ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ಎ ಪಿ ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆಯನ್ನು ನೀಡಲು ರಾಜೀವ್ ಆರೋಗ್ಯ ಭಾಗ್ಯ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯು ಒಳಗೊಳ್ಳುವ ಖಾಯಿಲೆಗಳ ವಿವರಗಳು
ಈ ಯೋಜನೆಯಡಿಯಲ್ಲಿ ೭ ತರಹದ ಗಂಭೀರ ಖಾಯಿಲೆಗಳಿಗೆ ಉಚಿತವಾಗಿ(*) ಚಿಕಿತ್ಸೆಯನ್ನು ನೀಡಲಾಗುತ್ತದೆ.
ಆ ೭ ಗಂಭೀರ ಖಾಯಿಲೆಗಳೆಂದರೆ
ಈ ೭ ಖಾಯಿಲೆಗಳಿಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು,ಮತ್ತು ಯೋಜನೆಗೆ ನೋಂದಾವಣೆಗೊಂಡ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ (ಖಾಸಗೀ ಆಸ್ಪತ್ರೆ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಉಚಿತವಾಗಿ(*) ಚಿಕಿತ್ಸೆ ನೀಡಲಾಗುವುದು.
ಒಟ್ಟಾರೆಯಾಗಿ ೭ ಖಾಯಿಲೆಗಳ ೫೭೨ ವಿವಿದ ಬಗೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.
ಅರ್ಹತೆ:- ಎ ಪಿ ಎಲ್ ಕಾರ್ಡು ಕಡ್ಡಾಯ
ಈ ಯೋಜನೆಯಲ್ಲಿ ಒಟ್ಟು ಚಿಕಿತ್ಸಾ ವೆಚ್ಚದ ಶೇಕಡಾ ೩೦%ರಷ್ಟನ್ನು ಮಾತ್ರ ರೋಗಿಗಳು ಭರಸಿಬೇಕು ಉಳಿದ ೭೦%ರಷ್ಟನ್ನು ಸರ್ಕಾರವೇ ಭರಿಸುತ್ತದೆ.
ಈ ಯೋಜನೆಯಲ್ಲಿ ೧ ಕುಟುಂಬದ ೫ ಸದಸ್ಯರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು.1 ವರ್ಷಕ್ಕೆ ಗರಿಷ್ಟ ೧.೫ ಲಕ್ಷದವರೆಗೆ ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ೫೦೦೦೦ ದವರೆಗೆ ಚಿಕಿತ್ಸೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ:- ೧೮೦೦೪೨೫೮೩೩೦ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವುದು ಹಾಗೂ ಸಮೀಪದ ತಾಲ್ಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು
ಕೊನೆಯ ಮಾರ್ಪಾಟು : 5/7/2020
ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ...
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...