অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಕ್ಕಳ ಬಾಯಿಯ ಆರೋಗ್ಯ ರಕ್ಷಣೆ

ಮಕ್ಕಳ ಬಾಯಿಯ ಆರೋಗ್ಯ ರಕ್ಷಣೆ

ಜಿಂಜಿವೈಟಿಸ್‌ ಅಥವಾ ಒಸಡಿನ ಉರಿಯೂತ ಎನ್ನುವುದು ಪೆರಿಯೋಡಾಂಟಲ್‌ ಕಾಯಿಲೆಯ ಮೊದಲ ಹಂತ. ಇದು ವಿಶ್ವದಾದ್ಯಂತ ಮಕ್ಕಳು ಹಾಗೂ ಹದಿಹರೆಯದವರನ್ನು ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಒಂದೆನಿಸಿದೆ. ಪೆರಿಯೋಡಾಂಟಲ್‌ ಕಾಯಿಲೆ ಎಂಬುದು ಕೇವಲ ಹಿರಿಯರನ್ನು ಕಾಡುವ ಕಾಯಿಲೆ ಎಂಬುದು ಕೆಲವರ ಅನಿಸಿಕೆಯಾಗಿದೆ.

ಆದರೆ, ಸಾಮಾನ್ಯವಾಗಿ, ಎಲ್ಲ ಮಕ್ಕಳು ಹಾಗೂ ಹದಿಹರೆಯದವರನ್ನೂ ಒಸಡಿನ ಉರಿಯೂತ ಅಂದರೆ ಪೆರಿಯೋಡಾಂಟಲ್‌ ಕಾಯಿಲೆಯ ಮೊದಲ ಹಂತವು ಬಾ—ಸುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ. ಹಿರಿಯರಿಗೆ ಹೋಲಿಸಿದರೆ, ಮಕ್ಕಳಲ್ಲಿ ಪೆರಿಯೋಡಾಂಟಲ್‌ ಕಾಯಿಲೆಯು ತೀರಾ ಮುಂದುವರಿಯುವುದು ಬಹಳ ಅಪರೂಪ, ಆದರೆ ಇಲ್ಲವೇ ಇಲ್ಲ ಎಂದೇನೂ ಇಲ್ಲ. ಮಕ್ಕಳ ಪೆರಿಯೋಡಾಂಟಲ್‌ ಕಾಯಿಲೆ ವಿಧಗಳು ದೀರ್ಘ‌ಕಾಲಿಕ ಒಸಡಿನ ಉರಿಯೂತವು ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ. ಇದರಲ್ಲಿ ಒಸಡಿನ ಅಂಗಾಂಶಗಳು ಬಾತುಕೊಂಡು, ಕೆಂಪಗಾಗಿ, ಸುಲಭವಾಗಿ ರಕ್ತಸ್ರಾವವಾಗುತ್ತದೆ. ನಿಯಮಿತ ಕ್ರಮದಲ್ಲಿ ಬ್ರಶಿಂಗ್‌, ಫ್ಲಾಸಿಂಗ್‌ ಮಾಡಿಸಿಕೊಂಡು, ದಂತವೈದ್ಯರಿಂದ ಆರೈಕೆ ಮಾಡಿಸಿಕೊಳ್ಳುವ ಮೂಲಕ ಒಸಡಿನ ಉರಿಯೂತವನ್ನು ತಡೆಯಲು ಹಾಗೂ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಒಂದು ವೇಳೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಇದು ತೀವ್ರ ಸ್ವರೂಪದ ಪೆರಿಯೋಡಾಂಟಲ್‌ ಕಾಯಿಲೆಯಾಗಿ ಬೆಳೆಯಬಹುದು.

