ಸೆಳೆತವು (ಸ್ನಾಯುಗಳ ಅನಿಯಂತ್ರಿತ ತೀವ್ರ ಆಕುಂಚನ ಅಥವಾ ಸ್ನಾಯುಗಳ ಸೆಳೆತ) ಅಪಸ್ಮಾರ ದಿಂದ ಅಥವಾ ತೀವ್ರ ಅನಾರೋಗ್ಯದಿಂದ ಬರಬಹುದು. ಆಗ ಆ ವ್ಯಕ್ತಿಯು ಉಸಿರಾಟ ನಿಲ್ಲಿಸಿದರೆ ತುಂಬ ಅಪಾಯ. ಆ ಸಂದರ್ಭದಲ್ಲಿ ವೈದ್ಯರ ನೆರವು ಪಡೆಯುವುದು ಅಗತ್ಯ.
ಲಕ್ಷಣಗಳು
- ಮಾಂಸ ಖಂಡಗಳು ಬಿರುಸು ಮತ್ತು ಒರಟಾಗುವವು. ಜೊತೆಗೆ ಅಲುಗಾಡುವ ಚಲನೆ ಇರುವುದು
- ರೋಗಿಯು ನಾಲಿಗೆ ಕಡಿದುಕೊಳ್ಳಬಹುದು. ಇಲ್ಲವೆ ಉಸಿರಾಟ ನಿಲ್ಲಬಹುದು.
- ಮುಖ ಮತ್ತು ತುಟಿ ನೀಲಿಯಾಗುವುದು
- ಹೆಚ್ಚು ಜೊಲ್ಲು ಸುರಿಸಬಹುದು. ಬಾಯಲ್ಲಿ ನೊರೆ
ಕಾರ್ಯನಿರ್ವಹಿಸಲು ಸೂಚನೆಗಳು
- ಅವನ ಸುತ್ತಲಿರುವ ಎಲ್ಲವಸ್ತುಗಳನ್ನು ತೆರವುಮಾಡಿ. ತಲೆಯ ಕೆಳಗೆ ಮೃದುವಾದದ್ದನ್ನು ಇಡಿ
- ರೋಗಿಯ ಬಾಯಲ್ಲಿ ಅಥವಾ ಹಲ್ಲಿನ ನಡುವೆ ಏನನ್ನೂ ಇಡಬೇಡಿ
- ಅವನಿಗೆ ಯಾವದೇ ದ್ರವ ನೀಡಬೇಡಿ
- ಅವನು ಉಸಿರಾಟವನ್ನು ನಿಲ್ಲಿಸಿದ್ದರೆ, ಶ್ವಾಸ ನಾಳವು ತೆರೆದುಕೊಂಡಿದೆಯೋ ಎಂಬುದನ್ನು ಗಮನಿಸಿ. ಇಲ್ಲವಾದರೆ ರಕ್ಷಣಾ ಕ್ರಮ ತೆಗೆದುಕೊಳ್ಳಿ
- ಸಮಾಧಾನವಾಗಿರಿ ಹಾಗು ಸಹಾಯ ಬರುವವರೆಗೆ ರೋಗಿಯನ್ನು ಆರಾಮಾಗಿರುವಂತೆ ನೋಡಿಕೊಳ್ಳಿ
- ಬಹುಪಾಲು ಸೆಳೆತಗಳ ನಂತರ ತುಸು ಸಮಯದವರೆಗೆ ಪ್ರಜ್ಞೆ ಇರುವುದಿಲ್ಲ. ಪುನಃ ಇನ್ನೊಂದು ಸೆಳೆತ ಬರಬಹುದು . ಆದಷ್ಟು ಬೇಗ ರೋಗಿಯನ್ನು ವೈದ್ಯರ ಬಳಿ ಕರದುಕೊಂಡು ಹೋಗಿ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/5/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.