অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಲಕರಲ್ಲಿ ಬದಲಾವಣೆಗಳು

ಬಾಲಕರಲ್ಲಿ ಬದಲಾವಣೆಗಳು

ದೇಹದ ಗಾತ್ರ : ತೋಳುಗಳು, ಕಾಲುಗಳು, ಹಸ್ತಗಳು ಮತ್ತು ಪಾದಗಳು ದೇಹದ ಇತರ ಭಾಗಗಳಿಗಿಂತ ವೇಗವಾಗಿ ಬೆಳೆಯುತ್ತವೆ.

ದೇಹದ ಆಕಾರ : ಹದಿಹರೆಯದವರು ಎತ್ತರವಾಗಿ ಬೆಳೆಯುತ್ತಾರೆ ಮತ್ತು ಭುಜಗಳು ವಿಶಾಲವಾಗುತ್ತವೆ. ಅವರ ತೂಕದಲ್ಲಿ ಹೆಚ್ಚಳವಾಗುತ್ತದೆ. ಈ ಅವಧಿಯಲ್ಲಿ ಅನೇಕ ಬಾಲಕರಿಗೆ ಎದೆತೊಟ್ಟುಗಳ ಅಡಿಯಲ್ಲಿ ಉಬ್ಬುಂಟಾಗುತ್ತದೆ. ಇದರಿಂದ ತಮಗೆ ಸ್ತನಗಳು ಬೆಳೆಯುತ್ತಿವೆಯೇನೋ ಎಂದು ಅವರಿಗೆ ಚಿಂತೆ ಆಗುತ್ತದೆ. ಪ್ರೌಢಾವಸ್ಥೆಯಲ್ಲಿ ಮಾಂಸಖಂಡಗಳು ಬೆಳೆಯುತ್ತವೆ.

ಧ್ವನಿ : ಧ್ವನಿ ಗಡುಸಾಗುತ್ತವೆ. ಇದು ಮೊದಲು ಧ್ವನಿ ಒಡೆಯುವುದರಿಂದ ಪ್ರಾರಂಭವಾಗುತ್ತದೆ.

ಕೂದಲು : ಕಂಕುಳಲ್ಲಿ, ಕಾಲುಗಳು ಮತ್ತು ಮೂಖದ ಮೇಲೆ, ಮತ್ತು ಶಿಶ್ನದ ಮೇಲು ಭಾಗದಲ್ಲಿ ಕೂದಲು ಮೂಡಲಾರಂಭಿಸುತ್ತದೆ. ಪ್ರೌಢ ಹಂತದಲ್ಲಿ ಅಥವಾ ಅನಂತರ ಎದೆಯ ಮೇಲೂ ಕೂಎಲು ಕಾಣಿಸಿಕೊಳ್ಳಬಹುದು. ಎಲ್ಲ ಗಂಡಸರಿಗೆ ಎದೆಗೂಎಲು ಇರುತ್ತದೆ ಎಂದೇನಿಲ್ಲ.

ಚರ್ಮ : ಚರ್ಮವು ಹೆಚ್ಚು ಎಣ್ಣೆ ಎಣ್ಣೆಯಾಗುತ್ತದೆ ಮತ್ತು ಹೆಚ್ಚಾಗಿ ಬೆವರುತ್ತದೆ.

ಶಿಶ್ನ : ಶಿಶ್ನ ಮತ್ತು ವೃಷಣಗಳು ದೊಡ್ಡದಾಗುತ್ತವೆ. ಲೈಂಗಿಕ ಹಾರ್ಮೋನುಗಳ ಹೆಚ್ಚಳದಿಂದಾಗಿ ಬಾಲಕರಿಗೆ ನಿಗರುವಿಕೆ ಉಂಟಾಗುತ್ತದೆ. ಶಿಶ್ನವು ಗಡುಸಾಗಿಯೂ ಗಟ್ಟಿಯಾಗಿಯೂ ಆದಾಗ ನಿಗರುವಿಕೆಗಳು ಉಂಟಾಗುತ್ತವೆ - ಕೆಲವು ಸಲ ಯಾವ ಕಾರಣವಿಲ್ಲದೆಯೇ ಉಂಟಾಗುತ್ತವೆ. ಇದು ಸಹಜವಾದದ್ದು ಪ್ರೌಢವಯಸ್ಸಿಗೆ ಬರುತ್ತಿದ್ದಂತೆಯೇ ದೇಹವು ವೀರ್ಯಾಣುವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರ ಅರ್ಥವೇನೆಂದರೆ, ನಿಗರುವಿಕೆಯುಂಟಾದಾಗ ಹದಿಹರೆಯದವರು ಸ್ಖಲನದ ಅನುಭವವನ್ನೂ ಪಡೆಯಬಹುದು (ವೀರ್ಯಾಣುಗಳು ಮತ್ತು ಇತರ ದ್ರವಗಳಿಂದ ಕೂಡಿದ) ವಿರ್ಯವು ಶಿಶ್ನದ ಮೂಲಕ ಹೊರಹೊಮ್ಮಿದಾಗ ಇದು ಸಂಭವಿಸುತ್ತದೆ. ಇದು ನಿದ್ದೆಯಲ್ಲಿ ಕೂಡ ಸಂಭವಿಸಬಹುದು. ಇದನ್ನು "ಸ್ವಪ್ನ ಸ್ಖಲನ" ಎಂದು ಕರೆಯಲಾಗುತ್ತದೆ.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate