್ರೀಯರಿಗೆ ಪ್ರೋಜೆಸ್ತಿನ್ ಕೂಡ ಜೊತೆಯಾಗಿ ನೀಡಬೇಕಿರುವುದರಿಂದ (ಅದು ಗರ್ಭಾಶಯದ ಕ್ಯಾನ್ಸರ್ ತಡೆಗೆ ಸಹಕಾರಿ), ಹೃದಯಾಘಾತದ ಸಾಧ್ಯತೆಗಳು ಪೂರ್ಣವಾಗಿ ದೂರವಾಗಲಾರವು.
  • ಸ್ತ್ರೀಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕರುಳಿನ ಕ್ಯಾನ್ಸರ್ ಕೂಡ ಈ ಚಿಕಿತ್ಸೆಯಿಂದ ದೂರವಾಗಬಲ್ಲುದು.

ಹಾರ್ಮೋನು ಮರುಪೂರಣ ತೆರಪಿಯ ಅಪಾಯಗಳು

  • ಈ ಚಿಕಿತ್ಸೆಯನ್ನು ಐದು ವರ್ಷಕ್ಕಿಂತ‌ ಹೆಚ್ಚು ಕಾಲ ಬಳಸಿದಲ್ಲಿ, ಸ್ತನಗಳ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ.
  • ಗರ್ಭಾಶಯ ಸುಸ್ಥಿತಿಯಲ್ಲಿರುವವರಲ್ಲಿ, ಪ್ರೋಜೆಸ್ತಿನ್ ಬಳಸದೇ ಬರೀ ಈಸ್ತ್ರೊಜೆನ್ ಚಿಕಿತ್ಸೆ ನೀಡುತ್ತಾ ಬಂದಲ್ಲಿ, ಗರ್ಭಾಶಯದ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ಪ್ರೋಜೆಸ್ತೆರೋನ್ ಹಾರ್ಮೋನು ಋತುಸ್ರಾವದ ವೇಳೆ ಗರ್ಭಾಶಯದ ಒಳಗೋಡೆಯು ವಿಸರ್ಜನೆಯಾಗಲು ಕಾರಣ.ಅಡ್ಡ ಪರಿಣಾಮಗಳು 1. ಯೋನಿಯಲ್ಲಿ ರಕ್ತಸ್ರಾವ: ಪ್ರೋಜೆಸ್ತಿನ್ಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವ ಸ್ತ್ರೀಯರಲ್ಲಿ ನಿಯಮಿತವಾಗಿ ಋತುಸ್ರಾವ ಕಂಡುಬರುತ್ತದೆ. ಪ್ರತಿದಿನ ಅದನ್ನು ತೆಗೆದುಕೊಳ್ಳುವವರಲ್ಲಿ ತೀವ್ರ ರಕ್ತಸ್ರಾವ ಸಹಿತ ಋತುಸ್ರಾವದ ತೊಂದರೆಗಳು (amenorrhora) ಕಂಡುಬರಬಹುದು.2. ಸ್ತನಗಳು ಸೂಕ್ಷ್ಮ ಸಂವೇದಿಯಾಗುವುದು. 3. ವಾಂತಿ ಮತ್ತು ವಾಕರಿಕೆ.
  • ತಲೆನೋವು.
  • ಮೈಯಲ್ಲಿ ನೀರು ತುಂಬುವುದು (ಕೆಲವರಲ್ಲಿ) ಮತ್ತು ತೂಕ ಏರಿಕೆ.ಚಿಕಿತ್ಸೆಯ ವಿಧಗಳು ಹಾರ್ಮೋನು ಮರುಪೂರಣ ತೆರಪಿ ಚಿಕಿತ್ಸೆಯ ಜೊತೆ ಜೀವನ ಶೈಲಿ ಮತ್ತು ಆಹಾರ ಪದತಿಯಲ್ಲಿ ಕೆಲವು ಬದಲಾವಣೆಗಳು ಅಗತ್ಯ ಇರುತ್ತವೆ.
  • ಪ್ರತಿದಿನ 30ರಿಂದ 60 ನಿಮಿಷಗಳ ನಡಿಗೆಯನ್ನು ವಾರಕ್ಕೆ ಕನಿಷ್ಠ ಮೂರು ದಿನ ನಡೆಸಬೇಕು. ಇದರಿಂದ ಮೂಳೆಗಳ ಸಾಮರ್ಥ್ಯ ಹೆಚ್ಚುತ್ತದೆ. ನರ ಮತ್ತು ಚಲನೆ ಸಂಬಂಧಿ ತೊಂದರೆಗಳು ಇದರಿಂದ ಕಡಿಮೆಯಾಗುತ್ತವೆ.
  • ಯೋಗದಂತಹ ಮಾನಸಿಕ ಒತ್ತಡ ನಿವಾರಕ ವ್ಯಾಯಾಮಗಳಿಂದ ಮೈಬಿಸಿಯೇರುವ ತೀವ್ರತೆ ಕಡಿಮೆಯಾಗುತ್ತದೆ.
  • ಧೂಮಪಾನ ಮೂಳೆಗಳ ದೌರ್ಬಲ್ಯಕ್ಕೆ ಕಾರಣವಾಗಬಹುದಾದ್ದರಿಂದ, ಅದು ವರ್ಜ್ಯ.
  • ಮದ್ಯ, ಕಾಫಿ, ಕಟುವಾದ (ಖಾರ-ಹುಳಿ-ಉಪ್ಪು) ಆಹಾರ, ಬಿಸಿಲು hot flash ಗಳಿಗೆ ಕಾರಣವಾಗಬಹುದಾದ್ದರಿಂದ, ಅವುಗಳಿಂದ ದೂರ ಇರಿ. *ಕ್ಯಾಲಿÏಯಂ ಅಂಶ ಹೆಚ್ಚಿರುವ ಆಹಾರಗಳಾದ ಕೊಬ್ಬುರಹಿತ ಹಾಲು, ಡೈರಿ ಉತ್ಪನ್ನಗಳ ಸೇವನೆ, ಪ್ರತಿದಿನ 1000mg ಕ್ಯಾಲಿÏಯಂ ಮಾತ್ರೆ ಮತ್ತು ವಿಟಮಿನ್ D 400-800 IU ಮಾತ್ರೆಗಳ ಸೇವನೆಯಿಂದ ಮೂಳೆಗಳ ಸಾಮರ್ಥ್ಯ ಹೆಚ್ಚುತ್ತದೆ.
  • ಮಲಗುವ ಮುನ್ನ ಬೆಚ್ಚಗಿನ ಹಾಲು ಸೇವನೆಯಿಂದ ನಿದ್ರೆ ಬರುತ್ತದೆ, ನೋವು ನಿವಾರಣೆ, ಖಿನ್ನತೆ ನಿವಾರಣೆ ಸಾಧ್ಯ. ಈಸ್ತ್ರೊಜೆನ್ ಮರುಪೂರಣ ತೆರಪಿಗರ್ಭಾಶಯ ತೆಗೆಯಲಾಗಿರುವ ಮಹಿಳೆಯರಿಗೆ (hyster ectomy) ಕೇವಲ ಈಸ್ತ್ರೊಜೆನ್ ಚಿಕಿತ್ಸೆ ನೀಡಲಾಗುತ್ತದೆ.