ಇತರ ಎಲ್ಲ ರೀತಿಯಲ್ಲೂ ಆರೋಗ್ಯವಂತ ರಾಗಿರುವ ಯುವಜನರನ್ನು ಕೂಡ ತೀಕ್ಷ್ಣ ಪೆರಿಯೋಡಾಂಟಲ್‌ ಕಾಯಿಲೆಯು ಬಾ—ಸಬಹುದು. ಹದಿಹರೆಯದವರನ್ನು ಹಾಗೂ ಕೌಮಾರ್ಯದ ಆಸುಪಾಸಿನವರನ್ನು ಈ ವಿಧದ ಪೆರಿಯೋಡಾಂಟಲ್‌ ಕಾಯಿಲೆಯು ಬಾ—ಸಿ, ಅವರ ಹಾಲುಹಲ್ಲು ಹಾಗೂ ಬಾಚಿಹಲ್ಲುಗಳಿಗೆ ಹಾನಿ ಉಂಟುಮಾಡುತ್ತದೆ. ಮಾತ್ರವಲ್ಲ, ಹಲ್ಲಿನ ಬುಡದ ಮೂಳೆಯೂ ಸಹ ಹಾನಿಗೊಂಡು, ಹಲ್ಲಿನ ಬುಡದಲ್ಲಿ ಸಣ್ಣ ಪ್ರಮಾಣದ ಕೊಳೆ ಸಂಗ್ರಹವಾಗುತ್ತದೆ. ಒಸಡಿನ ಉರಿಯೂತ ಹಾಗೂ ಬಾಯಿಯ ಎಲ್ಲÉ ಹಲ್ಲುಗಳಲ್ಲಿ ದಟ್ಟವಾಗಿ ಕೊಳೆ ಕಟ್ಟಿಕೊಳ್ಳು ವುದರಿಂದಾಗಿ, ಸಾಮಾನ್ಯ ರೂಪದ ತೀಕ್ಷ್ಣ ಪೆರಿಯೋಡಾಂಟಲ್‌ ಕಾಯಿಲೆಯು ಉಂಟಾ ಗುತ್ತದೆ. ಸಾಮಾನ್ಯವಾಗಿ ಬಾಯಿಯಲ್ಲಿ ಎಲ್ಲೆಡೆ ಕಂಡುಬರುವ ಈ ವಿಧದ ಕಾಯಿಲೆಯು, ಹದಿಹರೆಯದವರನ್ನು ಹೆಚ್ಚು ಬಾ—ಸುತ್ತದೆ. ಕ್ರಮೇಣ ಇದು, ಇಡಿಯ ಹಲ್ಲನ್ನು ಆವರಿಸಿ, ಹಲ್ಲು ಕಿತ್ತುಬರಲು ಕಾರಣವಾಗುತ್ತದೆ.

ದೈಹಿಕ ಕಾಯಿಲೆಯೊಂದಿಗೆ ಬೆಸೆದುಕೊಂಡ ಪೆರಿಯೋಡಾಂಟಲ್‌ ಕಾಯಿಲೆಯು ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ ಪೆರಿಯೋಡಾಂಟಲ್‌ ಕಾಯಿಲೆಯು ಕಾಣಿಸಿಕೊಳ್ಳುವ ಸಾಧ್ಯತೆಗೆ ಬಹಳ ಹೆಚ್ಚು ಪೂರಕವಾಗಿರುವ ಅಂಶಗಳು ಅಂದರೆ, * ಟೈಪ್‌ 1 ಡಯಾಬೆಟೆಸ್‌. *ಡೌನ್ಸ್‌ ಸಿಂಡ್ರೋಮ್‌. ಪೆರಿಯೋಡಾಂಟಲ್‌ ಕಾಯಿಲೆಯ ಲಕ್ಷಣಗಳು ನಿಮ್ಮ ಮಕ್ಕಳಲ್ಲಿರಬಹುದಾದ ಪೆರಿಯೋಡಾಂಟಲ್‌ ಕಾಯಿಲೆಯ ಮುನ್ಸೂಚನೆಯ 4 ಲಕ್ಷಣಗಳು ಹೀಗಿವೆ. ರಕ್ತಸ್ರಾವ: ಹಲ್ಲುಜ್ಜುವಾಗ, ಫ್ಲಾಸ್‌ ಮಾಡುವಾಗ ಹಾಗೂ ಇತರ ಸಂದರ್ಭಗಳಲ್ಲಿ ಒಸಡಿನಿಂದ ರಕ್ತಸ್ರಾವವಾಗುವುದು. ಊತ ಒಸಡುಗಳು ಊದಿಕೊಂಡು ದಟ್ಟ ಕೆಂಪಗಾಗುವುದು. ಒಸಡುಗಳು ಹಿಂದಕ್ಕೆ ಸರಿಯುವುದು ಒಸಡುಗಳು ಹಲ್ಲಿನ ಬುಡದಿಂದ ಹಿಂದಕ್ಕೆ ಅಥವಾ ಕೆಳಕ್ಕೆ ಜಾರಿಕೊಂಡು, ಕೆಲವು ಸಲ ಹಲ್ಲಿನ ಬೇರು ಸಹ ಹೊರಕ್ಕೆ ಚಾಚಿಕೊಳ್ಳುತ್ತದೆ.

ಬಾಯಿಯ ದುರ್ಗಂಧ ಬ್ರಷಿಂಗ್‌ ಹಾಗೂ ಫ್ಲಾಸಿಂಗ್‌ ಮಾಡಿದ ನಂತರವೂ ಬಾಯಿಯಿಂದ ನಿರಂತರ ದುರ್ಗಂಧ ಹೊರಡುತ್ತಿರುತ್ತದೆ. ಪೆರಿಯೋಡಾಂಟಲ್‌ ಕಾಯಿಲೆ ಹಾಗೂ ಕೌಟುಂಬಿಕ ಹಿನ್ನೆಲೆ ಈ ಕಾಯಿಲೆಯು ಹೆತ್ತವರಿಂದ ಮಕ್ಕಳಿಗೆ ಹಾಗೂ ಪರಸ್ಪರ ದಂಪತಿಗಳ ನಡುವೆ ಹರಡುವ ಸಾಧ್ಯತೆ ಇದೆ. ಪೆರಿಯೋಡಾಂಟಲ್‌ ಕಾಯಿಲೆಯನ್ನು ಹರಡುವ ಬ್ಯಾಕ್ಟೀರಿಯಾವು ವ್ಯಕ್ತಿಯಿಂದ ವ್ಯಕ್ತಿಗೆ ಲಾಲಾರಸದ ಮೂಲಕ ಹರಡುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ. ಅಂದರೆ, ಪೆರಿಯೋಡಾಂಟಲ್‌ ಕಾಯಿಲೆ ಇರುವ ಒಂದು ಕುಟುಂಬದಲ್ಲಿ ಪರಸ್ಪರರ ಜೊಲ್ಲಿನ ಸಂಪರ್ಕದಿಂದಾಗಿ, ಕುಟುಂಬದ ಸದಸ್ಯರಿಗೆ ಅದು ಹರಡುವ ಅಪಾಯವಿದೆ. ಪೆರಿಯೋಡಾಂಟಲ್‌ ಕಾಯಿಲೆಯು ತೀವ್ರಗೊಳ್ಳುವಲ್ಲಿ ಆನುವಂಶಿಕತೆಯೂ ಸಹ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಕಾಯಿಲೆಯಿಂದ ತೀವ್ರ ರೂಪದಲ್ಲಿ ಬಳಲುತ್ತಿರುವವರಲ್ಲಿ, ಸುಮಾರು 30%ದಷ್ಟು ಜನರಲ್ಲಿ ವಂಶಪಾರಂಪರ್ಯದ ಹಿನ್ನೆಲೆ ಇರುವುದಾಗಿ ಸಂಶೋಧನೆಗಳು ಹೇಳುತ್ತವೆ. ಹಾಗಾಗಿ, ಕುಟುಂಬದ ಒಬ್ಬ ಸದಸ್ಯರಿಗೆ ಪೆರಿಯೋಡಾಂಟಲ್‌ ಕಾಯಿಲೆ ಇದ್ದಲ್ಲಿ, ಇತರರೂ ಸಹ ಈ ಕಾಯಿಲೆಯ ಬಗ್ಗೆ ಬೇಗನೆ ದಂತತಜ್ಞರಲ್ಲಿ ತಪಾಸಣೆ ಮಾಡಿಸಿಕೊಂಡರೆ ಉತ್ತಮ. ತಾರುಣ್ಯ ಹಾಗೂ ಬಾಯಿಯ ಆರೈಕೆ ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸದೇ ಇರುವ ತರುಣರಲ್ಲಿ ಪೆರಿಯೋಡಾಂಟಲ್‌ ಕಾಯಿಲೆಯು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಬಾಲ್ಯದಿಂದ ತಾರುಣ್ಯದವರೆಗೆ ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮಕ್ಕಳು, ಆ ಮೇಲೆಯೂ ಸಹ ಬ್ರಷಿಂಗ್‌ ಹಾಗೂ ಫ್ಲಾಸಿಂಗ್‌ನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು, ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಾಗಿರುತ್ತಾರೆ. ಪ್ರೌಢ ವಯಸ್ಸಿನಲ್ಲಾಗುವ ಹಾರ್ಮೋನು ವ್ಯತ್ಯಾಸಗಳು ಹದಿಹರೆಯದವರಲ್ಲಿ ಪೆರಿಯೋಡಾಂಟಲ್‌ ಕಾಯಿಲೆ ಉಂಟಾಗುವ ಅಪಾಯವನ್ನು ತರಬಲ್ಲದು. ಈ ಹಂತದಲ್ಲಿ ಲೈಂಗಿಕ ಹಾರ್ಮೋನುಗಳಾದ ಪ್ರಾಜೆಸ್ಟರಾನ್‌ ಹಾಗೂ ಈಸ್ಟ್ರೋಜನ್‌ಗಳು ಗಮನಾರ್ಹವಾಗಿ ಹೆಚ್ಚಳವಾಗಿ, ಒಸಡಿಗೆ ಹರಿಯುವ ರಕ್ತದ ಪ್ರಮಾಣವೂ ಸಹ ಹೆಚ್ಚುತ್ತದೆ.

ಇದರಿಂದಾಗಿ ಒಸಡಿನ ಸಂವೇದನೆಯು ಹೆಚ್ಚಾಗಿ, ಆಹಾರದ ಕಣ, ಕೊಳೆ ಇತ್ಯಾದಿ ಅತಿ ಸೂಕ್ಷ್ಮವಾದ ಕಿರಿಕಿರಿಗೂ ಸಹ ಒಸಡು ಕೆರಳುತ್ತದೆ. ಮಾತ್ರವಲ್ಲ; ಊದಿಕೊಂಡು, ಕೆಂಪಗಾಗುತ್ತದೆ. ಹದಿಹರೆಯ ಮುಂದುವರಿದ ಹಾಗೆ, ಕಿರಿಕಿರಿಯ ಕಾರಣದಿಂದಾಗಿ ಉಂಟಾದ ಒಸಡಿನ ಊತ ಕಡಿಮೆಯಾಗುತ್ತದೆ. ಹಾಗಿದ್ದರೂ, ಹದಿಹರೆಯದ ಅವ—ಯಲ್ಲಿ ಬ್ರಷಿಂಗ್‌, ಫ್ಲಾಸಿಂಗ್‌ ಇತ್ಯಾದಿಗಳ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಆವಶ್ಯಕ. ಈ ಅವ—ಯಲ್ಲಿ ದಂತತಜ್ಞರ ಸಲಹೆಯನ್ನು ಪಡೆದು, ಹಲ್ಲಿನ ಸುತ್ತಲಿನ ಅಂಗಾಂಶಗಳು ಹಾಗೂ ಮೂಳೆಗಳನ್ನು ಸುರಕ್ಷಿತಗೊಳಿಸುವ ಪೆರಿಯೋಡಾಂಟಲ್‌ ಚಿಕಿತ್ಸೆಯನ್ನೂ ಸಹ ಪಡೆದುಕೊಳ್ಳಬಹುದು. ಪೋಷಕರಿಗೆ ಸಲಹೆಗಳು ಪೆರಿಯೋಡಾಂಟಲ್‌ ಚಿಕಿತ್ಸೆಯು ಯಶಸ್ವಿಯಾಗಲು, ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಮಾಡುವುದು ಬಹಳ ಆವಶ್ಯಕ. ಹಾಗಾಗಿ, ಮಕ್ಕಳು ತಮ್ಮ ಮಾಮೂಲಿ ದಂತ ಪರೀಕ್ಷೆಯ ಕ್ರಮ ದಂತೆಯೇ ಪೆರಿಯೋಡಾಂಟಲ್‌ ಪರೀಕ್ಷೆ ಯನ್ನೂ ಸಹ ಮಾಡಿಸಿಕೊಂಡರೆ ಒಳ್ಳೆಯದು. ನಿಮ್ಮ ಮಗುವಿನ ಪೆರಿಯೋಡಾಂಟಲ್‌ ಕಾಯಿಲೆಯು ಬಹಳ ಮುಂದುವರಿದ ಹಂತದಲ್ಲಿದ್ದರೆ, ಅದೊಂದು ದೈಹಿಕ ಕಾಯಿಲೆಯೂ ಆಗಿರಬಹುದು.

ಒಂದು ವೇಳೆ ಪೆರಿಯೋಡಾಂಟಲ್‌ ಕಾಯಿಲೆಯು ತೀವ್ರ ರೂಪದಲ್ಲಿದ್ದು, ಅದು ಚಿಕಿತ್ಸೆಗೆ ಬಗ್ಗದಿದ್ದರೆ, ಆಗ ಮಗುವಿನ ಇತರ ದೈಹಿಕ ಪರೀಕ್ಷೆಗಳನ್ನೂ ಸಹ ಮಾಡಿಸಬೇಕಾಗಬಹುದು. ಬಾಯಿಯ ಆರೋಗ್ಯಕ್ಕಾಗಿ ಬಳಸಲಾಗುವ ಕೆಲವು ಔಷಧಿ—ಗಳು ಬಾಯಿಯನ್ನು ಒಣದಾಗಿಸುವ ಸಾಧ್ಯತೆಯೂ ಇದೆ. ಹಾಗಾಗಿ, ನಿಮ್ಮ ಕುಟುಂಬದ ಸದಸ್ಯರು ತೆಗೆದುಕೊಳ್ಳುತ್ತಿರುವ ಔಷಧಿ—ಗಳ ಬಗ್ಗೆ ನಿಮ್ಮ ದಂತ ತಜ್ಞರಲ್ಲಿ ಕೇಳಿ ತಿಳಿಯಿರಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹಲ್ಲು ಕಡಿಯುವ ಅಭ್ಯಾಸ ಇದೆಯೇ ಎಂದು ಗಮನಿಸಿ. ಯಾಕೆಂದರೆ, ಹಲ್ಲು ಕಡಿಯುವ ಅಭ್ಯಾಸದಿಂದ ಪೆರಿಯೋಡಾಂಟಲ್‌ ಹೆಚ್ಚಾಗುತ್ತದೆ. ಮಾತ್ರವಲ್ಲ,

ಹಲ್ಲು ಸವೆಯುವ, ಹಲ್ಲಿನ ಚಕ್ಕೆ ಹೋಗುವ ಅಪಾಯವೂ ಇದೆ. ರಾತ್ರಿಯಲ್ಲಿ ಧರಿಸುವಂತಹ, ದಂತ ಕಡಿತವನ್ನು ತಡೆಯುವ ಸಾಧನಗಳ ಮೂಲಕ ವೈದ್ಯರು ಹಲ್ಲು ಕಡಿತದ ತೊಂದರೆಯನ್ನು ನಿವಾರಿಸಬಲ್ಲರು. ನಿಮ್ಮ ಮಗುವಿನಲ್ಲಿ ಬಾಯಿಯ ಆರೋಗ್ಯ ಅಭ್ಯಾಸವನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಮೂಲಕ ಪೆರಿಯೋಡಾಂಟಲ್‌ ಕಾಯಿಲೆಯನ್ನು ಗಮನಾರ್ಹವಾಗಿ ತಡೆಗಟ್ಟಬಹುದು. ನಿಮ್ಮ ಮಗುವಿನ ಬಾಯಿಯ ಆರೋಗ್ಯವನ್ನು ಬೆಳೆಸಲು ಕೆಲವು ಸಲಹೆಗಳು ಈ ರೀತಿಯಾಗಿವೆ. *ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಅಭ್ಯಾಸವನ್ನು ಆರಂಭದಿಂದಲೇ ಬೆಳೆಸಿ. ಮಗುವಿಗೆ 12ತಿಂಗಳು ತುಂಬಿದಾಗ ಅವನಿಗೆ/ಅವಳಿಗೆ ಟೂತ್‌ಪೇಸ್ಟನ್ನು ಉಪಯೋಗಿಸಿ ಹಲ್ಲನ್ನು ಬ್ರಷ್‌ ಮಾಡಿಸಿ. ಮಗುವು ಪೇಸ್ಟನ್ನು ನುಂಗುವುದನ್ನು ತಡೆಯಲು, ಆ ಪ್ರಾಯಕ್ಕೆ ಅನುಗುಣವಾದ ಬ್ರಷ್‌ನ್ನೇ ಬಳಸಿ ಹಾಗೂ ಮಗುವಿನ ಹಲ್ಲುಗಳ ನಡುವಿನ ತೆರವು ಮುಚ್ಚಿದ ನಂತರ ಫ್ಲಾಸಿಂಗ್‌ ಮಾಡಲು ಆರಂಭಿಸಿ.

  • ನೀವು ಉತ್ತಮ ಅಭ್ಯಾಸವನ್ನು ರೂಢಿಸಿಕೊಂಡು, ನಿಮ್ಮ ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮೂಲಕ ನಿಮ್ಮ ಮಗುವಿಗೆ ಒಳ್ಳೆಯ ಮಾದರಿ ಎನಿಸಬಹುದು.
  • ಬಾಯಿಯ ಆರೋಗ್ಯ ತಪಾಸಣೆ, ಸ್ವತ್ಛತೆ ಹಾಗೂ ಪೆರಿಯೋಡಾಂಟಲ್‌ ತಪಾಸಣೆಗಾಗಿ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
  • ನಿಮ್ಮ ಮಗುವಿನ ಬಾಯಿಯಲ್ಲಿ ಒಸಡಿನ ರಕ್ತಸ್ರಾವ, ಬಾತುಕೊಂಡು ಕೆಂಪಗಾಗಿರುವುದು, ಹಲ್ಲಿನ ಬೇರು ಹೊರಚಾಚಿರುವುದು, ಬಾಯಿಯ ದುರ್ಗಂಧ... ಇತ್ಯಾದಿ ಪೆರಿಯೋಡಾಂಟಲ್‌ ಕಾಯಿಲೆಯ ಲಕ್ಷಣಗಳಿವೆಯೇ ಎಂದು ಆಗಾಗ ಪರೀಕ್ಷಿಸಿ.
  • ಪ್ರಸ್ತುತ ನಿಮ್ಮ ಮಗುವಿನ ಬಾಯಿಯ ಆರೋಗ್ಯದ ಅಭ್ಯಾಸಗಳು ಅಷ್ಟೊಂದು ಉತ್ತಮವಾಗಿಲ್ಲದಿದ್ದರೆ, ಆ ಅಭ್ಯಾಸವನ್ನು ಈಗಲೇ ಬದಲಾಯಿಸಲು ಪ್ರಯತ್ನಿಸಿ. ಮಗುವು ಬೆಳೆದ ನಂತರ ಪ್ರಯತ್ನಿಸುವುದಕ್ಕಿಂತಲೂ, ಅಭ್ಯಾಸವನ್ನು ಈಗಲೇ ಬದಲಾಯಿಸುವುದು ಸುಲಭ.

ಮೂಲ : ಅರೋಗ್ಯ ವಾಣಿ

ಕೊನೆಯ ಮಾರ್ಪಾಟು : 5/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate