ಭಾರತ ದೇಶದ ಆಂಧ್ರ ಪ್ರದೇಶದ ನೆಲ್ಲೂರ ಜಿಲ್ಲೆಗೆ ಸೇರಿದ ದುಬಗುಂಟಾ ಹಳ್ಳಿಯ ಮಹಿಳೆಯರು ಹೆಂಡದ ಗುತ್ತಿಗೆದಾರರನ್ನು ತಮ್ಮ ಹಳ್ಳಿಯಿಂದ ಹೊರ ಹಾಕಿದರು. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾರಂಭಗೊಂಡ ಹೋರಾಟದಲ್ಲಿ ಮೊಟ್ಟ ಮೊದಲು ಭಾಗವಹಿಸಿದವರು ಗ್ರಾಮೀಣ ಭಾಗದ ಮಹಿಳೆಯರು. ಅದರಲ್ಲೂ ದಲಿತ ವರ್ಗಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯರು ಸೇರಿದರು. ನಂತರ ವಿರೋಧಿ ಪಕ್ಷದ ರಾಜಕಾರಣಿಗಳು ಸಹ ಭಾಗಿಯಾದರು. ಈ ಘಟನೆ ಪಾನ ನೊರೋಧ ಚಳುವಳಿಯ ಪ್ರಾರಂಭ ಎನ್ನಲಾಗಿದೆ. ಇದರ ಪರಿಣಾಮವಾಗಿ 16 ಜನವರಿ 1995ರಲ್ಲಿ ರಾಜ್ಯದಲ್ಲಿ ಸಂಪೂರ್ಣ ಪಾನ ನೊರೋಧವನ್ನು ಜರಿಗೆ ತರಲಾಯಿತು.
ಇದು ಒಂದು ಕಢೆಯಲ್ಲ. ಇದು ಒಂದು ನಿಜಬಾಗಿ ನಡೆದ ಘಟನೆ. ಮಹಿಳೆಯರಲ್ಲಿ ಸಾಮೂಹಿಕವಾಗಿ ಆಶ್ಚರ್ಯ ಉಂಟು ಮಾಡಿದ ಈಟನೆ. ಇದು ಸಮುದಾಯದಲ್ಲಿ ಕಷ್ಟ ಪಟ್ಟು ದುಡಿಯುವ ಮಹಿಳೆಯರದು. ಇವರು ಬದುಕಿಗಾಗಿ ದಿನನಿತ್ಯ ಭೂಮಿಯಲ್ಲಿ ಕೆಲಸ ಮಾಡುವವರು. ಇವರು ದುಡಿದ ಹಣವೆಲ್ಲಾ ಹೆಂಡ ಮತ್ತು ಸಾರಾಯಿಗೆ ವ್ಯಯವಾಗುವುದು ದುರದೃಷ್ಟಕರ.
ಈ ಹಳ್ಳಿಯ ಪುರುಷರು ಕುಡಿತಕ್ಕೆ ದಾಸರಾಗಿ ಎಲ್ಲಾ ಹಣವನ್ನು ಮತ್ತು ಹೆಂಡಕ್ಕೆ ಬದಲಾಗಿ ಆಹಾರ ಧಾನ್ಯಗಳು, ಬೇಳೆಗಳು, ಅಕದಕಿ, ಬೆಣ್ಣೆ ಹಾಗೂ ತುಪ್ಪವನ್ನು ಕೊಡುತ್ತಿದ್ದರು. ಕೆಲವೊಮ್ಮಸ ಅವರ ಸಂಪಾದನೆ ಕುಡಿಯಲು ಸಾಲದಾದಾಗ, ಸಾಲ ಮಾಡುವುದು, ಮನೆ ವಸ್ತುಗಳಾದ ಪಾತ್ರೆ, ತಟ್ಟಗಳು ಅಥವಾ ಅವರ ಮಡದಿಯ ಸೀರೆಯನ್ನು ಕಳವು ಮಾಡುತ್ತಿದ್ದರು.
ಪುರುಷರು ಸರಾಯಿ ಕುಡಿದ ನಂತರ ಕೆಟ್ಟ ಶಬ್ದಗಳನ್ನು ಮಾತನಾಡುವುದು, ಹೆಂಡತಿ ಮಕ್ಕಳನ್ನು ಹೊಡೆದು ಜೀವನವನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದರು. ಇದರಿಂದಾಗಿ ಮಹಿಳೆಯರು ಅಸಹಾಯಕತೆಯ ಭಾವನೆ ಹೊಂದಿದ್ದರು. ಆ ಸ್ಥಳದಲ್ಲಿ ಎರಡು ಸಾರಾಯಿ ಅಂಗಡಿಗಳು ಇದ್ದವು. ಹಳ್ಳಿಯ ಗಂಡಸರು ಸಂಜೆ ಕೆಲಸ ಮುಗಿಸಿ ಬಂದ ತಕ್ಷಣ ಈ ಅಂಗಡಿಗಳಿಗೆ ಹೋಗುತ್ತಿದ್ದರು. ಅವರು ಪೂರ್ತಿ ಪಾನಚತ್ತರಗಿ ರಾತ್ರಿ ತಡವಾಗಿಮನೆಗೆ ಬರುತ್ತಿದ್ದರು. ಅವರು ಸ್ವಲ್ಪ ಹಣವೇನಾದರೂ ಉಳಿತಾಯವಾಗಿದ್ದರೆ ಮನೆಯ ಖರ್ಚಿಗಾಗಿ ಕೊಡುತ್ತಿದ್ದರು. ಇಲ್ಲಿಯ ಸಂದರ್ಭಗಳು ತೀರಾ ವಿಕೋಪಕ್ಕೆ ಹೋಗಿ, ಒಂದು ದಿನ ಒಬ್ಬ ಗಂಡಸು ಅಮಲೇರುವಂತೆ ಕುಡಿದು ಬಂದು ತಂದೆಯನ್ನು ಹೊಡೆದು ಕೊಂದನು. ಈ ಪ್ರಕರಣ ಅಲ್ಲದೇ ವಿಜಯಮ್ಮ ಎನ್ನುವವರ ಮನೆಗೆ ನೆಯ ಕುಡುಕ ಅವ್ಯಾಚ ಶಬ್ದಗಳಿಂದ ಮಾತನಾಡಿದ್ದರಿಮದ ಅವರು ಹೆದರಿ ತಮ್ಮ ಊರಿಗೆ ವಾಪಸ್ ಹೋದರು. ವಿಜಯಮ್ಮ ತುಂಬಾ ನಾಚಿಕೆ ಪಟ್ಟುಕೊಂಡು ತಮ್ಮ ಊರಲ್ಲಿ ಸಾರಾಯಿ ಅಂಗಡಿ ಇಲ್ಲದಿದ್ದರೆ ಚೆನ್ನಾಗಿತ್ತೆಂದು ಭಾವಿಸಿದಳು. ಸಾರಾಯಿಯಿಂದಾಗುವ ದುಷ್ಟರಿಣಾಮದ ಬಗ್ಗೆ ದಿನಾಲೂ ಹೆಂಗಸರು ಹೊಲದಲ್ಲಿ ಕೆಲಸ ಮಾಡುವಾಗ, ಭಾವಿಯ ಹತ್ತಿರ ಸರಾಯಿಯಿಂದಾಗುವ ಕೆಡುಕಿನ ಬಗ್ಗೆ ಚರ್ಚಿ ಮಾಡುತ್ತಿದ್ದರು. ಒಂದು ದಿನ ಎಲ್ಲಾ ಮಹಿಳೆಯರು ಕೂಡಿಕೊಂಡು, ಹಳ್ಳಿಯ ಸರಪಂಚರನ್ನು ಹಗೂ ಹಿರಿಯರನ್ನು ಭೇಟಿ ಮಾಡಿದರು. ಅವರೆಲದಲ ತಮಗೆ ಬಂದ ತೊಂದರೆಗಳನ್ನು ನಿರೂಪಿಸಿದರು ಮತ್ತು ಸರಾಯಿ ಮತ್ತು ಹೆಂಡದ ಅಂಗಡಿಗಳನ್ನು ಮುಚ್ಚಲು ಕೇಳಿಕೊಂಡರು.
ಹಿರಿಯರು ಮತ್ತು ಸರಪಂಚರು ಇದಕ್ಕೆ ಒಪ್ಪದರೂ ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಮಾರನೇ ದಿನ ನೂರಾರು ಮಹಿಳೆಯರು ಒಟ್ಟುಗೂಡಿದರು. ಅವರೆಲ್ಲ ಊರ ಹೊರಗೆ ನಿಂತು ಹೆಂಡದ ಗಾಡಿಯನ್ನು ತಡೆದರು. "ಎಲ್ಲಾ ಹೆಂಡವನ್ನು ನಾಶಗೊಳಿಸುವಂತೆ" ತಿಳಿಸಿದರು. ಹೀಗೆ ಮಾಡಲು ಪ್ರತಿಯೊಗ್ಗರೂ ಒಂದೊಂದು ರೂಪಾಯಿಯನ್ನು ಕೊಡುತ್ತೇವೆಂದು ಹೇಳಿದರು. ಆ ಚಾಲಕನಿಗೆ ಭಯವಾಗಿ ಆ ಹಳ್ಳಿಯಿಂದ ಹೊರಟು ಹೋದ. ನಂತರ ಒಂದು ಜೀಪಿನಲ್ಲಿ ಹೆಂಡದ ಪೊಟ್ಟಣಗಳು ಬಂದವು. ಆಗ ಮಹಿಳೆಯರು ಜೀಪನ್ನು ಸುತ್ತುವರಿದು ಪೊಟ್ಟಣಗಳನ್ನು ಕೆಳಗೆ ಇಳಿಸದೇ ಹೋಗಬೇಕೆಂದು ನಿರ್ಭಂದ ಪಡಿಸಿದರು. ಎರಡು ದಿನಗಳ ನಂತರ ಆರಕ್ಷಕರನ್ನು ಕರೆಸಲಾಹಿತು. ಯಾರು ಯಾರು ಹರಾಜಿನಲ್ಲಿ ಭಾಗವಹಿಸಿ ಮಾರಾಟದ ಹಕ್ಕನ್ನು ಪಡೆದಿರುತ್ತಾರೋ ಅವರೆಲ್ಲಾ ಸರಾಯಿ ಮಾರಾಟ ಮಾಡಬಹುದೆಂದು ಆರಕ್ಷಕರು ತಿಳಿಸಿದರು. ಮಹಿಳೆಯರ ಜಿಲ್ಲಾಧಿಕಾರಿಗಳಿಗೆ ಹೋಗಿ ಹೇಳುತ್ತೇವೆ ಮತ್ತು ಹಳ್ಳಿಯಲ್ಲಿ ಸರಾಯಿ ಮಾರಾಟ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಹೇಳಿದರು. ಸರಾಯಿ ಗುತ್ತಿಗೆದಾರರು ಸೋಲನ್ನೋಪ್ಪಬೇಕಾಯಿತು. ಅವರು ಹಲವಾರು ಉಪಾಯಗಳನ್ನು ಮಾಡಿದರು. ಆದರೂ ಯಾವುದೂ ಫಲಕಾರಿಯಾಗಲಿಲ್ಲ. ಮತ್ತು ಗುತ್ತಿಗೆದಾರರು ಸರಾಯಿ ತರುವುದನ್ನು ನಿಲ್ಲಿಸಿದರು.
ಈ ಘಟನೆಯಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿತು. ಇದೆಲ್ಲವೂ ಮಹಿಳೆಯರು ಒಂದುಗೂಡಿ ಮತ್ತು ಗಟ್ಟಿಯಾಗಿ ನಿಂತು ಹೋರಾಡಿದ್ದರಿಂದ ಹೆಂಡ ಮುಕ್ತ ಹಳ್ಳಿಯನ್ನಾಗಿ ಮಾಡಲು ಸಾಧ್ಯವಾಯಿತು. ಈ ದುಬಗುಂಟಾ ಕಥೆಯು ಒಂದು ಹೋರಾಟದಂತೆ ಬೇರೆ ಜಿಲ್ಲೆಗಳಿಗೂ ಹಬ್ಬಿತು. ಹಳ್ಳಿಯಲ್ಲಿ ಶಿಕ್ಷಕರು, ವಯಸ್ಕರ ಶಿಕ್ಷಣ ನೀಡುವಾಗ ಸಮುದಾಯದಲ್ಲಿ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿದಲು ಗೊಂಬೆ ಆಟದಿಂದ ತಿಳಿವಳಿಕೆ ನೀಡಿದರು.
ಬೇರೆ ಹಳ್ಳಿಯ ಮಹಿಳೆಯರು ತುಂಬಾ ತೊಂದರೆ ಅನುಭವಿಸಿದರು. ಅಲ್ಲಿ ದಿನನಿತ್ಯ ಕುಟುಂಬಗಳಲ್ಲಿ ಜಗಳವಾಗುತ್ತಿತ್ತು. ಅವರು ನೆರೆಮನೆಯಲ್ಲಿ ರಕ್ಷಣೆ ಪಡೆದು ಬದುಕುತ್ತಿದ್ದರು. ದಿನನಿತ್ಯ ಎರಡು-ಚೂರು ತಾಸು ಈ ಪರಿಸ್ಥಿತಿಯಲ್ಲಿ ಇರಬೇಕಾಗುತ್ತಿತ್ತು. ಅಲ್ಲಿ ಅವರ ಮಕ್ಕಳಿಗೆ ಸಾಕಾಗುವಷ್ಟು ಆಹಾರ ಇರುತ್ತಿರಲಿಲ್ಲ. ಆದ್ದರಿಂದ ಬೇರೆ ಊರಿನ ಮಹಿಳೆಯರು ದುಬಗುಂಟಾ ಹಳ್ಳಿಯಲ್ಲಿ ಮೊದಲು ಮಾಡಿದಂತೆಯೇ ತಮ್ಮ ಹಳ್ಳಿಯಲ್ಲಿಯೂ ಮಾಡಬೇಕೆಂದು ಚ್ಛಿಸಿದರು. ಬಯಸ್ಕರ ಶಿಕ್ಷಣದ 3 ಕೇಂದ್ರದ ಸದಸ್ಯರು ಈ ವಿಷಯವನ್ನು ಚರ್ಚಿಸಿದರು. ಶಿಕ್ಷಕರು ಅದನ್ನು ಬೆಂಬಲಿಸಿ ಮಾರ್ಗದರ್ಶನ ನೀಡಿದರು. ಕೊನೆಗೆ, ಅವರೂ ಸಹ ಸರಾಯಿ ಅಂಗಡಿಗೆ ಮುತ್ತಿಗೆ ಹಾಕಿದರು. ತಮ್ಮ ಹಳ್ಳಿಯಲ್ಲಿ ಸಹ ಹೆಂಡದ ವ್ಯಾಪಾರವನ್ನು ನಿಲ್ಲಿಸಲು ಸಫಲರಾದರು. ದುಬಗಂಬಾ ಹಳ್ಳಿಯ ಮಹಿಳೆಯರು ಪಾನ ನಿರೋಧ ಚಳುವಳಿಯನ್ನು ಹುಟ್ಟುಹಾಕಿ ಅದರ ಮುಂದಾಳತ್ವವನ್ನು ವಹಿಸಿಕೊಂಡರು. ಇದರಲ್ಲಿ ಬೇರೆ ಬೇರೆ ಹಳ್ಳಿಗಳ ಮಹಿಳೆಯರೂ ಭಾಗವಹಿಸಿ ಕೊನೆಗೂ ಸನ್ನಿವೇಶದಲ್ಲಿ ಒಳ್ಳೆಯ ಬದಲಾವಣೆಯಾಯಿತು.
ಮೂಲ: ಆಶಾ ಕೈಪಿಡಿ
ಕೊನೆಯ ಮಾರ್ಪಾಟು : 3/5/2020