ಗರ್ಭಾಶಯ ಸುಸ್ಥಿತಿಯಲ್ಲಿರುವವರಲ್ಲಿ ಪ್ರತೀ ಚಿಕಿತ್ಸಾ ಸೈಕಲಿನಲ್ಲಿ ಕನಿಷ್ಠ 12 ದಿನಗಳ ಕಾಲ ಪ್ರೋಜೆಸ್ತಿನ್ ಅಂಶವನ್ನೂ ನೀಡಲಾ ಗು¢‌¤ದೆ. ಈಸ್ತ್ರೊಜೆನ್ ಮಾತ್ರೆ, ಪ್ಯಾಚ್ಗಳು, ಜೆಲ್ ಮತ್ತು ಯೋನಿ ಕ್ರೀಂಗಳ ಮಾದರಿಯಲ್ಲಿ ಲಭ್ಯ. ಹೆಚ್ಚಾಗಿ ಮಾತ್ರೆ ಬಳಸಲಾಗುವುದಾದರೂ, ಮಾತ್ರೆ ಸೇವನೆ ಸಾಧ್ಯವಾಗದ ವರಲ್ಲಿ ಪ್ಯಾಚ್ಗಳನ್ನು ಬಳಸಲಾಗುತ್ತದೆ.ಹೊಸ ಔಸಧಿಗಳು

  • ಟಿಬೋಲಿನ (Tibolone): ಇದು ಈಸ್ತ್ರೊಜೆನ್ದೇ ಪರಿಣಾಮ ತೋರಬಲ್ಲ ಸ್ಟೀರಾಯಿ ಆಗಿದ್ದು, ಸ್ತನಗಳು ಮತ್ತು ಗರ್ಭಾಶಯಗಳ ಮೇಲೆ ದುಷ್ಪರಿಣಾಮ ಬೀರಲಾರದು. ಇದರ ಅಡ್ಡ ಪರಿಣಾಮಗಳು ಕಡಿಮೆ. ಆದರೆ ಪ್ರತಿದಿನ 2.5ಞಜ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕಾದ ಈ ಮಾತ್ರೆ ದುಬಾರಿ. ಈಸ್ತ್ರೊಜೆನ್ ಬಳಕೆ ಸಾಧ್ಯವಾಗದವರಲ್ಲಿ ಈ ಔಷಧಿ ಬಳಸಲಾಗುತ್ತದೆ
  • ಸೆಲೆಕ್ಟಿ ಈಸ್ತ್ರೊಜೆನ್ ರೀಸೆಪ್ತರ್ ಮಾಡ್ಯುಲೇಟರ್ಸ್ (SERM) ಈ ನಾನ್ ಸ್ಟಿರಾಯಿ ರಾಸಾಯನಿಕಗಳನ್ನು ಡಿಸೈನರ ಈಸ್ತ್ರೊಜೆನ್ ಎನ್ನುತ್ತಾರೆ. ಇವು ಮೂಳೆಗಳು ಮತ್ತು ಹೃದಯಗಳ ಮೇಲೆ ಈಸ್ತ್ರೊಜೆನ್ಷ್ಟೆ ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಅಡ್ಡ ಪರಿಣಾಮಗಳೂ ಕಡಿಮೆ. ಈ ಮಾತ್ರೆ ಬಹಳ ದುಬಾರಿ. ಉದಾ:ರಾಲೋಕ್ಸಿಪೆಯನ್ (aloxifene 60mg)
  • ಥೆಸ್ತೋಸ್ತಿರೋನ್(Testosterone): ಲೈಂಗಿಕ ಆಸಕ್ತಿ ಕುಸಿದಿರುವ ಮಹಿಳೆಯರಲ್ಲಿ ಈ ಮಾತ್ರೆಯನ್ನು ಅಥವಾ ಮಾಸಿಕ ಇಂಜೆಕ್ಷನನ್ನು ನೀಡಲಾಗುತ್ತದೆ.
  • ಬೈಸ್ಪಾಸ್ಪನತ್ (Bisiphosphonates): ಮೂಳೆಗಳ ಸಾಂಧ್ರತೆಯನ್ನು ಪರಿಣಾಮಕಾರಿಯಾಗಿ ನೀಡಬಲ್ಲ ಔಷಧಿಗಳಿವು. ಉದಾ: ಅಲೆನ್ದ್ರೋನತ್ (Alendronate 5-10mg/day)ತಪಾಸಣೆಗಳು ಹಾರ್ಮೋನು ಚಿಕಿತ್ಸೆ ನೀಡಲಾರಂಭಿಸುವ ಮುನ್ನ ರೋಗಿಗೆ ಬೇರಾವ ತೊಂದರೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಅಲ್ತ್ರಸೌಂಡ್, ಪ್ಯಾಪ್ಸ್ಮೆಅರ್, ಮೆಮ್ಮೊಗ್ರಫಿ, ಲಿಪಿಡ್ ಪ್ರೊಫೈಲ್ ತಪಾಸಣೆಗಳನ್ನು ಕಡ್ಡಾಯವಾಗಿ ನಡೆಸಬೇಕು ಮತ್ತು ಚಿಕಿತ್ಸೆ ಆರಂಭವಾದ ಮೇಲೆ, ರೋಗಿ ಪ್ರತೀ ವರ್ಷ ನಿಯಮಿತವಾಗಿ ಸ್ತನಗಳ ತಪಾಸಣೆಗೆ ಒಳಗಾಗುತ್ತಿರಬೇಕು

ಹಾರ್ಮೋನೇರ ಚಿಕಿತ್ಸೆಗಳು

  • ಫೈಟೊ ಈಸ್ತ್ರೊಜೆನ್ (Phyto estrogens): ಸೋಯಾಬಿನ್ನಂತಹ ಸಸ್ಯಾಹಾರಗಳು ಅಧಿಕ ಪ್ರಮಾಣದಲ್ಲಿ ಸಸ್ಯಜನ್ಯ ಈಸ್ತ್ರೊಜೆನ್ಗಳನ್ನು ಹೊಂದಿವೆ. ದ್ವಿದಳ ಧಾನ್ಯಗಳು, ಬೇಳೆಕಾಳುಗಳು, ಸೂರ್ಯಕಾಂತಿ ಬೀಜಗಳಲ್ಲಿ ಈಸ್ತ್ರೊಜೆನ್ ಅಂಶ ಇರುತ್ತದೆ. ಇದು ಪುಡಿಯ ರೂಪದಲ್ಲೂ ಮಾರುಕಟ್ಟೆಯಲ್ಲಿ ಲಭ್ಯ. ಉದಾ: ಮೆನೊಪ್ರೊ (Meno-Pro)
  • ವಿಟಮಿನ್ ಬಿ ಕಾಂಪ್ಲೆಕ್ಸ್, C, E, ಜಿಂಕé, ಮೆಗ್ನೇಷಿಯಂ, ಸೆಲೆನಿಯಂ, ಬೊರಾನ್ ಮತ್ತು ಮ್ಯಾಂಗನೀಸ್ ಅಂಶಗಳು ಮೂಳೆ ಮತ್ತು ಹೃದಯ ವನ್ನು ಸುಸ್ಥಿತಿಯಲ್ಲಿರಿ ಸ·ಲ್ಲವು. ಇವು ಮಾತ್ರೆಗಳ ರೂಪದಲ್ಲಿ ಲಭ್ಯ.
  • ಉದಾ: ಮೆನೋಪೆಅಸ್ ಅಥವಾ ಪ್ರೆಮೆನೆಸ್.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಲಾವಣ್ಯ ರೈ, ಪ್ರೊಫೆಸರ್‌ ಮತ್ತು ಮುಖ್ಯಸ್ಥರು,ಹೆರಿಗೆ ಮತ್ತು ಸ್ತ್ರೀ ರೋಗಗಳ ಚಿಕಿತ್ಸಾ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಮೂಲ : ಅರೋಗ್ಯ ವಾಣಿ

ಕೊನೆಯ ಮಾರ್ಪಾಟು : 5/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate