অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೂದಲಿನ ಅರೋಗ್ಯ

ತಲೆಹೊಟ್ಟು ಅಪಾಯಕಾರಿ ಸಮಸ್ಯೆಯಲ್ಲ

ತಲೆಹೊಟ್ಟು ಅಪಾಯಕಾರಿ ಸಮಸ್ಯೆಯಲ್ಲದಿದ್ದರೂ ಅದು ಅತಿಯಾದರೆ ಒಂದು ರೀತಿಯಲ್ಲಿ ಅಸಹ್ಯ ಎನ್ನಿಸುವುದು ಸುಳ್ಳಲ್ಲ. ತಲೆಹೊಟ್ಟಿಗೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರವೇ ಎಂಬುದು ಈಗಾಗಲೇ ಸಾಬೀತಾಗಿದೆ. ಆಹಾರಕ್ರಮದಲ್ಲಿ ಬದಲಾವಣೆಯಾಗದೆ ತಲೆಹೊಟ್ಟಿಗೆ ಎಷ್ಟೇ ಚಿಕಿತ್ಸೆ ನೀಡಿದರೂ ಪ್ರಯೋಜನವಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ನನ್ನ ಕೂದಲು ಉದುರಲು ಕಾರಣವೇನು' ಎಂದು ಅನೇಕ ರೋಗಿಗಳು ನನ್ನಲ್ಲಿ ಕೇಳುತ್ತಾರೆ. ಹೆಲ್ಮಟ್ ಧರಿಸುವುದು ಇದಕ್ಕೆ ಕಾರಣವೇ ಅಥವಾ ಕೂದಲಿಗೆ ಸಾಕಷ್ಟು ಎಣ್ಣೆ ಹಚ್ಚದಿರುವುದು ಅಥವಾ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದು ಅಥವಾ ಚೆನ್ನಾಗಿ ತಿನ್ನದಿರುವುದು ಅಥವಾ ಸಾಕಷ್ಟು ನಿದ್ರೆ ಮಾಡದಿರುವುದು ಇದಕ್ಕೆ ಕಾರಣವೇ ಎಂದು ಕೇಳುತ್ತಾರೆ. ವಾಸ್ತವದಲ್ಲಿ ಏನೇ ಇರಲಿ, ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ.

ಎ. ಕೂದಲು ಉದುರುವ ಮಾದರಿ
ಸಾಮಾನ್ಯವಾಗಿ ನೆತ್ತಿಯ ಮೇಲೆ ಮತ್ತು ನಡು ಭಾಗದಲ್ಲಿ ಕೂದಲು ಉದುರುವಿಕೆ ಕಾಣಬಹುದು. ಆದರೆ ತಲೆ ಹಿಂಭಾಗದಲ್ಲಿ ಕೂದಲು ಸ್ವಲ್ಪಮಟ್ಟಿಗೆ ಹಾಗೆಯೇ ಉಳಿದಿರುತ್ತದೆ. ಈ ಮಾದರಿಯ ಕೂದಲು ಉದುರುವಿಕೆಗೆ ಅನುವಂಶಿಕತೆ ಅಥವಾ ಹಾರ್ಮೋನ್ ಏರಿಳಿತಗಳು ಕಾರಣವಾಗಿರುತ್ತವೆ. ಪಾಲಿಸಿಸ್ಟಿಕ್ ಅಂಡಾಶಯದ ರೋಗ ಮತ್ತು ಥೈರಾಯ್ಡ್ ಕಾಯಿಲೆ ಇದ್ದ ಮಹಿಳೆಯರಲ್ಲಿ ಕೂದಲುದುರುವಿಕೆಯಲ್ಲಿ ಹಾರ್ಮೋನುಗಳ ಪಾತ್ರ ಹೆಚ್ಚು ಕಂಡು ಬರುತ್ತದೆ.

ಬಿ. ನೆತ್ತಿಯ ಸೋಂಕು
ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾವು ನೆತ್ತಿಯ ಸಾಮಾನ್ಯ ಸೋಂಕುಗಳ ವಿಧಗಳು. ಇಂತಹ ಪ್ರಕರಣಗಳಲ್ಲಿ ವಿಶೇಷವಾಗಿ ಕೂದಲು ಉದುರುವಿಕೆ ಜತೆಗೆ ತಲೆಹೊಟ್ಟು, ನೆತ್ತಿಯಲ್ಲಿ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಸಿ. ತೆಲೊಗನ್ ಎಫ್ಲವಿಯಮ್
ಈ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಅದಕ್ಕೆ ನೀರಿನ ಬದಲಾವಣೆ, ಒತ್ತಡ, ಥೈರಾಯ್ಡ್ ಮೊದಲಾದ ಅನಾರೋಗ್ಯ, ಕಾಮಾಲೆ ಮೊದಲಾದವುಗಳು ಕಾರಣ. ಸಾಮಾನ್ಯವಾಗಿ ಇದು ತಾತ್ಕಾಲಿಕವಾಗಿರುತ್ತದೆ, ಇದಕ್ಕೆ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಂಡರೆ ಉದುರುವಿಕೆ ಉಲ್ಭಣಾವಸ್ಥೆಗೆ ತಲುಪದಂತೆ ನಿಯಂತ್ರಿಸಬಹುದು.

ಅನೇಕ ಜನರಿಗೆ ಕೂದಲು ಉದುರುವಿಕೆಗೆ ಈ ಮೇಲಿನ ಮೂರು ಅಂಶದಲ್ಲಿ ಒಂದಾಗಿರುತ್ತದೆ. ಕೆಲವು ರೋಗಿಗಳಲ್ಲಿ ಎರಡು ವಿಧದ ಕೂದಲು ಉದುರುವಿಕೆ ಒಟ್ಟಿಗೇ ಉಂಟಾಗಬಹುದು. ಉದಾಹರಣೆಗೆ ವಂಶಪಾರಂಪರ್ಯ ಮತ್ತು ನೆತ್ತಿಯ ಸೋಂಕು ಒಟ್ಟಿಗೇ ಕಾಣಿಸಿಕೊಳ್ಳಬಹುದು. ಇದು ವೇಗವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ರೀತಿ ಉಂಟಾದರೆ ಸಮಸ್ಯೆ ಸ್ವಲ್ಪ ಜಟಿಲವಾಗುತ್ತದೆ.

ಪದಾರ್ಥಗಳ ಸೇವನೆ

ಜಂಕ್‌ಫುಡ್ ಮತ್ತು ಎಣ್ಣೆ ಪದಾರ್ಥಗಳನ್ನು ಜಾಸ್ತಿ ಸೇವಿಸುವುದರಿಂದಲೂ ಹೊಟ್ಟಿನ ಸಮಸ್ಯೆ ಹೆಚ್ಚುತ್ತದೆ. ಚಾಕೋಲೇಟ್, ಸಕ್ಕರೆ, ಮಾಂಸ, ಬ್ರೆಡ್, ಚೀಸ್, ವೈನ್ ಮುಂತಾದ ಪದಾರ್ಥಗಳಿಂದ ಆದಷ್ಟು ದೂರವಿರಿ. ನೀರನ್ನು ಹೆಚ್ಚಾಗಿ ಕುಡಿಯಿರಿ. ಒತ್ತಡ ಹೆಚ್ಚಾದರೂ ತಲೆಹೊಟ್ಟು ಹೆಚ್ಚುತ್ತದೆ ಎಂಬುದು ನೆನಪಿರಲಿ.
ತಲೆಹೊಟ್ಟು ನಿವಾರಣೆಗೆ ಕೆಲ ಸುಲಭೋಪಾಯಗಳು ಇಲ್ಲಿವೆ

  • ಮೊಸರು ಹೊಟ್ಟು ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ 15 ದಿನಕ್ಕೊಮ್ಮೆ ತಲೆಗೆ ಮೊಸರನ್ನು ಹಚ್ಚಿ ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಇದರಿಂದ ಹೊಟ್ಟು ನಿವಾರಣೆಯಾಗುವುದಷ್ಟೇ ಅಲ್ಲ, ಕೂದಲೂ ಕಾಂತಿಯುತವಾಗುತ್ತದೆ. 2. 2 ಚಮಚ ವಿನೆಗರ್‌ಅನ್ನು 6 ಚಮಚ ನೀರಿಗೆ ಹಾಕಿ. ಆ ಮಿಶ್ರಣವನ್ನು ರಾತ್ರಿ ತಲೆಗೆ ಹಚ್ಚಿಕೊಂಡು ಬೆಳಗ್ಗೆ ತಲೆಸ್ನಾನ ಮಾಡಿ. ಇದನ್ನು ವಾರಕ್ಕೆ ಎರಡು ಬಾರಿ ಮೂರು ತಿಂಗಳ ಕಾಲ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.
  • ಲೋಳೆಸರ (ಅಲೋವೆರಾ)ದ ರಸವನ್ನು ತಲೆಗೆ ಲೇಪಿಸಿಕೊಳ್ಳುವುದರಿಂದಲೂ ತಲೆಹೊಟ್ಟು ಹತೋಟಿಗೆ ಬರುತ್ತದೆ.
  • ಮೆಂತ್ಯವನ್ನು ರಾತ್ರಿ ನೆನೆಸಿಟ್ಟು, ಬೆಳಗ್ಗೆ ಅದನ್ನು ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಕಾಲ ಬಿಟ್ಟು ನಂತರ ಸ್ನಾನ ಮಾಡಿ. ಇದು ಹೊಟ್ಟು ನಿವಾರಣೆಗೆ ಉತ್ತಮ ಪರಿಹಾರ.
  • ನಿಂಬೆರಸ ಸಹ ಹೊಟ್ಟು ನಿವಾರಣೆಗೆ ಸಹಕಾರಿಯಾಗಿದೆ. ಎರಡು ಚಮಚ ನಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಶ್ರಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ತಲೆಸ್ನಾನ ಮಾಡಿ.
  • ಕೂದಲಿನ ಸೌಂದರ್ಯ ವರ್ಧನೆಗೆಂದು ಕೃತಕ ಬಣ್ಣಗಳನ್ನು ಬಳಸುವುದು, ರಾಸಾಯನಿಕ ಮಿಶ್ರಿತ ಶಾಂಪೂ ಬಳಸುವುದು ಸಹ ಹೊಟ್ಟಿಗೆ ಕಾರಣವಾಗಬಹುದು. ಇವುಗಳಿಂದ ಆದಷ್ಟು ದೂರವಿರಿ.
  • ಆದಷ್ಟು ಹಸಿರು ತರಕಾರಿ, ತಾಜಾ ಹಣ್ಣುಗಳನ್ನು ಸೇವಿಸಿ.
  • ಮನಸ್ಸು ಒತ್ತಡದಿಂದಿರದಂತೆ ನೋಡಿಕೊಳ್ಳಿ. ದಿನವೂ ಯೋಗಾಸನ, ಧ್ಯಾನ, ಪ್ರಾಣಾಯಾಮಗಳನ್ನು ಮಾಡುವುದು ಒಳ್ಳೆಯದು.
  • ನೀರನ್ನು ಹೆಚ್ಚಾಗಿ ಕುಡಿಯಿರಿ.
  • ಬೇಸಿಗೆಯಲ್ಲಿ ವಾರಕ್ಕೆ ಕನಿಷ್ಠ ಎರಡು ದಿನವಾದರೂ ತಲೆಸ್ನಾನ ಮಾಡಿ. ಕೂದಲು ಸ್ವಚ್ಛವಾಗಿಲ್ಲದಿರುವುದೂ ಹೊಟ್ಟಿಗೆ ಒಂದು ಕಾರಣ.
  • ನನ್ನ ಕೂದಲು ಉದುರಲು ಕಾರಣವೇನು' ಎಂದು ಅನೇಕ ರೋಗಿಗಳು ನನ್ನಲ್ಲಿ ಕೇಳುತ್ತಾರೆ. ಹೆಲ್ಮಟ್ ಧರಿಸುವುದು ಇದಕ್ಕೆ ಕಾರಣವೇ ಅಥವಾ ಕೂದಲಿಗೆ ಸಾಕಷ್ಟು ಎಣ್ಣೆ ಹಚ್ಚದಿರುವುದು ಅಥವಾ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದು ಅಥವಾ ಚೆನ್ನಾಗಿ ತಿನ್ನದಿರುವುದು ಅಥವಾ ಸಾಕಷ್ಟು ನಿದ್ರೆ ಮಾಡದಿರುವುದು ಇದಕ್ಕೆ ಕಾರಣವೇ ಎಂದು ಕೇಳುತ್ತಾರೆ. ವಾಸ್ತವದಲ್ಲಿ ಏನೇ ಇರಲಿ, ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ.
  • ಸಾಮಾನ್ಯವಾಗಿ ನೆತ್ತಿಯ ಮೇಲೆ ಮತ್ತು ನಡು ಭಾಗದಲ್ಲಿ ಕೂದಲು ಉದುರುವಿಕೆ ಕಾಣಬಹುದು. ಆದರೆ ತಲೆ ಹಿಂಭಾಗದಲ್ಲಿ ಕೂದಲು ಸ್ವಲ್ಪಮಟ್ಟಿಗೆ ಹಾಗೆಯೇ ಉಳಿದಿರುತ್ತದೆ. ಈ ಮಾದರಿಯ ಕೂದಲು ಉದುರುವಿಕೆಗೆ ಅನುವಂಶಿಕತೆ ಅಥವಾ ಹಾರ್ಮೋನ್ ಏರಿಳಿತಗಳು ಕಾರಣವಾಗಿರುತ್ತವೆ. ಪಾಲಿಸಿಸ್ಟಿಕ್ ಅಂಡಾಶಯದ ರೋಗ ಮತ್ತು ಥೈರಾಯ್ಡ್ ಕಾಯಿಲೆ ಇದ್ದ ಮಹಿಳೆಯರಲ್ಲಿ ಕೂದಲುದುರುವಿಕೆಯಲ್ಲಿ ಹಾರ್ಮೋನುಗಳ ಪಾತ್ರ ಹೆಚ್ಚು ಕಂಡು ಬರುತ್ತದೆ.
  • ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾವು ನೆತ್ತಿಯ ಸಾಮಾನ್ಯ ಸೋಂಕುಗಳ ವಿಧಗಳು. ಇಂತಹ ಪ್ರಕರಣಗಳಲ್ಲಿ ವಿಶೇಷವಾಗಿ ಕೂದಲು ಉದುರುವಿಕೆ ಜತೆಗೆ ತಲೆಹೊಟ್ಟು, ನೆತ್ತಿಯಲ್ಲಿ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
  • ಈ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಅದಕ್ಕೆ ನೀರಿನ ಬದಲಾವಣೆ, ಒತ್ತಡ, ಥೈರಾಯ್ಡ್ ಮೊದಲಾದ ಅನಾರೋಗ್ಯ, ಕಾಮಾಲೆ ಮೊದಲಾದವುಗಳು ಕಾರಣ. ಸಾಮಾನ್ಯವಾಗಿ ಇದು ತಾತ್ಕಾಲಿಕವಾಗಿರುತ್ತದೆ, ಇದಕ್ಕೆ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಂಡರೆ ಉದುರುವಿಕೆ ಉಲ್ಭಣಾವಸ್ಥೆಗೆ ತಲುಪದಂತೆ ನಿಯಂತ್ರಿಸಬಹುದು.
  • ಅನೇಕ ಜನರಿಗೆ ಕೂದಲು ಉದುರುವಿಕೆಗೆ ಈ ಮೇಲಿನ ಮೂರು ಅಂಶದಲ್ಲಿ ಒಂದಾಗಿರುತ್ತದೆ. ಕೆಲವು ರೋಗಿಗಳಲ್ಲಿ ಎರಡು ವಿಧದ ಕೂದಲು ಉದುರುವಿಕೆ ಒಟ್ಟಿಗೇ ಉಂಟಾಗಬಹುದು. ಉದಾಹರಣೆಗೆ ವಂಶಪಾರಂಪರ್ಯ ಮತ್ತು ನೆತ್ತಿಯ ಸೋಂಕು ಒಟ್ಟಿಗೇ ಕಾಣಿಸಿಕೊಳ್ಳಬಹುದು. ಇದು ವೇಗವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ರೀತಿ ಉಂಟಾದರೆ ಸಮಸ್ಯೆ ಸ್ವಲ್ಪ ಜಟಿಲವಾಗುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 6/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate