অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಡಿ ಎಮ್

ಡಯಾಬೆಟಿಸ್ ಮೆಲಿಟಿಸ್ ಒಂದು ಅಸಹಜತೆ ಅದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ( ಗ್ಲೂಕೋಸ್) ತುಂಬ ಹೆಚ್ಚಿರುವುದು ಏಕೆಂದರೆ ದೇಹವು ಸಾಕಷ್ಟು ಇನಸುಲಿನ್ ಅನ್ನು ಉತ್ಪಾದಿಸುವುದಿಲ್ಲ.ಇನಸುಲಿನ್ ಪ್ಯಾಮಕ್ರಿಯಾಸನಿಂದ ಬಿಡುಗಡೆಯಾಗುವ ಒಂದು ಹಾರ್ಮೋನು. ಅದು ರಕ್ತದಲ್ಲಿ ನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು.

ಡಯಾಬೆಟಿಸನಲ್ಲಿರುವ ವಿಧಗಳು

ಮಗುವಿಗೆ ಡಯಾಬೆಟಿಸ್ ಇದ್ದರೆರಕ್ತದಲ್ಲಿ ಸಕ್ಕರೆಯಮಟ್ಟ ಅತಿಹೆಚ್ಚಿರುವುದು . ಅದಕ್ಕೆ ಕಾರಣ ಪ್ಯಾಮಕ್ರಿಯಾಸ್ ಇನಸುಲಿನ್ ಅನ್ನು ಬಿಡುಗಡೆ ಮಾಡುವುದಿಲ್ಲ ( ಟೈಪ್ I ಡಯಾಬೆಟಿಸ್ ಮೊದಲು ಅದನ್ನುಬಾಲ್ಯದಲ್ಲಿ ಮೊದಲಾದ ಡಯಾಬೆಟಿಸ್ ಎನ್ನುತ್ತಿದ್ದರು).ಅಥವ ದೇಹವು ಬಿಡುಗಡೆಯಾದ ಇನಸುಲಿನ ಪ್ರಮಾಣಕ್ಕೆ ಸಂವೇದಿಯಾಗಿರುವುದಿಲ್ಲ.(ಟೈಪ್ 2 ಡಯಾಬೆಟಿಸ್) ಟೈಪ್ 1 ಡಯಾಬೆಟಿಸ್ ಬಾಲ್ಯದಲ್ಲಿ ಯವಾಗಲಾದರೂ ಬರಬಹುದು, ಶಿಶುವಿದ್ದಾಗಲೇ ಬರಬಹುದುಆದರೆ ಅದು ಸಾಧಾರಣವಾಗಿ 6ಮತ್ತು 13 ವರ್ಷಗಳಲ್ಲಿ ಬರುವುದು.ಟೈಪ್ 2 ಡಯಾಬೆಟಿಸ್ ಬರುವುದ ಹೆಚ್ಚಾಗಿ ಹದಿ ಹರೆಯದವರಲ್ಲಿ . ಇದುಸ್ಥೂಲಕಾಯದವರಲ್ಲಿ ಮತ್ತು ಅತಿ ಹೆಚ್ಚಿನ ತೂಕದ ಮಕ್ಕಳಲ್ಲಿ ಬರುವುದು.

ಯಾವ ಮಕ್ಕಳಿಗೆ ಡಯಾಬೆಟಿಸ ಟೈಪ್ ೨ ಗಂಡಾಂತರವಿದೆ

ಮಕ್ಕಳು ಮತ್ತು ಹದಿಹರೆಯದವರು ಈ ಕೆಳಗಿನೆಂತಿದ್ದರೆ ಪ್ರತಿ 2 ವರ್ಷಕೊಮ್ಮೆ 10 ನೇ ವಯಸ್ಸಿನಿಂದಲೇಹಸಿದಾಗಿನ ರಕ್ತದ ಸಕ್ಕರೆಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು ಅತಿ ಹೆಚ್ಚುತೂಕವಿರುವುದು (ತನ್ನ ವಯಸ್ಸಿನ ಮಕ್ಕಳಿಗಿಂತ 85% ಹೆಚ್ಚು ತೂಕವಿದ್ದರೆ, ತನ್ನ ವಯಸ್ಸಿನ, ಲಿಂಗದ , ಎತ್ತರದ ಮಕ್ಕಳ ಇರಬೇಕಾದುದಕ್ಕಿಂತ 120% ಹೆಚ್ಚಿದ್ದರೆ)

  • ಹತ್ತಿರದ ಸಂಬಂಧಿಗೆ ಟೈಪ್ 2ನ ಡಯಬೆಟಿಸ್ ಇದ್ದರೆ
  • ಏರಿದ ರಕ್ತದ ಒತ್ತಡ, ಹೆಚ್ಚಿದ ಲಿಪಿಡ್ ಮಟ್ಟ (ಕೊಬ್ಬು)

ಹದಿ ಹರೆಯದವರು ಮತ್ತು ಡಯಬೆಟಿಸ್

ಹದಿ ಹರೆಯದವರಿಗೆ ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನಿರ್ಧಿಷ್ಟ ಸಮಸ್ಯೆಗಳಿವೆ ಏಕೆಂದರೆ

  • ಪ್ರೌಢತೆಗೆ ಬರುವಾಗಿನ ಹಾರ್ಮೋನು ಬದಲಾವಣೆ
  • ಹದಿಹರೆಯದ ಜೀವನ ಶೈಲಿ: ಜತೆಗಾರರ ಒತ್ತಡಗಳು, ಅಧಿಕಾವಾದ ಚಟುವಟಿಕೆಗಳು, ಅನಿಯಮಿತ ಕೆಲಸದ ಅವಧಿ , ದೇಹದ ಬಗೆಗಿನ ಕಾಳಜಿ ಅಥವ ಆಹಾರ ಸೇವನೆಯ ಅನಿಯಮಿತತನ
  • ಮದ್ಯ ಮತ್ತು ಸಿಗರೇಟನೊಡನೆ ಪ್ರಯೋಗ

ಚಿಹ್ನೆಗಳು

ಲಕ್ಷಣಗಳು ಟೈಪ್ 1 ಡಯಾಬೆಟಿಸ್ನಲ್ಲ ಬೇಗನೆ ಕಣಿಸಿಕೊಳ್ಳುವವು. ಸರಿ ಸುಮಾರು 2 ರಿಂದ 3 ವಾರಗಳಲ್ಲಿ ಹೊರನೋಟಕ್ಕೆ ಗೊತ್ತಾಗುವುದು. ರಕ್ತದಲ್ಲನ ಹೆಚ್ಚಿದ ಸಕ್ಕರೆಯಮಟ್ಟವು ಮಗುವು ಪದೇ ಪದೇ ಮೂತ್ರ ವಿಸರ್ಜನೆಗೆ ಹೊಗವಂತೆ ಮಾಡುವುದು.ಅದರಿಂದ ನೀರಡಿಕೆ ಹೆಚ್ಚುವುದು.ದ್ರವಪದಾರ್ಥದ ಅಗತ್ಯಬೀಳುವುದು. ಕೆಲಮಕ್ಕಳು (ಡಿಹೈಡ್ರೇಟ್) ನಿರ್ಜಲರಾಗುವರು.ಅದರಿಂದ ಸುಸ್ತು,, ಆಲಸ್ಯ ಹೆಚ್ಚಿದ ನಾಡಿಬಡಿತ,ದೃಷ್ಟಿ ಮಸಕಾಗುವುದು.,ಮಕ್ಕಳಲ್ಲಿ ಟೈಪ್ 2 ಡಯಬೆಟಿಸ್ ನ ಚಿಹ್ನಗಳು ಟೈಪ್ 1 ಡಯಬೆಟಿಸ್ ನಷ್ಟು ತೀವ್ರವಾಗಿರುವುದಿಲ್ಲ. ಅದು ಸಾವಕಾಶವಾಗಿ ಹೆಚ್ಚುತ್ತಾ ಹೋಗುವುದು.- ವಾರಗಳು , ತೀಂಗಳುಗಳೇ ಆಗಬಹುದು. ತಾಯಿತಂದೆ ಮಗುವಿನ ಹೆಚ್ಚಿದ ನೀರಡಿಕೆ ಮತ್ತು ಮಾತ್ರವಿಸರ್ಜನೆ ಗಮನಿಸಬಹುದು. ಆದರೆ ಅವು ಅಸ್ಪಷ್ಟ ಚಿಹ್ನೆಗಳು. ಅದರಲ್ಲೂ ಟೈಪು 2 ನವರಲ್ಲಿ ಸುಸ್ತು ಕಾಣುವುದು.

ಮೂಲ:  ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate